ಕೆಂಡಸಂಪಿಗೆ (Kendasampige) ಧಾರಾವಾಹಿ (Serial) ಕಲರ್ಸ್ ಕನ್ನಡದಲ್ಲಿ (Colors Kannada) ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6.30ಕ್ಕೆ ಪ್ರಸಾರವಾಗುತ್ತಿದೆ. ಶುರುವಾದಾಗಿನಿಂದ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗುತ್ತಿದೆ. ಧಾರಾವಾಹಿಯನ್ನು ಈಗಾಗಲೇ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಬೇರೆಯವರ ಜೊತೆ ಮದುವೆ ಆಗ ಬೇಕಿದ್ದ ಸುಮನಾ ಕಾರ್ಪೊರೇಟರ್ ತೀರ್ಥಂಕರ್ ಜೊತೆ ಮದುವೆ (Marriage) ಆಗಿದ್ದಾರೆ. ಹೇಳದೇ, ಕೇಳದೇ ಸುಮಿಗೆ ತಾಳಿ ಕಟ್ಟಿದ್ದರಿಂದ ತೀರ್ಥಂಕರ್ ಮನೆಯಲ್ಲಿ ಜಗಳವಾಗುತ್ತಲೇ ಇದೆ. ಅತ್ತೆ ಪದ್ಮಾ ಮಾತ್ರ ಸುಮನಾಳನ್ನು ಸೊಸೆ ಎಂದು ಒಪ್ಪಿಕೊಂಡಿದ್ದಾಳೆ. ಇದರ ಮಧ್ಯೆ ನಿತ್ಯಾ, ತೀರ್ಥನನ್ನು ತನ್ನೆಡೆ ಒಲಿಸಿಕೊಳ್ಳುವ ಪ್ರಯತ್ನದಲ್ಲಿದ್ದಾಳೆ. ಅದಕ್ಕೆ ತೀಥರ್ಂಕರ್ ಪಕ್ಷ ಸೇರಿಕೊಂಡಿದ್ದಾಳೆ. ಇಬ್ಬರು ಒಟ್ಟಿಗೆ ಪ್ರಚಾರ ಮಾಡುತ್ತಿರುವುದು ಅಪಪ್ರಚಾರವಾಗಿದೆ.
ಪಕ್ಷ ಸೇರಿರುವ ನಿತ್ಯಾ
ನಿತ್ಯಾ, ಕಾರ್ಪೊರೇಟರ್ ತೀರ್ಥಂಕರ್ ಮದುವೆ ಆಗಬೇಕಿದ್ದ ಹುಡುಗಿ. ಇಬ್ಬರಿಗೂ ಮದುವೆ ನಿಶ್ಚಯವಾಗಿತ್ತು. ಆದ್ರೆ ಸುಮನಾ ಜೊತೆ ತೀರ್ಥಂಕರ್ ಮದುವೆ ನಡೆದು ಬಿಡುತ್ತೆ. ಆದ್ರೆ ಇನ್ನೂ ತೀರ್ಥನ ಮೇಲೆ ಆಸೆ ಇಟ್ಟುಕೊಂಡಿರುವ ನಿತ್ಯ ಅವರ ಪಕ್ಷ ಸೇರಿದ್ದಾಳೆ. ಅವರ ಜೊತೆಯ ಇರಬಹುದು ಎಂದುಕೊಂಡಿದ್ದಾಳೆ.
ಚುನಾವಣಾ ಪ್ರಚಾರಕ್ಕೆ ಮಾಜಿ ಪ್ರೇಯಸಿ
ನಿತ್ಯಾ ಪಕ್ಷ ಸೇರಿರುವುದರಿಂದ ಅಪಪ್ರಚಾರವಾಗ್ತಿದೆ. ಸದಾ ಸುದ್ದಿಯಲ್ಲಿರುತ್ತಿದ್ದ ಕಾರ್ಪೊರೇಟರ್ ತೀರ್ಥಂಕರ್ ಅವರಿಗೆ ಮತ್ತೆ ಪ್ರೀತಿಯಾಗಿದ್ಯಾ ಎಂದು ಪೇಪರ್ ನಲ್ಲಿ ಹಾಕಿದ್ದಾರೆ. ನಿತ್ಯಾ ಪಕ್ಷ ಸೇರಿದಾಗ ತಿರ್ಥನನ್ನು ಹಗ್ ಮಾಡಿದ ಫೋಟೋ ಎಲ್ಲೆಡೆ ವೈರಲ್ ಆಗ್ತಾ ಇದೆ. ಇದನ್ನು ನೋಡಿ ಮನೆಯಲ್ಲಿ ಅಮ್ಮ ಪದ್ಮಾ ಗಾಬರಿ ಆಗಿದ್ದಾರೆ.
ಪ್ರಚಾರವೋ, ಪ್ರೇಮಸಲ್ಲಪವೋ?
ತೀರ್ಥಂಕರ್ ಪಕ್ಷದ ಪ್ರಚಾರದ ಹೆಸರಲ್ಲಿ ಪ್ರೇಮ ಸಲ್ಲಾಪ ಮಾಡ್ತಾ ಇದ್ದಾರೆ ಎಂದು ಹಾಕಿದ್ದಾರೆ. ಇದನ್ನು ನೋಡಿದ ತೀರ್ಥ ಅಪ್ಪ, ನನ್ನ ಮನಗ ಈಗ ಸರಿಯಾದ ದಾರಿಗೆ ಬರ್ತಾ ಇದ್ದಾನೆ. ಇದೇ ಅವನಿಗೆ ಸರಿ. ನಿತ್ಯಾ ನಮ್ಮ ಮನೆ ಸೊಸೆ ಆಗಬೇಕಿತ್ತು. ಈ ಸುಮನಾ ಅಲ್ಲ ಎಂದು ಹೇಳ್ತಾನೆ. ಪದ್ಮಾ ಬಿಟ್ಟು ಮನೆಯವರೆಲ್ಲಾ ಖುಷಿಯಾಗಿದ್ದಾರೆ.
ತೀರ್ಥಂಕರ್ ಗೆ ಶಾಕ್
ತೀರ್ಥ ಪೇಪಸ್ ಓದಿರುವುದಿಲ್ಲ. ತಾಯಿ ಪದ್ಮಾ ಕಾಲ್ ಮಾಡಿ ಇವತ್ತಿನಿ ಪೇಪರ್ ನೋಡಿದ್ಯಾ? ನಿನ್ನ, ನಿತ್ಯಾ ಬಗ್ಗೆ ಕಟ್ಟದಾಗಿ ಬರೆದಿದ್ದಾರೆ. ಇದರಿಂದ ನಿನ್ನ ಮರ್ಯಾದೆ ಹೋಗಿಲ್ವಾ? ನಿನ್ನ ಇಮೇಜ್ ಡ್ಯಾಮೇಜ್ ಆಗಲ್ವಾ ಎನ್ನುತ್ತಾಳೆ. ಆಗ ತೀರ್ಥ ಪೇಪರ್ ನೋಡಿ ಶಾಕ್ ಆಗಿದ್ದಾನೆ. ಚುನವಾಣೆ ಟೈಂನಲ್ಲಿ ಇದೇನಾಯ್ತು ಎಂದು ಗಾಬರಿ ಪಟ್ಟುಕೊಂಡಿದ್ದಾನೆ. ಕುಸಿದಿದ್ದಾನೆ.
ಎಲ್ಲಾ ಸಾಧನಾ ಕುತಂತ್ರ
ಈ ಸುದ್ದಿ ಪೇಪರ್ ನಲ್ಲಿ ಬರುವಂತೆ ಮಾಡಿದ್ದೆ ತೀರ್ಥನ ಅತ್ತಿಗೆ ಸಾಧನಾ. ಸಾಧನಾ ಪೇಪರ್ ಅವರಿಗೆ ಸುದ್ದಿ ಮತ್ತು ದುಡ್ಡು ಕೊಟ್ಟು ಇದನ್ನು ಹಾಕಿಸಿದ್ದಾಳೆ. ತೀರ್ಥನ ಜೀವನನಿಂದ ಸುಮನಾ ಹೋಗಬೇಕು ಎನ್ನುವುದೇ ಇವಳ ಉದ್ದೇಶ. ಅದಕ್ಕೆ ಈ ರೀತಿ ಮಾಡಿದ್ದಾಳೆ. ಅವಳ ಪ್ಲ್ಯಾನ್ ಸಕ್ಸಸ್ ಆಗಿದೆ.
ಸುಮನಾ ಹೂವು ಮಾರುವ ಹುಡುಗಿ. ಈ ಮನೆಗೆ ತಕ್ಕವಳಲ್ಲ ಎನ್ನುವುದು ಸಾಧನಾ ವಾದ. ಅವಳನ್ನು ಕಂಡ್ರೆ ಸದಾ ಜಗಳ ಮಾಡುತ್ತಲೇ ಇರುತ್ತಳೆ. ಅವಳು ಮಾಡಿದ ಯಾವುದೇ ಅಡುಗೆಯನ್ನು ತಿನ್ನಲ್ಲ. ಅವಳು ನನ್ನ ಕಣ್ಣು ಮುಂದೆ ಬರಬಾರದು ಎಂದು ತೀರ್ಥನಿಗೂ ಹೇಳಿದ್ಲು. ಈಗ ಅತ್ತೆ ಪದ್ಮಾ ಸುಮನಾಳನ್ನು ಒಪ್ಪಿಕೊಂಡಿದ್ದಾರೆ. ಅದಕ್ಕೆ ಸಾಧನಾಗೆ ಕೋಪ.
ಇದನ್ನೂ ಓದಿ: Kantara: ಹೋಟೆಲ್, ಹೋಮ್ ಸ್ಟೇ, ಡಾಬಾಗಳಿಗೆ 'ಕಾಂತಾರ' ಹೆಸರು, ಉದ್ಯಮಿಗಳಿಗೆ ಖುಷಿ!
ತೀರ್ಥ ಈಗ ಏನ್ ಮಾಡ್ತಾನೆ? ಸುಮನಾ ಇದಕ್ಕೆ ಏನ್ ಹೇಳ್ತಾಳೆ? ಮುಂದೇನಾಗುತ್ತೆ ಅಂತ ನೋಡೋಕೆ ಕೆಂಡಸಂಪಿಗೆ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ