• Home
 • »
 • News
 • »
 • entertainment
 • »
 • Kendasampige: ಒಂದೆಡೆ ತೀರ್ಥಂಕರ್-ಸುಮನಾ ಮೊದಲ ರಾತ್ರಿಗೆ ಸಿದ್ಧತೆ, ಇನ್ನೊಂದೆಡೆ ಕಾರ್ಪೊರೇಟರ್ ಕೊಲ್ಲಲು ಕಾಳಿ ಸ್ಕೆಚ್!

Kendasampige: ಒಂದೆಡೆ ತೀರ್ಥಂಕರ್-ಸುಮನಾ ಮೊದಲ ರಾತ್ರಿಗೆ ಸಿದ್ಧತೆ, ಇನ್ನೊಂದೆಡೆ ಕಾರ್ಪೊರೇಟರ್ ಕೊಲ್ಲಲು ಕಾಳಿ ಸ್ಕೆಚ್!

 ಕಾರ್ಪೊರೇಟರ್ ಕೊಲ್ಲಲು ಕಾಳಿ ಸ್ಕೆಚ್!

ಕಾರ್ಪೊರೇಟರ್ ಕೊಲ್ಲಲು ಕಾಳಿ ಸ್ಕೆಚ್!

ತಾನು ಮದುವೆ ಆಗಬೇಕಿದ್ದ ಸುಮಿಯನ್ನು ತೀರ್ಥಂಕರ್ ಮದುವೆ ಆಗಿದ್ದಾನೆ ಎಂದು ಕಾಳಿಗೆ ಕೋಪ. ಅದಕ್ಕೆ ಹೇಗಾದ್ರೂ ಕಾರ್ಪೊರೇಟರ್ ತೀರ್ಥಂಕರ್ ನನ್ನು ಕೊಲ್ಲಬೇಕು ಎಂದು ಪ್ಲ್ಯಾನ್ ಮಾಡಿದ್ದಾನೆ.

 • News18 Kannada
 • Last Updated :
 • Karnataka, India
 • Share this:

  ಕೆಂಡಸಂಪಿಗೆ (Kendasampige) ಧಾರಾವಾಹಿ (Serial) ಕಲರ್ಸ್ ಕನ್ನಡದಲ್ಲಿ (Colors Kannada) ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6.30ಕ್ಕೆ ಪ್ರಸಾರವಾಗುತ್ತಿದೆ. ಶುರುವಾದಾಗಿನಿಂದ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗುತ್ತಿದೆ. ಧಾರಾವಾಹಿಯನ್ನು ಹೀಗಾಗಲೇ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಬೇರೆಯವರ ಜೊತೆ ಮದುವೆ (Marriage) ಆಗಬೇಕಿದ್ದ ಸುಮನಾ ಕಾರ್ಪೊರೇಟರ್ ತೀಥರ್ಂಕರ್ ಜೊತೆ ಮದುವೆ ಆಗಿದ್ದಾರೆ. ಹೇಳದೇ ಕೇಳದೇ ಸುಮಿಗೆ ತಾಳಿ ಕಟ್ಟಿದ್ದರಿಂದ ತೀರ್ಥಂಕರ್ ಮನೆಯಲ್ಲಿ ಜಗಳವಾಗ್ತಿದೆ. ತೀರ್ಥಂಕರ್ ತಮ್ಮ ಸಹ ಸುಮನಾಳನ್ನು ಅತ್ತಿಗೆ ಎಂದು ಒಪ್ಪಿಕೊಳ್ತಿಲ್ಲ. ಮನೆಯಲ್ಲಿ ದಿನವೂ ಜಗಳ ನಡೆಯುತ್ತಿದೆ. ಮೊದಲು ಅತ್ತೆಗೂ ಸುಮನಾ ಕಂಡ್ರೆ ಆಗ್ತಿರಲಿಲ್ಲ. ಈಗ ಸುಮನಾ ಗುಣ ನೋಡಿ ಇಷ್ಟ ಆಗಿದ್ದಾಳೆ. ತಾವು ಅಂದುಕೊಂಡಿದ್ದ ಕನಸಿನ ಸೊಸೆ ಇವಳೇ ಎನ್ನುತ್ತಿದ್ದಾರೆ.


  ಸುಮನಾಳನ್ನು ಸೊಸೆ ಎಂದು ಒಪ್ಪಿಕೊಂಡ ಅತ್ತೆ
  ಮನೆ ಸೊಸೆಯಾಗಿ ಬಂದಿರುವ ಸುಮನಾ ಗುಣ ಅತ್ತೆಗೆ ಇಷ್ಟವಾಗಿದೆ. ಮನೆ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡ್ತಾಳೆ. ಅಡುಗೆಯನ್ನೂ ಮಾಡ್ತಾಳೆ. ಗಂಡನನ್ನು ಕೇರ್ ಮಾಡ್ತಾಳೆ. ತನ್ನ ಚಿಕ್ಕ ಮಗನಿಗೂ ಅಕ್ಕನ ಸ್ಥಾನ ತುಂಬಿದ್ದಾಳೆ. ದೊಡ್ಡವರಿಗೆ ಗೌರವ ನೀಡ್ತಾಳೆ. ಅಲ್ಲದೇ ಒಬ್ಬ ಸೊಸೆಗೆ ಇರಬೇಕಾದ ಎಲ್ಲಾ ಜವಾಬ್ದಾರಿಗಳು ಇವೆಯಂತೆ.


  ದೊಡ್ಡ ಆಸೆ ಆಯ್ಕೆಯನ್ನು ತಪ್ಪು ಮಾಡಿದೆ ಇವಳಾದ್ರೂ ಒಳ್ಳೆ ಸೊಸೆ ಆಗ್ತಾಳೆ ಎಂದು ಸುಮನಾ ಗುಣಗಳನ್ನು ಅತ್ತೆ ಮೆಚ್ಚಿಕೊಂಡಿದ್ದಾಳೆ. ತನ್ನ ಸೊಸೆ ಈಕೆ ಎಂದು ಒಪ್ಪಿಕೊಂಡಿದ್ದಾಳೆ.


  ಸುಮನಾ-ತೀರ್ಥ ಮೊದಲ ರಾತ್ರಿಗೆ ಸಿದ್ಧತೆ
  ಸುಮನಾಳನ್ನು ಸೊಸೆ ಎಂದು ಒಪ್ಪಿಕೊಂಡಿರುವ ಅತ್ತೆ. ಮಗ, ಸೊಸೆ ಮೊದಲ ರಾತ್ರಿಗೆ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದಾಳೆ. ಇದಕ್ಕೆ ಸುಮನಾಳನ್ನು ಒಪ್ಪಿಸಿದ್ದಾಳೆ. ಅಲ್ಲದೇ ಸುಮಿ ಅಪ್ಪ, ತಂಗಿಯನ್ನು ಕರೆಸಿ ಈ ವಿಷ್ಯ ತಿಳಿಸಿದ್ದಾಳೆ. ಮನೆಯಲ್ಲಿ ಸುಮಾ ಮತ್ತೆ ತೀರ್ಥಂಕರ್ ಅಮ್ಮ ಖುಷಿಯಾಗಿದ್ದಾರೆ.


  colors kannada serial, kannada serial, kendasampige serial, kendasampige serial cast, sumana and hero first night, ಕೆಂಡಸಂಪಿಗೆ ಧಾರಾವಾಹಿ, ತೀರ್ಥಂಕರ್-ಸುಮನಾ ಮೊದಲ ರಾತ್ರಿಗೆ ಸಿದ್ಧತೆ, ಕಾರ್ಪೊರೇಟರ್ ಕೊಲ್ಲಲು ಕಾಳಿ ಸ್ಕೆಚ್!, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
  ತೀರ್ಥ ಅಮ್ಮ


  ನಿತ್ಯಾ ಆತ್ಮಹತ್ಯೆ ಯತ್ನ
  ನಿತ್ಯಾ ಅಂದ್ರೆ ತೀರ್ಥಂಕರ್ ನನ್ನು ಮದುವೆ ಆಗಬೇಕಿದ್ದ ಹುಡುಗಿ. ಆದ್ರೆ ಸಾಮೂಹಿಕ ವಿವಾಹದಲ್ಲೇ ನಡೆದ ಒಂದು ಘಟನೆಯಿಂದ ತೀರ್ಥ , ಸುಮಿ ಕೊರಳಿಗೆ ತಾಳಿ ಕಟ್ಟಿರುತ್ತಾನೆ. ಆದ್ರೂ ನಿತ್ಯಾಗೆ, ಎಲೆಕ್ಷನ್ ಆಗೋ ತನಕ ಕಾಯಬೇಕು ನೀನು.


  ಇದನ್ನೂ ಓದಿ: Ramachari: ಚಾರು ಹುಡುಕಲು ದಟ್ಟ ಕಾಡಿನಲ್ಲಿ ರಾಮಾಚಾರಿ ಹೆಜ್ಜೆ! ಉಳಿಯುತ್ತಾ ಕೊಬ್ಬಿದ ರಾಣಿ ಪ್ರಾಣ?


  ಚುನಾವಣೆ ಆದ ಮೇಲೆ ಸುಮನಾಳನ್ನು ಬಿಟ್ಟು ನಿನ್ನ ಮದುವೆ ಆಗ್ತೀನಿ ಎಂದು ಪ್ರಮಾಣ ಮಾಡಿರುತ್ತಾನೆ. ಆದ್ರೆ ಈಗ ಸುಮಿ ಜೊತೆ ಮೊದಲ ರಾತ್ರಿಗೆ ಸಿದ್ಧವಾಗಿದ್ದಾರೆ ಎಂದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ.


  colors kannada serial, kannada serial, kendasampige serial, kendasampige serial cast, sumana and hero first night, ಕೆಂಡಸಂಪಿಗೆ ಧಾರಾವಾಹಿ, ತೀರ್ಥಂಕರ್-ಸುಮನಾ ಮೊದಲ ರಾತ್ರಿಗೆ ಸಿದ್ಧತೆ, ಕಾರ್ಪೊರೇಟರ್ ಕೊಲ್ಲಲು ಕಾಳಿ ಸ್ಕೆಚ್!, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
  ಸುಮನಾ


  ತೀರ್ಥಂಕರ್ ಕೊಲ್ಲಲು ಕಾಳಿ ಸ್ಕೆಚ್
  ತಾನು ಮದುವೆ ಆಗಬೇಕಿದ್ದ ಸುಮಿಯನ್ನು ತೀರ್ಥಂಕರ್ ಮದುವೆ ಆಗಿದ್ದಾನೆ ಎಂದು ಕಾಳಿಗೆ ಕೋಪ. ಅದಕ್ಕೆ ಹೇಗಾದ್ರೂ ಕಾರ್ಪೊರೇಟರ್ ತೀರ್ಥಂಕರ್ ನನ್ನು ಕೊಲ್ಲಬೇಕು ಎಂದು ಪ್ಲ್ಯಾನ್ ಮಾಡಿದ್ದಾನೆ. ಅದಕ್ಕೆ ಈಗಾಗಲೇ ರೌಡಿಯನ್ನು ಕರೆಸಿದ್ದಾನೆ. ಕಾಳಿ ಎಂದುಕೊಂಡಂತೆ ಎಲ್ಲಾ ಸಿದ್ಧತೆಯೂ ನಡೆಯುತ್ತಿದೆ.


  ತೀರ್ಥನ ಪಾರ್ಟಿ ಸೇರಿದ ಕಾಳಿ ಕಳಿಸಿದ ರೌಡಿ
  ತೀರ್ಥನನ್ನು ಕೊಲ್ಲಲು ಬಂದಿರುವ ರೌಡಿ, ತೀರ್ಥಂಕರ್ ಪಾರ್ಟಿ ಸೇರುವುದಾಗಿ ನಾಟಕ ಮಾಡಿದ್ದಾನೆ. ನಾನು ನಿಮ್ಮ ಸೇವೆ ಮಾಡ್ತೀನಿ. ನಿಮ್ಮ ಜೊತೆಯೇ ಇರುತ್ತೇನೆ. ಇಲ್ಲ ಅಂದ್ರೆ ಸಾಯ್ತಿನಿ ಎಂದು ಬೆದರಿಸಿ ಪಕ್ಷ ಸೇರಿದ್ದಾನೆ.


  ಇದನ್ನೂ ಓದಿ: Nivedita Gowda: ನಿವೇದಿತಾ ಗೌಡ ಮನೆಯ ಗ್ಯಾಸ್​ ಸಿಲಿಂಡರ್​ ಒಂದು ವರ್ಷ ಬರುತ್ತಂತೆ ; ಇಲ್ಲಿದೆ ಅಡುಗೆ ಮನೆ ಸೀಕ್ರೆಟ್ 


  ತೀರ್ಥಂಕರ್ ಪ್ರಾಣಕ್ಕೆ ಅಪಾಯನಾ? ತನ್ನ ಗಂಡನನ್ನು ಹೇಗೆ ಕಾಪಾಡಿಕೊಳ್ತಾಳೆ ಸುಮನಾ? ಮುಂದೆನಾಗುತ್ತೆ ಅಂತ ನೋಡೋಕೆ ಕೆಂಡಸಂಪಿಗೆ ಸೀರಿಯಲ್ ನೋಡಬೇಕು.

  Published by:Savitha Savitha
  First published: