ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 8.30ಕ್ಕೆ ಪ್ರಸಾರವಾಗುತ್ತಿರುವ ಲಕ್ಷಣ (Lakshana) ಧಾರಾವಾಹಿ (Serial) ದಿನಕ್ಕೊಂದು ತಿರುವುಗಳನ್ನು ಪಡೆಯುತ್ತಾ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ತನ್ನದೇ ಆದ ವಿಭಿನ್ನ ಶೈಲಿಯಲ್ಲಿ ಜನಪ್ರಿಯತೆ ಗಳಿಸಿದೆ. ಲಕ್ಷಣ ಧಾರಾವಾಹಿ ನಾಯಕಿ ನಕ್ಷತ್ರಾ ನೋಡಲು ಕಪ್ಪಾಗಿದ್ದರೂ ತಿಳಿ ಬಿಳಿ ಮನಸ್ಸಿನ ಹುಡುಗಿ. ಅಪ್ಪ ಚಂದ್ರಶೇಖರ್ ಮಾಡಿದ ಅವಾಂತರದಿಂದ ನಕ್ಷತ್ರಾ, ಭೂಪತಿ ಮದುವೆ (Marriage) ಆಗೋ ಪರಿಸ್ಥಿತಿ ಬರುತ್ತೆ, ಮದುವೆನೂ ಆಗ್ತಾರೆ. ಬಲವಂತವಾಗಿ ಮದುವೆ ಮಾಡಿಸಿದ್ದಕ್ಕೆ, ಭೂಪತಿ ಮನೆಯವರಿಗೆ ಚಂದ್ರಶೇಖರ್ ಮತ್ತು ಅವರ ಮಗಳು ನಕ್ಷತ್ರಾ ಕಂಡ್ರೆ ಆಗುತ್ತಿರಲಿಲ್ಲ. ಆದ್ರೆ ಈಗ ನಕ್ಷತ್ರಾಳನ್ನು ಸೊಸೆ ಎಂದು ಶಕುಂತಲಾ ದೇವಿ ಒಪ್ಪಿಕೊಂಡಿದ್ದಾರೆ. ಈ ಮದುವೆಯಲ್ಲಿ ನಕ್ಷತ್ರಾ ತಪ್ಪಿಲ್ಲ ಎಂದು ಭೂಪತಿಗೂ ಗೊತ್ತಾಗಿದೆ. ಅಲ್ಲದೇ ಚಂದ್ರಶೇಖರ್ ನ್ನು ಭೂಪತಿ ಕ್ಷಮಿಸಿದ್ದಾನೆ.
ಭೂಪತಿಗೆ ಗೊತ್ತಾದ ಸತ್ಯ
ನಕ್ಷತ್ರಾ ಬಳಿ ಆಣೆ, ಪ್ರಮಾಣ ಮಾಡಿಸಿಕೊಂಡು ಸಿಎಸ್ ನಿನ್ನ ಜೊತೆ ಮದುವೆ ಆಗುವಂತೆ ಹೇಳಿರುತ್ತಾರೆ. ಅದಕ್ಕೆ ಆಕೆಯೂ ಒಪ್ತಾಳೆ. ಅಲ್ಲಿ ಆಕೆ ತಪ್ಪಿರಲ್ಲ. ಆದ್ರೆ ನೀನು ನಕ್ಷತ್ರಾ ಮೇಲೆ ಕೋಪ ಮಾಡಿಕೊಂಡಿದ್ದಿ. ಮಾಡದ ತಪ್ಪಿಗೆ ಹುಡುಗಿ ಶಿಕ್ಷೆ ಅನುಭವಿಸುತ್ತಿದ್ದಾಳೆ ಎಂದು ಮೌರ್ಯ ಭೂಪತಿಗೆ ಹೇಳ್ತಾನೆ. ಅದರಿಂದ ನಕ್ಷತ್ರಾ ತಪ್ಪಿಸಲ್ಲ ಎಂದು ಭೂಪತಿಗೆ ಗೊತ್ತಾಗಿದೆ.
ಸಿಎಸ್ ಮನೆಯಲ್ಲಿ ನಕ್ಷತ್ರಾ-ಭೂಪತಿ
ಚಂದ್ರಶೇಖರ್ ಮನೆಗೆ ಮೊದಲ ಬಾರಿ ಮಗಳು ನಕ್ಷತ್ರಾ, ಅಳಿಯ ಭೂಪತಿ ಬಂದಿದ್ದಾರೆ. ಮನೆಯಲ್ಲಿ ಹಬ್ಬದ ಸಂಭ್ರಮ ಏರ್ಪಟ್ಟಿದೆ. ಅಲ್ಲದೇ ಎಲ್ಲರ ಜೊತೆಯಾಗಿ ಶಿವರಾತ್ರಿ ಹಬ್ಬ ಮಾಡುತ್ತಿದ್ದಾರೆ. ನಕ್ಷತ್ರಾ ತುಂಬಾ ಖುಷಿಯಾಗಿದ್ದಾಳೆ. ತನ್ನ ಸಾಕು ಅಮ್ಮ ಜಯಮ್ಮನನ್ನು ಮನೆಗೆ ಕರೆಸಿಕೊಂಡಿದ್ದಾಳೆ.
ಮಾವನನ್ನು ಕ್ಷಮಿಸಿದ ಭೂಪತಿ
ಚಂದ್ರಶೇಖರ್ ನಕ್ಷತ್ರಾಳನ್ನು ಬಲವಂತವಾಗಿ ಭೂಪತಿಗೆ ಮದುವೆ ಮಾಡಿಸಿರುತ್ತಾರೆ. ಅದಕ್ಕೆ ಭೂಪತಿಗೆ ಮಾವನ ಮೇಲೆ ಕೋಪ ಇರುತ್ತೆ. ಅದಕ್ಕೆ ಅವರನ್ನು ಅವನು ಮಾತನಾಡಿಸುತ್ತಾ ಇರಲ್ಲ. ಅದಕ್ಕೆ ಸಿಎಸ್ ಬೇಸರ ಮಾಡಿಕೊಂಡು ದೇವಸ್ಥಾನಕ್ಕೆ ಹೋಗಿರುತ್ತಾರೆ. ಭೂಪತಿ ತಾನೇ ಮಾವನನ್ನು ಕರೆದುಕೊಂಡು ಬರುತ್ತೇನೆ ಎಂದು ಹೋಗಿದ್ದಾನೆ. ಇದನ್ನು ಕೇಳಿ ನಕ್ಷತ್ರಾ ಮತ್ತು ಆರತಿ ಸಂತೋಷಗೊಂಡಿದ್ದಾರೆ.
ನಿಮ್ಮನ್ನು ಕ್ಷಮಿಸಿದ್ದೇನೆ
ನಕ್ಷತ್ರಾ ತಪ್ಪು ಏನು ಇರಲಿಲ್ಲ. ನನಗೆ ಸತ್ಯ ಗೊತ್ತಿಲ್ಲದೇ ನಾನು ತಪ್ಪು ಮಾಡಿದೆ. ಆಕೆಯನ್ನು ದೂರ ಇಟ್ಟೆ. ಆದ್ರೆ ನಾನು ಕ್ಷಮೆ ಕೇಳುವ ಮೊದಲೇ ಆಕೆ ನನ್ನನ್ನು ಕ್ಷಮಿಸಿದ್ದಾಳೆ. ನಾನು ನಿಮ್ಮನ್ನು ಕ್ಷಮಿಸಿದ್ದೇನೆ. ಆಗಿದ್ದನ್ನು ಮರೆತು, ಮುಂದೆ ಆಗೋದನ್ನು ನೊಡಬೇಕು. ಎಷ್ಟು ದಿನ ಅಂತ ದ್ವೇಷ ಸಾಧಿಸೋಕೆ ಆಗುತ್ತೆ ಹೇಳಿ ಎಂದು ಭೂಪತಿ ಚಂದ್ರಶೇಖರ್ ಬಳಿ ಹೇಳಿದ್ದಾರೆ.
ಮಾವ-ಅಳಿಯ ಸೇರಿ ಅಡುಗೆ
ಸಿಎಸ್ ಮನೆಯಲ್ಲಿ ಭೂಪತಿ ಹಬ್ಬಕ್ಕೆ ನಾನೇ ಅಡುಗೆ ಮಾಡುತ್ತೇನೆ ಎಂದು ಹೇಳಿದ್ದಾನೆ. ಅದಕ್ಕೆ ಎಲ್ಲರೂ ಖುಷಿಯಾಗಿದ್ದಾರೆ. ಬೇಡ ಎಂದ್ರೂ ಚಂದ್ರಶೇಖರ್ ಮತ್ತು ಭೂಪತಿ ಸೇರಿ ನಳಪಾಕ ತಯಾರಿಸುತ್ತಿದ್ದಾರೆ. ಮನೆಯ ಹೆಂಗಸರು ಪೂಜೆಗೆ ರೆಡಿ ಮಾಡಿಕೊಳ್ತಾ ಇದ್ದಾರೆ. ಸಿಎಸ್ ಮನೆಯಲ್ಲ ಸಂಭ್ರಮ ಮನೆ ಮಾಡಿದೆ. ಈ ಸಂಭ್ರಮದ ಮೇಲೆ ಡೆವಿಲ್ ಕೆಟ್ಟ ದೃಷ್ಟಿ ಹಾಕ್ತಾಳಾ ನೋಡಬೇಕು.
ಇದನ್ನೂ ಓದಿ: Tripura Sundari: ಆಮ್ರಪಾಲಿ ಕಣ್ಣೀರು ಹಾಕಿದ್ರೆ ಮಳೆ, ಛಾಯಾಗೆ ಶುರುವಾಯ್ತು ಅನುಮಾನ!
ಭೂಪತಿ-ನಕ್ಷತ್ರಾ ಖುಷಿಯಾಗಿದ್ದಾರೆ. ಡೆವಿಲ್ ಮತ್ತೆ ಏನಾದ್ರೂ ಸಮಸ್ಯೆ ಮಾಡ್ತಾಳಾ? ಶ್ವೇತಾ ಏನಾದ್ರೂ ಹೊಸ ನಾಟಕ ಶುರು ಮಾಡ್ತಾಳಾ? ಮುಂದೇನಾಗುತ್ತೆ ಅಂತ ನೋಡೋಕೆ ಲಕ್ಷಣ ಧಾರಾವಾಹಿ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ