Kendasampige: ಕಣ್ಮುಂದೆಯೇ ಹೊತ್ತಿ ಉರಿಯುತ್ತಿದ್ದಾನೆ ತಮ್ಮ, ಸುಮಿಯ ನೋವಿನ ಕಣ್ಣೀರು!

ಸುಮಿ ಪ್ರತಿಭಟನೆ ಸ್ಥಳಕ್ಕೆ ಓಡಿ ಓಡಿ ಬಂದ್ರೂ ಪ್ರಯೋಜನ ಆಗಿಲ್ಲ. ರಾಜೇಶನಿಗೆ ಬೆಂಕಿ ಬಿದ್ದಿದ್ದು, ಕಾಪಾಡಿ, ಕಾಪಾಡಿ ಎನ್ನುತ್ತಿದ್ದಾನೆ. ಆದ್ರೆ ಅಲ್ಲಿ ಇರುವ ಜನ ಸುಮಿಯನ್ನು ಹಿಡಿದುಕೊಂಡಿದ್ದಾರೆ. ತಮ್ಮನನ್ನು ಕಾಪಾಡಲು ಆಗುತ್ತಿಲ್ಲ. ಹಾಗಾದ್ರೆ ರಾಜೇಶ ಬದುಕಲ್ವಾ?

ಹೊತ್ತಿ ಉರಿಯುತ್ತಿದ್ದಾನೆ ರಾಜೇಶ

ಹೊತ್ತಿ ಉರಿಯುತ್ತಿದ್ದಾನೆ ರಾಜೇಶ

  • Share this:
    ಕೆಂಡಸಂಪಿಗೆ (Kendasampige) ಅನ್ನೋ ಧಾರಾವಾಹಿ (Serial), ಕಲರ್ಸ್ ಕನ್ನಡದಲ್ಲಿ (Colors Kannada) ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6.30ಕ್ಕೆ ಪ್ರಸಾರವಾಗುತ್ತಿದೆ. ಶುರುವಾದ ಹೊಸದರಲ್ಲೇ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗುತ್ತಿದೆ. ಈ ಕಥೆಯ ನಾಯಕಿ ಸುಮನಾ. ಅಪ್ಪನಿಗೆ ಆರೋಗ್ಯ ಸರಿ ಇಲ್ಲದ ಕಾರಣ ಹೂವನ್ನು ಮಾರಿ ಸಂಸಾರ ಸಾಗಿಸುತ್ತಿದ್ದಾಳೆ. ಅಮ್ಮ ಬೇರೆ ಇಲ್ಲ. ತಮ್ಮ, ತಂಗಿಗೆ ಅಮ್ಮನ ಸ್ಥಾನದಲ್ಲಿ ನಿಂತಿದ್ದಾಳೆ. ತನ್ನ ತಮ್ಮ ಪರೀಕ್ಷೆಯಲ್ಲಿ ಪಾಸಾಗಲಿಲ್ಲ ಅಂತ ಅವನ ಜೊತೆ ಮಾತು ಬಿಟ್ಟಿದ್ದಾಳೆ. ಅಪ್ಪನ ಆಪರೇಷನ್‍ಗೆ ದುಡ್ಡು ಪಡೆದ ಸುಮಿಗೆ ಕಷ್ಟದ ಮೇಲೆ ಕಷ್ಟ ಬರುತ್ತಿವೆ. ಮನೆಯಲ್ಲಿ ಮಾಡಿರುವ ಸಾಲಕ್ಕೆ 1 ಲಕ್ಷ (1 lack) ಸಿಗುತ್ತೆ ಅಂತ ಪ್ರತಿಭಟನೆಯಲ್ಲಿ (Protest) ಪೆಟ್ರೋಲ್ (Petrol) ಸುರಿದುಕೊಂಡು ರಾಜೇಶ ಬೆಂಕಿ (Fire) ಹಚ್ಚಿಕೊಂದ್ದಾನೆ. ಕಣುಂದೆಯೇ ತಮ್ಮ ಉರಿಯುತ್ತಿದ್ರೂ ಕಾಪಾಡಲು ಆಗುತ್ತಿಲ್ಲ ಅಕ್ಕ ಸುಮನಾಗೆ.

    ಪ್ರತಿಭಟನೆಯಲ್ಲಿ ರಾಜೇಶನಿಗೆ ಬೆಂಕಿ

    ಕಾರ್ಪೊರೇಟರ್ ತೀರ್ಥಂಕರ್ ಪಕ್ಷದಲ್ಲಿ ಪ್ರತಿಭಟನೆ ಇದೆ. ಪಕ್ಷ ಬಿಟ್ಟು ಹೋದವರನ್ನು ವಾಪಸ್ ಬರುವಂತೆ ಹೇಳಲು ಪ್ರತಿಭಟನೆ ಮಾಡುತ್ತಿದ್ದಾರೆ. ಪ್ರತಿಭಟನೆಯಲ್ಲಿ ರಾಜೇಶ್ ಬೆಂಕಿ ಹಚ್ಚಿಕೊಳ್ಳುವ ನಾಟಕ ಮಾಡಬೇಕು. ಅದಕ್ಕೆ ಅವನಿಗೆ 1 ಲಕ್ಷ ಸಿಗುತ್ತೆ. ಅದರಿಂದ ಮನೆಗೆ ಉಪಯೋಗ ಆಗಲಿದೆ.

    1 ಲಕ್ಷಕ್ಕಾಗಿ ಬೆಂಕಿ
    1 ಲಕ್ಷ ಸಿಗುವ ಬಗ್ಗೆ ಗೊತ್ತಾದಾಗ, ರಾಜೇಶನಿಗೆ ತನ್ನ ಅಕ್ಕ ಹೇಳಿದ್ದು ನೆನಪಾಗುತ್ತೆ, ಮನೆ ಸಾಲ ತೀರಿಸಬೇಕು. ಅಕ್ಕನಿಗೆ ಸಹಾಯ ಮಾಡಬೇಕು ಎಂದು ರಾಜೇಶ ಪ್ರತಿಭಟನೆಯಲ್ಲಿ ಬೆಂಕಿ ಹಚ್ಚಿಕೊಳ್ಳೋಕೆ ರೆಡಿ ಎಂದು ಪ್ರತಿಭಟನೆಯಲ್ಲಿ ಪೆಟ್ರೋಲ್ ಸುರಿದುಕೊಳ್ಳುತ್ತಿದ್ದಂತೆ, ಯಾರೂ ಬೆಂಕಿ ಕಿಡಿ ಹಾಕಿದ್ದಾರೆ. ರಾಜೇಶ ಹೊತ್ತಿ ಉರಿಯುತ್ತಿದ್ದಾನೆ.

    ಇದನ್ನೂ ಓದಿ: Puneeth Rajkumar: ಯುವರತ್ನನ ಜನ್ಮದಿನವಿನ್ನು ಸ್ಫೂರ್ತಿ ದಿನ! ಸರ್ಕಾರದಿಂದ ಪುನೀತ್‌ ರಾಜ್‌ಕುಮಾರ್‌ಗೆ ಮತ್ತೊಂದು ಗೌರವ

    ರಾಜೇಶ ಹುಟ್ಟುಹಬ್ಬದ ದಿನವೇ ಪ್ರಾಣ ಹೋಗುತ್ತಾ?
    ರಾಜೇಶನ ಹುಟ್ಟುಹಬ್ಬಕ್ಕೆ ಪೂಜೆ ಮಾಡಿಸಲು ಮನೆಯವರೆಲ್ಲಾ ದೇವಸ್ಥಾನಕ್ಕೆ ಹೋಗಿದ್ದಾರೆ. ಆದ್ರೆ ದೇವಸ್ಥಾನದಲ್ಲಿ ಒಂದರ ಮೇಲೊಂದು ಅಪಶಕುನಗಳು ನಡೆಯುತ್ತಿವೆ. ಸುಮಿಗೆ ಗಾಬರಿಯಾಗಿದೆ. ಅಷ್ಟರಲ್ಲೇ ಕಾಲೋನಿಯ ಒಬ್ಬ ವ್ಯಕ್ತಿ ಬಂದು ನಿಮ್ಮ ತಮ್ಮ ಬೆಂಕಿ ಹಚ್ಚಿಕೊಳ್ತಿದ್ದಾನೆ ಎಂದು ಹೇಳುತ್ತಾರೆ. ಎಲ್ಲರೂ ಪ್ರತಿಭಟನೆ ನಡೆಯುವ ಜಾಗಕ್ಕೆ ಹೋಗ್ತಾರೆ. ಆದ್ರೆ ಅಷ್ಟರಲ್ಲೇ ರಾಜೇಶ ಹೊತ್ತಿ ಉರಿಯುತ್ತಿದ್ದಾನೆ.

    Colors Kannada serial, Kannada serial, Kendasampige Serial, Kendasampige serial cast, Suman brother Rajesh in dangerous situation, ಕೆಂಡಸಂಪಿಗೆ ಧಾರಾವಾಹಿ, ಸಾವಿನ ಅಂಚಿನಲ್ಲಿ ರಾಜೇಶ, ಹೊಸ ಧಾರಾವಾಹಿ,ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
    ಸುಮಿ


    ಕಣ್ಮುಂದೆಯೇ ತಮ್ಮ ಧಗ ಧಗ
    ಸುಮಿ ಪ್ರತಿಭಟನೆ ಸ್ಥಳಕ್ಕೆ ಓಡಿ ಓಡಿ ಬಂದ್ರೂ ಪ್ರಯೋಜನ ಆಗಿಲ್ಲ. ರಾಜೇಶನಿಗೆ ಬೆಂಕಿ ಬಿದ್ದಿದ್ದು, ಕಾಪಾಡಿ, ಕಾಪಾಡಿ ಎನ್ನುತ್ತಿದ್ದಾನೆ. ಆದ್ರೆ ಅಲ್ಲಿ ಇರುವ ಜನ ಸುಮಿಯನ್ನು ಹಿಡಿದುಕೊಂಡಿದ್ದಾರೆ. ತಮ್ಮನನ್ನು ಕಾಪಾಡಲು ಆಗುತ್ತಿಲ್ಲ. ಹಾಗಾದ್ರೆ ರಾಜೇಶ ಬದುಕಲ್ವಾ?

    ಬೆಂಕಿ ಕಿಡಿ ಹಿಂದೆ ಕಾಳಿ ಕೈವಾಡ
    ಪ್ರತಿಭಟನೆಯಲ್ಲಿ ನಾಟಕಕ್ಕೆ ರಾಜೇಶ ಬೆಂಕಿ ಹಚ್ಚಿಕೊಳ್ಳೋ ವಿಷಯ ಕಾಳಿಗೆ ಗೊತ್ತಾಗುತ್ತೆ. ಕಾಳಿಗೆ ರಾಜೇಶನಿಂದ ತುಂಬಾ ಅವಮಾನ ಆಗಿರುತ್ತೆ. ರಾಜೇಶ, ತನ್ನ ಅಕ್ಕ ಸುಮಿ ಜೊತೆ ಕಾಳಿ ಅಸಭ್ಯವಾಗಿ ವರ್ತಿಸಿದ್ದ ಎಂದು, ಅವನ ಮನೆಗೆ ಹೋಗಿ ಹೊಡೆದು, ಪೆÇಲೀಸರಿಗೆ ಒಪ್ಪಿಸಿರುತ್ತಾನೆ. ಅದಕ್ಕೆ ಕಾಳಿ ಹೇಗಾದ್ರೂ ಸೇಡು ತೀರಿಸಿಕೊಳ್ಳಬೇಕು ಎನ್ನುತ್ತಿರುತ್ತಾನೆ. ಅದಕ್ಕೆ ಪ್ರತಿಭಟನೆ ಅವನಿಗೆ ಸಿಕ್ಕಿದೆ ತನ್ನ ಕಡೆಯ ಹುಡುಗನಿಗೆ ದುಡ್ಡು ಕೊಟ್ಟು, ರಾಜೇಶನಿಗೆ ಬೆಂಕಿ ಹಚ್ಚಲು ಹೇಳುತ್ತಾನೆ. ಅದರಂತೆ ರಾಜೇಶನಿಗೆ ಬೆಂಕಿ ಹಚ್ಚಿದ್ದಾನೆ.

    ಇದನ್ನೂ ಓದಿ: Ramachari: ಚಿತ್ರದುರ್ಗದ ಕಲ್ಲಿನಕೋಟೆಯ ಓಬವ್ವನ ಕಥೆ ಹೇಳ್ತಿದ್ದಾನೆ ರಾಮಾಚಾರಿ, ನೀವೂ ಕೇಳಿ!

    ರಾಜೇಶನನ್ನು ಕಾಪಾಡ್ತಾರಾ  ಕಾರ್ಪೊರೇಟರ್
    ಪ್ರತಿಭಟನೆಯಲ್ಲಿ ಸುಮ್ಮನೇ ಬೆಂಕಿ ಹಚ್ಚಿಕೊಳ್ಳಿ, ಅಲ್ಲೇ ಹತ್ತಿರ ಇದ್ದೋರು ಪ್ರಾಣ ಕಾಪಾಡ್ತಾರೆ ಎಂದು ಹೇಳಲಾಗಿತ್ತು. ಆದ್ರೆ ರಾಜೇಶನಿಗೆ ಬೆಂಕಿ ಹೆಚ್ಚು ಬಿದ್ದಿದ್ದು, ಕಾಪಾಡಲು ಯಾರು ಮುಂದಾಗ್ತಿಲ್ಲ. ಕಾರ್ಪೊರೇಟರ್ ತೀರ್ಥಂಕರ್ ರಾಜೇಶನ ಪ್ರಾಣ ಕಾಪಾಡಲು ಆಗದೇ ಪರದಾಡುತ್ತಿದ್ದಾರೆ.

    Colors Kannada serial, Kannada serial, Kendasampige Serial, Kendasampige serial cast, Suman brother Rajesh in dangerous situation, ಕೆಂಡಸಂಪಿಗೆ ಧಾರಾವಾಹಿ, ಸಾವಿನ ಅಂಚಿನಲ್ಲಿ ರಾಜೇಶ, ಹೊಸ ಧಾರಾವಾಹಿ,ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
    ಕಾರ್ಪೊರೇಟರ್ ತೀರ್ಥಂಕರ್


    ತಮ್ಮ ರಾಜೇಶನ ಪಾತ್ರ ಇಲ್ಲಿಗೆ ಮುಕ್ತಾಯವಾಗುತ್ತಾ? ಅವನನ್ನು ಕಾಪಾಡ್ತಾರಾ? ಅಕ್ಕ ಸುಮನಾ ಈಗ ಏನ್ ಮಾಡ್ತಾಳೆ? ಎಲ್ಲವನ್ನೂ ನೋಡಲು ಕೆಂಡಸಂಪಿಗೆ ಧಾರಾವಾಹಿ ನೋಡಬೇಕು.
    Published by:Savitha Savitha
    First published: