ಕೆಂಡಸಂಪಿಗೆ (Kendasampige) ಧಾರಾವಾಹಿ (Serial) ಕಲರ್ಸ್ ಕನ್ನಡದಲ್ಲಿ (Colors Kannada) ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6.30ಕ್ಕೆ ಪ್ರಸಾರವಾಗುತ್ತಿದೆ. ಶುರುವಾದಾಗಿನಿಂದ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗುತ್ತಿದೆ. ಕೆಂಡಸಂಪಿಗೆ ಧಾರಾವಾಹಿ ಈಗಾಗಲೇ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಬೇರೆಯವರ ಜೊತೆ ಮದುವೆ ಆಗ ಬೇಕಿದ್ದ ಸುಮನಾ ಕಾರ್ಪೊರೇಟರ್ ತೀರ್ಥಂಕರ್ ಜೊತೆ ಮದುವೆ ಆಗಿದ್ದಾರೆ. ಹೇಳದೇ, ಕೇಳದೇ ಸುಮಿಗೆ ತಾಳಿ ಕಟ್ಟಿದ್ದರಿಂದ ತೀರ್ಥಂಕರ್ ಮನೆಯಲ್ಲಿ ಜಗಳವಾಗುತ್ತಲೇ ಇದೆ. ಅತ್ತೆ ಪದ್ಮಾ ಮಾತ್ರ ಸುಮನಾಳನ್ನು ಸೊಸೆ ಎಂದು ಒಪ್ಪಿಕೊಂಡಿದ್ದಾಳೆ. ತೀರ್ಥ ಅತ್ತಿಗೆ ಸಾಧನಾ ಹೇಗಾದ್ರೂ ಮಾಡಿ ಸುಮಿಯನ್ನು ಮನೆಯಿಂದ ಆಚೆ ಓಡಿಸಬೇಕು ಎಂದು ಪ್ಲ್ಯಾನ್ ಮಾಡಿ, ಸುಮಿ ಮನೆ ಬಿಟ್ಟು ಹೋಗುವಂತೆ ಮಾಡಿದ್ದಾಳೆ.
ಸಾಧನಾ ಪ್ಲ್ಯಾನ್ ಸಕ್ಸಸ್
ಸುಮನಾ ಹೂವು ಮಾರುವ ಹುಡುಗಿ. ಈ ಮನೆಗೆ ತಕ್ಕವಳಲ್ಲ ಎನ್ನುವುದು ಸಾಧನಾ ವಾದ. ಅವಳನ್ನು ಕಂಡ್ರೆ ಸದಾ ಜಗಳ ಮಾಡುತ್ತಲೇ ಇರುತ್ತಳೆ. ಅವಳು ಮಾಡಿದ ಯಾವುದೇ ಅಡುಗೆಯನ್ನು ತಿನ್ನಲ್ಲ. ಅವಳು ನನ್ನ ಕಣ್ಣು ಮುಂದೆ ಬರಬಾರದು ಎಂದು ತೀರ್ಥನಿಗೂ ಹೇಳಿದ್ಲು. ಈಗ ಅತ್ತೆ ಪದ್ಮಾ ಸುಮನಾಳನ್ನು ಒಪ್ಪಿಕೊಂಡಿದ್ದಾರೆ. ಅದಕ್ಕೆ ಸಾಧನಾಗೆ ಕೋಪ. ಹೇಗಾದ್ರೂ ಮನೆಯಿಂದ ಆಚೆ ಓಡಿಸಬೇಕು ಎಂದುಕೊಳ್ತಿದ್ಲು. ಅದೇ ರೀತಿ ಓಡಿಸಿದ್ದಾಳೆ.
ವೋಟಿಗಾಗಿ ನಿನ್ನ ಮದುವೆ ಆಗಿರೋದು
ಸುಮನಾ ಬಳಿ ಸಾಧನಾ ಸತ್ಯವನ್ನು ಹೇಳಿದ್ದಾಳೆ. ತೀರ್ಥನಿಗೆ ನಿನ್ನ ಮೇಲೆ ಯಾವುದೇ ಭಾವನೆ ಇಲ್ಲ. ನಿನ್ನನ್ನು ಮದುವೆ ಆಗಿರುವುದೇ ವೋಟಿಗಾಗಿ. ನಿನ್ನನ್ನು ಮದುವೆ ಆದ್ರೆ ನಿಮ್ಮ ಏರಿಯಾ ಜನರ ಮತ ಪಡೆಯಬಹುದು ಎನ್ನುವುದು ಅವನ ಉದ್ದೇಶ ಎಂದು ಸಾಧನಾ ಹೇಳಿದ್ದಾಳೆ. ಈ ಮನೆಯ 2ನೇ ಸೊಸೆ ಯಾವತ್ತಿದ್ರೂ ನಿತ್ಯಾನೇ. ಅದು ಮಾತಾಗಿದೆ. ಎಲೆಕ್ಷನ್ ಮುಗಿಯುವವರೆಗೂ ಮಾತ್ರ ನಿನಗೆ ಇಲ್ಲಿ ಜಾಗ ಎಂದು ಸಾಧನಾ ಹೇಳಿದ್ದಾಳೆ. ಇದನ್ನು ಕೇಳಿ ಸುಮಿ ಶಾಕ್ ಆಗಿದ್ದಾಳೆ.
ಇದನ್ನೂ ಓದಿ: Sharukh Khan: ಮೆಕ್ಕಾದ ನಂತರ ವೈಷ್ಣೋದೇವಿ ದೇವಸ್ಥಾನಕ್ಕೆ ಭೇಟಿ ನೀಡಿದ ಶಾರುಖ್ ಖಾನ್!
ಮನೆ ಬಿಟ್ಟು ಹೋದ ಸುಮನಾ
ಸಾಧನಾ ಮಾತು ಕೇಳಿ ಸುಮನಾಗೆ ಶಾಕ್ ಆಗಿದೆ. ಸುಮಾ ತೀರ್ಥನನ್ನು ತುಂಬಾ ಪ್ರೀತಿ ಮಾಡ್ತಾ ಇದ್ದಳು. ಈಗ ನೋಡಿದ್ರೆ ವೋಟಿಗಾಗಿ ತನ್ನನ್ನು ಮದುವೆಯಾದ್ರಾ ಎಂದು ಬೇಸರಗೊಂಡಿದ್ದಾಳೆ. ಈ ಮನೆಯ ಸಹವಾಸ ಸಾಕು ಎಂದು ಮನೆ ಬಿಟ್ಟು ಹೊರಟಿದ್ದಾಳೆ. ತನ್ನ ಪರಿಸ್ಥಿತಿ ಈ ರೀತಿ ಆಯ್ತು ಎಂದು ಕಣ್ಣೀರಿಡುತ್ತಿದ್ದಾಳೆ.
ತೀರ್ಥಂಕರ್ ಮೇಲೆ ಸುಮನಾ ತಂದೆ ಆಕ್ರೋಶ
ರಾಮಯ್ಯ ಅವರನ್ನು ತೀರ್ಥ ಮಾತನಾಡಿಸಲು ಬಂದಿದ್ದಾರೆ. ಅದಕ್ಕೆ ರಾಮಯ್ಯ ತುಂಬಾ ಬೇಸರ ಮಾಡಿಕೊಂಡಿದ್ದಾರೆ. ನಿನ್ನಿಂದ ನಮ್ಮ ಮಗನನ್ನು ಕಳೆದುಕೊಂಡ್ವಿ. ನನ್ನ ಮಗಳ ಬಾಳು ಹಾಳಾಯ್ತು ಥೂ ಎಂದು ಬೈದಿದ್ದಾರೆ. ಸುಮನಾ ತಂಗಿ ರಾಜಿ ಸಹ ತೀರ್ಥಂಕರ್ ನನ್ನು ಬೈದಿದ್ದಾಳೆ.
ಬಂಗಾರದಂತಹ ನನ್ನ ಮಗಳ ಕೊರಳಿಗೆ ತಾಳಿ ಕಟ್ಟಿ, ಅವಳ ಬಾಳು ನರಕ ಮಾಡಿ ಬಿಟ್ಟೆ. ನಿಮ್ಮಂಥವರನ್ನು ದೇವರು ಎಂದು ತಲೆ ಮೇಲೆ ಇಟ್ಟುಕೊಂಡು ಮೆರೆದಾಡಿದ್ವಿ. ನಾವೇ ನಮ್ಮ ಚಪ್ಪಲಿ ತೆಗೆದುಕೊಂಡು ಹೊಡೆದುಕೊಳ್ಳಬೇಕು ಎಂದು ರಾಮಯ್ಯ ಹೇಳಿದ್ದಾರೆ.
ಮಚ್ಚು ತೆಗೆದುಕೊಂಡ ರಾಮಯ್ಯ
ನಮ್ಮ ಸುಮಿ ಆಟದ ಗೊಂಬೆ ಎಂದುಕೊಂಡ್ರಾ? ಬೇಕು ಎಂದು ಕಟ್ಟಿಕೊಳ್ಳೋಕೆ, ಬೇಡ ಎಂದಾಗ ಬಿಡೋಕೆ? ಥೂ ನಿಮ್ಮ ಜನ್ಮಕ್ಕಿಷ್ಟು. ಒಂದು ಹೆಣ್ಣಿನ ಜೀವನ ಹಾಳು ಮಾಡಿ ಬಿಟ್ರಿ. ನಿಮ್ಮ ಬಾಳು ಸರ್ವ ನಾಶ ಹಾಗುತ್ತೆ. ನೀನು ಚುನಾವಣೆ ಗೆಲ್ಲಲು ನಮ್ಮ ಮಗಳನ್ನು ಬಲಿ ಕೊಟ್ಯಾ? ಇಲ್ಲಿಂದ ಹೋಗು, ಇಲ್ಲ ಸಾಯಿಸಿ ಬಿಡ್ತೀನಿ ಎಂದು ಹೇಳಿ ಮಚ್ಚು ತೆಗೆದುಕೊಂಡಿದ್ದಾರೆ. ಕಾಲೋನಿಯಿಂದ ಓಡಿಸಿದ್ದಾರೆ.
ಇದನ್ನೂ ಓದಿ: Disha Patani: ಅಲೆಕ್ಸಾಂಡರ್ ಅಲೆಕ್ಸ್ ಜೊತೆ ಟೈಗರ್ ಶ್ರಾಫ್ ಮಾಜಿ ಗೆಳತಿ ದಿಶಾ ಪಠಾನಿ ಡೇಟಿಂಗ್!
ಸುಮಿ ಎಲ್ಲಿ ಹೋದ್ಲು? ತೀರ್ಥಂಕರ್ ಈ ಸಮಸ್ಯೆಗೆ ಹೇಗೆ ಪರಿಹಾರ ಕಂಡುಕೊಳ್ತಾನೆ? ಮುಂದೇನಾಗುತ್ತೆ ಅಂತ ನೋಡೋಕೆ ಕೆಂಡಸಂಪಿಗೆ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ