ಕೆಂಡಸಂಪಿಗೆ (Kendasampige) ಧಾರಾವಾಹಿ (Serial) ಕಲರ್ಸ್ ಕನ್ನಡದಲ್ಲಿ (Colors Kannada) ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6.30ಕ್ಕೆ ಪ್ರಸಾರವಾಗುತ್ತಿದೆ. ಶುರುವಾದಾಗಿನಿಂದ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗುತ್ತಿದೆ. ಕೆಂಡಸಂಪಿಗೆ ಧಾರಾವಾಹಿಈಗಾಗಲೇ ಅಭಿಮಾನಿಗಳು ಮೆಚ್ಚುಗೆ ಪಡೆದುಕೊಂಡಿದೆ. ಬೇರೆಯವರ ಜೊತೆ ಮದುವೆ (Marriage) ಆಗಬೇಕಿದ್ದ ಸುಮನಾ, ಕಾರ್ಪೊರೇಟರ್ ತೀರ್ಥಂಕರ್ ಜೊತೆ ಮದುವೆ ಆಗಿದ್ದಾರೆ. ಹೇಳದೇ, ಕೇಳದೇ ಸುಮಿಗೆ ತಾಳಿ ಕಟ್ಟಿದ್ದರಿಂದ ತೀರ್ಥಂಕರ್ ಮನೆಯಲ್ಲಿ ಜಗಳವಾಗುತ್ತಲೇ ಇದೆ. ಅತ್ತೆ ಪದ್ಮಾ ಮಾತ್ರ ಸುಮನಾಳನ್ನು ಸೊಸೆ ಎಂದು ಒಪ್ಪಿಕೊಂಡಿದ್ದಾಳೆ. ಸುಮನಾ ನಿಧಾನವಾಗಿ ಮನೆಯವರ ಮನಸ್ಸು ಗೆಲ್ಲುತ್ತಿದ್ದಾಳೆ. ತೀರ್ಥಂಕರ್ ಸಹ ತನ್ನ ರಾಜಕೀಯ ಲಾಭಕ್ಕಾಗಿ ಸುಮನಾಳನ್ನು ಮದುವೆ ಆಗಿದ್ದಾನೆ. ಅವಳ ಜೊತೆ ಪ್ರೀತಿಯ ನಾಟಕ (Drama) ಆಡ್ತಾ ಇದ್ದಾನೆ.
ಎಲೆಕ್ಷನ್ ಗಾಗಿ ಸುಮನಾ ಮದುವೆಯಾಗಿದ್ದ ತೀರ್ಥ
ಕಾರ್ಪೊರೇಟರ್ ಆಗಿರುವ ತೀರ್ಥನಿಗೆ MLA ಆಗಬೇಕು ಎಂಬ ಆಸೆ ಇದೆ. ಅದಕ್ಕಾಗಿ ಅವನು ಏನು ಬೇಕಾದ್ರೂ ಮಾಡ್ತಾನೆ. ಸಾಮೂಹಿಕ ಮದುವೆ ಸಂದರ್ಭದಲ್ಲಿ ಸುಮನಾ ಮದುವೆ ಆಗಬೇಕಿದ್ದ ಗಂಡು ಬಂದಿರಲ್ಲ. ಅದಕ್ಕೆ ತೀರ್ಥನೇ ಸುಮನಾಗೆ ತಾಳಿ ಕಟ್ಟಿದ್ದ. ಶ್ರೀದೇವಿ ಕಾಲೊನಿ ವೋಟಿಗಾಗಿ ಈ ರೀತಿ ಮಾಡಿದ್ದ.
ದೇವರ ಮುಂದೆ ಸುಳ್ಳು ಪ್ರಮಾಣ
ಸುಮನಾ ಏರಿಯಾ ಬಾಯಿಬಡಿಕೆ ವಿಜಯಮ್ಮ, ಈ ತೀರ್ಥಂಕರ್ ಸುಮನಾಳಿಗೆ ಪ್ರೀತಿ ತೋರುತ್ತಿಲ್ಲ. ಇವಳನ್ನು ಮದುವೆ ಆಗಿರೋದೇ ನಮ್ಮ ಕಾಲೊನಿ ವೋಟಿಗಾಗಿ ಎಂದು ಎಲ್ಲರ ಮುಂದೆ ಹೇಳಿರ್ತಾಳೆ. ಅದಕ್ಕೆ ಎಲ್ಲರೂ ಗಾಬರಿಗೊಂಡಿರುತ್ತಾರೆ. ಅದಕ್ಕೆ ತೀರ್ಥಂಕರ್ ದೇವರ ಮುಂದೆ ಕರ್ಪೂರ ಕೈಲಿಡಿದು, ಇಲ್ಲ ನಾನು ಎಲೆಕ್ಷನ್ಗಾಗಿ ಸುಮನಾಳನ್ನು ಮದುವೆ ಆಗಿಲ್ಲ ಎಂದು ಸುಳ್ಳು ಪ್ರಮಾಣ ಮಾಡಿದ್ದಾನೆ.
ಸುಮನಾಳ ಜೊತೆ ಸುತ್ತಾಟ
ತೀರ್ಥಂಕರ್ ಜನಕ್ಕೆ ನಾನು ಸುಮನಾ ಚೆನ್ನಾಗಿದ್ದೇವೆ ಅನ್ನೋ ಅಭಿಪ್ರಾಯ ಬರಬೇಕು ಎಂದು ಆಕೆಯನ್ನು ಆಚೆ ಕರೆದುಕೊಂಡು ಹೋಗಿದ್ದಾನೆ. ಆಕೆಗೆ ಪಾನಿಪೂರಿಯನ್ನು ತಿನ್ನಿಸಿದ್ದಾನೆ. ಪ್ರೀತಿ ಇದೆ ಎನ್ನುವ ರೀತಿ ನಾಟಕ ಮಾಡಿದ್ದಾನೆ. ಅದನ್ನು ಸುಮನಾ ನಂಬಿದ್ದಾಳೆ. ನಿಜವಾಗ್ಲೂ ನನ್ನ ಪ್ತೀತಿ ಮಾಡ್ತಿದ್ದಾರೆ ಎಂದುಕೊಂಡಿದ್ದಾಳೆ.
ವಿಡಿಯೋ ಮಾಡಿದ ಚಿಟ್ಟೆ
ಸುಮನಾಳಿಗೆ ತೀರ್ಥಂಕರ್ ಪಾನಿಪೂರಿಯನ್ನು ತಿನ್ನಿಸುತ್ತಿರುವುದನ್ನು ತೀರ್ಥ ಪಿಎ ಚಿಟ್ಟೆ ವಿಡಿಯೋ ಮಾಡಿದ್ದಾನೆ. ಅದನ್ನು ಎಲ್ಲಾ ನ್ಯೂಸ್ ಚಾನೆಲ್ ಗೆ ಕಳಿಸಿದ್ದಾನೆ. ತೀರ್ಥಂಕರ್ ಸುಮನಾ ಜೊತೆ ಚೆನ್ನಾಗಿದ್ದಾರೆ ಎಂದು ಎಲ್ಲಾ ಕಡೆ ಸುದ್ದಿಯಾಗಿದೆ. ಇದೇ ತೀರ್ಥನಿಗೆ ಬೇಕಿದ್ದಿದ್ದು. ಅದಕ್ಕೆ ಅವನೇ ವಿಡಿಯೋ ಮಾಡಿಸಿ ಚಾನೆಲ್ಗಳಿಗೆ ಕೊಟ್ಟಿದ್ದಾರೆ.
ಸುಮನಾ ಮತ್ತೆ ಮೋಸ ಹೋಗ್ತಿದ್ದಾಳಾ?
ಸುಮನಾಗೆ ಈಗಾಗಲೇ ತೀರ್ಥ ನಿನ್ನನ್ನು ಮದುವೆ ಆಗಿರೋದು ಎಲೆಕ್ಷನ್ ಗಾಗಿ ಎಂದು ಕೆಲವರು ಹೇಳಿದ್ದರು. ಆದ್ರೂ ಅದನ್ನು ಆಕೆ ನಂಬಿರಲಿಲ್ಲ, ನನಗೆ ಸಾಹೇಬ್ರು ಮೇಲೆ ನಂಬಿಕೆ ಇದೆ. ಅವರು ನನಗೆ ಮೋಸ ಮಾಡಲ್ಲ ಅಂತಿದ್ದಾಳೆ. ಆದ್ರೂ ತೀರ್ಥಂಕರ್ ಎಲೆಕ್ಷನ್ ಗಾಗಿ ನಾಟಕ ಮಾಡುತ್ತಿದ್ದಾನೆ.
ಸುಮನಾಗೆ ಸತ್ಯ ಗೊತ್ತಾಗುತ್ತಾ?
ಸುಮನಾಗೆ ಒಂದು ವೇಳೆ ತೀರ್ಥಂಕರ್ ಮಾಡುತ್ತಿರುವುದು ಸುಳ್ಳು. ತನ್ನನ್ನು ಪ್ರೀತಿ ಮಾಡ್ತಾ ಇಲ್ಲ ಎಂದು ಗೊತ್ತಾದ್ರೆ ಏನ್ ಮಾಡ್ತಾಳೆ ಅನ್ನೋ ಪ್ರಶ್ನೆಗಳು ಎದ್ದಿವೆ. ಸುಮನಾಗೆ ಈ ವಿಷ್ಯ ಗೊತ್ತಾಗಿ ತೀರ್ಥಂಕರ್ ನನ್ನು ಬಿಟ್ಟು ತನ್ನ ತವರು ಮನೆಗೆ ಹೋಗಬಹುದು.
ಇದನ್ನೂ ಓದಿ: Bhagyalakshmi: ಶ್ರೇಷ್ಠಾ ಮನೆಯಲ್ಲಿ ಕುಸುಮಾ 'ತಾಂಡವ', ಮಗನ ಸುದ್ದಿಗೆ ಬರದಂತೆ ಕೊನೆಯ ಎಚ್ಚರಿಕೆ!
ತೀರ್ಥಂಕರ್ ನಾಟಕ ಸುಮನಾಗೆ ಗೊತ್ತಾಗುತ್ತಾ? ಅಥವಾ ತೀರ್ಥಂಕರ್ ಗೆ ನಿಜವಾಗ್ಲೂ ಸುಮನಾ ಮೇಲೆ ಪ್ರೀತಿ ಹುಟ್ಟುತ್ತಾ? ಮುಂದೇನಾಗುತ್ತೆ ಅಂತ ನೋಡೋಕೆ ಕೆಂಡಸಂಪಿಗೆ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ