• Home
 • »
 • News
 • »
 • entertainment
 • »
 • Kendasampige: ನಿತ್ಯಾಳಿಗೆ ವಾರ್ನಿಂಗ್ ಕೊಟ್ಟ ಸುಮನಾ ಅತ್ತೆ ಪದ್ಮಾ, ತೀರ್ಥನ ಸುದ್ದಿಗೆ ಬರದಂತೆ ಎಚ್ಚರಿಕೆ!

Kendasampige: ನಿತ್ಯಾಳಿಗೆ ವಾರ್ನಿಂಗ್ ಕೊಟ್ಟ ಸುಮನಾ ಅತ್ತೆ ಪದ್ಮಾ, ತೀರ್ಥನ ಸುದ್ದಿಗೆ ಬರದಂತೆ ಎಚ್ಚರಿಕೆ!

ಸುಮನಾ-ಅತ್ತೆ ಪದ್ಮಾ

ಸುಮನಾ-ಅತ್ತೆ ಪದ್ಮಾ

ನೀನು ನಮ್ಮ ಮನೆಗೆ ಮಗಳ ರೀತಿ ಬರುವುದಾದರೆ ಬಾ. ಯಾವಾಗಲೂ ಆತ್ಮೀಯ ಸ್ವಾಗತ ಮಾಡುತ್ತೇವೆ. ಆದ್ರೆ ಸೊಸೆಯಾಗೇ ಬರ್ತಿನಿ ಅಂದ್ರೆ, ಅದಕ್ಕೆ ವಿರೋಧ ಮಾಡುವುದರಲ್ಲಿ ನಾನೇ ಮೊದಲು ಇರುತ್ತೇನೆ ಎಂದು ಪದ್ಮಾ ನಿತ್ಯಾಗೆ ವಾರ್ನಿಂಗ್ ಕೊಟ್ಟಿದ್ದಾಳೆ.

 • News18 Kannada
 • Last Updated :
 • Karnataka, India
 • Share this:

  ಕೆಂಡಸಂಪಿಗೆ (Kendasampige) ಧಾರಾವಾಹಿ (Serial) ಕಲರ್ಸ್ ಕನ್ನಡದಲ್ಲಿ (Colors Kannada) ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6.30ಕ್ಕೆ ಪ್ರಸಾರವಾಗುತ್ತಿದೆ. ಶುರುವಾದಾಗಿನಿಂದ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗುತ್ತಿದೆ. ಧಾರಾವಾಹಿಯನ್ನು ಈಗಾಗಲೇ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಬೇರೆಯವರ ಜೊತೆ ಮದುವೆ ಆಗ ಬೇಕಿದ್ದ ಸುಮನಾ ಕಾರ್ಪೊರೇಟರ್  ತೀರ್ಥಂಕರ್ ಜೊತೆ ಮದುವೆ ಆಗಿದ್ದಾರೆ. ಹೇಳದೇ, ಕೇಳದೇ ಸುಮಿಗೆ ತಾಳಿ ಕಟ್ಟಿದ್ದರಿಂದ ತೀರ್ಥಂಕರ್ ಮನೆಯಲ್ಲಿ ಜಗಳವಾಗುತ್ತಲೇ ಇದೆ. ಅತ್ತೆ ಪದ್ಮಾ ಮಾತ್ರ ಸುಮನಾಳನ್ನು ಸೊಸೆ ಎಂದು ಒಪ್ಪಿಕೊಂಡಿದ್ದಾಳೆ. ಇದರ ಮಧ್ಯೆ ನಿತ್ಯಾ, ತೀರ್ಥನನ್ನು ತನ್ನೆಡೆ ಒಲಿಸಿಕೊಳ್ಳುವ ಪ್ರಯತ್ನದಲ್ಲಿದ್ದಾಳೆ. ಅದಕ್ಕೆ ಪದ್ಮಾ (Padma), ನಿತ್ಯಾಗೆ (Nithya) ತನ್ನ ಮನಗ ತೀರ್ಥನ ಸುದ್ದಿಗೆ ಬರದಂತೆ ವಾರ್ನಿಂಗ್ (Warning) ಕೊಟ್ಟಿದ್ದಾಳೆ.


  ನಿತ್ಯಾಗೆ ಮಾತು ಕೊಟ್ಟಿರುವ ತೀರ್ಥ


  ನಿತ್ಯಾ ಕಾರ್ಪೊರೇಟರ್  ತೀರ್ಥಂಕರ್ ನನ್ನು ಮದುವೆ ಆಗಬೇಕಿದ್ದ ಹುಡುಗಿ. ಇಬ್ಬರಿಗೂ ಮದುವೆ ನಿಶ್ಚಯವಾಗಿತ್ತು. ಆದ್ರೆ ಸುಮನಾ ಜೊತೆ ತೀರ್ಥಂಕರ್ ಮದುವೆ ನಡೆದು ಬಿಡುತ್ತೆ. ಅದಕ್ಕೆ ತೀರ್ಥ ತಾನು ಮದುವೆ ಆಗ ಬೇಕಿದ್ದ ನಿತ್ಯಾಳಿಗೆ ಮಾತು ಕೊಟ್ಟಿದ್ದಾನೆ. ನಿತ್ಯಾ ನಿನ್ನ ಕಂಡ್ರೆ ನನಗೆ ತುಂಬಾ ಪ್ರೀತಿ. ಎಲೆಕ್ಷನ್ ಆಗೋವರೆಗೆ ಕಾಯಬೇಕು ನೀನು. ನಾನು ನಿನ್ನನ್ನು ಖಂಡಿತವಾಗಿಯೂ ಮದುವೆ ಆಗ್ತೀನಿ ಎಂದು ಹೇಳಿದ್ದಾನೆ. ಅದಕ್ಕೆ ನಿತ್ಯಾ , ಸರಿ ನೀವೇ ನನ್ನ ಗಂಡ. ನಾನು ಕಾಯ್ತೀನಿ ಎಂದು ಹೇಳಿದ್ದಾಳೆ.


  ನಾಟಕ ಮಾಡಿ ಆಸ್ಪತ್ರೆಗೆ ಸೇರಿರುವ ನಿತ್ಯ


  ತೀರ್ಥ ಅಮ್ಮ ಪದ್ಮಾ, ಸುಮನಾ ಮತ್ತು ತೀರ್ಥಂಕರ್ ಮೊದಲ ರಾತ್ರಿಗೆ ಸಿದ್ಧತೆ ಮಾಡಿರುತ್ತಾಳೆ. ಅದಕ್ಕೆ ಬೇಸರ ಮಾಡಿಕೊಂಡ ಅದನ್ನು ತಪ್ಪಿಸಲು, ತಾನು ಮೇಲಿಂದ ಬಿದ್ದೆ, ಕೈ-ಕಾಲು ನೋವಾಗಿದೆ ಎಂದು ಆಸ್ಪತ್ರೆ ಸೇರಿಸಿ, ತೀರ್ಥನನ್ನು ಕರೆಸಿಕೊಳ್ತಾಳೆ. ತೀರ್ಥಂಕರ್ ಸಹ ಇವಳ ನಾಟಕವನ್ನು ನಿಜ ಎಂದು ನಂಬುತ್ತಾರೆ.


  ಇದನ್ನೂ ಓದಿ: Puneeth Rajkumar: ಗಂಧದಗುಡಿ ನೋಡಿ ಭಾವುಕಳಾದ ಪುನೀತ್ ಪುತ್ರಿ, ಅಪ್ಪನನ್ನು ನೆನೆದು ಧೃತಿ ಮಾಡಿದ್ದೇನು? 


  ನಿತ್ಯಾಗೆ ಸಾಹೇಬ್ರು ಅಂದ್ರೆ ಇಷ್ಟ


  ಸುಮನಾ ತನ್ನ ಅತ್ತೆ ಬಳಿ ಈ ರೀತಿ ಹೇಳಿದ್ದಾಳೆ. ನಿತ್ಯಾಗೆ ಸಾಹೇಬರನ್ನು ಕಂಡ್ರೆ ಇಷ್ಟ ಅನ್ನಿಸುತ್ತದೆ. ತೀರ್ಥ ಅವರು ಆಸ್ಪತ್ರೆಯಲ್ಲಿದ್ರೆ ಅವರಿಗೆ ನೋವು ಕಮ್ಮಿ ಆಗುತ್ತಂತೆ. ನಾನೇ ಅವರಿಬ್ಬರನ್ನು ದೂರ ಮಾಡಿಬಿಟ್ಟೆ ಎಂದು ಬೇಸರ ಮಾಡಿಕೊಳ್ತಾ ಇದ್ದಾಳೆ.


  colors kannada serial, kannada serial, kendasampige serial, serial cast, padma warning to nithya, ಕೆಂಡಸಂಪಿಗೆ ಧಾರಾವಾಹಿ, ನಿತ್ಯಾಳಿಗೆ ವಾರ್ನಿಂಗ್ ಕೊಟ್ಟ ಸುಮನಾ ಅತ್ತೆ ಪದ್ಮಾ, ತೀರ್ಥನ ಸುದ್ದಿಗೆ ಬರದಂತೆ ಎಚ್ಚರಿಕೆ, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
  ತೀರ್ಥಂಕರ್-ಪದ್ಮಾ


  ನಿತ್ಯಾಗೆ ವಾರ್ನಿಂಗ್ ಕೊಟ್ಟ ಪದ್ಮಾ 


  ನಿತ್ಯಾಳನ್ನು ನೋಡಲು ಪದ್ಮಾ ಆಸ್ಪತ್ರೆಗೆ ಬಂದಿದ್ದಾಳೆ. ಆರೋಗ್ಯ ವಿಚಾರಿಸಿದ ಮೇಲೆ,  ನಿತ್ಯಾ, ನೀನು ತೀರ್ಥಂಕರ್ ಮೇಲಿನ ಆಸೆ ಬಿಟ್ಟು ಬಿಡು. ಅವನಿಗೆ ಮದುವೆ ಆಗಿದೆ ಎಂದು ಹೇಳ್ತಾಳೆ. ಅದಕ್ಕೆ ಕೋಪಗೊಂಡ ನಿತ್ಯಾ, ಆ ಹೂವ ಮಾರುವ ಹುಡುಗಿಯನ್ನು ನೀವು ಒಪ್ಪಿಕೊಂಡ್ರಾ ಎಂದು ಕೇಳ್ತಾಳೆ. ಹೌದು, ಹೂವು ಮಾರಿದ್ದು ಜೀವನಕ್ಕಾಗಿ ತಾನೇ. ನಾವು ಕಬ್ಬಿಣ ಮಾರುತ್ತೇವೆ. ಅವಳು ಹೂವು ಮಾರಿದ್ಲು ಅದರಲ್ಲೇನು ತಪ್ಪು ಎಂದು ಪದ್ಮಾ ಕೇಳ್ತಾಳೆ.


  colors kannada serial, kannada serial, kendasampige serial, serial cast, padma warning to nithya, ಕೆಂಡಸಂಪಿಗೆ ಧಾರಾವಾಹಿ, ನಿತ್ಯಾಳಿಗೆ ವಾರ್ನಿಂಗ್ ಕೊಟ್ಟ ಸುಮನಾ ಅತ್ತೆ ಪದ್ಮಾ, ತೀರ್ಥನ ಸುದ್ದಿಗೆ ಬರದಂತೆ ಎಚ್ಚರಿಕೆ, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
  ನಿತ್ಯಾ


  ನನ್ನದೇ ಮೊದಲ ವಿರೋಧ
  ನಿತ್ಯಾ, ನೀನು ನಮ್ಮ ಮನೆಗೆ ಮಗಳ ರೀತಿ ಬರುವುದಾದರೆ ಬಾ. ಯಾವಾಗಲೂ ಆತ್ಮೀಯ ಸ್ವಾಗತ ಮಾಡುತ್ತೇವೆ. ಆದ್ರೆ ಸೊಸೆಯಾಗೇ ಬರ್ತಿನಿ ಅಂದ್ರೆ, ಅದಕ್ಕೆ ವಿರೋಧ ಮಾಡುವುದರಲ್ಲಿ ನಾನೇ ಮೊದಲು ಇರುತ್ತೇನೆ ಎಂದು ಪದ್ಮಾ ನಿತ್ಯಾಗೆ ವಾರ್ನಿಂಗ್ ಕೊಟ್ಟಿದ್ದಾಳೆ. ನಿತ್ಯಾ ಅದನ್ನು ಕೇಳಿ ಶಾಕ್ ಆಗಿದ್ದಾಳೆ.


  ಇದನ್ನೂ ಓದಿ: Ramachari: ಚಾರುಗೆ ತಿಳಿಯಿತು ತನ್ನ ಅಮ್ಮನ ತಪ್ಪು, ರಾಮಾಚಾರಿ ಮೇಲೆ ಮೂಡಿದೆ ಅಕ್ಕರೆ! 


  ನಿತ್ಯಾ, ಪದ್ಮಾ ವಾರ್ನಿಂಗ್‍ಗೆ ಸುಮ್ನೆ ಆಗ್ತಾಳಾ? ತೀರ್ಥನನ್ನು ಪಡೆಯಲು ಬೇರೆ ಯಾವುದಾದ್ರೂ ಮಾರ್ಗ ಹುಡುಕುತ್ತಾಳಾ? ಮುಂದೇನಾಗುತ್ತೆ ಅಂತ ನೋಡೋಕೆ ಕೆಂಡಸಂಪಿಗೆ ಸೀರಿಯಲ್ ನೋಡಬೇಕು.

  Published by:Savitha Savitha
  First published: