• Home
  • »
  • News
  • »
  • entertainment
  • »
  • Kendasampige: ಸಂಪಿಗೆಯಂತ ಸುಮನಾ, ಸಾಧನಾ ಮುಂದೆ ಕೆಂಡವಾಗಿದ್ದೇಕೆ?

Kendasampige: ಸಂಪಿಗೆಯಂತ ಸುಮನಾ, ಸಾಧನಾ ಮುಂದೆ ಕೆಂಡವಾಗಿದ್ದೇಕೆ?

ಸಾಧನಾಗೆ ಖಡಕ್ ವಾರ್ನಿಂಗ್ ಕೊಟ್ಟ ಸುಮನಾ

ಸಾಧನಾಗೆ ಖಡಕ್ ವಾರ್ನಿಂಗ್ ಕೊಟ್ಟ ಸುಮನಾ

ಸುಮನಾ ಕೆಂಡವಾಗಿದ್ದಾಳೆ! "ನೀವು ನನಗೆ ಏನೇ ಕೆಲಸ ಹೇಳಿ ಮಾಡ್ತೀನಿ. ಏನೇ ಅನ್ನಿ ಅನ್ನಿಸಿಕೊಳ್ತೇನೆ. ಆದ್ರೆ ನನ್ನ ತಂಗಿ, ಅಪ್ಪನ ಸುದ್ದಿಗೆ ಬಂದ್ರೆ ಸುಮ್ಮನೇ ಇರಲ್ಲ" ಎಂದು ವಾರ್ನ್ ಮಾಡುತ್ತಾಳೆ.

  • News18 Kannada
  • Last Updated :
  • Karnataka, India
  • Share this:

    ಕೆಂಡಸಂಪಿಗೆ (Kendasampige) ಧಾರಾವಾಹಿ (Serial) ಕಲರ್ಸ್ ಕನ್ನಡದಲ್ಲಿ (Colors Kannada) ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6.30ಕ್ಕೆ ಪ್ರಸಾರವಾಗುತ್ತಿದೆ. ಶುರುವಾದಾಗಿನಿಂದ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗುತ್ತಿದೆ. ಕೆಂಡಸಂಪಿಗೆ ಧಾರಾವಾಹಿಯನ್ನು ಈಗಾಗಲೇ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಬೇರೆಯವರ ಜೊತೆ ಮದುವೆ ಆಗ ಬೇಕಿದ್ದ ಸುಮನಾ ಕಾರ್ಪೊರೇಟರ್  ತೀರ್ಥಂಕರ್  ಜೊತೆ ಮದುವೆ ಆಗಿದ್ದಾರೆ. ಹೇಳದೇ, ಕೇಳದೇ ಸುಮಿಗೆ ತಾಳಿ ಕಟ್ಟಿದ್ದರಿಂದ ತೀರ್ಥಂಕರ್ ಮನೆಯಲ್ಲಿ ಜಗಳವಾಗುತ್ತಲೇ ಇದೆ. ಅತ್ತೆ ಪದ್ಮಾ ಮಾತ್ರ ಸುಮನಾಳನ್ನು ಸೊಸೆ ಎಂದು ಒಪ್ಪಿಕೊಂಡಿದ್ದಾಳೆ. ತೀರ್ಥ ಅತ್ತಿಗೆ ಸಾಧನಾ ಹೇಗಾದ್ರೂ ಮಾಡಿ ಸುಮಿಯನ್ನು ಮನೆಯಿಂದ ಆಚೆ ಓಡಿಸಬೇಕು ಎಂದು ಏನೇನೋ ಪ್ಲ್ಯಾನ್ (Plan) ಮಾಡುತ್ತಿದ್ದಾಳೆ. ಆದ್ರೆ ಸುಮನಾ, ನನ್ನ ಮನೆಯವರ ಸುದ್ದಿಗೆ ಬರಬೇಡಿ ಎಂದು ಸಾಧನಾಗೆ ವಾರ್ನಿಂಗ್ (Warning) ಕೊಟ್ಟಿದ್ದಾರೆ.


    ಸುಮನಾ ಕಂಡ್ರೆ ಸಾಧನಾಗೆ ಕೋಪ
    ಸುಮನಾ ಹೂವು ಮಾರುವ ಹುಡುಗಿ. ಈ ಮನೆಗೆ ತಕ್ಕವಳಲ್ಲ ಎನ್ನುವುದು ಸಾಧನಾ ವಾದ. ಅವಳನ್ನು ಕಂಡ್ರೆ ಸದಾ ಜಗಳ ಮಾಡುತ್ತಲೇ ಇರುತ್ತಳೆ. ಅವಳು ಮಾಡಿದ ಯಾವುದೇ ಅಡುಗೆಯನ್ನು ತಿನ್ನಲ್ಲ. ಅವಳು ನನ್ನ ಕಣ್ಣು ಮುಂದೆ ಬರಬಾರದು ಎಂದು ತೀರ್ಥನಿಗೂ ಹೇಳಿದ್ಲು. ಈಗ ಅತ್ತೆ ಪದ್ಮಾ ಸುಮನಾಳನ್ನು ಒಪ್ಪಿಕೊಂಡಿದ್ದಾರೆ. ಅದಕ್ಕೆ ಸಾಧನಾಗೆ ಕೋಪ.


    ಫಸ್ಟ್ ಕ್ಲಾಸ್‍ನಲ್ಲಿ ಪಾಸ್ ಆದ ಸುಮನಾ ತಂಗಿ
    ಸುಮನಾ ತಂಗಿ ರಾಜಿ ಕಾಲೇಜಿನಲ್ಲಿ ಓದಿ ಫಸ್ಟ್ ರ್ಯಾಂಕ್ ಪಾಸಾಗಿದ್ದಾಳೆ. ಆಕೆಗೆ ಖುಷಿ ಆಗಿದೆ. ಅವರ ಅಪ್ಪನ ಬಳಿ ಹೇಳಿ ಸಂತೋಷವಾಗಿದ್ಲು. ಈ ವಿಷಯವನ್ನು ಅಕ್ಕನಿಗೆ ಹೇಳಬೇಕು. ಅವಳೇ ಓದಿಸಿದ್ದು, ಗೊತ್ತಾದ್ರೆ ತುಂಬಾ ಖುಷಿ ಆಗ್ತಾಳೆ ಎಂದು, ಅವರ ಮನೆಗೆ ಹೋಗ್ತಾಳೆ.


    ಇದನ್ನೂ ಓದಿ: Jothe Jotheyali: ಆರಾಧನಾಗಿಂತ ಅನು ಮೇಲೆ ಸಂಜುಗೆ ಹೆಚ್ಚು ಕಾಳಜಿ, ಇದೇನಾಗುತ್ತಿದೆ ಧಾರಾವಾಹಿಯಲ್ಲಿ?


    ಸುಮಿ ತಂಗಿಗೆ ಅವಮಾನ
    ಸುಮನಾ ಮನೆಗೆ ಬಂದ ತಂಗಿ ರಾಜಿಗೆ ಮನೆ ಒಳಗೆ ಪ್ರವೇಶ ಸಿಕ್ಕಿಲ್ಲ. ಗೇಟ್ ಬಳಿಯೇ ನಿಲ್ಲಿಸಿ ಸಾಧನಾ ಮತ್ತು ತೀರ್ಥಂಕರ್ ತಂಗಿ ಅವಮಾನ ಮಾಡಿದ್ದಾರೆ. ಯಾರು ನೀನು? ಯಾಕೆ ಬಂದೆ ಎಂದು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಅಕ್ಕನ ಬಳಿ ಮಾತನಾಡಲು ಎನ್ನುತ್ತಾಳೆ. ಆದ್ರೂ ಒಳಗೆ ಬಿಡದೇ ಸ್ಲಂನವರು, ಅದು ಇದು ಎಂದು ಅವಮಾನ ಮಾಡಿದ್ದಾರೆ.


    ಸಾಧನಾಗೆ ಖಡಕ್ ವಾರ್ನಿಂಗ್
    ಸಾಧನಾ ಸುಮನಾಗೆ ತುಂಬಾ ತೊಂದ್ರೆ ಕೊಡ್ತಾಳೆ. ಆದ್ರೆ ಅದನ್ನು ಅವಳು ಸಹಿಸಿಕೊಳ್ತಾಳೆ. ಅದನ್ನೇ ಸುಮಿ ಬಂದು ಹೇಳ್ತಾ ಇದ್ದಾಳೆ. ನೀವು ನನಗೆ ಏನೇ ಕೆಲಸ ಹೇಳಿ ಮಾಡ್ತೀನಿ. ಏನೇ ಅನ್ನಿ ಅನ್ನಿಸಿಕೊಳ್ತೇನೆ. ಆದ್ರೆ ನನ್ನ ತಂಗಿ, ಅಪ್ಪನ ಸುದ್ದಿಗೆ ಬಂದ್ರೆ ಸುಮ್ಮನೇ ಇರಲ್ಲ ಎಂದು ವಾರ್ನ್ ಮಾಡುತ್ತಾಳೆ. ತೀರ್ಥನ ತಂಗಿ ಜಾನು, ನಮಗೆ ವಾರ್ನಿಂಗ್ ಕೊಡ್ತೀಯಾ ಎಂದು ರೇಗುತ್ತಾಳೆ. ಆಗ ಸಾಧನ ತಡೆಯುತ್ತಾಳೆ.


    colors kannada serial, kannada serial, sumana warn to sadhana, kendasampige serial cast, ಕೆಂಡಸಂಪಿಗೆ ಧಾರಾವಾಹಿ, ಸಾಧನಾಗೆ ಖಡಕ್ ವಾರ್ನಿಂಗ್ ಕೊಟ್ಟ ಸುಮನಾ, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
    ಸಾಧನಾ


    ನನ್ನ ಬಗ್ಗೆ ಕೇಳಿಕೋ ಎಂದ ಸುಮನಾ
    ತೀರ್ಥನ ತಂಗಿ ಜಾನು, ಸುಮನಾಳ ಮೇಲೆ ರೇಗುವುದನ್ನು ತಡೆಯುತ್ತಾಳೆ. ಅಲ್ಲದೇ  ಬಿಡುವಾದಾಗ ನನ್ನ ಬಗ್ಗೆ ಸಾಧನಾ ಅವರ ಬಳಿ ಕೇಳಿ ತಿಳಿದುಕೋ. ಅವರಿಗೆ ನನ್ನ ಬಗ್ಗೆ ಚೆನ್ನಾಗಿ ಗೊತ್ತು ಎಂದು ಜಾನುಗೆ ಹೇಳ್ತಾಳೆ. ಸುಮನಾ ಕೊಟ್ಟ ಎಚ್ಚರಿಕೆಯಿಂದ ಸಾಧನಾ ಮತ್ತು ಜಾನುಗೆ ಕೋಪ ಬಂದಿದೆ.


    colors kannada serial, kannada serial, sumana warn to sadhana, kendasampige serial cast, ಕೆಂಡಸಂಪಿಗೆ ಧಾರಾವಾಹಿ, ಸಾಧನಾಗೆ ಖಡಕ್ ವಾರ್ನಿಂಗ್ ಕೊಟ್ಟ ಸುಮನಾ, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
    ಜಾನು


    ಇದನ್ನೂ ಓದಿ: Kannadathi: ಪತ್ರ ಬರೆದ ಹರ್ಷ, ಅಮ್ಮಮ್ಮ ಇಲ್ಲ ಅಂದ್ರೂ ಕಾಡುವ ನೆನಪು ಸಾವಿರ 


    ತನ್ನ ಮನೆಯ ಸುದ್ದಿಗೆ ಬಂದವರಿಗೆ ಖಡಕ್ ಎಚ್ಚರಿಕೆ ನೀಡಿದ್ದಾಳೆ ಸುಮನಾ. ಧಾರಾವಾಹಿ ಕುತೂಹಲ ಮೂಡಿಸುತ್ತಿದ್ದು, ಮುಂದೇನಾಗುತ್ತೆ ಅಂತ ನೋಡೋಕೆ ಕೆಂಡಸಂಪಿಗೆ ಸೀರಿಯಲ್ ನೋಡಬೇಕು.

    Published by:Savitha Savitha
    First published: