ಕೆಂಡಸಂಪಿಗೆ (Kendasampige) ಧಾರಾವಾಹಿ (Serial) ಕಲರ್ಸ್ ಕನ್ನಡದಲ್ಲಿ (Colors Kannada) ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6.30ಕ್ಕೆ ಪ್ರಸಾರವಾಗುತ್ತಿದೆ. ಶುರುವಾದಾಗಿನಿಂದ ಜನರನ್ನು ಹಿಡಿದಿಡುವಲ್ಲಿ ಯಶಸ್ವಿ ಆಗುತ್ತಿದೆ. ಧಾರಾವಾಹಿಯನ್ನು ಈಗಾಗಲೇ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಬೇರೆಯವರ ಜೊತೆ ಮದುವೆ (Marriage) ಆಗ ಬೇಕಿದ್ದ ಸುಮನಾ ಕಾರ್ಪೊರೇಟರ್ ತೀರ್ಥಂಕರ್ ಜೊತೆ ಮದುವೆ ಆಗಿದ್ದಾರೆ. ತೀರ್ಥಂಕರ್ ಎಲ್ಲರ ಮುಂದೆ ನಾನು ಒಂದು ಸತ್ಯ ಹೇಳಬೇಕಿದೆ ಎಂದು, ಸುಮನಾ ಕಡೆ ತಿರುಗಿ, ನಾನು ನಿನ್ನ ಮದುವೆಯಾಗಿದ್ದೇ ಎಲೆಕ್ಷನ್‍ಗಾಗಿ ಎಂದು ಹೇಳ್ತಾನೆ. ಆಗ ಸುಮನಾ ಗರ್ಭಿಣಿ
ತಾಯ್ತನ ಖುಷಿ ನೀಡುತ್ತೆ
ಒಂದು ಹೆಣ್ಣು ಪರಿಪೂರ್ಣ ಆಗೋದೇ ತಾಯಿಯಾದಾಗ, ಅವಳ ಒಡಲಲ್ಲಿ ಒಂದು ಜೀವಕ್ಕೆ ಜನ್ಮ ಕೊಡ್ತಾಳೆ ಅನ್ನುವುದೇ ಒಂದು ಖುಷಿಯ ವಿಚಾರ. ಹೆಣ್ಣಿಗೆ ತನ್ನೊಳಗೆ ಒಂದು ಜೀವ ಬೆಳೆಯುತ್ತೆ ಎನ್ನುವುದು ದೊಡ್ಡ ಸಂತೋಷದ ಸಂಗತಿ. ಆ ಮಗುಗಾಗಿ ತಾಯಿ ಹೊಟ್ಟೆಯಲ್ಲಿದ್ದಾಗಲೇ ತನ್ನ ಯೋಚನೆ, ಖುಷಿ, ಸಂತೋಷ ಎಲ್ಲವನ್ನೂ ಧಾರೆ ಎರೆಯತ್ತಾಳೆ ಎಂದು ಸುಮನಾ ಸುಭಾಷ್ ಬಳಿ ಹೇಳಿದ್ದಾಳೆ.
ಮಗು ಬಗ್ಗೆ ಸುಮನಾ ಮಾತು
ಸಾಹೇಬ್ರು ನೋಡಿದ್ರೆ ಅಷ್ಟೊಂದು ಓದಿಕೊಂಡು ಇದಾರೆ. ಜಾಣರು. ತಿಳುವಳಿಕೆ ಇರೋರು. ನಾನು ನೋಡಿದ್ರೆ ದಡ್ಡಿ. ಅಷ್ಟು ತಿಳುವಳಿಕೆ ಇಲ್ಲ. ಗೋಧಿ ಬಣ್ಣ. ಮಗು ಏನಾದ್ರೂ ನನ್ನ ರೀತಿ ಹುಟ್ಟಿ ಬಿಟ್ರೆ ಏನ್ ಗತಿ ಮಾವ? ಅಪ್ಪ-ಅಮ್ಮ ಅವರ ರೀತಿನೇ ಅಲ್ವಾ ಮಕ್ಕಳು ಹುಟ್ಟುವುದು. ಮಕ್ಕಳಿಗೆ ಯಾರ ಹೋಲಿಕೆ ಜಾಸ್ತಿ ಇರುತ್ತೆ ಎಂದು ಸುಮನಾ ತನ್ನ ಮಾವನ ಬಳಿ ಕೇಳಿದ್ದಾಳೆ.
ಮಕ್ಕಳು ಹೇಗಿರಬೇಕು?
ಜಾಣ್ರು ಮಕ್ಕಳು ಜಾಣ್ರಾಗಿ ಹುಟ್ತಾರೆ? ದಡ್ಡರ ಮಕ್ಕಳು ದಡ್ಡರಾಗಿ ಹುಟ್ತಾರೆ ಅನ್ನೋ ಮಾತು ಶುದ್ಧ ಸುಳ್ಳು ಕಣಮ್ಮಾ. ಏನೂ ಗೊತ್ತಿಲ್ಲದ ಮಕ್ಕಳು ವಿದ್ವಾಂಸರು ಆಗಿದ್ದಾರೆ. ತಿಳಿದಂತವರು ಒಂದು ಮಾತು ಹೇಳ್ತಾರೆ. ಹೆಣ್ಣು ಮಗು ಅಪ್ಪನ ರೀತಿ ಇರಬೇಕೆಂತೆ. ಗಂಡು ಮಗು ಅಮ್ಮನ ರೀತಿ ಇರಬೇಕಂತೆ. ಆ ರೀತಿ ಆದ್ರೆ ತುಂಬಾ ಅದೃಷ್ಟವಂತರಂತೆ ಎಂದು ಮಾವ ಕೇಶವ್ ಪ್ರಸಾದ್ ಹೇಳ್ತಾನೆ.
ಬಣ್ಣದ ಬಗ್ಗೆ ಕೇಶವ್ ಪ್ರಸಾದ್ ಹೇಳಿದ್ದೇನು?
ನಾನು ನೋಡಿದ್ರೆ ಗೋಧಿ ಬಣ್ಣ, ಸಾಹೇಬ್ರು ನೋಡಿದ್ರೆ ಕೆಂಪುಗೆ ಚೆನ್ನಾಗಿ ಇದಾರೆ. ಮಗು ನನ್ನ ರೀತಿ ಹುಟ್ಟಿ ಬಿಟ್ರೆ ಏನ್ ಮಾಡೋದು ಮಾವ ಎಂದು ಸುಮನಾ ಕೇಳಿದ್ದಾಳೆ. ಮಗು ಕಪ್ಪು ಬಣ್ಣದ್ದು ಹುಟ್ಟಿ ಬಿಟ್ರೆ ಏನ್ ಆಚೆ ಹಾಕಿ ಬಿಡ್ತೀವಾ? ಬಣ್ಣದಲ್ಲಿ ಏನಿದೆ ಅಮ್ಮಾ? ನೋಡು ಒಬ್ಬ ಕವಿ ಸುಂದರವಾದ ಕವಿತೆ ಬರೆಯುತ್ತಾನೆ. ತುಂಬಾ ಹಳೇ ಕವಿತೆ ಅದು ಎಂದು ಮಾವ ಕೇಶವ್ ಪ್ರಸಾದ್ ಹೇಳ್ತಾನೆ.
ಮಗು ಚೆನ್ನಾಗಿರಬೇಕು ಅಷ್ಟೇ
ಬಣ್ಣದಲ್ಲಿ ಏನಿದೆಯೋ ಬೆಡಗು? ಹೆಣ್ಣಿಗೆ ಗುಣವೇ ಚಿನ್ನದ ಮೆರುಗು ಅಂತ. ಕಪ್ಪು ಮಕ್ಕಳು ಹುಟ್ಟಿ ಬಿಡ್ತು ಅಂತ ತಗೊಂಡು ಹೋಗಿ ಬೀದಿಗೆ ಹಾಕಿ ಬಿಡ್ತೀವಾ? ಕಪ್ಪಾಗಲಿ, ಕೆಂಪಾಗಲಿ ಸಾಕ್ತೀವಿ.
ಇದನ್ನೂ ಓದಿ: Colors Kannada: ಕಲರ್ಸ್ ಕನ್ನಡದಲ್ಲಿ ಮಧ್ಯಾಹ್ನದ ಮನರಂಜನೆ, 3 ಹೊಸ ಕಾರ್ಯಕ್ರಮಗಳು!
ಯಾರಾದ್ರೂ ಒಂದು ಸುಂದರವಾದ ಹೆಣ್ಣು ಮಗು ನೋಡಿದ ತಕ್ಷಣ ಏನ್ ಅಂತೀವಿ ಹೇಳು. ಮಹಾಲಕ್ಷ್ಮಿ ಇದ್ದ ಹಾಗೇ ಇದಾಳೆ ಅಂತಿವಿ. ಮಹಾಲಕ್ಷ್ಮಿಯೂ ಕಪ್ಪೇ. ಅಷ್ಟೇ ಏಕೆ ಶ್ರೀರಾಮಚಂದ್ರನನ್ನು ನೀಲ ಮೇಘ ಶ್ಯಾಮ ಅಂತಾರೆ. ಕಪ್ಪು ಕಸ್ತೂರಿ ಕಣೋ ಮಗನೇ ಎಂದು ಮಾವ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ