Kendasampige: ಸುಮನಾಳ ಪ್ರೀತಿಯ ತಮ್ಮ ರಾಜೇಶ್ ಜೈಲಲ್ಲಿ! ಕೆಂಡಸಂಪಿಗೆಯಲ್ಲಿ ರೋಚಕ ತಿರುವು

ಕಾಲೋನಿಯವರ ಮೇಲೆ ಕಾಳಿ ಕೈ ಮಾಡಲು ಹೋಗುತ್ತಾನೆ. ಆಗ ಸುಮಿ ತಡೆಯುತ್ತಾಳೆ. ನೀವು ದುಡ್ಡು ಕೊಟ್ಟಿದ್ದೀರಿ ಅಂತ ನಾನು ಸುಮ್ಮನೇ ಇರುತ್ತೇನೆ. ಆದ್ರೆ ನಮ್ಮ ಕಾಲೋನಿ ಜನದ ಸುದ್ದಿಗೆ ಬಂದ್ರೆ, ನನ್ನ ಇನ್ನೊಂದು ಮುಖ ತೋರಿಸಬೇಕಾಗುತ್ತೆ ಎನ್ನುತ್ತಾಳೆ.

ಕೆಂಡಸಂಪಿಗೆ

ಕೆಂಡಸಂಪಿಗೆ

 • Share this:
  ಕೆಂಡಸಂಪಿಗೆ (Kendasampige) ಅನ್ನೋ ಹೊಸ ಧಾರಾವಾಹಿ 2 ವಾರದಿಂದ, ಕಲರ್ಸ್ ಕನ್ನಡದಲ್ಲಿ (Colors Kannada) ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6.30ಕ್ಕೆ ಪ್ರಸಾರವಾಗುತ್ತಿದೆ. ಶುರುವಾದ ಹೊಸದರಲ್ಲೇ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗುತ್ತಿದೆ. ಈ ಕಥೆಯ ನಾಯಕಿ ಸುಮನಾ. ಅಪ್ಪನಿಗೆ ಆರೋಗ್ಯ ಸರಿ ಇಲ್ಲದ ಕಾರಣ ಹೂವನ್ನು ಮಾರಿ ಸಂಸಾರ ಸಾಗಿಸುತ್ತಿದ್ದಾಳೆ. ಅಮ್ಮ ಬೇರೆ ಇಲ್ಲ. ತಮ್ಮ, ತಂಗಿಗೆ ಅಮ್ಮನ ಸ್ಥಾನದಲ್ಲಿ ನಿಂತಿದ್ದಾಳೆ. ತನ್ನ ತಮ್ಮ ಪರೀಕ್ಷೆಯಲ್ಲಿ ಪಾಸಾಗಲಿಲ್ಲ ಅಂತ ಅವನ ಜೊತೆ ಮಾತು ಬಿಟ್ಟಿದ್ದಾಳೆ. ತಮ್ಮನ ಪಾತ್ರದಲ್ಲಿ ಶನಿ ಖ್ಯಾತಿಯ ಸುನೀಲ್ ಅಭಿನಯಿಸುತ್ತಿದ್ದಾರೆ. ಇನ್ನು ಕಥೆಯ ನಾಯಕ ತೀಥರ್ಂಕರ್ ಪ್ರಸಾದ್. ಈ ಧಾರಾವಾಹಿಯಲ್ಲಿ ಕಾರ್ಪೊರೇಟರ್ ಪಾತ್ರ. ಅಪ್ಪನ ಆಪರೇಷನ್ ದುಡ್ಡು (Money) ಪಡೆದ ಸುಮಿ, ಕಾಲೋನಿಯವರಿಗಾಗಿ ದುಡ್ಡು ಕೊಟ್ಟ ವಿಜಯಳಾ ಮಗ ಕಾಳಿಯನ್ನೇ ಎದುರು ಹಾಕಿಕೊಂಡಿದ್ದಾಳೆ.

  ದುಡ್ಡು ಕೊಟ್ಟು ಮಗನನ್ನು ಮದುವೆ ಮಾಡಿಕೋ ಎಂದ ವಿಜಯ
  ಸುಮನಾ ತಂದೆ ಆಪರೇಷಗೆ 4.5 ಲಕ್ಷ ಬೇಕಾಗಿರುತ್ತೆ. ಸುಮಿ ಕಷ್ಟದ ಸಮಯವನ್ನೇ ಬಳಸಿಕೊಂಡ ಕಾಲೋನಿ ಮಹಿಳೆ ವಿಜಯ ಆಸ್ಪತ್ರೆಗೆ ಬಂದು ಸುಮಿ ಕೈಗೆ 4.5 ಲಕ್ಷ ತಂದು ಕೊಡುತ್ತಾಳೆ. ದುಡ್ಡು ತಗೋ ನಿಮ್ಮ ಅಪ್ಪನ ಪ್ರಾಣ ಉಳಿಸಿಕೋ ಅಂತಾಳೆ. ಅದಕ್ಕೆ ಬದಲಾಗಿ ತನ್ನ ಮಗನನ್ನು ಮದುವೆ ಮಾಡಿಕೋ ಎಂಬ ಪ್ರಸ್ತಾಪವನ್ನು ಮುಂದಿಡುತ್ತಾಳೆ. ಮಗನಿಗೆ ಕಂಡ ಕಂಡ ಹುಡುಗಿಯರ ಸಹವಾಸ. ಬೇರೆ ಯಾರು ಹೆಣ್ಣು ಕೊಡಲ್ಲ ಎಂದು, ಸುಮಿಯನ್ನು ಗಂಟು ಹಾಕಲು ಈ ರೀತಿ ಮಾಡಿರುತ್ತಾಳೆ. ಸುಮಿಯೂ ತನ್ನ ತಂದೆ ಪ್ರಾಣ ಉಳಿಸಿಕೊಳ್ಳಲು ಆ ಸಮಯಕ್ಕೆ ಒಪ್ಪಿಕೊಂಡಿರುತ್ತಾಳೆ.

  ವಿಜಯ ಮಗನಿಗೆ ಹೊಡೆದ ಸುಮಿ ತಮ್ಮ ರಾಜೇಶ್
  ದುಡ್ಡು ಕೊಟ್ಟ ಧೈರ್ಯದಿಂದ ಮನೆಗೆ ಹೆಣ್ಣು ಕೇಳಲು ವಿಜಿ ಮತ್ತು ಕಾಳಿ ಬಂದಿರುತ್ತಾರೆ. ಆಗ ರಾಜೇಶ್ ಅವರಿಗೆ ಹೊಡೆದು ಕಳಿಸುತ್ತಾನೆ. ರಾಜೇಶನಿಗೆ ಮೊದಲೇ ಅಕ್ಕ ಎಂದ್ರೆ ತುಂಬಾ ಪ್ರೀತಿ. ತನ್ನ ಅಕ್ಕನಿಗೆ ಏನಾದ್ರೂ ತೊಂದ್ರೆ ಆದ್ರೆ ಸುಮ್ಮನೇ ಇರಲ್ಲ. ಅಂತದ್ರಲ್ಲಿ ಕೆಟ್ಟ ಮನಸ್ಥಿತಿ ಇರೋ ಹುಡುಗನನ್ನು ತನ್ನ ಅಕ್ಕ ಮದುವೆ ಆಗಲು ಬಿಟ್ಟು ಬಿಡುತ್ತಾನಾ? ಅದಕ್ಕೆ ಕೋಪಗೊಂಡ ರಾಜೇಶ್, ವಿಜಯ ಮಗನನ್ನು ಹೊಡೆದಿದ್ದಾನೆ. ಮನೆಯ ಬಳಿ ಜೋರು ಗಲಾಟೆ ನಡೆದಿತ್ತು.

  ಇದನ್ನೂ ಓದಿ: Hitler Kalyana: ಲೀಲಾ ತವರು ಮನೆಗೆ ಗಣೇಶ ಬರದಂತೆ ತಡೆ ಹಿಡಿದಿದ್ದಾಳೆ ಎ.ಜೆ ಸೊಸೆ ದುರ್ಗಾ, ಕೆಡುಕು ಕಾದಿದ್ಯಾ?

  ಪೊಲೀಸ್ ಠಾಣೆಯಲ್ಲಿ ರಾಜೇಶ್
  ರಾಜೇಶ್ ತನ್ನ ಮಗನಿಗೆ ಹೊಡೆದಿದ್ದಾನೆ. ಕೊಲೆ ಮಾಡಲು ಬಂದಿದ್ದಾನೆ ಎಂದು ವಿಜಯ ಪೊಲೀಸರಿಗೆ ದೂರು ನೀಡಿದ್ದಾಳೆ. ಅದಕ್ಕೆ ಪೊಲೀಸರು ರಾಜೇಶ್‍ನನ್ನು ಜೈಲಿಗೆ ಹಾಕಿದ್ದಾರೆ, ನಮ್ಮ ಅಣ್ಣ ಕಾರ್ಪೊರೇಟರ್ ತೀರ್ಥಂಕರ್ ಪ್ರಸಾದ್ ಎಂದು ಹೇಳಿದ್ರೂ ರಾಜೇಶ್‍ನನ್ನು ಬಿಡುತ್ತಿಲ್ಲ. ಆತಂಕದಲ್ಲಿ ಪೊಲೀಸ್ ಠಾಣೆಯಲ್ಲಿ ಇದ್ದಾನೆ.

  Colors Kannada serial, Kannada serial, Kendasampige Serial, Kendasampige serial cast, Sumana stand for Her area members, ಕೆಂಡಸಂಪಿಗೆ ಧಾರಾವಾಹಿ, ಹೆಣ್ಣು ಕೇಳೋಕೆ ಮನೆಗೆ ಬಂದಿದ್ದಾಳೆ ವಿಜಯ, ಹೊಸ ಧಾರಾವಾಹಿ, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
  ಸುಮಿ, ರಾಜೇಶ್


  ಕಾಲೋನಿ ಅವರ ಪರ ನಿಂತ ಸುಮಿ
  ಸುಮಿ ಮನೆಗೆ ಬಂದು ವಿಜಯ ಗಲಾಟೆ ಮಾಡಿ ಹೋದ ಮೇಲೆ. ಕಾಲೋನಿ ಅವರು ಸುಮನಾ ಬಗ್ಗೆ ಮಾತಾಡೋಕೆ ವಿಜಯ ಮನೆಗೆ ಬಂದಿದ್ದಾರೆ. ಅವತ್ತು ನೀವು ನಮ್ಮ ಅಪ್ಪನ ಆಪರೇಷನ್ ಗೆ ದುಡ್ಡು ಕೊಟ್ಟಿದ್ದು ಸಹಾಯ ಮಾಡಲು ಅಲ್ಲ, ವ್ಯವಹಾರಕ್ಕೆ ಎನ್ನುತ್ತಾಳೆ ಸುಮನಾ.

  ಆಗ ಕಾಲೋನಿಯವರ ಮೇಲೆ ಕಾಳಿ ಕೈ ಮಾಡಲು ಹೋಗುತ್ತಾನೆ. ಆಗ ಸುಮಿ ತಡೆಯುತ್ತಾಳೆ. ನೀವು ದುಡ್ಡು ಕೊಟ್ಟಿದ್ದೀರಿ ಅಂತ ನಾನು ಸುಮ್ಮನೇ ಇರುತ್ತೇನೆ. ಆದ್ರೆ ನಮ್ಮ ಕಾಲೋನಿ ಜನದ ಸುದ್ದಿಗೆ ಬಂದ್ರೆ, ನನ್ನ ಇನ್ನೊಂದು ಮುಖ ತೋರಿಸಬೇಕಾಗುತ್ತೆ ಎನ್ನುತ್ತಾಳೆ.

  ವಿಜಯ ಸಾಲ ತೀರಿಸುತ್ತಾರಾ?
  ವಿಜಯ ಮೊದಲೇ ಬಡ್ಡಿಗೆ ದುಡ್ಡು ಕೊಡುವ ಹೆಂಗಸು. ಒಂದೊಂದು ರೂಪಾಯಿಗೂ ಲೆಕ್ಕ ಇಟ್ಟಿರುತ್ತಾಳೆ. ಸುಮಿ ತನ್ನ ಮನೆ ಸೊಸೆ ಆಗ್ತಾಳೆ ಅಂತ ಅವರ ಅಪ್ಪನ ಆಪರೇಷನ್‍ಗೆ ಲಕ್ಷ ಲಕ್ಷ ದುಡ್ಡು ಕೊಟ್ಟಿದ್ದಾಳೆ. ಈಗ ಅವಳ ದುಡ್ಡು ತಕ್ಷಣ ಕೊಡಬೇಕು. ಇಲ್ಲ ಸುಮಿ ಆಕೆಯ ಮಗನನ್ನು ಮದುವೆ ಆಗಬೇಕು.

  ಇದನ್ನೂ ಓದಿ: Shwetha Srivastav: ಶ್ವೇತಾ ಶ್ರೀವಾತ್ಸವ್ ಹುಟ್ಟುಹಬ್ಬ, ಜನ್ಮದಿನದಂದು NGO ಶುರು ಮಾಡಿದ ನಟಿ

  ಈಗ ಸುಮನಾ ಏನು ಮಾಡ್ತಾಳೆ ಅನ್ನೋದೇ ಯಕ್ಷ ಪ್ರಶ್ನೆ ಆಗಿದೆ. ತಮ್ಮ ಬೇರೆ ಜೈಲು ಸೇರಿದ್ದಾನೆ. ಅವನನ್ನು ಬಿಡಿಸಬೇಕು. ಸುಮಿಗೆ ಎಲ್ಲಾ ಕಷ್ಟ ಸಾಲು ಸಾಲಾಗಿ ಬರುತ್ತಿವೆ. ಮುಂದೆನಾಗುತ್ತೆ ಅಂತ ನೋಡಲು ಕೆಂಡಸಂಪಿಗೆ ಧಾರಾವಾಹಿ ನೋಡಬೇಕು.
  Published by:Savitha Savitha
  First published: