ಕೆಂಡಸಂಪಿಗೆ (Kendasampige) ಧಾರಾವಾಹಿ (Serial) ಕಲರ್ಸ್ ಕನ್ನಡದಲ್ಲಿ (Colors Kannada) ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6.30ಕ್ಕೆ ಪ್ರಸಾರವಾಗುತ್ತಿದೆ. ಶುರುವಾದಾಗಿನಿಂದ ಜನರನ್ನು ಹಿಡಿದಿಡುವಲ್ಲಿ ಯಶಸ್ವಿ ಆಗುತ್ತಿದೆ. ಧಾರಾವಾಹಿಯನ್ನು ಈಗಾಗಲೇ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಬೇರೆಯವರ ಜೊತೆ ಮದುವೆ ಆಗ ಬೇಕಿದ್ದ ಸುಮನಾ ಕಾರ್ಪೊರೇಟರ್ ತೀರ್ಥಂಕರ್ ಜೊತೆ ಮದುವೆ ಆಗಿದ್ದಾರೆ. ಹೇಳದೇ, ಕೇಳದೇ ಸುಮಿಗೆ ತಾಳಿ ಕಟ್ಟಿದ್ದರಿಂದ ತೀರ್ಥಂಕರ್ ಮನೆಯಲ್ಲಿ ಜಗಳವಾಗುತ್ತಲೇ ಇದೆ. ಅತ್ತೆ ಪದ್ಮಾ ಮಾತ್ರ ಸುಮನಾಳನ್ನು ಸೊಸೆ ಎಂದು ಒಪ್ಪಿಕೊಂಡಿದ್ದಾಳೆ. ಇದರ ಮಧ್ಯೆ ನಿತ್ಯಾ, ತೀರ್ಥನನ್ನು ತನ್ನೆಡೆ ಒಲಿಸಿಕೊಳ್ಳುವ ಪ್ರಯತ್ನದಲ್ಲಿದ್ದಾಳೆ. ಈಗ ತೀರ್ಥ ಸಹ ಸುಮನಾಗೆ ತಾನು ಮದುವೆಯಾದ (Marriage) ಬಗ್ಗೆ ಸತ್ಯ ಹೇಳಿದ್ದಾನೆ.
ನಿತ್ಯಾ ಜೊತೆ ತೀರ್ಥ ಮದುವೆ ಆಗಬೇಕಿತ್ತು
ನಿತ್ಯಾ, ಕಾರ್ಪೊರೇಟರ್ ತೀರ್ಥಂಕರ್‌ನನ್ನು ಮದುವೆ ಆಗಬೇಕಿದ್ದ ಹುಡುಗಿ. ಇಬ್ಬರಿಗೂ ಮದುವೆ ನಿಶ್ಚಯವಾಗಿತ್ತು. ಆದ್ರೆ ಸುಮನಾ ಜೊತೆ ತೀರ್ಥಂಕರ್ ಮದುವೆ ನಡೆದು ಬಿಡುತ್ತೆ. ಅದಕ್ಕೆ ತೀರ್ಥ ತಾನು ಮದುವೆ ಆಗ ಬೇಕಿದ್ದ ನಿತ್ಯಾಳಿಗೆ ಮಾತು ಕೊಟ್ಟಿದ್ದ. ನಿತ್ಯಾ ನಿನ್ನ ಕಂಡ್ರೆ ನನಗೆ ತುಂಬಾ ಪ್ರೀತಿ. ಎಲೆಕ್ಷನ್ ಆಗೋವರೆಗೆ ಕಾಯಬೇಕು ನೀನು. ನಾನು ನಿನ್ನನ್ನು ಖಂಡಿತವಾಗಿಯೂ ಮದುವೆ ಆಗ್ತೀನಿ ಎಂದು ಹೇಳಿದ್ದ.
ಎಲೆಕ್ಷನ್ ಗಾಗಿ ಮದುವೆ
ಸುಮನಾ ಮದುವೆ ಆಗಿದ್ದನ್ನು ತನ್ನ ಮನೆಯವರ ಬಳಿ ತೀರ್ಥಂಕರ್ ಸಮರ್ಥನೆ ಮಾಡಿಕೊಂಡಿದ್ದ. ಕಾರ್ಪೊರೇಟರ್ ಎಲೆಕ್ಷನ್ ಗಾಗಿ ಸುಮನಾಳಿಗೆ ತಾಳಿ ಕಟ್ಟಿದ್ದಾನಂತೆ. ಎಲೆಕ್ಷನ್ ಮುಗಿದ ಮೇಲೆ ಆಕೆಯನ್ನು ಬಿಟ್ಟು, ಮನೆಯವರು ನಿಶ್ಚಯ ಮಾಡಿರೋ ನಿತ್ಯಾಳನ್ನು ಮದುವೆ ಆಗ್ತಾನಂತೆ. ಅದಕ್ಕೆ ನಿತ್ಯ ಸಹ ಒಪ್ಪಿಕೊಂಡಿದ್ದಾಳೆ. ಈಗ ಅದೇ ರೀತಿ ಮಾಡ್ತಾ ಇದ್ದಾನೆ.
ಸುಮನಾ ಬಳಿ ನಿಜ ಹೇಳಿದ ತೀರ್ಥ
ಮನೆಯವರೆಲ್ಲಾ ಸೇರಿದಾಗ ತೀರ್ಥಂಕರ್ ಎಲ್ಲರ ಮುಂದೆ ನಾನು ಒಂದು ಸತ್ಯ ಹೇಳಬೇಕಿದೆ ಎಂದುಇ ಹೇಳ್ತಾನೆ. ಏನದು ಎಂದು ಎಲ್ರೂ ಕೇಳ್ತಾರೆ. ಅದಕ್ಕೆ ತೀರ್ಥ ಸುಮನಾ ಕಡೆ ತಿರುಗಿ, ನಾನು ನಿನ್ನ ಮದುವೆಯಾಗಿದ್ದೇ ಎಲೆಕ್ಷನ್‍ಗಾಗಿ. ನೀವು ಏನೂ ತಪ್ಪು ತಿಳಿದುಕೊಳ್ಳಬಾರದು. ಕ್ಷಮಿಸಿ ಎಂದು ಕೇಳಿದ್ದಾನೆ. ಅದನ್ನು ಕೇಳಿ ಸುಮನಾ ಶಾಕ್ ಆಗಿದ್ದಾಳೆ.
ಸುಮನಾ ಗರ್ಭಿಣಿ
ಸುಮನಾ ತಲೆ ಸುತ್ತು ಬಂದು ಬಿದ್ದಿರುತ್ತಾಳೆ. ಆಗ ಅಲ್ಲೇ ಇದ್ದ ಒಂದು ಅಜ್ಜಿ ಆಕೆಗೆ ಚಿಕಿತ್ಸೆ ನೀಡಿ, ನಾಡಿ ಮಿಡಿತ ಚೆಕ್ ಮಾಡುತ್ತೆ. ಆಗ ಸುಮನಾ ಗರ್ಭಿಣಿ ಎನ್ನುವ ವಿಚಾರ ಗೊತ್ತಾಗುತ್ತೆ. ಅದನ್ನು ಸುಮನಾಗೆ ಹೇಳುತ್ತೆ. ಅದನ್ನು ಕೇಳಿ ಸುಮನಾ ತುಂಬಾ ಖುಷಿಯಾಗುತ್ತೆ. ಅದನ್ನು ಮನೆಯಲ್ಲಿ ಹೇಳಬೇಕು ಎಂದುಕೊಂಡಿರುತ್ತಾಳೆ, ಅಷ್ಟರಲ್ಲೇ ತೀರ್ಥ, ಎಲೆಕ್ಷನ್‍ಗಾಗಿ ತಾನು ಮದುವೆ ಆಗಿದ್ದು ಎಂದು ಹೇಳ್ತಾನೆ.
ಸುಮನಾ ಶಾಕ್
ಸುಮನಾಗೆ ತೀರ್ಥಂಕರ್ ಮಾತು ಕೇಳಿ ಶಾಕ್ ಆಗಿದೆ. ಎಲೆಕ್ಷನ್‍ಗಾಗಿ ನನ್ನನ್ನು ಮದುವೆಯಾದ್ರಾ? ಯಾಕ್ ಈ ರೀತಿ ಹೇಳ್ತಾ ಇದ್ದಾರೆ ಎಂದು ಬೇಸರ ಮಾಡಿಕೊಂಡಿದ್ದಾಳೆ. ಅಲ್ಲದೇ ತಾನು ಗರ್ಭಿಣಿ ಅನ್ನುವ ವಿಚಾರವನ್ನು ಮುಚ್ಚಿಟ್ಟಿದ್ದಾಳೆ. ಈಗ ಸುಮನಾ ತೀರ್ಥಂಕರ್ ನನ್ನು ಬಿಟ್ಟು ಹೋಗ್ತಾಳಾ ನೋಡಬೇಕು.
ಇದನ್ನೂ ಓದಿ: Ramachari: ಈ ದೇಶ ಬಿಟ್ಟು ವಿದೇಶಕ್ಕೆ ಹೋಗೋಣ ಎಂದ ಚಾರು, ರಾಮಾಚಾರಿ ಉತ್ತರವೇನು?
ಸುಮನಾ ತಾನು ಗರ್ಭಿಣಿ ಅನ್ನುವ ಸತ್ಯವನ್ನು ಮುಚ್ಚಿಡ್ತಾಳಾ? ತೀರ್ಥಂಕರ್ ರಿಂದ ದೂರ ಹೋಗ್ತಾಳಾ ? ಮುಂದೇನಾಗುತ್ತೆ ಅಂತ ನೋಡೋಕೆ ಕೆಂಡ ಸಂಪಿಗೆ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ