ಕೆಂಡಸಂಪಿಗೆ (Kendasampige) ಧಾರಾವಾಹಿ (Serial) ಕಲರ್ಸ್ ಕನ್ನಡದಲ್ಲಿ (Colors Kannada) ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6.30ಕ್ಕೆ ಪ್ರಸಾರವಾಗುತ್ತಿದೆ. ಶುರುವಾದಾಗಿನಿಂದ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗುತ್ತಿದೆ. ಕೆಂಡಸಂಪಿಗೆ ಧಾರಾವಾಹಿಯನ್ನು ಈಗಾಗಲೇ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಬೇರೆಯವರ ಜೊತೆ ಮದುವೆ ಆಗ ಬೇಕಿದ್ದ ಸುಮನಾ ಕಾರ್ಪೊರೇಟರ್ ತೀರ್ಥಂಕರ್ ಜೊತೆ ಮದುವೆ (Marriage) ಆಗಿದ್ದಾರೆ. ಹೇಳದೇ, ಕೇಳದೇ ಸುಮಿಗೆ ತಾಳಿ ಕಟ್ಟಿದ್ದರಿಂದ ತೀರ್ಥಂಕರ್ ಮನೆಯಲ್ಲಿ ಜಗಳವಾಗುತ್ತಲೇ ಇದೆ. ಅತ್ತೆ ಪದ್ಮಾ ಮಾತ್ರ ಸುಮನಾಳನ್ನು ಸೊಸೆ ಎಂದು ಒಪ್ಪಿಕೊಂಡಿದ್ದಾಳೆ. ಮಾವ ಸುಮನಾಳನ್ನು ಮನೆಯಿಂದ ಆಚೆ ಕಳಿಸಿದ್ದಾರೆ. ಈಗ ತೀರ್ಥ ಸಹ ಅಪ್ಪನ (Father) ಮೇಲೆ ಕೋಪಮಾಡಿಕೊಂಡು ಮನೆ ಬಿಟ್ಟು ಹೋಗಿದ್ದಾರೆ.
ಸುಮನಾಳನ್ನು ಆಚೆ ಕಳಿಸಿರುವ ಮಾವ
ಕಾಶಿ ತೊಂದ್ರೆ ಕೊಟ್ಟಿದ್ದು ಸುಮನಾಳಿಂದ ಎಂದು ಮಾವ ಅಂದುಕೊಂಡು, ನನ್ನ ಮಗನ ನಿನ್ನಿಂದ ಸತ್ತು ಬಿಡುತ್ತಿದ್ದ. ನೀನು ಇಲ್ಲಿ ಇರಬೇಡ. ನೀನು ಈ ಮನೆಯುಲ್ಲಿ ಇದ್ರೆ ಕಾಶಿ ಮತ್ತೆ ನನ್ನ ಮಗನನ್ನು ಕೊಲ್ಲಲು ಬರಬಹುದು. ನೀನು ದೂರ ಹೋದೆ ಎಂದು ಗೊತ್ತಾದ್ರೆ, ಅವನು ಈ ಕಡೆ ತಲೆ ಹಾಕಲ್ಲ. ರಾಜಕೀಯ ದ್ವೇಷ ಆಗಿದ್ರೆ, ಅದನ್ನು ಬಿಟ್ಟು ಕಾರ್ಖಾನೆ ನೋಡಿಕೋ ಅಂತಿದ್ದೆ. ಇದು ವೈಯಕ್ತಿಕ ದ್ವೇಷ, ಅದಕ್ಕೆ ನೀನು ಮನೆಯಿಂದ ಆಚೆ ಹೋಗು ಎಂದು ಕಳಿಸಿದ್ದಾನೆ.
ಮಾವ ಕರೆಯೋವರೆಗೂ ಬರಲ್ಲ ಎಂದ ಸುಮನಾ
ಸುಮಳಾನ್ನು ಅತ್ತೆ ಪದ್ಮಾ ಎಷ್ಟು ಕರೆದ್ರೂ ಬಂದಿಲ್ಲ. ಮಾವ ಕರೆದ್ರೆ ಮಾತ್ರ ಬರುತ್ತೇನೆ ಎಂದು ಹೇಳಿದ್ದಾಳೆ. ಇನ್ನು ತೀರ್ಥಂಕರ್ ಸಹ ಹೋಗಿ ಕರೆದ್ರೂ ಸುಮನಾ ಬಂದಿಲ್ಲ. ಮಾವ ಕರೆದ್ರೆ ಮಾತ್ರ ಬರೋದು ಎಂದು ಪಟ್ಟು ಹಿಡಿದಿದ್ದಾಳೆ. ಆದ್ರೆ ಅವರ ಮಾವ ಆಕೆಯನ್ನು ಕರೆಯಲು ಒಪ್ಪುತ್ತಿಲ್ಲ.
ಇದನ್ನೂ ಓದಿ: Ramachari: ಚಾರುಳನ್ನು ಸುಮ್ನೆ ಬಿಡ್ತಾನಾ ಕೋದಂಡ, ಇವತ್ತೇ ಕೊನೆ ದಿನನಾ?
ಬೇರೆ ಮನೆ ಮಾಡ್ತೀನಿ ಎಂದ ತೀರ್ಥಂಕರ್
ತೀರ್ಥಂಕರ್ ಅಪ್ಪನ ಬಳಿ ಹೋಗಿ, ಅಪ್ಪ ಸುಮನಾಳನ್ನು ಮನೆಗೆ ಕರೆಯಬೇಕು ನೀವು ಎನ್ನುತ್ತಾನೆ. ಆಕೆ ಬಂದ್ರೆ, ನಿನ್ನ ಕಾಶಿ ಕೊಲ್ಲಲು ಬರುತ್ತಾನೆ. ನಾನು ಕರೆಯಲ್ಲ ಎನ್ನುತ್ತಾನೆ. ಸುಮನಾ ಅವರು ಇಲ್ಲದ ಮನೆಯಲ್ಲಿ ನಾನು ಇರಲ್ಲ. ನಾನು ಬೇರೆ ಮನೆ ಮಾಡಿ ಅವರನ್ನು ಕರೆದುಕೊಂಡು ಬರುತ್ತೇನೆ ಎಂದು ತೀರ್ಥ ಹೇಳಿದ್ದಾನೆ.
ಮನೆ ಬಿಟ್ಟು ಹೋದ ತೀರ್ಥ
ಸುಮನಾಗೆ ಈ ವಿಷ್ಯ ಗೊತ್ತಾಗಿ, ಬೇರೆ ಮನೆ ಮಾಡುವ ಮಾತನ್ನು ಯಾಕೆ ಮಾತನಾಡಿದ್ರಿ. ಇದರಿಂದ ಮಾವನಿಗೆ ಬೇಸರ ಆಗುತ್ತೆ. ನಾನು ಆ ಮನೆಯಲ್ಲಿ ಇರಲು ಬಂದಿದ್ದು, ಬೇರೆ ಮಾಡಲು ಅಲ್ಲ ಎನ್ನುತ್ತಾಳೆ. ಸುಮನಾ ಮಾವನ ಬಳಿ ಕ್ಷಮೆ ಕೇಳು ಎಂದಿರುತ್ತಾಳೆ. ಅದರಂತೆ ತೀರ್ಥ, ಅಪ್ಪನ ಕಾಲಿಗೆ ಬಿದ್ದು ಕ್ಷಮೆ ಕೇಳ್ತಾನೆ. ಆದ್ರೆ ಅಪ್ಪ ನಾಟಕ ಮಾಡ್ತೀಯಾ ಎನ್ನುತ್ತಾರೆ. ಅದಕ್ಕೆ ಬೇಸರಗೊಂಡು ತೀರ್ಥ ಮನೆ ಬಿಟ್ಟು ಹೋಗಿದ್ದಾರೆ.
ಸುಮನಾಗೆ ಟೆನ್ಶನ್
ತೀರ್ಥಂಕರ್ ಮನೆ ಬಿಟ್ಟು ಹೋಗಿದ್ದನ್ನು ಚಿಟ್ಟೆ, ಸುಮನಾ ಬಳಿ ಹೇಳಿದ್ದಾನೆ. ಅದನ್ನು ಕೇಳಿ ಸುಮನಾಗೆ ಟೆನ್ಶನ್ ಹೆಚ್ಚಾಗಿದೆ. ಎಷ್ಟೇ ಕಾಲ್ ಮಾಡಿದ್ರೂ ರಿಸೀವ್ ಮಾಡ್ತಾ ಇಲ್ಲ. ಅಲ್ಲದೇ ಅವರು ಹೋಗುವ ಜಾಗಗಳನ್ನು ಹುಡುಕಿದ್ದಾರೆ. ಅಲ್ಲೂ ಇಲ್ಲ. ಹಾಗಾದ್ರೆ ತೀರ್ಥಂಕರ್ ಎಲ್ಲಿ ಹೋದ್ರೂ ಅನ್ನೋ ಪ್ರಶ್ನೆಗಳು ಮೂಡಿವೆ.
ಇದನ್ನೂ ಓದಿ: Olavina Nildana: ತಾರಿಣಿಗೆ ಕ್ಲಾಸ್ ತೆಗೆದುಕೊಂಡ ಸಿದ್ಧಾಂತ್ ಅಮ್ಮ! ಆಗಿದ್ದೇನು?
ಸುಮನಾ ತನ್ನ ಗಂಡ ತೀರ್ಥಂಕರ್ ನನ್ನು ಹುಡುಕುತ್ತಾಳಾ? ಅವರ ಕುಟುಂಬದ ಸಮಸ್ಯೆ ಬಗೆಹರಿಯುತ್ತಾ? ಮುಂದೇನಾಗುತ್ತೆ ಅಂತ ನೋಡೋಕೆ ಕೆಂಡಸಂಪಿಗೆ ಧಾರಾವಾಹಿ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ