Lakshana: ಶ್ವೇತಾ ಮೇಲೆ ಕೋಪಿಸಿಕೊಂಡ ಭೂಪತಿ! ನಕ್ಷತ್ರಾ ಮೇಲೆ ಮೂಡೇ ಬಿಡ್ತಾ ಪ್ರೀತಿ?

ನಕ್ಷತ್ರಾ ಮೇಲೆ ಮೂಡೇ ಬಿಟ್ಟಿತು ಒಲವು

ನಕ್ಷತ್ರಾ ಮೇಲೆ ಮೂಡೇ ಬಿಟ್ಟಿತು ಒಲವು

"ನಿಮ್ಮ ಒಳ್ಳೆ ಮುಖದ ಹಿಂದೆ ಈ ರೀತಿಯ ಕೆಟ್ಟ ಮುಖ ಇದೆ ಎಂದು ಗೊತ್ತೇ ಇರಲಿಲ್ಲ. ನಾನು ನಿಮ್ಮನ್ನು ಕ್ಷಮಿಸಲ್ಲ" ಎಂದು ಭೂಪತಿ ಹೇಳಿದ್ದಾನೆ. ಶ್ವೇತಾ ಮೇಲೆ ಇಟ್ಟಿದ್ದ ನಂಬಿಕೆ ಎಲ್ಲಾ ಹಾಳಾಗಿದೆ. ಹಾಗಾದ್ರೆ 'ಲಕ್ಷ್ಮಣ' ಧಾರಾವಾಹಿಯಲ್ಲಿ ಮುಂದೇನಾಗುತ್ತೆ?

  • News18 Kannada
  • 5-MIN READ
  • Last Updated :
  • Karnataka, India
  • Share this:

    ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 8.30ಕ್ಕೆ ಪ್ರಸಾರವಾಗುತ್ತಿರುವ ಲಕ್ಷಣ  (Lakshana) ಧಾರಾವಾಹಿ  (Serial) ದಿನಕ್ಕೊಂದು ತಿರುವುಗಳನ್ನು ಪಡೆಯುತ್ತಾ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ತನ್ನದೇ ಆದ ವಿಭಿನ್ನ ಶೈಲಿಯಲ್ಲಿ ಜನಪ್ರಿಯತೆ ಗಳಿಸಿದೆ. ಲಕ್ಷಣ ಧಾರಾವಾಹಿ ನಾಯಕಿ ನಕ್ಷತ್ರಾ ನೋಡಲು ಕಪ್ಪಾಗಿದ್ದರೂ ತಿಳಿ ಬಿಳಿ ಮನಸ್ಸಿನ ಹುಡುಗಿ. ಅಪ್ಪ ಚಂದ್ರಶೇಖರ್ ಮಾಡಿದ ಅವಾಂತರದಿಂದ ನಕ್ಷತ್ರಾ, ಭೂಪತಿ ಮದುವೆ (Marriage) ಆಗೋ ಪರಿಸ್ಥಿತಿ ಬರುತ್ತೆ, ಮದುವೆನೂ ಆಗ್ತಾರೆ. ಬಲವಂತವಾಗಿ ಮದುವೆ ಮಾಡಿಸಿದ್ದಕ್ಕೆ, ಭೂಪತಿ ಮನೆಯವರಿಗೆ ಚಂದ್ರಶೇಖರ್ ಮತ್ತು ಅವರ ಮಗಳು ನಕ್ಷತ್ರಾ ಕಂಡ್ರೆ ಆಗುತ್ತಿರಲಿಲ್ಲ. ಆದ್ರೆ ಈಗ ನಕ್ಷತ್ರಾಳನ್ನು ಸೊಸೆ ಎಂದು ಶಕುಂತಲಾ ದೇವಿ ಒಪ್ಪಿಕೊಂಡಿದ್ದಾರೆ. ಭೂಪತಿಗೆ RJ ಸಖಿ ಶೋ ಇಷ್ಟ. RJ ಸಖಿ ನಕ್ಷತ್ರಾ ಎಂದು ತಿಳಿದು ಭೂಪತಿ ಖುಷಿ ಆಗಿದ್ದಾನೆ. ಆದ್ರೆ ಸುಳ್ಳು ಹೇಳಿದ್ದ ಶ್ವೇತಾ ಮೇಲೆ ಕೋಪಗೊಂಡಿದ್ದಾನೆ.


    RJ ಶ್ವೇತಾ ಎಂದು ತಿಳಿದುಕೊಂಡಿದ್ದ ಭೂಪತಿ
    ಭೂಪತಿಗೆ ಮೊದಲಿನಿಂದಲೂ RJ ಶೋ ಎಂದ್ರೆ ತುಂಬಾ ಇಷ್ಟ. ಆ ಶೋವನ್ನು ಮಿಸ್ ಮಾಡ್ದೇ ಕೇಳ್ತಾ ಇದ್ದ. ಆ ಶೋ ನಡೆಸಿ ಕೊಡ್ತಾ ಇದ್ದಿದ್ದು ಶ್ವೇತಾ ಎಂದು ತಿಳಿದುಕೊಂಡಿದ್ದ. ಅದಕ್ಕೆ ಮತ್ತೆ ಆಕೆ ಅದೇ ಕೆಲಸ ಮಾಡಲಿ ಎಂದು ಎಲ್ಲವನ್ನೂ ಸಿದ್ಧ ಮಾಡಿದ್ದ. ಆದ್ರೆ ಶ್ವೇತಾ ಆರ್‍ಜೆ ಸಖಿ ಅಲ್ಲ ಎಂದು ಭೂಪತಿಗೆ ಗೊತ್ತಾಗಿ ಆಕೆ ಮೇಲೆ ಅಸಹ್ಯ ಹುಟ್ಟಿದೆ.


    ಶ್ವೇತಾ ಮೇಲೆ ಕೋಪ
    ಟ್ಯಾಲೆಂಟ್ ನಕ್ಷತ್ರಾಳದ್ದು ಹೆಸರು ನಿಂದು. ಮುಖ ನಿಮ್ಮದು, ವಾಯ್ಸ್ ಇವಳದ್ದು. ವಾಟ್ ಎ ಪ್ಲ್ಯಾನ್ ಶ್ವೇತಾ? ನಿಮ್ಮ ಒಳ್ಳೆ ಮುಖದ ಹಿಂದೆ ಈ ರೀತಿಯ ಕೆಟ್ಟ ಮುಖ ಇದೆ ಎಂದು ಗೊತ್ತೇ ಇರಲಿಲ್ಲ. ನಾನು ನಿಮ್ಮನ್ನು ಕ್ಷಮಿಸಲ್ಲ ಎಂದು ಭೂಪತಿ ಹೇಳಿದ್ದಾನೆ. ಶ್ವೇತಾ ಮೇಲೆ ಇಟ್ಟಿದ್ದ ನಂಬಿಕೆ ಎಲ್ಲಾ ಹಾಳಾಗಿದೆ.




    ನಕ್ಷತ್ರಾ ಮೇಲೆ ಒಲವು
    ಆರ್ ಜೆ ಶೋ ಅನ್ನು ನಕ್ಷತ್ರಾ ನಡೆಸಿ ಕೊಟ್ಟಿದ್ದಾಳೆ. ಅದನ್ನು ನೋಡಿ ಭೂಪತಿ ಶಾಕ್ ಆಗಿದೆ. ನಕ್ಷತ್ರಾ ಮಾತನಾಡುವುದನ್ನು ನೋಡಿ ತುಂಬಾ ಖುಷಿ ಪಟ್ಟಿದ್ದಾನೆ. ನಾನು ಚೆನ್ನಾಗಿ ಶೋ ಮಾಡಿದ್ನಾ ಮಿಸ್ಟ್ರಿ ಎಂದು ಕೇಳಿದ್ದಾಳೆ. ತುಂಬಾ ಚೆನ್ನಾಗಿ ಮಾಡಿದೆ. ನೀನು ಬೇರೆ ರೀತಿ ಕಾಣ್ತಾ ಇದ್ದೀಯಾ ಎಂದು ಭೂಪತಿ ಹೇಳಿದ್ದಾನೆ. ನಕ್ಷತ್ರಾ ಖುಷಿ ಆಗಿದ್ದಾಳೆ.


    colors kannada serial, kannada serial, bhupathi angry about shwetha, lakshana serial, serial today episode, ಲಕ್ಷಣ ಧಾರಾವಾಹಿ, ಶ್ವೇತಾ ಮೇಲೆ ಭೂಪತಿ ಕೋಪ, ನಕ್ಷತ್ರಾ ಮೇಲೆ ಮೂಡೇ ಬಿಟ್ಟಿತು ಒಲವು!, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
    ನಕ್ಷತ್ರಾ


    ಭೂಪತಿಗೆ ಥ್ಯಾಂಕ್ಸ್
    ಥ್ಯಾಂಕ್ಸ್ ಭೂಪತಿ. ಇದು ಬರೀ ಸರ್ಪ್ರೈಸ್ ಅಲ್ಲ. ಇದು ನನ್ನ ಪಾಲಿನ ದೊಡ್ಡ ಉಡುಗೊರೆ. ಇದು ಎಲ್ಲಾ ನಿನ್ನಿಂದ. ನಾನು ಇದನ್ನು ಯಾವತ್ತೂ ಮರೆಯಲ್ಲ ಎಂದು ನಕ್ಷತ್ರಾ ಹೇಳ್ತಾಳೆ. ನಾನು ಹಳೇ ಸಖಿನೇ ಭೂಪತಿ. ಆಗ ಹೇಗೆ ಮಾತಡ್ತಿದ್ನೋ, ಈಗಲೂ ಹಾಗೆ ಮಾತನಾಡಿದೆ ಎಂದು ನಕ್ಷತ್ರಾ ಹೇಳಿದ್ದಾಳೆ. FM ಸ್ಟೇಶನ್ ಅವರು ಎಲ್ಲಾ ತುಂಬಾ ಚೆನ್ನಾಗಿ ಶೋ ನಡೆಸಿ ಕೊಟ್ರಿ ಎಂದು ಹೇಳಿದ್ದಾರೆ.


    colors kannada serial, kannada serial, bhupathi angry about shwetha, lakshana serial, serial today episode, ಲಕ್ಷಣ ಧಾರಾವಾಹಿ, ಶ್ವೇತಾ ಮೇಲೆ ಭೂಪತಿ ಕೋಪ, ನಕ್ಷತ್ರಾ ಮೇಲೆ ಮೂಡೇ ಬಿಟ್ಟಿತು ಒಲವು!, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
    ಭೂಪತಿ


    ಶ್ವೇತಾಗೆ ಕ್ಲಾಸ್
    ಭೂಪತಿಗೆ ಮೊದಲೇ ಸುಳ್ಳು ಹೇಳುವವರನ್ನು ಕಂಡ್ರೆ ಆಗಲ್ಲ. ಅಲ್ಲದೇ ಅವರ ಕುಟುಂಬವೇ ನ್ಯಾಯ ಅನ್ನುವ ರೀತಿ ಇದೆ. ತಪ್ಪು ಮಾಡಿದ ತಮ್ಮ ಮೌರ್ಯನನ್ನೇ ಮನೆಯಿಂದ ಆಚೆ ಇಟ್ಟಿದ್ದಾರೆ. ಅವನು ಬುದ್ಧಿ ಕಲಿಯಲಿ ಎಂದು ಹೇಳಿದ್ದಾರೆ. ಇನ್ನು ಶ್ವೇತಾ ಸುಳ್ಳು ಹೇಳಿ ಮೋಸ ಮಾಡಿರುವುದು ಗೊತ್ತಾಗಿದೆ. ಶ್ವೇತಾಗೆ ಯಾವ ಶಿಕ್ಷೆ ಕೊಡ್ತಾನೋ ನೋಡಬೇಕು.


    colors kannada serial, kannada serial, bhupathi angry about shwetha, lakshana serial, serial today episode, ಲಕ್ಷಣ ಧಾರಾವಾಹಿ, ಶ್ವೇತಾ ಮೇಲೆ ಭೂಪತಿ ಕೋಪ, ನಕ್ಷತ್ರಾ ಮೇಲೆ ಮೂಡೇ ಬಿಟ್ಟಿತು ಒಲವು!, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
    ಶ್ವೇತಾ


    ಇದನ್ನೂ ಓದಿ: Actress Sitara Thara: 3 ತಿಂಗಳ ಮಗು ಇದ್ದಾಗಲೇ ಅಪ್ಪ-ಅಮ್ಮನನ್ನು ಕಳೆದುಕೊಂಡೆ, ವೇದಿಕೆ ಮೇಲೆ ಸಿತಾರ ಕಣ್ಣೀರು! 


    ಲಕ್ಷಣ ಧಾರಾವಾಹಿ ದಿನಕ್ಕೊಂದು ತಿರುವುಗಳನ್ನು ಪಡೆಯುತ್ತಿದೆ. ಶ್ವೇತಾಗೆ ಭೂಪತಿ ಮನೆಯಿಂದ ಗೇಟ್ ಪಾಸ್ ಸಿಗುತ್ತಾ? ನಕ್ಷತ್ರಾಗೆ ಭೂಪತಿ ಪ್ರೀತಿ ಸಿಗುತ್ತಾ. RJ ಆಗಿ ನಕ್ಷತ್ರಾ ಶೋ ಮುಂದುವರೆಸುತ್ತಾಳಾ? ಮುಂದೇನಾಗುತ್ತೆ ಅಂತ ನೋಡೋಕೆ ಸೀರಿಯಲ್ ನೋಡಬೇಕು.

    Published by:Savitha Savitha
    First published: