Kendasampige: ರಾಜಕೀಯಕ್ಕೆ ಎಂಟ್ರಿ ಕೊಡ್ತಾಳಾ ಸುಮನಾ? ಜನರ ಸೇವೆಗಾಗಿ ಕಾರ್ಪೊರೇಟರ್ ಮಾತಿಗೆ ಎಸ್ ಅಂತಾಳಾ?

ಮನೆಗೆ ಬಂದಿರುವ ಕಾರ್ಪೊರೇಟರ್ ತೀರ್ಥಂಕರ್ ಪ್ರಸಾದ, ಸುಮನಾ ಬಳಿ ಮಾತನಾಡುತ್ತಿದ್ದಾರೆ. ನೀವು ರಾಜಕೀಯಕ್ಕೆ ಬನ್ನಿ ಸುಮನಾ. ನಿಮ್ಮ ತಮ್ಮನ ರಾಜಕೀಯ ಆಸೆಯನ್ನು ನೀವು ನನಸು ಮಾಡಿ. ನಿಮಗೆ ಒಳ್ಳೆ ಭವಿಷ್ಯ ಇದೆ ಎಂದು ಹೇಳ್ತಿದ್ದಾರೆ.

ಕೆಂಡಸಂಪಿಗೆ

ಕೆಂಡಸಂಪಿಗೆ

 • Share this:
  ಕೆಂಡಸಂಪಿಗೆ (Kendasampige) ಅನ್ನೋ ಧಾರಾವಾಹಿ (Serial), ಕಲರ್ಸ್ ಕನ್ನಡದಲ್ಲಿ (Colors Kannada) ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6.30ಕ್ಕೆ ಪ್ರಸಾರವಾಗುತ್ತಿದೆ. ಶುರುವಾದ ಹೊಸದರಲ್ಲೇ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗುತ್ತಿದೆ. ಈ ಕಥೆಯ ನಾಯಕಿ ಸುಮನಾ. ಅಪ್ಪನಿಗೆ ಆರೋಗ್ಯ ಸರಿ ಇಲ್ಲದ ಕಾರಣ ಹೂವನ್ನು ಮಾರಿ ಸಂಸಾರ ಸಾಗಿಸುತ್ತಿದ್ದಾಳೆ. ಅಮ್ಮ ಬೇರೆ ಇಲ್ಲ. ತಮ್ಮ, ತಂಗಿಗೆ ಅಮ್ಮನ ಸ್ಥಾನದಲ್ಲಿ ನಿಂತಿದ್ದಳು. ಮನೆಯ ಕಷ್ಟಕ್ಕೆ ಹಣ ಬೇಕು ಎಂದು ರಾಜೇಶ ಪ್ರತಿಭಟನೆಯಲ್ಲಿ ಬೆಂಕಿ ಹಚ್ಚಿಕೊಂಡಿರುತ್ತಾನೆ. ಅವನನ್ನು ಆಸ್ಪತ್ರೆಗೆ ಸೇರಿಸಿದ್ರೂ, ಅವನು ಬದುಕಲಿಲ್ಲ (Death). ತಮ್ಮನನ್ನು (Brother) ಕಳೆದುಕೊಂಡು ನೋವಿನಲ್ಲಿ ಸುಮಿ ಕೊರಗುತ್ತಿದ್ದಾಳೆ. ಆ ನೋವಿನಲ್ಲೇ ಕಾಲೋನಿಯವರಿಗೆ ಸಹಾಯ ಮಾಡುತ್ತಿದ್ದಾಳೆ. ಈಗ ಸುಮಿಗೆ ರಾಜಕೀಯಕ್ಕೆ (Politics) ಬರುವಂತೆ ಒತ್ತಾಯಿಸಲಾಗ್ತಿದೆ.

  ಎಲ್ಲಿ ನೋಡಿದ್ರೂ ಕಾಣ್ತನೆ ರಾಜೇಶ

  ತಮ್ಮ ರಾಜೇಶ ಪರೀಕ್ಷೆಯಲ್ಲಿ ಪಾಸಾಗಲಿಲ್ಲ ಎಂದಬ ಕಾರಣಕ್ಕೆ ಅವನ ಜೊತೆ ಮಾತು ಬಿಟ್ಟಿರುತ್ತಾಳೆ. ಅವನ ಹುಟ್ಟು ಹಬ್ಬದ ದಿನ ದೇವರ ಮೇಲೆ ಭಾರ ಹಾಕಿ ಮಾತನಾಡಿಸೋಣ ಎಂದುಕೊಂಡಿರುತ್ತಾಳೆ. ತಮ್ಮನ ಜೊತೆ ಮಾತನಾಡಲು ಕಾತುರಳಾಗಿರುತ್ತಾಳೆ.

  ಆದ್ರೆ, ಅಂದೇ ರಾಜೇಶ ಪ್ರತಿಭಟನೆಯಲ್ಲಿ ಬೆಂಕಿ ಹಚ್ಚಿಕೊಂಡು ಸಾವನ್ನಪ್ಪಿರುತ್ತಾನೆ. ಅವನ ಬಳಿ ಮಾತನಾಡಿಲ್ಲ ಎಂಬ ಕೊರಗು ಸುಮನಾಗೆ ಹಾಗೇ ಉಳಿದು ಬಿಟ್ಟಿದೆ. ಅದಕ್ಕೆ ತಮ್ಮ ಎಲ್ಲ ಕಡೆ ಬಂದು, ಅಕ್ಕ ನನ್ನ ಮಾತನಾಡಿಸಲಿಲ್ಲ ನೀನು ಎನ್ನುತ್ತಿದ್ದಾನೆ. ಸುಮನಾ ಕಂಗಾಳಾಗಿದ್ದಾಳೆ.

  ಇದನ್ನೂ ಓದಿ: Ramachari: ಕುಡಿದ ನಶೆಯಲ್ಲಿ ಮದುವೆ ಆಗು ಎಂದು ಕೇಳಿದ ಚಾರು!

  ಕಾಲೋನಿ ಅವರಿಗೆ ಕಾಳಿ ಕಾಟ

  ಕಾಲೋನಿಯಲ್ಲಿ ಜನರಿಗೆ ಬಡ್ಡಿ ಕೊಡೋ ವಿಜಯನ ಮಗ ಕಾಳಿ. ಆತನಿಗೆ ಕಾಲೋನಿ ಅವರು ಅವಮಾನ ಮಾಡಿದ್ರೂ ಅಂತ. ಸಾಲ ಪಡೆದವರ ಮನೆ ಬಳಿ ಹೋಗಿ ಗಲಾಟೆ ಮಾಡಿದ್ದಾನೆ. ಅವರ ಮನೆಯ ವಸ್ತುಗಳನ್ನು ಆಚೆ ಹಾಕಿ ದುಡ್ಡು ಕೊಡಿ ಎಂದು ಗಂಟು ಬಿದ್ದಿದ್ದಾನೆ. ಈ ಕಷ್ಟವನ್ನು ಹೇಳಿಕೊಳ್ಳಲು ಕಾಲೋನಿ ಜನ ಸುಮಿ ಮನೆಗೆ ಬಂದಿದ್ದಾರೆ.

  Colors Kannada serial, Kannada serial, Kendasampige Serial, Kendasampige serial cast, Suman enter to politics or not, ಕೆಂಡಸಂಪಿಗೆ ಧಾರಾವಾಹಿ, ರಾಜಕೀಯಕ್ಕೆ ಎಂಟ್ರಿ ಕೊಡ್ತಾಳಾ ಸುಮನಾ?, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
  ರಾಜೇಶ


  ಮಂತ್ರಿ ಜೊತೆ ಬಂದ ತೀರ್ಥಂಕರ್ ಸಹಾಯ

  ರಾಜೇಶ ತೀರ್ಥಂಕರ್ ಪಾರ್ಟಿಯ ಪ್ರತಿಭಟನೆಯಲ್ಲೇ ಬೆಂಕಿ ಹಚ್ಚಿಕೊಳ್ಳೋ ನಾಟಕ ಮಾಡಿ, ನಿಜವಾಗ್ಲೂ ಸಾವನ್ನಪ್ಪಿದ್ದಾನೆ. ಸುಮಿ ಭೇಟಿ ಮಾಡಲು ಮಂತ್ರಿಗಳು ಬಂದಿದ್ದಾರೆ. ನಿಮ್ಮ ತಮ್ಮ ಒಳ್ಳೆ ಕಾರ್ಯಕರ್ತ. ನಮ್ಮ ಪಕ್ಷದ ಗೆಲುವಿಗೆ ಆತ ಸಹಾಯ ಮಾಡಿದ್ದಾನೆ ಎಂದು ಸುಮಿಗೆ ಹಣ ಕೊಡಲು ಹೋಗುತ್ತಾರೆ. ಅವಳು ಮೊದಲು ಬೇಡ ಅಂದ್ರೂ, ಆಮೇಲೆ ಕಾಳಿ ಸಾಲ ತೀರಿಸಲು ಸಹಾಯ ಆಗುತ್ತೆ ಅಂತ ಅದನ್ನು ಪಡೆದು ಕಾಲೋನಿ ಜನಕ್ಕೆ ಕೊಡುತ್ತಾಳೆ.

  ಇದನ್ನೂ ಓದಿ: Kannadathi Serial: ಸಾನಿಯಾಳ ಎಲ್ಲಾ ಪ್ಲಾನ್ಸ್ ಉಲ್ಟಾ! ಅಮ್ಮಮ್ಮನಿಗೆ ಗೊತ್ತಾಯ್ತಾ?

  ರಾಜಕೀಯಕ್ಕೆ ಬರ್ತಾಳಾ ಸುಮನಾ?

  ಇನ್ನು ಮನೆಗೆ ಬಂದಿರುವ ಕಾರ್ಪೊರೇಟರ್ ತೀರ್ಥಂಕರ್ ಪ್ರಸಾದ, ಸುಮನಾ ಬಳಿ ಮಾತನಾಡುತ್ತಿದ್ದಾರೆ. ನೀವು ರಾಜಕೀಯಕ್ಕೆ ಬನ್ನಿ ಸುಮನಾ. ನಿಮ್ಮ ತಮ್ಮನ ರಾಜಕೀಯ ಆಸೆಯನ್ನು ನೀವು ನನಸು ಮಾಡಿ. ನಿಮಗೆ ಒಳ್ಳೆ ಭವಿಷ್ಯ ಇದೆ. ಕಾಲೋನಿ ಜನ ನಿಮಗೆ ತಪ್ಪದೇ ವೋಟ್ ಹಾಕ್ತಾರೆ ಎಂದು ಹೇಳ್ತಿದ್ದಾರೆ. ಕಾರ್ಪೊರೇಟರ್ ಮಾತಿಗೆ ಓಕೆ ಅಂತಾಳಾ ಸುಮಿ?

  Colors Kannada serial, Kannada serial, Kendasampige Serial, Kendasampige serial cast, Suman enter to politics or not, ಕೆಂಡಸಂಪಿಗೆ ಧಾರಾವಾಹಿ, ರಾಜಕೀಯಕ್ಕೆ ಎಂಟ್ರಿ ಕೊಡ್ತಾಳಾ ಸುಮನಾ?, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
  ರಾಜಕೀಯಕ್ಕೆ ಎಂಟ್ರಿ ಕೊಡ್ತಾಳಾ ಸುಮನಾ?


  ರಾಜಕೀಯಕ್ಕೆ ಎಂಟ್ರಿ ಕೊಡ್ತಾಳಾ ಸುಮನಾ? ಕಾಲೋನಿ ಕಷ್ಟಕ್ಕೆ ನಿಲ್ತಾಳಾ? ಇಲ್ಲ ತಮ್ಮನ ಮರೆಯದೇ ಸ್ವಲ್ಪ ದಿನ ಒಂಟಿಯಾಗಿರ್ತಾಳಾ? ಶನಿ ಪಾತ್ರಧಾರಿ ರಾಜೇಶ ಪಾತ್ರ ಅಂತ್ಯವಾಗಿದ್ದಕ್ಕೆ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಇಷ್ಟು ಬೇಗ ಪಾತ್ರ ಮುಗಿಯಬಾರದಿತ್ತು ಎನ್ನುತ್ತಿದ್ದಾರೆ. ಇನ್ನು ಧಾರಾವಾಹಿಯಲ್ಲಿ ಏನಾಗುತ್ತೆ ಅಂತ ನೋಡೋಕೆ ಕೆಂಡಸಂಪಿಗೆ ನೋಡಬೇಕು.
  Published by:Savitha Savitha
  First published: