ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 8.30ಕ್ಕೆ ಪ್ರಸಾರವಾಗುತ್ತಿರುವ ಲಕ್ಷಣ (Lakshana) ಧಾರಾವಾಹಿ (Serial) ದಿನಕ್ಕೊಂದು ತಿರುವುಗಳನ್ನು ಪಡೆಯುತ್ತಾ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ತನ್ನದೇ ಆದ ವಿಭಿನ್ನ ಶೈಲಿಯಲ್ಲಿ ಜನಪ್ರಿಯತೆ ಗಳಿಸಿದೆ. ಲಕ್ಷಣ ಧಾರಾವಾಹಿ ನಾಯಕಿ ನಕ್ಷತ್ರಾ ನೋಡಲು ಕಪ್ಪಾಗಿದ್ದರೂ ತಿಳಿ ಬಿಳಿ ಮನಸ್ಸಿನ ಹುಡುಗಿ. ಅಪ್ಪ ಚಂದ್ರಶೇಖರ್ ಮಾಡಿದ ಅವಾಂತರದಿಂದ ನಾಯಕಿ ನಕ್ಷತ್ರಾ, ಭೂಪತಿಯನ್ನು ಮದುವೆ (Mrriage) ಆಗೋ ಪರಿಸ್ಥಿತಿ ಬರುತ್ತೆ, ಮದುವೆನೂ ಆಗ್ತಾರೆ. ಬಲವಂತವಾಗಿ ಮದುವೆ ಮಾಡಿಸಿದ್ದಕ್ಕೆ, ಭೂಪತಿ ಮನೆಯವರಿಗೆ ಚಂದ್ರಶೇಖರ್ ಮತ್ತು ಅವರ ಮಗಳು ನಕ್ಷತ್ರಾ ಕಂಡ್ರೆ ಆಗಲ್ಲ. ಈಗ ಎಲ್ಲಾ ಸಮಸ್ಯೆ ಬಗೆಹರಿದಿದೆ. ಭೂಪತಿಗೆ ನಕ್ಷತ್ರಾ ಮೇಲೆ ಪ್ರೀತಿ (Love) ಆಗುತ್ತಿದೆ.
ನಕ್ಷತ್ರಾ ಮೇಲೆ ಒಲವು
ನಕ್ಷತ್ರಾ ಬಲವಂತವಾಗಿ ತನ್ನನ್ನು ಮದುವೆ ಆಗಿದ್ದಳು ಎಂದು ಭೂಪತಿಗೆ ಕೋಪ ಇರುತ್ತೆ. ನಂತರ ಮೌರ್ಯ, ನಕ್ಷತ್ರಾ ತಪ್ಪಿಲ್ಲ. ಇದೆಲ್ಲ ಅವರ ಅಪ್ಪ ಮಾಡಿದ್ದು ಎಂದು ಸತ್ಯ ಹೇಳ್ತಾನೆ. ಅದು ಗೊತ್ತಾದಾಗಿನಿಂದ ಭೂಪತಿ ತುಂಬಾ ಬೇಸರ ಮಾಡಿಕೊಂಡು, ನಾನು ನಕ್ಷತ್ರಾಳನ್ನು ತಪ್ಪು ತಿಳಿದುಕೊಂಡಿದ್ದೆ. ಇನ್ಮೇಲೆ ಚೆನ್ನಾಗಿ ಅವಳನ್ನು ನೋಡಿಕೊಳ್ಳಬೇಕು ಎಂದುಕೊಂಡಿದ್ದಾನೆ.
ನಕ್ಷತ್ರಾ ಆಸೆಗಳ ಬಗ್ಗೆ ಗಮನ
ನಕ್ಷತ್ರಾ ಭೂಪತಿಗೆ ಮೊದಲಿನಿಂದಲೂ ಬೆಸ್ಟ್ ಫ್ರೆಂಡ್. ಆಕೆಯ ಆಸೆಗಳನ್ನು ಇನ್ಮೇಲಾದ್ರೂ ಈಡೇರಿಸೋಣ ಎಂದುಕೊಂಡಿದ್ದಾನೆ. ಅದಕ್ಕೆ ಆಕೆಯ ಬಳಿಯೇ ನಿನ್ನ ಆಸೆ ಏನು ಎಂದು ಕೇಳಿದ್ದ. ಅಪ್ಪನ ಮನೆಗೆ ಇಬ್ಬರು ಗಂಡ-ಹೆಂಡ್ತಿ ತರ ಹೋಗಬೇಕು ಎಂದು ಕೇಳಿದ್ದಳು. ಅದಕ್ಕೆ ಭೂಪತಿ ಒಪ್ಪಿ, ಶಿವರಾತ್ರಿ ಹಬ್ಬವನ್ನು ಮಾಡಿಕೊಂಡು ಬಂದಿದ್ದಾರೆ.
ನಿನಗೆ ನಕ್ಷತ್ರಾ ಮೇಲೆ ಪ್ರೀತಿ ಇದೆ
ನಕ್ಷತ್ರಾಳ ಮೇಲೆ ಭೂಪತಿ ತುಂಬಾ ಕಾಳಜಿ ತೋರಿಸುತ್ತಿದ್ದಾನೆ. ಇದನ್ನು ನೋಡಿದ ಭೂಪತಿ ಅತ್ತಿಗೆ, ನಿನಗೆ ನಕ್ಷತ್ರಾ ಮೇಲೆ ಪ್ರೀತಿ ಆಗಿದೆ ಎಂದು ಹೇಳ್ತಾಳೆ. ಇವನು ಇಲ್ಲ ಅವಳು ನನ್ನ ಸ್ನೇಹಿತೆ ಅಷ್ಟೇ ಎಂದು ಹೇಳ್ತಾಳೆ. ಅದಕ್ಕೆ ಅವರು ಅತ್ತಿಗೆ ಹೌದು ಅವಳು ನಿನಗೆ ಸ್ನೇಹಿತೆ . ಸ್ನೇಹಿತೆ ಮೇಲೆ ಪ್ರೀತಿ ಆಗಬಾರದು ಅಂತ ಇಲ್ಲ ತಾನೇ. ನಿನಗೆ ಪ್ರೀತಿ ಆಗಿದೆ. ಆದ್ರೆ ಅದು ನಿನಗೆ ಗೊತ್ತಾಗುತ್ತಿಲ್ಲ ಎಂದು ಹೇಳಿದ್ದಾಳೆ.
ಖಾಲಿ ಡಬ್ಬಿ ಮೇಲೆ ಪ್ರೀತಿನಾ?
ಭೂಪತಿಗೂ ಈಗ ಅನುಮಾನ ಶುರುವಾಗಿದೆ. ನನಗೆ ಖಾಲಿ ಡಬ್ಬಿ ನಕ್ಷತ್ರಾ ಮೇಲೆ ಪ್ರೀತಿ ಆಗಿದ್ಯಾ. ನಾನು ತೋರುತ್ತಿರುವುದ ಪ್ರೀತಿನಾ ಎಂಬ ಅನುಮಾನ ಶುರುವಾಗಿದೆ. ಆದ್ರೆ ಅದನ್ನು ನಕ್ಷತ್ರಾ ಮುಂದೆ ತೋರಿಸಿಕೊಳ್ತಿಲ್ಲ. ಆದ್ರೆ ನಕ್ಷತ್ರಾ ಕಂಡ್ರೆ ತುಂಬಾ ಪ್ರೀತಿ ಇದೆ. ನಕ್ಷತ್ರಾಗೂ ಭೂಪತಿ ಮೇಲೆ ಸಿಕ್ಕಾಪಟ್ಟೆ ಪ್ರೀತಿ ಇದೆ. ಆದ್ರೆ ಅದನ್ನು ಭೂಪತಿ ಸ್ವೀಕರಿಸುತ್ತಿಲ್ಲ.
ಭೂಪತಿ ಮದುವೆ ಆಗಲು ಶ್ವೇತಾ ಪ್ಲ್ಯಾನ್
ಇನ್ನೊಂದೆಡೆ ಶ್ವೇತಾಗೆ ಭೂಪತಿ ಮೇಲೆ ಕಣ್ಣಿದೆ. ಅವನನ್ನು ಮದುವೆ ಆಗಬೇಕು ಎಂದುಕೊಂಡಿದ್ದಾಳೆ. ಅದಕ್ಕೆ ಡೆವಿಲ್ ಸತ್ಯ ಗೊತ್ತಾಗಿರುವ ಕಾರಣ, ಭಾರ್ಗವಿ ಹಿಂದೆ ಬಿದ್ದಿದ್ದಾಳೆ. ನೀನು ನನಗೆ ಭೂಪತಿ ಜೊತೆ ಮದುವೆ ಮಾಡಿಸು. ಇಲ್ಲ ಅಂದ್ರೆ ಎಲ್ಲಾ ಸತ್ಯವನ್ನು ಮನೆಯವರ ಮುಂದೆ ಹೇಳ್ತೀನಿ ಎಂದು ಬ್ಲ್ಯಾಕ್ ಮೇಲ್ ಮಾಡ್ತಾ ಇದ್ದಾಳೆ.
ಇದನ್ನೂ ಓದಿ: Actress Shwetha R Prasad: ಶ್ವೇತ ವರ್ಣದ ಉಡುಪಿನಲ್ಲಿ ರಾಧಾ ಮಿಸ್; ಹೊಸ ಫೋಟೋಶೂಟ್ಗೆ ಮೆಚ್ಚುಗೆ
ಭೂಪತಿ ನಕ್ಷತ್ರಾಗೆ ತನ್ನ ಪ್ರೀತಿ ಹೇಳಿಕೊಳ್ತಾನಾ? ಶ್ವೇತಾ ಮತ್ತು ಭೂಪತಿ ಮದುವೆ ಆಗುತ್ತಾ? ಈ ಮಧ್ಯೆ ಡೆವಿಲ್ ಆಟವೇನು? ಮುಂದೇನಾಗುತ್ತೆ ಅಂತ ನೋಡೋಕೆ ಲಕ್ಷಣ ಧಾರಾವಾಹಿ ನೊಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ