• Home
 • »
 • News
 • »
 • entertainment
 • »
 • Kendasampige: ತೀರ್ಥಂಕರ್ ನಾಪತ್ತೆ, ಸುಮನಾ ಮೇಲೆ ಸಾಧನಾ ಕೆಂಡಾಮಂಡಲ!

Kendasampige: ತೀರ್ಥಂಕರ್ ನಾಪತ್ತೆ, ಸುಮನಾ ಮೇಲೆ ಸಾಧನಾ ಕೆಂಡಾಮಂಡಲ!

ತೀರ್ಥಂಕರ್ ನಾಪತ್ತೆ

ತೀರ್ಥಂಕರ್ ನಾಪತ್ತೆ

ಇದ್ದಕ್ಕಿದ್ದ ಹಾಗೇ ತೀರ್ಥಂಕರ್ ಕಾಣುತ್ತಿಲ್ಲ. ಸುಮನಾ, ಪದ್ಮಾ ಎಲ್ಲ ಕಡೆ ಹುಡುಕುತ್ತಿದ್ದಾರೆ. ಆದ್ರೂ ಸುಳಿವಿಲ್ಲ. ತೀರ್ಥಂಕರ್ ಜೊತೆ ಚಿಟ್ಟೆಯೂ ನಾಪತ್ತೆ ಆಗಿದ್ದಾನೆ.

 • News18 Kannada
 • Last Updated :
 • Karnataka, India
 • Share this:

  ಕೆಂಡಸಂಪಿಗೆ (Kendasampige) ಧಾರಾವಾಹಿ (Serial) ಕಲರ್ಸ್ ಕನ್ನಡದಲ್ಲಿ (Colors Kannada) ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6.30ಕ್ಕೆ ಪ್ರಸಾರವಾಗುತ್ತಿದೆ. ಶುರುವಾದಾಗಿನಿಂದ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗುತ್ತಿದೆ. ಕೆಂಡಸಂಪಿಗೆ ಧಾರಾವಾಹಿಯನ್ನು ಈಗಾಗಲೇ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಬೇರೆಯವರ ಜೊತೆ ಮದುವೆ ಆಗ ಬೇಕಿದ್ದ ಸುಮನಾ ಕಾರ್ಪೊರೇಟರ್ ತೀರ್ಥಂಕರ್ ಜೊತೆ ಮದುವೆ ಆಗಿದ್ದಾರೆ. ಅತ್ತೆ ಪದ್ಮಾ ಮಾತ್ರ ಸುಮನಾಳನ್ನು ಸೊಸೆ ಎಂದು ಒಪ್ಪಿಕೊಂಡಿದ್ದಾಳೆ. ಬೇರೆಯವರು ಯಾರು ಒಪ್ಪಿಕೊಂಡಿಲ್ಲ. ಅಲ್ಲದೇ ತೀರ್ಥ ಎಲೆಕ್ಷನ್ (Election) ಮುಗಿಯುವವರೆಗೆ ಮಾತ್ರ ಸುಮನಾ ಇಲ್ಲಿ ಇರ್ತಾಳೆ ಆಮೇಲೆ ಹೋಗ್ತಾಳೆ ಎಂದು ಹೇಳಿರುತ್ತಾನೆ. ಅದಕ್ಕೆ ಮನೆಯವರು ಸಹಿಕೊಂಡು ಇರುತ್ತಾರೆ. ಇದ್ದಕ್ಕಿದ ಹಾಗೇ ತೀರ್ಥಂಕರ್ ನಾಪತ್ತೆ ಆಗಿದ್ದಾನೆ. ಸಾಧನಾ ಸುಮಿ ಮೇಲೆ ಮುಗಿಬಿದ್ದಿದ್ದಾಳೆ


  ತೀರ್ಥಂಕರ್ ಕೊಲ್ಲಲು ಸ್ಕೆಚ್ ಹಾಕಿದ್ದ ಕಾಶಿ
  ತಾನು ಮದುವೆ ಆಗಬೇಕಿದ್ದ ಸುಮಿಯನ್ನು ತೀರ್ಥಂಕರ್ ಮದುವೆ ಆಗಿದ್ದಾನೆ ಎಂದು ಕಾಳಿಗೆ ಕೋಪ. ಅದಕ್ಕೆ ಹೇಗಾದ್ರೂ ಕಾರ್ಪೊರೇಟರ್ ತೀರ್ಥಂಕರ್ ನನ್ನು ಕೊಲ್ಲಬೇಕು ಎಂದು ಪ್ಲ್ಯಾನ್ ಮಾಡಿದ್ದಾನೆ. ಅದಕ್ಕೆ ಈಗಾಗಲೇ ರೌಡಿಯನ್ನು ಕರೆಸಿದ್ದಾನೆ. ಕಾಶಿ ಎಂದುಕೊಂಡಂತೆ ಎಲ್ಲಾ ಸಿದ್ಧತೆಯೂ ನಡೆದಿತ್ತು.


  ತೀರ್ಥಂಕರ್ ಬದಲು ಸಚಿವರಿಗೆ ಚಾಕು
  ಸುಮಿ ತಮ್ಮ ರಾಜೇಶನ ಸ್ಮರಣೆ ವೇಳೆ ಕಾಶಿ ಗಲಾಟೆ ಮಾಡುತ್ತಾನೆ. ಆಗ ಜಗಳ ಜೋರಾಗಿ ತೀರ್ಥನನ್ನು ಕೊಲ್ಲಲು ಚಾಕು ಹಾಕುತ್ತಾರೆ. ಅದು ತೀರ್ಥಂಕರ್ ಬದಲು ಸಚಿವರಿಗೆ ಬೀಳುತ್ತೆ. ಎಲ್ಲರೂ ಗಾಬರಿಯಾಗಿದ್ದರು. ಆಸ್ಪತ್ರೆ ಸೇರಿಸಿದ್ದಾರೆ. ತೀರ್ಥನು ಚಡಪಡಿಸುತ್ತಿದ್ದಾನೆ. ಅಲ್ಲದೇ ಎಲೆಕ್ಷನ್ ನನ್ನು 1 ತಿಂಗಳ ಕಾಲ ಮುಂದೂಡಲಾಗಿದೆ.


  ಇದನ್ನೂ ಓದಿ: BBK Rupesh Rajanna: 100 ರೂಪಾಯಿ ಕದ್ದು, ಬೆತ್ತದಲ್ಲಿ ಹೊಡೆಸಿಕೊಂಡು, ಮಧ್ಯರಾತ್ರಿ ಒಂಟಿಯಾಗಿದ್ರಂತೆ ರಾಜಣ್ಣ! 


  ಎಲೆಕ್ಷನ್ ಮುಂದೂಡಿದ್ದಕ್ಕೆ ಪದ್ಮಾ ಖುಷಿ
  ಎಲೆಕ್ಷನ್ 1 ತಿಂಗಳು ಮುಂದೂಡಿದ್ದಕ್ಕೆ ಸುಮನಾ ಅತ್ತೆ ಪದ್ಮಾ ಖುಷಿಯಾಗಿದ್ದಾರೆ. 1 ತಿಂಗಳಲ್ಲಿ ಮಗ ಸೊಸೆ ಒಂದಾಗಬೇಕು ಎಂದು ಬಯಸುತ್ತಿದ್ದಾಳೆ. ಅದಕ್ಕೆ ಅವರಿಬ್ಬರ ಮೊದಲ ರಾತ್ರಿಗೆ ಎಲ್ಲಾ ಸಿದ್ಧತೆ ಮಾಡಿದ್ದಾಳೆ. ಆದ್ರೆ ತೀರ್ಥಂಕರ್ ಎಷ್ಟು ವೇಳೆಯಾದ್ರೂ ಮನೆಗೆ ಬಂದಿಲ್ಲ. ಎಲ್ಲರೂ ಆತಂಕಗೊಂಡಿದ್ದಾರೆ.

  ನಾಪತ್ತೆಯಾದ ತೀರ್ಥಂಕರ್
  ಇದ್ದಕ್ಕಿದ್ದ ಹಾಗೇ ತೀರ್ಥಂಕರ್ ಕಾಣುತ್ತಿಲ್ಲ. ಸುಮನಾ, ಪದ್ಮಾ ಎಲ್ಲ ಕಡೆ ಹುಡುಕುತ್ತಿದ್ದಾರೆ. ಆದ್ರೂ ಸುಳಿವಿಲ್ಲ. ತೀರ್ಥಂಕರ್ ಜೊತೆ ಚಿಟ್ಟೆಯೂ ನಾಪತ್ತೆ ಆಗಿದ್ದಾನೆ. ಎಲ್ಲರೂ ಏನ್ ಆಯ್ತೋ, ಏನೋ ಎಂದು ಒಂದು ಸಮನೆ ಹುಡುಕುತ್ತಿದ್ದಾರೆ. ಆದ್ರೆ ಸಿಕ್ಕಿಲ್ಲ.


  colors kannada serial, kannada serial, hero missing, kendasampige serial, kendasampige serial cast, ಕೆಂಡಸಂಪಿಗೆ ಧಾರಾವಾಹಿ, ತೀರ್ಥಂಕರ್ ನಾಪತ್ತೆ, ಸುಮನಾ ಮೇಲೆ ಸಾಧನಾ ಕೆಂಡಾಮಂಡಲ!, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
  ತೀರ್ಥಂಕರ್


  ನಿಜ ಹೇಳ್ತೀನಿ ಎನ್ನುತ್ತಿರುವ ಸಾಧನಾ
  ತೀರ್ಥಂಕರ್ ಸುಮಿಯನ್ನು ಮದುವೆ ಆಗಿದ್ದಕ್ಕೆ ಇಷ್ಟೆಲ್ಲಾ ಆಗ್ತಾ ಇರೋದು. ನಿನ್ನ ಮದುವೆ ಆಗಿ ಅವನು ಕಣ್ಮರೆಯಾದ ಎಂದು ಸಾಧನಾ ಸುಮಿಗೆ ಬೈಯುತ್ತಾಳೆ. ಆಗ ಅತ್ತೆ ಪದ್ಮಾ ತಡೆಯುತ್ತಾರೆ. ಆಗ ಸಾಧನಾ, ನೀವು ಮಾತನಾಡುಲು ಬಿಡದಿದ್ರೆ, ಎಲ್ಲಾ ನಿಜ ಹೇಳಿ ಬಿಡ್ತೀನಿ ನೋಡಿ ಎಂದು ಭಯ ಪಡಿಸಿತ್ತಿದ್ದಾಳೆ. ನಿಜ ಅಂದ್ರೆ, ಎಲೆಕ್ಷನ್ ಆಗೋವರೆಗೂ ಮಾತ್ರ ಸುಮನಾಗೆ ಈ ಮನೆಯಲ್ಲಿ ಜಾಗ ಎನ್ನುವ ಸತ್ಯವನ್ನು.


  colors kannada serial, kannada serial, hero missing, kendasampige serial, kendasampige serial cast, ಕೆಂಡಸಂಪಿಗೆ ಧಾರಾವಾಹಿ, ತೀರ್ಥಂಕರ್ ನಾಪತ್ತೆ, ಸುಮನಾ ಮೇಲೆ ಸಾಧನಾ ಕೆಂಡಾಮಂಡಲ!, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
  ಸಾಧನಾ


  ಮದುವೆ ಚುನಾವಣೆ ಗಿಮಿಕ್
  ತೀರ್ಥಂಕರ್‌ಗೆ ಸುಮನಾ ಕಂಡ್ರೆ ಇಷ್ಟ ಇಲ್ಲ. ಅನಿವಾರ್ಯವಾಗಿ ಎಲ್ಲರ ಮುಂದೆ ಒಳ್ಳೆಯವನಾಗಲು ತಾಳಿ ಕಟ್ಟಿದ್ದಾನೆ. ಅದಕ್ಕೆ ಸುಮ್ಮನೇ ಸುಮನಾ ಮುಂದೆ ಮತ್ತೆ ಗೌರವ ಇದೆ ಎನ್ನೋ ತರ ನಾಟಕ ಆಡ್ತಾ ಇದ್ದಾನೆ. ಸುಮನಾ ತೀರ್ಥಂಕರ್ ನಾಟಕವನ್ನು ನಿಜ ಎಂದುಕೊಂಡಿದ್ದಾಳೆ. ಆತ ಹೇಳಿದಂತೆ ಕೇಳುತ್ತಿದ್ದಾಳೆ. ಆದ್ರೆ ಇದೆಲ್ಲಾ ಚುನಾವಣೆ ಗಿಮಿಕ್ ಮಾತ್ರ.


  ಇದನ್ನೂ ಓದಿ: Bhagya Lakshmi: ಲಕ್ಷ್ಮಿ ಮೇಲೆ ಕಾವೇರಿ ಒಲವು! ಭಾಗ್ಯ ತಂಗಿಗೆ ಒಳ್ಳೆ ಗಂಡು ಸಿಕ್ಕೇ ಬಿಟ್ನಾ? 


  ತೀರ್ಥ ಎಲ್ಲಿ ಹೋದ? ಸುಮಿ ಗಂಡನನ್ನು ಹುಡುಕುತ್ತಾಳಾ? ಸಾಧನಾ ಸತ್ಯವನ್ನು ಹೇಳ್ತಾಳಾ? ಮುಂದೇನಾಗುತ್ತೆ ಅಂತ ನೋಡೋಕೆ ಕೆಂಡಸಂಪಿಗೆ ಸೀರಿಯಲ್ ನೋಡಬೇಕು.

  Published by:Savitha Savitha
  First published: