• Home
  • »
  • News
  • »
  • entertainment
  • »
  • Kendasampige: ಸುಮನಾ ನಿಜವಾಗಿಯೂ ಸೊಸೆ ಎಂದು ಒಪ್ಪಿಕೊಂಡ ತೀರ್ಥ ಅಮ್ಮ, ನಾಟಕ ಸೂಪರ್ ಎಂದ ಮಗ!

Kendasampige: ಸುಮನಾ ನಿಜವಾಗಿಯೂ ಸೊಸೆ ಎಂದು ಒಪ್ಪಿಕೊಂಡ ತೀರ್ಥ ಅಮ್ಮ, ನಾಟಕ ಸೂಪರ್ ಎಂದ ಮಗ!

ಸುಮನಾ

ಸುಮನಾ

ಸುಮನಾಳನ್ನು ನಿಜವಾಗಿಯೂ ಸೊಸೆ ಎಂದು ಅಮ್ಮ ಒಪ್ಪಿಕೊಂಡಿದ್ದಾಳೆ. ಆದ್ರೆ ತೀರ್ಥಂಕರ್ ಅದನ್ನು ನಾಟಕ ಎಂದುಕೊಂಡು. ಥ್ಯಾಂಕ್ಸ್ ಅಮ್ಮ. ಸೂಪರ್ ಆಗಿ ನಾಟಕ ಮಾಡ್ತಾ ಇದ್ದೀಯಾ ಎನ್ನುತ್ತಾನೆ.

  • News18 Kannada
  • Last Updated :
  • Karnataka, India
  • Share this:

    ಕೆಂಡಸಂಪಿಗೆ ಧಾರಾವಾಹಿ (Kendasampige Serial) ಕಲರ್ಸ್ ಕನ್ನಡದಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6.30ಕ್ಕೆ ಪ್ರಸಾರವಾಗುತ್ತಿದೆ. ಶುರುವಾದಾಗಿನಿಂದ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗುತ್ತಿದೆ. ಧಾರಾವಾಹಿಯನ್ನು ಹೀಗಾಗಲೇ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಬೇರೆಯವರ ಜೊತೆ ಮದುವೆ ಆಗಬೇಕಿದ್ದ ಸುಮನಾ ಕಾರ್ಪೊರೇಟರ್ ತೀರ್ಥಂಕರ್ ಜೊತೆ ಮದುವೆ ಆಗಿದ್ದಾರೆ. ಹೇಳದೇ ಕೇಳದೇ ಸುಮಿಗೆ ತಾಳಿ ಕಟ್ಟಿದ್ದರಿಂದ ತೀಥರ್ಂಕರ್ ಮನೆಯಲ್ಲಿ ಜಗಳವಾಗ್ತಿದೆ. ತೀಥರ್ಂಕರ್ ತಮ್ಮ ಸಹ ಸುಮನಾಳನ್ನು ಅತ್ತಿಗೆ ಎಂದು ಒಪ್ಪಿಕೊಳ್ತಿಲ್ಲ. ಮನೆಯಲ್ಲಿ ದಿನವೂ ಜಗಳ ನಡೆಯುತ್ತಿದೆ. ಮೊದಲು ಅತ್ತೆಗೂ ಸುಮನಾ ಕಂಡ್ರೆ ಆಗ್ತಿರಲಿಲ್ಲ. ಈಗ ಸುಮನಾ ಗುಣ ನೋಡಿ ಇಷ್ಟ ಆಗಿದ್ದಾಳೆ. ತಾವು ಅಂದುಕೊಂಡಿದ್ದ ಕನಸಿನ ಸೊಸೆ ಇವಳೇ ಎನ್ನುತ್ತಿದ್ದಾರೆ.


    ಮೊದಲು ಅತ್ತೆಗೆ ಸುಮನಾ ಮೇಲೆ ಕೋಪ
    ಸುಮನಾ ಮನೆಯಲ್ಲಿ ಪಾತ್ರೆ ತೊಳೆಯಲು ಹೋಗಿರುತ್ತಾಳೆ. ಆಗ ಬಂದ ತೀರ್ಥ ಅಮ್ಮ, ಈ ಮನೆಯಲ್ಲಿ ಕೆಲವು ರೂಲ್ಸ್ ಗಳು ಇವೆ. ಅವು ಹಾಗೆ ನಡೆಯುವಂತೆ ಬಿಟ್ಟು ಬಿಡು. ಎಲ್ಲಾ ಹಾಳು ಮಾಡಬೇಡ ಎನ್ನುತ್ತಾಳೆ. ಅದಕ್ಕೆ ಸುಮಿ ಆಯ್ತು ಅತ್ತೆ ಅಂತಾಳೆ. ಅದಕ್ಕೂ ಆಕೆ ಕೋಪ ಮಾಡಿಕೊಳ್ಳುತ್ತಾಳೆ. ಇನ್ಮುಂದೆ ನೀವಾಗಿಯೇ ಸುಮಿ ಎಂದು ಕರೆಯುವ ವರೆಗೂ ಅತ್ತೆ ಅನ್ನಲ್ಲ ಎಂದು ಸುಮನಾ ಹೇಳಿರುತ್ತಾಳೆ.


    ಸುಮನಾ ಗುಣ ಇಷ್ಟವಾಗಿದೆ
    ಮನೆ ಸೊಸೆಯಾಗಿ ಬಂದಿರುವ ಸುಮನಾ ಗುಣ ಅತ್ತೆಗೆ ಇಷ್ಟವಾಗಿದೆ. ಮನೆ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡ್ತಾಳೆ. ಅಡುಗೆಯನ್ನೂ ಮಾಡ್ತಾಳೆ. ಗಂಡನನ್ನು ಕೇರ್ ಮಾಡ್ತಾಳೆ. ತನ್ನ ಚಿಕ್ಕ ಮಗನಿಗೂ ಅಕ್ಕನ ಸ್ಥಾನ ತುಂಬಿದ್ದಾಳೆ. ದೊಡ್ಡವರಿಗೆ ಗೌರವ ನೀಡ್ತಾಳೆ. ಅಲ್ಲದೇ ಒಬ್ಬ ಸೊಸೆಗೆ ಇರಬೇಕಾದ ಎಲ್ಲಾ ಜವಾಬ್ದಾರಿಗಳು ಇವೆಯಂತೆ. ದೊಡ್ಡ ಆಸೆ ಆಯ್ಕೆಯನ್ನು ತಪ್ಪು ಮಾಡಿದೆ ಇವಳಾದ್ರೂ ಒಳ್ಳೆ ಸೊಸೆ ಆಗ್ತಾಳೆ ಎಂದು ಸುಮನಾ ಗುಣಗಳನ್ನು ಅತ್ತೆ ಮೆಚ್ಚಿಕೊಂಡಿದ್ದಾಳೆ.


    ಇದನ್ನೂ ಓದಿ: Jothe Jotheyali: ಆರ್ಯವರ್ಧನ್ ರೀತಿ ಕೆಲಸ ಮಾಡ್ತಿರೋ ಸಂಜು, ಅನುಗೆ ಹೆಚ್ಚಾದ ಅನುಮಾನ! 


    ಸುಮನಾ ಎಂದು ಕರೆದ ಅತ್ತೆ
    ಸುಮನಾ ಮನೆ ಕೆಲಸ ಮಾಡುತ್ತಿದ್ದಾಗ, ಅತ್ತೆ ಸುಮನಾ ಎಂದು ಕರೆದು ಆಕೆಯನ್ನು ಮನೆ ಸೊಸೆ ಎಂದು ಒಪ್ಪಿಕೊಂಡಿದ್ದಾಳೆ. ಸುಮನಾ ನನಗೆ ಅಮ್ಮ ಸಿಕ್ಕಂತೆ  ಎಂದು ಖುಷಿ ಆಗ್ತಾಳೆ. ನಾನೇ ನಿನಗೆ, ಅತ್ತೆ-ಅಮ್ಮ ಎರಡು ಎನ್ನುತ್ತಾಳೆ. ಅದನ್ನು ಕೇಳಿದ ಸುಮನಾ ಖುಷಿಗೆ ಪಾರವೇ ಇಲ್ಲದಾಂಗಿದೆ. ಅದನ್ನು ತೀರ್ಥಂಕರ್ ಬಳಿಯೂ ಹೇಳ್ತಾಳೆ.


    Colors Kannada serial, Kannada serial, Kendasampige Serial, Kendasampige serial cast, ಕೆಂಡಸಂಪಿಗೆ ಧಾರಾವಾಹಿ, ಸುಮನಾಳನ್ನು ನಿಜವಾಗಿಯೂ ಸೊಸೆ ಎಂದು ಒಪ್ಪಿಕೊಂಡ ತೀರ್ಥ ಅಮ್ಮ, ನಾಟಕ ಸೂಪರ್ ಎಂದ ಮಗ, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
    ತೀರ್ಥ ಅಮ್ಮ


    ನಾಟಕ ಸೂಪರ್ ಅಮ್ಮ ಎಂದ ತೀರ್ಥ
    ಸುಮನಾಳನ್ನು ನಿಜವಾಗಿಯೂ ಸೊಸೆ ಎಂದು ಅಮ್ಮ ಒಪ್ಪಿಕೊಂಡಿದ್ದಾಳೆ. ಆದ್ರೆ ತೀರ್ಥಂಕರ್ ಅದನ್ನು ನಾಟಕ ಎಂದುಕೊಂಡು. ಥ್ಯಾಂಕ್ಸ್ ಅಮ್ಮ. ಸೂಪರ್ ಆಗಿ ನಾಟಕ ಮಾಡ್ತಾ ಇದ್ದೀಯಾ ಎನ್ನುತ್ತಾನೆ. ಅದನ್ನು ಕೇಳಿಸಿಕೊಂಡು ಅವರ ತಾಯಿ ಬೇಸರ ಮಾಡಿಕೊಂಡಿದ್ದಾರೆ.


    ಇದನ್ನೂ ಓದಿ: Bhagya Lakshmi: ಗಂಡ ಶ್ರೀರಾಮ ಎಂದುಕೊಂಡ ಭಾಗ್ಯನಿಗೆ ಶಾಕ್, ಬೇರೆ ಹುಡುಗಿಯೊಂದಿಗೆ ತಾಂಡವ್ ಸಂಬಂಧ!


    ಎಲೆಕ್ಷನ್ ಆದ ಮೇಲೆ ಸುಮಿಗೆ ಡಿವೋರ್ಸ್
    ಕಾರ್ಪೊರೇಟರ್ ತೀರ್ಥಂಕರ್ ಎಲೆಕ್ಷನ್ ಗಾಗಿ ಸುಮನಾಳಿಗೆ ತಾಳಿ ಕಟ್ಟಿದ್ದಾನಂತೆ. ಎಲೆಕ್ಷನ್ ಮುಗಿದ ಮೇಲೆ ಆಕೆಯನ್ನು ಬಿಟ್ಟು, ಮನೆಯವರು ನಿಶ್ಚಯ ಮಾಡಿರೋ ನಿತ್ಯಾಳನ್ನು ಮದುವೆ ಆಗ್ತಾನಂತೆ. ಅದಕ್ಕೆ ನಿತ್ಯ ಸಹ ಒಪ್ಪಿಕೊಂಡಿದ್ದಾಳೆ. ಈಗ ಸುಮನಾಳನ್ನು ಬಿಟ್ರೆ ಕಾಲೊನಿ ವೋಟು ಕೈ ತಪ್ಪುತ್ತೆ ಅನ್ನೋ ಭಯ.


    Colors Kannada serial, Kannada serial, Kendasampige Serial, Kendasampige serial cast, ಕೆಂಡಸಂಪಿಗೆ ಧಾರಾವಾಹಿ, ಸುಮನಾಳನ್ನು ನಿಜವಾಗಿಯೂ ಸೊಸೆ ಎಂದು ಒಪ್ಪಿಕೊಂಡ ತೀರ್ಥ ಅಮ್ಮ, ನಾಟಕ ಸೂಪರ್ ಎಂದ ಮಗ, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
    ತೀರ್ಥಂಕರ್


    ಸುಮಿ ಮೇಲೆ ತೀರ್ಥನಿಗೆ ಪ್ರೀತಿ ಆಗಲ್ವಾ? ಎಲೆಕ್ಷನ್‍ವರೆಗೂ ಮಾತ್ರನಾ ಇಬ್ಬರ ಸಂಬಂಧ. ಮುಂದೇನಾಗುತ್ತೆ ಅಂತ ನೋಡೋಕೆ ಕೆಂಡಸಂಪಿಗೆ ಸೀರಿಯಲ್ ನೋಡಬೇಕು.

    Published by:Savitha Savitha
    First published: