• Home
  • »
  • News
  • »
  • entertainment
  • »
  • Kendasampige: ಸುಮನಾ ಮದುವೆಯನ್ನು ಕಾರ್ಪೊರೇಟರ್ ಮಾಡಿಸ್ತಾರಂತೆ! ಸಾಮೂಹಿಕ ವಿವಾಹದಲ್ಲೇ ಆಕೆಗೂ ಮುಹೂರ್ತ

Kendasampige: ಸುಮನಾ ಮದುವೆಯನ್ನು ಕಾರ್ಪೊರೇಟರ್ ಮಾಡಿಸ್ತಾರಂತೆ! ಸಾಮೂಹಿಕ ವಿವಾಹದಲ್ಲೇ ಆಕೆಗೂ ಮುಹೂರ್ತ

ಸುಮನಾ ಮದುವೆಯನ್ನು ಕಾರ್ಪೊರೇಟರ್ ಮಾಡಿಸ್ತಾರಂತೆ!

ಸುಮನಾ ಮದುವೆಯನ್ನು ಕಾರ್ಪೊರೇಟರ್ ಮಾಡಿಸ್ತಾರಂತೆ!

ಕಾಳಿ ಮಾತು ಕೇಳಿಸಿಕೊಂಡ ತೀರ್ಥಂಕರ್ ಸುಮನಾ ಮದುವೆಯನ್ನು ನಾನು ಮಾಡಿಸುತ್ತೇನೆ. ನಾನು ಅವರಿಗೆ ಒಳ್ಳೆ ಗಂಡನ್ನು ಹುಡುಕುತ್ತೇನೆ. ನಾನು ಮಾಡೋ ಸಾಮೂಹಿಕ ವಿವಾಹದಲ್ಲೇ ಆಕೆಗೂ ಮದುವೆ ಮಾಡಿಸುತ್ತೇನೆ ಎಂದು ಎಲ್ಲರ ಮುಂದೆ ಪ್ರಮಾಣ ಮಾಡಿದ್ದಾನೆ.

  • Share this:

    ಕೆಂಡಸಂಪಿಗೆ (Kendasampige) ಅನ್ನೋ ಧಾರಾವಾಹಿ (Serial), ಕಲರ್ಸ್ (Colors Kannada) ಕನ್ನಡದಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6.30ಕ್ಕೆ ಪ್ರಸಾರವಾಗುತ್ತಿದೆ. ಶುರುವಾದಾಗಿನಿಂದ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗುತ್ತಿದೆ. ಈ ಕಥೆಯ ನಾಯಕಿ ಸುಮನಾ (Sumana). ಅಪ್ಪನಿಗೆ ಆರೋಗ್ಯ ಸರಿ ಇಲ್ಲದ ಕಾರಣ ಹೂವನ್ನು ಮಾರಿ ಸಂಸಾರ ಸಾಗಿಸುತ್ತಿದ್ದಾಳೆ. ಅಮ್ಮ ಬೇರೆ ಇಲ್ಲ. ತಮ್ಮನ ಸಾವಿನ ನೋವನ್ನೇ ಸುಮಿಗೆ ಮರೆಯಲು ಆಗುತ್ತಿಲ್ಲ. ಈ ನಡುವೆ ತನ್ನ ಏರಿಯಾ ಜನರಿಗೆ ಕಷ್ಟದ ಮೇಲೆ ಕಷ್ಟ ಬರುತ್ತಿದೆ. ಅದಲ್ಲದೇ ವಿಜಯಮ್ಮನ ಮಗ ಕಾಳಿ ಸುಮಿ, ಕಾರ್ಪೊರೇಟರ್ ಗೆ ಸಂಬಂಧ ಇದೆ ಎಂದು ಎಲ್ಲೆಡೆ ಸುದ್ದಿ ಹರಡಿಸುತ್ತಿದ್ದಾನೆ. ಆಕೆಯನ್ನು ಯಾರೂ ಮದುವೆ ಮಾಡಿಕೊಳ್ಳದಂತೆ ಮಾಡ್ತೀನಿ ಅಂತಿದ್ದಾನೆ. ಅದಕ್ಕೆ ಕಾರ್ಪೊರೇಟರ್ ನಾನು ಮದುವೆ (Marriage) ಮಾಡಿಸ್ತೀನಿ ಅಂತಿದ್ದಾರೆ.


    ಸುಮಿ ಬಗ್ಗೆ ಕಾಳಿ ಅಪಪ್ರಚಾರ
    ಬಡ್ಡಿ ಕೊಡೋ ವಿಜಯಮ್ಮನ ಮಗ ಕಾಳಿ, ತೀಥರ್ಂಕರ್ ವಿರುದ್ಧ ಪಕ್ಷದವರ ಜೊತೆ ಸೇರಿದ್ದಾರೆ. ಸುಮಿ ಬಗ್ಗೆ ಇಲ್ಲ ಸಲ್ಲದ ಅಪಪ್ರಚಾರ ಮಾಡ್ತಾ ಇದ್ದಾನೆ. ತೀಥರ್ಂಕರ್ ಸೇವೆಯಿಂದ ನಮ್ಮ ಜನ ಮತ ಹಾಕುತ್ತಿಲ್ಲ. ಸುಮಿ ಮಾತು ಕೇಳಿ ಮತ ಹಾಕುತ್ತಿದ್ದಾರೆ. ಸುಮಿಗೂ, ತೀಥರ್ಂಕರ್ ಗೆ ಸಂಬಂಧ ಇದೆ ಎಂದು ಪ್ರಚಾರ ಮಾಡುತ್ತಿದ್ದಾನೆ.


    ಸುಮಿ ತಂದೆಗೆ ಗಾಬರಿ
    ಕಾಳಿ ಪ್ರಚಾರ ಮಾಡುತ್ತಿರುವುದನ್ನು ಕೇಳಿಸಿಕೊಂಡ ಸುಮಿ ತಂದೆ ಗಾಬರಿ ಆಗಿದ್ದಾರೆ. ತೀಥರ್ಂಕರ್ ಜೊತೆ ಪ್ರಚಾರಕ್ಕೆ ಹೋಗುತ್ತಿದ್ದವಳನ್ನು ಕರೆದು, ಅವರ ಜೊತೆ ಹೋಗಬೇಡ. ಕಾಳಿ ನಿಮ್ಮಿಬ್ಬರ ಬಗ್ಗೆ ಸಂಬಂಧ ಕಟ್ಟಿ ಮಾತನಾಡುತ್ತಿದ್ದಾನೆ ಎಂದು ಹೇಳುತ್ತಾರೆ. ಅದನ್ನು ಕೇಳಿ ಅಲ್ಲಿರುವವರೆಲ್ಲಾ ಶಾಕ್ ಆಗುತ್ತಾರೆ. ಜೊತೆಗೆ ಕೋಪಗೊಳ್ಳುತ್ತಾರೆ. ಎಲ್ಲರೂ ಕಾಳಿ ಇರೋ ಜಾಗಕ್ಕೆ ಹೋಗುತ್ತಾರೆ. ಯಾಕ್ ಈ ರೀತಿ ಮಾಡ್ತೀಯಾ ಎಂದು ಕೇಳುತ್ತಾರೆ.


    Colors Kannada serial, Kannada serial, Kendasampige Serial, Kendasampige serial cast, Sumana marriage matter in episode, ಕೆಂಡಸಂಪಿಗೆ ಧಾರಾವಾಹಿ, ಸುಮನಾ ಮದುವೆಯನ್ನು ಕಾರ್ಪೊರೇಟರ್ ಮಾಡಿಸ್ತಾರಂತೆ, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
    ಸುಮಿ ತಂದೆ


    ಸುಮಿಯನ್ನು ಯಾರೂ ಮದುವೆ ಆಗಬಾರದಂತೆ
    ತನ್ನ ಬಗ್ಗೆ ಮಾತನಾಡಿದ ಕಾಳಿಗೆ ಕ್ಲಾಸ್ ತೆಗೆದುಕೊಳ್ಳಲು ಸುಮನಾ ಅವನು ಇರುವ ಜಾಗಕ್ಕೆ ಬಂದಿದ್ದಾಳೆ. ಆಗ ಸುಮಿ ಯಾಕ್ ಈ ರೀತಿ ಮಾಡ್ತಿಯಾ ಎಂದಾಗ. ನಮ್ಮ ಅಮ್ಮ ಲಕ್ಷ ಲಕ್ಷ ಕೊಟ್ಟಾಗ ನಾನ್ ಬೇಕಿತ್ತು. ಈಗ ಕೋಟಿ ಕೋಟಿ ಕೊಡೋ ಕಾರ್ಪೊರೇಟರ್ ಬೇಕಾ ನಿನಗೆ ಎಂದು ಎಲ್ಲರ ಎದುರು ಕೆಟ್ಟದಾಗಿ ಮಾತಾನಾಡುತ್ತಾನೆ. ಅದಕ್ಕೆ ಸುಮಿ ಅವನಿಗೆ ಬೈಯ್ತಾಳೆ.


    ಇದನ್ನೂ ಓದಿ: Jodi Number 01: ಜೋಡಿ ನಂಬರ್ 01 ಕಾರ್ಯಕ್ರಮದ ಸೆಮಿ ಫಿನಾಲೆ, ಒಂದೇ ವೇದಿಕೆಯಲ್ಲಿ ದಿಗ್ಗಜರ ಸಮಾಗಮ!


    ತಪ್ಪಾಗಿ ಮಾತನಾಡಬೇಡ ಎಂದ ತೀರ್ಥಂಕರ್
    ಎಲ್ಲವನ್ನೂ ಕೇಳಿಸಿಕೊಂಡ ಕಾರ್ಪೊರೇಟರ್ ತೀರ್ಥಂಕರ್ ಹೆಣ್ಣು ಮಗಳ ಬಗ್ಗೆ ತಪ್ಪಾಗಿ ಮಾತನಾಡಬೇಡ. ಏಕೆ ಅಪಪ್ರಚಾರ ಮಾಡ್ತಾ ಇದ್ದೀಯಾ ಎಂದು ಕೇಳ್ತಾರೆ. ಅದಕ್ಕೆ ಕಾಳಿ ಅವಳನ್ನು ಯಾರೂ ಮದುವೆ ಆಗಬಾರದು. ಅದಕ್ಕೆ ಈ ರೀತಿ ಮಾಡ್ತಾ ಇದ್ದೀನಿ ಎನ್ನುತ್ತಾನೆ. ಅವನ ಮಾತು ಕೇಳಿ ಕಾರ್ಪೊರೇಟರ್ ಕೋಪ ಮಾಡಿಕೊಳ್ತಾರೆ.


    Colors Kannada serial, Kannada serial, Kendasampige Serial, Kendasampige serial cast, Sumana marriage matter in episode, ಕೆಂಡಸಂಪಿಗೆ ಧಾರಾವಾಹಿ, ಸುಮನಾ ಮದುವೆಯನ್ನು ಕಾರ್ಪೊರೇಟರ್ ಮಾಡಿಸ್ತಾರಂತೆ, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
    ತೀರ್ಥಂಕರ್


    ಸಾಮೂಹಿಕ ವಿವಾಹದಲ್ಲೇ ಸುಮನಾ ಮದುವೆ
    ಕಾಳಿ ಮಾತು ಕೇಳಿಸಿಕೊಂಡ ತೀರ್ಥಂಕರ್ ಸುಮನಾ ಮದುವೆಯನ್ನು ನಾನು ಮಾಡಿಸುತ್ತೇನೆ. ನಾನು ಅವರಿಗೆ ಒಳ್ಳೆ ಗಂಡನ್ನು ಹುಡುಕುತ್ತೇನೆ. ನಾನು ಮಾಡೋ ಸಾಮೂಹಿಕ ವಿವಾಹದಲ್ಲೇ ಆಕೆಗೂ ಮದುವೆ ಮಾಡಿಸುತ್ತೇನೆ ಎಂದು ಎಲ್ಲರ ಮುಂದೆ ಪ್ರಮಾಣ ಮಾಡಿದ್ದಾನೆ. ಅದನ್ನು ಕೇಳಿ ಏರಿಯಾ ಜನ ಖುಷಿಯಾಗಿದ್ದಾರೆ. ಕಾಳಿ ಶಾಕ್ ಆಗಿದ್ದಾನೆ.


    ಇದನ್ನೂ ಓದಿ: Gattimela: ಬೇರೆ ಯಾರನ್ನೋ ಅಮ್ಮ ಅನ್ನುತ್ತಿದ್ದಾರೆ ವೇದಾಂತ್, ವಿಕ್ರಾಂತ್! ನಿಜವಾದ ತಾಯಿಗೆ ಸಂಕಟ


    ಹಾಗಾದ್ರೆ ಸುಮಿಗೆ ಮದುವೆ ಆಗುತ್ತಾ? ತಮ್ಮನ ನೋವಿನಲ್ಲಿರೋ ಸುಮನಾ ಮದುವೆಗೆ ಒಪ್ತಾಳಾ? ಎಲ್ಲವನ್ನೂ ನೋಡಲು ಕೆಂಡಸಂಪಿಗೆ ಸೀರಿಯಲ್ ನೋಡಬೇಕು.

    Published by:Savitha Savitha
    First published: