ಕೆಂಡಸಂಪಿಗೆ (Kendasampige) ಧಾರಾವಾಹಿ (Serial) ಕಲರ್ಸ್ ಕನ್ನಡದಲ್ಲಿ (Colors Kannada) ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6.30ಕ್ಕೆ ಪ್ರಸಾರವಾಗುತ್ತಿದೆ. ಶುರುವಾದಾಗಿನಿಂದ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗುತ್ತಿದೆ. ಕೆಂಡಸಂಪಿಗೆ ಧಾರಾವಾಹಿ ಯನ್ನು ಈಗಾಗಲೇ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಬೇರೆಯವರ ಜೊತೆ ಮದುವೆ ಆಗ ಬೇಕಿದ್ದ ಸುಮನಾ ಕಾರ್ಪೊರೇಟರ್ ತೀರ್ಥಂಕರ್ ಜೊತೆ ಮದುವೆ ಆಗಿದ್ದಾರೆ. ಹೇಳದೇ, ಕೇಳದೇ ಸುಮಿಗೆ ತಾಳಿ ಕಟ್ಟಿದ್ದರಿಂದ ತೀರ್ಥಂಕರ್ ಮನೆಯಲ್ಲಿ ಜಗಳವಾಗುತ್ತಲೇ ಇದೆ. ಅತ್ತೆ ಪದ್ಮಾ ಮಾತ್ರ ಸುಮನಾಳನ್ನು ಸೊಸೆ ಎಂದು ಒಪ್ಪಿಕೊಂಡಿದ್ದಾಳೆ. ತೀರ್ಥ ಅತ್ತಿಗೆ ಸಾಧನಾ ಹೇಗಾದ್ರೂ ಮಾಡಿ ಸುಮಿಯನ್ನು ಮನೆಯಿಂದ ಆಚೆ ಓಡಿಸಬೇಕು ಎಂದು ಏನೇನೋ ಪ್ಲ್ಯಾನ್ ಮಾಡುತ್ತಿದ್ದಳು. ಈ ಬಾರಿ ಸಾಧನಾ ಪ್ಲ್ಯಾನ್ ಸಕ್ಸಸ್ (Success) ಆಗಿದೆ. ಮಾವ ಸುಮನಾಳನ್ನು ಮನೆಯಿಂದ ಆಚೆ ಕಳಿಸಿದ್ದಾರೆ. ತೀರ್ಥ ಸುಮಾ ಪರ ಮಾತನಾಡಿದ್ದಾನೆ.
ಸುಮನಾಳನ್ನು ಆಚೆ ಕಳಿಸಿರುವ ಮಾವ
ಕಾಶಿ ತೊಂದ್ರೆ ಕೊಟ್ಟಿದ್ದು ಸುಮನಾಳಿಂದ ಎಂದು ಮಾವ ಅಂದುಕೊಂಡು, ನನ್ನ ಮಗನ ಸಾವಿಗೆ ಕಾರಣವಾದ ನೀನು ಈ ಮನೆಯಲ್ಲಿ ಇರಬೇಡ ಎಂದು ಆಚೆ ಕಳಿಸುತ್ತಿದ್ದಾನೆ. ಸುಮಿ ನನ್ನ ತಪ್ಪು ಇಲ್ಲ ಎಂದ್ರು ಕೇಳಲಿಲ್ಲ. ನೀನು ಈ ಮನೆಯುಲ್ಲಿ ಇದ್ರೆ ಕಾಶಿ ಮತ್ತೆ ನನ್ನ ಮಗನನ್ನು ಕೊಲ್ಲಲು ಬರಬಹುದು. ನೀನು ದೂರ ಹೋದೆ ಎಂದು ಗೊತ್ತಾದ್ರೆ, ಅವನು ಈ ಕಡೆ ತಲೆ ಹಾಕಲ್ಲ.
ರಾಜಕೀಯ ದ್ವೇಷ ಆಗಿದ್ರೆ, ಅದನ್ನು ಬಿಟ್ಟು ಕಾರ್ಖಾನೆ ನೋಡಿಕೋ ಅಂತಿದ್ದೆ. ಇದು ವೈಯಕ್ತಿಕ ದ್ವೇಷ, ಅದಕ್ಕೆ ನೀನು ಮನೆಯಿಂದ ಆಚೆ ಹೋಗು ಎಂದು ಕಳಿಸಿದ್ದಾರೆ.
ಇದನ್ನೂ ಓದಿ: Shrirasthu Shubhamasthu: ಸೊಸೆ ಪ್ರಾಣ ಉಳಿಸುವ ಜವಾಬ್ದಾರಿ ಮಾಧವನ ಮೇಲೆ, ಅವಿನಾಶ್ ಕೆಂಡಾಮಂಡಲ!
ತೀರ್ಥನಿಗೆ ಕೋಪ
ಈ ವಿಷ್ಯ ಗೊತ್ತಾಗಿ ತೀರ್ಥಂಕರ್ ಮನೆಯಲ್ಲಿ ಬಂದು ಜಗಳ ಮಾಡಿದ್ದಾನೆ. ನಾನು ಎಷ್ಟು ಬಾರಿ ಹೇಳಿದ್ದೇನೆ ಸುಮನಾ ತಂಟೆಗೆ ಹೋಗಬೇಡಿ ಎಂದು. ಮತ್ತೆ ಅವಳ ಬಳಿ ಜಗಳ ಮಾಡಿ ಆಕೆಯನ್ನು ಮನೆಯಿಂದ ಆಚೆ ಕಳಿಸಿದ್ದಾರೆ.
ಯಾಕೆ ಈ ರೀತಿ ಮಾಡಿದ್ರಿ ಎಂದು ಅತ್ತಿಗೆ ಸಾಧನಾ ಅವರಿಗೆ ಕೇಳಿದ್ದಾರೆ. ನೀನು ಸರಿಯಾಗಿ ಮಾತನಾಡು ಎಂದು ಸಾಧನಾ ಹೇಳಿದ್ದಾರೆ. ಅದನ್ನೇ ನಾನು ನಿಮಗೂ ಅದನ್ನೇ ಹೇಳಿದ್ದು ಸರಿಯಾಗಿ ಮಾತನಾಡು ಅಂತ ಎಂದು ತೀರ್ಥ ಹೇಳಿದ್ದಾನೆ.
ತೀರ್ಥ ಮತ್ತು ಅಣ್ಣನ ನಡುವೆ ಜಗಳ
ಸಾಧನಾಗೆ ತೀರ್ಥ ಜೋರು ಮಾಡಿದ್ದಕ್ಕೆ ಅಣ್ಣ ಕೋಪ ಮಾಡಿಕೊಂಡಿದ್ದಾನೆ. ನನ್ನ ಹೆಂಡ್ತಿಗೆ ಯಾಕೆ ಈ ರೀತಿ ಮಾತನಾಡುತ್ತೀಯಾ ಎಂದು ಕೇಳ್ತಾನೆ. ನೀವು ನನ್ನ ಹೆಂಡ್ತಿಯನ್ನು ಯಾಕೆ ಮನೆಯಿಂದ ಆಚೆ ಕಳಿಸಿದ್ದೀರಿ ಎನ್ನುತ್ತಾನೆ. ಎಲೆಕ್ಷನ್ ಮುಗಿಯುವವರೆಗೂ ನೀವೆಲ್ಲಾ ಇದನ್ನು ಸಹಿಸಿಕೊಳ್ಳಬೇಕು ಎಂದು ಹೇಳಿದ್ದಾನೆ.
ಮನೆ ಬಿಟ್ಟು ಹೊರಟ ಅಣ್ಣ
ಆ ಹೂವು ಮಾರುವ ಹುಡುಗಿಗಾಗಿ ನನ್ನ ಮೇಲೆ ತೀರ್ಥ ರೇಗುತ್ತಾನೆ. ಅಣ್ಣ ಅನ್ನೋ ಮರ್ಯಾದೆ ಇಲ್ಲ. ಅವನು ಆಡಿದ್ದೇ ಆಟನಾ? ಅವನು ಇರಲಿ, ಆ ಹೂವು ಮಾರುವ ಹುಡುಗಿ ಜೊತೆ ಇಲ್ಲೇ ಇದ್ದುಕೊಳ್ಳಲಿ, ನಾನು ಈ ಮನೆಯಲ್ಲಿ ಇರಲ್ಲ ಎಂದು ಬಟ್ಟೆ ಪ್ಯಾಕ್ ಮಾಡಿಕೊಂಡು ಮನೆ ಬಿಟ್ಟು ಹೋಗಲು ರೆಡಿಯಾಗಿದ್ದಾನೆ.
ಮಾವ ಕರೆಯೋ ವರೆಗೂ ಮನೆಗೆ ಬರಲ್ಲ
ಸುಮನಾಳನ್ನು ಅತ್ತೆ ಕರೆದರು ಬಂದಿಲ್ಲ. ತೀರ್ಥ ಮನೆಗೆ ಹೋಗಿ ಕರೆದಿದ್ದಾನೆ ಆದ್ರೂ ಹೋಗಿಲ್ಲ. ಮಾವ ಬಂದು ನನ್ನ ಕರೆಯುವ ತನಕ ನಾನು ಬರಲ್ಲ ಎಂದು ಸುಮನಾ ಹೇಳಿದ್ದಾಳೆ. ಅದಕ್ಕೆ ತೀರ್ಥಂಕರ್ ಗೆ ಚಿಂತೆ ಆಗಿದೆ. ಅವಳು ಇಲ್ಲ ಅಂದ್ರೆ ಅವನಿಗೆ ಕಾಲೊನಿ ವೋಟು ಬರಲ್ಲ ಎಂಬ ಭಯ.
ಇದನ್ನೂ ಓದಿ: Ramachari: ಚಾರುಗಾಗಿ ಮನೆಯವರಿಗೆ ವಿಲನ್ ಆದ ರಾಮಾಚಾರಿ, ಕಣ್ಣು ಕಾಣದವಳಿಗೆ ಉಪಚಾರ!
ತೀರ್ಥ ಅಣ್ಣ ಮನೆ ಬಿಟ್ಟು ಹೋಗ್ತಾನಾ? ಸುಮನಾ ಮನೆಗೆ ಬರ್ತಾಳಾ? ಮುಂದೇನಾಗುತ್ತೆ ಅಂತ ನೋಡೋಕೆ ಕೆಂಡಸಂಪಿಗೆ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ