• Home
  • »
  • News
  • »
  • entertainment
  • »
  • Kendasampige: ಬೇಕಂತಲೇ ಗೆಸ್ಟ್ ಮುಂದೆ ಸುಮನಾಗೆ ಅವಮಾನ, ಕಣ್ಣೀರಿಟ್ಟ ಸುಮಿ

Kendasampige: ಬೇಕಂತಲೇ ಗೆಸ್ಟ್ ಮುಂದೆ ಸುಮನಾಗೆ ಅವಮಾನ, ಕಣ್ಣೀರಿಟ್ಟ ಸುಮಿ

ಬೇಕು ಅಂತಲೇ ಗೆಸ್ಟ್ ಮುಂದೆ ಸುಮನಾಗೆ ಅವಮಾನ

ಬೇಕು ಅಂತಲೇ ಗೆಸ್ಟ್ ಮುಂದೆ ಸುಮನಾಗೆ ಅವಮಾನ

ಕೋಪಗೊಂಡ ಮಾವ ನಮ್ಮ ಮನೆಗೆ ಬಂದ ಅತಿಥಿಗಳು ಯಾವುತ್ತೂ ಊಟ ಮಾಡದೇ ಹೋಗಿರಲಿಲ್ಲ ಎಂದು ಬೈಯ್ತಾರೆ. ಆಗ ಸುಮನಾ ಅಳುತ್ತಾಳೆ.

  • News18 Kannada
  • Last Updated :
  • Karnataka, India
  • Share this:

    ಕೆಂಡಸಂಪಿಗೆ (Kendasampige) ಧಾರಾವಾಹಿ (Serial) ಕಲರ್ಸ್ ಕನ್ನಡದಲ್ಲಿ (Colors Kannada) ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6.30ಕ್ಕೆ ಪ್ರಸಾರವಾಗುತ್ತಿದೆ. ಶುರುವಾದಾಗಿನಿಂದ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗುತ್ತಿದೆ. ಧಾರಾವಾಹಿಯನ್ನು ಈಗಾಗಲೇ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಬೇರೆಯವರ ಜೊತೆ ಮದುವೆ ಆಗ ಬೇಕಿದ್ದ ಸುಮನಾ ಕಾರ್ಪೊರೇಟರ್  ತೀರ್ಥಂಕರ್  ಜೊತೆ ಮದುವೆ (Marriage) ಆಗಿದ್ದಾರೆ. ಹೇಳದೇ, ಕೇಳದೇ ಸುಮಿಗೆ ತಾಳಿ ಕಟ್ಟಿದ್ದರಿಂದ ತೀಥರ್ಂಕರ್ ಮನೆಯಲ್ಲಿ ಜಗಳವಾಗುತ್ತಲೇ ಇದೆ. ಅತ್ತೆ ಪದ್ಮಾ ಮಾತ್ರ ಸುಮನಾಳನ್ನು ಸೊಸೆ ಎಂದು ಒಪ್ಪಿಕೊಂಡಿದ್ದಾಳೆ. ತೀರ್ಥ ಅತ್ತಿಗೆ ಸಾಧನಾ (Sadhana) ಹೇಗಾದ್ರೂ ಮಾಡಿ ಸುಮಿಯನ್ನು ಮನೆಯಿಂದ ಆಚೆ ಓಡಿಸಬೇಕು ಎಂದು ಏನೇನೋ ಪ್ಲ್ಯಾನ್ ಮಾಡುತ್ತಿದ್ದಾಳೆ. ಸುಮನಿಗೆ ಕಷ್ಟ ಕೊಡಲು ಮನೆಗೆ ವರೂಧಿನಿ, ಸುಪ್ರಿಯಾಳನ್ನು ಕರೆಸಿದ್ದಾಳೆ.


    ಸುಮನಾ ಕಂಡ್ರೆ ಸಾಧನಾಗೆ ಕೋಪ
    ಸುಮನಾ ಹೂವು ಮಾರುವ ಹುಡುಗಿ. ಈ ಮನೆಗೆ ತಕ್ಕವಳಲ್ಲ ಎನ್ನುವುದು ಸಾಧನಾ ವಾದ. ಅವಳನ್ನು ಕಂಡ್ರೆ ಸದಾ ಜಗಳ ಮಾಡುತ್ತಲೇ ಇರುತ್ತಳೆ. ಅವಳು ಮಾಡಿದ ಯಾವುದೇ ಅಡುಗೆಯನ್ನು ತಿನ್ನಲ್ಲ. ಅವಳು ನನ್ನ ಕಣ್ಣು ಮುಂದೆ ಬರಬಾರದು ಎಂದು ತೀರ್ಥನಿಗೂ ಹೇಳಿದ್ಲು. ಈಗ ಅತ್ತೆ ಪದ್ಮಾ ಸುಮನಾಳನ್ನು ಒಪ್ಪಿಕೊಂಡಿದ್ದಾರೆ. ಅದಕ್ಕೆ ಸಾಧನಾಗೆ ಕೋಪ.




    ಮನೆಗೆ ಬಂದ ವರೂಧಿನಿ, ಸುಪ್ರಿಯಾ
    ಸಾಧನಾ ಸುಮನಾಳಿಗೆ ಅವಮಾನ ಮಾಡಿಸಿಬೇಕು ಎಂದು ತನ್ನ ಗೆಳತಿಯರನ್ನು ಕರೆಸಿದ್ದಾಳೆ. ಕನ್ನಡತಿ ಧಾರಾವಾಹಿಯಿಂದ ವರೂಧಿನಿ, ಭಾಗ್ಯಲಕ್ಷ್ಮಿ ಧಾರಾವಾಹಿಯಿಂದ ವೈಷ್ಣವ್ ಅತ್ತೆ ಸುಪ್ರಿಯಾ ಬಂದಿದ್ದಾರೆ. ಇಬ್ಬರ ಮುಂದೆ ಸುಮನಾಗೆ ಅವಮಾನ ಮಾಡಬೇಕು ಎಂದುಕೊಂಡಿದ್ದಾಳೆ. ತನ್ನ ಗೆಳತಿಯರಿಂದಲೂ ಅವಳಿಗೆ ಹೇಗಾದ್ರೂ ಅವಮಾನ ಮಾಡಿ, ಈ ಮನೆಯಿಂದ ಕಳಿಸಬೇಕು ಎನ್ನುತ್ತಿದ್ದಾಳೆ.


    colors kannada serial, kannada serial, sadhana plans success suman crying, kendasampige serial, kendasampige serial cast, ಕೆಂಡಸಂಪಿಗೆ ಧಾರಾವಾಹಿ, ಬೇಕು ಅಂತಲೇ ಗೆಸ್ಟ್ ಮುಂದೆ ಸುಮನಾಗೆ ಅವಮಾನ, ಮಾವನ ಕೈಯಲ್ಲಿ ಬೈಯಿಸಿದ ಸಾಧನಾ, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
    ಸುಪ್ರಿಯಾ


    ವಿವಿಧ ಬಗೆಯ ಅಡುಗೆ ಮಾಡಲು ಹೇಳಿದ ಸಾಧನಾ
    ಸಾಧನಾ ತನ್ನ ಗೆಳತಿಯರಿಗಾಗಿ ವಿವಿಧ ಬಗೆಯ ಅಡುಗೆ ಮಾಡಲು ಸುಮನಾಗೆ ಹೇಳಿರುತ್ತಾಳೆ. ಸುಮನಾ ಸಹ ಓಕೆ ಅಂದಿರುತ್ತಾಳೆ. ಯಾವುದೇ ತಪ್ಪಾಗಬಾರದು. ನನ್ನ ಸ್ನೇಹಿತೆಯರಿಗೆ ಕೊರತೆ ಆಗಬಾರದು ಎಂದು ಹೇಳಿರುತ್ತಾಳೆ. ಸುಮನಾ ಸಹ ಎಲ್ಲಾ ಅಡುಗೆಯನ್ನು ಮಾಡಿರುತ್ತಾಳೆ.


    ಇದನ್ನೂ ಓದಿ: Matte Mayamruga: ಅಮ್ಮನಿಗೆ ತೊಂದ್ರೆ ಕೊಟ್ಟವರಿಗೆ ತಕ್ಕ ಶಿಕ್ಷೆ ಕೊಡ್ತಾಳಂತೆ ವಾಸಂತಿ, ವಿದ್ಯಾಗೆ ಹೆಚ್ಚಾದ ಆತಂಕ! 


    ನೀನು ಮಾಡಿದ ಅಡುಗೆ ಸರಿ ಇಲ್ಲ ಎಂದ ಸಾಧನಾ
    ಸುಮನಾ ಆಕೆ ಹೇಳಿದ ಎಲ್ಲಾ ಬಗೆ ಬಗೆಯ ಅಡುಗೆ ಮಾಡಿರುತ್ತಾಳೆ. ಆದ್ರೂ ಸಾಧನಾ ಊಟಕ್ಕೆ ಕೂತಾಗ ತಕರಾರು ತೆಗೆಯುತ್ತಾಳೆ. ನಾನು ಹೇಳಿದ ಯಾವುದೇ ಅಡುಗೆ ಇದರಲ್ಲಿ ಇಲ್ಲ ಎಂದು ಹೇಳಿ ಜಗಳ ತೆಗೆಯುತ್ತಾಳೆ. ಸುಮನಾಗೂ ಗಾಬರಿ ಆಗುತ್ತೆ. ವರೂಧಿನಿ, ಸುಪ್ರಿಯಾ ಸಹ ಸಾಧನಾ ಹೇಳಿದಂತೆ ಡ್ರಾಮಾ ಮಾಡ್ತಾರೆ.


    colors kannada serial, kannada serial, sadhana plans success suman crying, kendasampige serial, kendasampige serial cast, ಕೆಂಡಸಂಪಿಗೆ ಧಾರಾವಾಹಿ, ಬೇಕು ಅಂತಲೇ ಗೆಸ್ಟ್ ಮುಂದೆ ಸುಮನಾಗೆ ಅವಮಾನ, ಮಾವನ ಕೈಯಲ್ಲಿ ಬೈಯಿಸಿದ ಸಾಧನಾ, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
    ಸಾಧನಾ


    ಸುಮನಾಗೆ ಬೈದ ಮಾವ
    ಸಾಧನಾ ಸುಮನಾಳನ್ನು ಬೈದು ಸುಮ್ಮನಾಗಲ್ಲ. ಅದನ್ನು ಮನೆಯವರಿಗೂ ಹೇಳ್ತಾಳೆ. ಆಗ ಅತ್ತೆ, ಮಾವ ಎಲ್ಲರೂ ಬರುತ್ತಾರೆ. ಮಾವ ಏನಾಯ್ತು ಎಂದು ಕೇಳ್ತಾರೆ. ಸಾಧನಾ ಇಲ್ಲ, ಸಲ್ಲದನ್ನು ಹೇಳುತ್ತಾಳೆ. ಅದಕ್ಕೆ ಕೋಪಗೊಂಡ ಮಾವ ನಮ್ಮ ಮನೆಗೆ ಬಂದ ಅತಿಥಿಗಳು ಯಾವುತ್ತೂ ಊಟ ಮಾಡದೇ ಹೋಗಿರಲಿಲ್ಲ ಎಂದು ಬೈಯ್ತಾರೆ. ಆಗ ಸುಮನಾ ಅಳ್ತಾಳೆ.


    ಇದನ್ನೂ ಓದಿ: Lakshana: ಮಿಸ್ಟ್ರಿ ಮುನಿಯಪ್ಪ, ಖಾಲಿ ಡಬ್ಬಾ ಆದ ಭೂಪತಿ-ನಕ್ಷತ್ರಾ! ಹಳೇ ನೆನಪುಗಳಿಂದ ಪ್ರೀತಿ ಹುಟ್ಟುತ್ತಾ? 


    ಸುಮನಾ ಮನೆ ಬಿಟ್ಟು ಓಡಿಸೋದೇ ಸಾಧನಾ ಪ್ಲ್ಯಾನ. ಸುಮನಾ ಇದಕ್ಕೆಲ್ಲಾ ಬಗ್ತಾಳಾ? ಮುಂದೇನಾಗುತ್ತೆ ಅಂತ ನೋಡೋಕೆ ಕೆಂಡಸಂಪಿಗೆ ಸೀರಿಯಲ್ ನೋಡಬೇಕು.

    Published by:Savitha Savitha
    First published: