ಕೆಂಡಸಂಪಿಗೆ (Kendasampige) ಧಾರಾವಾಹಿ (Serial) ಕಲರ್ಸ್ ಕನ್ನಡದಲ್ಲಿ (Colors Kannada) ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6.30ಕ್ಕೆ ಪ್ರಸಾರವಾಗುತ್ತಿದೆ. ಶುರುವಾದಾಗಿನಿಂದ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗುತ್ತಿದೆ. ಕೆಂಡಸಂಪಿಗೆ ಧಾರಾವಾಹಿ ಈಗಾಗಲೇ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಬೇರೆಯವರ ಜೊತೆ ಮದುವೆ ಆಗ ಬೇಕಿದ್ದ ಸುಮನಾ ಕಾರ್ಪೊರೇಟರ್ ತೀರ್ಥಂಕರ್ ಜೊತೆ ಮದುವೆ ಆಗಿದ್ದಾರೆ. ಹೇಳದೇ, ಕೇಳದೇ ಸುಮಿಗೆ ತಾಳಿ ಕಟ್ಟಿದ್ದರಿಂದ ತೀರ್ಥಂಕರ್ ಮನೆಯಲ್ಲಿ ಜಗಳವಾಗುತ್ತಲೇ ಇದೆ. ಅತ್ತೆ ಪದ್ಮಾ ಮಾತ್ರ ಸುಮನಾಳನ್ನು ಸೊಸೆ ಎಂದು ಒಪ್ಪಿಕೊಂಡಿದ್ದಾಳೆ. ತೀರ್ಥ ಅತ್ತಿಗೆ ಸಾಧನಾ ಹೇಗಾದ್ರೂ ಮಾಡಿ ಸುಮಿಯನ್ನು ಮನೆಯಿಂದ ಆಚೆ ಓಡಿಸಬೇಕು ಎಂದು ಏನೇನೋ ಪ್ಲ್ಯಾನ್ ಮಾಡುತ್ತಿದ್ದಾಳೆ. ಈ ಬಾರಿ ಸಾಧನಾ ಪ್ಲ್ಯಾನ್ ವರ್ಕ್ ಆಗಿದೆ.
ಸುಮನಾ ಕಂಡ್ರೆ ಸಾಧನಾಗೆ ಕೋಪ
ಸುಮನಾ ಹೂವು ಮಾರುವ ಹುಡುಗಿ. ಈ ಮನೆಗೆ ತಕ್ಕವಳಲ್ಲ ಎನ್ನುವುದು ಸಾಧನಾ ವಾದ. ಅವಳನ್ನು ಕಂಡ್ರೆ ಸದಾ ಜಗಳ ಮಾಡುತ್ತಲೇ ಇರುತ್ತಳೆ. ಅವಳು ಮಾಡಿದ ಯಾವುದೇ ಅಡುಗೆಯನ್ನು ತಿನ್ನಲ್ಲ. ಅವಳು ನನ್ನ ಕಣ್ಣು ಮುಂದೆ ಬರಬಾರದು ಎಂದು ತೀರ್ಥನಿಗೂ ಹೇಳಿದ್ಲು. ಈಗ ಅತ್ತೆ ಪದ್ಮಾ ಸುಮನಾಳನ್ನು ಒಪ್ಪಿಕೊಂಡಿದ್ದಾರೆ. ಅದಕ್ಕೆ ಸಾಧನಾಗೆ ಕೋಪ. ಹೇಗಾದ್ರೂ ಮನೆಯಿಂದ ಆಚೆ ಓಡಿಸಬೇಕು ಎಂದುಕೊಳ್ತಿದ್ಲು.
ವೋಟಿಗಾಗಿ ನಿನ್ನ ಮದುವೆ ಆಗಿರೋದು
ಸುಮಾನಾ ಯಾವಾಗ ಸಾಧನಾ ಕೊಟ್ಟ ಎಲ್ಲ ಕಾಟಗಳನ್ನು ತೆದುಕೊಂಡು ಗಂಡನ ಮನೆ ಬಿಟ್ಟು ಹೋಗಲಿಲ್ವೋ, ಅದಕ್ಕೆ ಸುಮನಾ ಬಳಿ ಸತ್ಯವನ್ನು ಹೇಳಿದ್ದಾಳೆ. ತೀರ್ಥನಿಗೆ ನಿನ್ನ ಮೇಲೆ ಯಾವುದೇ ಭಾವನೆ ಇಲ್ಲ. ನಿನ್ನನ್ನು ಮದುವೆ ಆಗಿರುವುದೇ ವೋಟಿಗಾಗಿ. ನಿನ್ನನ್ನು ಮದುವೆ ಆದ್ರೆ ನಿಮ್ಮ ಏರಿಯಾ ಜನರ ಮತ ಪಡೆಯಬಹುದು ಎನ್ನುವುದು ಅವನ ಉದ್ದೇಶ ಎಂದು ಸಾಧನಾ ಹೇಳಿದ್ದಾಳೆ.
ಇದನ್ನೂ ಓದಿ: Lakshana: ಡೆವಿಲ್ ಸತ್ಯ ಬಯಲು, ಚಂದ್ರಶೇಖರ್-ನಕ್ಷತ್ರಾ ಶಾಕ್!
ಈ ಮನೆಯ ಎರಡನೇ ಸೊಸೆ ನಿತ್ಯ
ಅಲ್ಲದೇ ತೀರ್ಥನ ತಂಗಿ ಜಾನು ಸಹ ಇದನ್ನೇ ಹೇಳಿದ್ದಾಳೆ. ನೀವು ನಮ್ಮ ಅತ್ತಿಗೆ ಆಗಲು ಯಾವುತ್ತೂ ಸಾಧ್ಯವಿಲ್ಲ ಎಂದು. ಈ ಮನೆಯ 2ನೇ ಸೊಸೆ ಯಾವತ್ತಿದ್ರೂ ನಿತ್ಯಾನೇ. ಅದು ಮಾತಾಗಿದೆ. ಎಲೆಕ್ಷನ್ ಮುಗಿಯುವವರೆಗೂ ಮಾತ್ರ ನಿನಗೆ ಇಲ್ಲಿ ಜಾಗ ಎಂದು ಸಾಧನಾ ಹೇಳಿದ್ದಾಳೆ. ಇದನ್ನು ಕೇಳಿ ಸುಮಿ ಶಾಕ್ ಆಗಿದ್ದಾಳೆ.
ಮನೆ ಬಿಟ್ಟು ಹೊರಟ ಸುಮನಾ
ಸಾಧನಾ ಮಾತು ಕೇಳಿ ಸುಮನಾಗೆ ಶಾಕ್ ಆಗಿದೆ. ಸುಮಾ ತೀರ್ಥನನ್ನು ತುಂಬಾ ಪ್ರೀತು ಮಾಡ್ತಾ ಇದ್ದಳು. ಈಗ ನೋಡಿದ್ರೆ ವೋಟಿಗಾಗಿ ತನ್ನನ್ನು ಮದುವೆಯಾದ್ರಾ ಎಂದು ಬೇಸರಗೊಂಡಿದ್ದಾಳೆ. ಈ ಮನೆಯ ಸಹವಾಸ ಸಾಕು ಎಂದು ಮನೆ ಬಿಟ್ಟು ಹೊರಟಿದ್ದಾಳೆ. ತನ್ನ ಪರಿಸ್ಥಿತಿ ಈ ರೀತಿ ಆಯ್ತು ಎಂದು ಕಣ್ಣೀರಿಡುತ್ತಿದ್ದಾಳೆ.
ಸಾಧನಾ ಪ್ಲ್ಯಾನ್ ಸಕ್ಸಸ್
ಸಾಧನಾ ಸುಮನಾಳನ್ನು ಮನೆಯಿಂದ ಓಡಿಸಲು ಏನೇನು ಕಾಟ ಕೊಟ್ಟಿದ್ದಳು. ಮನೆಯ ಕೆಲಸವನ್ನು ಮಾಡಿಸಿದ್ದಳು. ಕಳ್ಳಿ ಪಟ್ಟ ಕಟ್ಟಿದ್ದಳು. ಆದ್ರೆ ಸುಮನಾ ಯಾವುದಕ್ಕೂ ಬಗ್ಗಿರಲಿಲ್ಲ. ಅಲ್ಲದೇ ಎಲೆಕ್ಷನ್ ಮುಗಿಯುವವರೆಗೂ ಸತ್ಯ ಹೇಳಬೇಡಿ ಎಂದು ತೀರ್ಥ ಹೇಳಿದ್ರೂ, ಸತ್ಯ ಹೇಳಿ ಸುಮನಾ ಮನೆ ಬಿಟ್ಟು ಹೋಗುವಂತೆ ಮಾಡಿದ್ದಾಳೆ.
ಇದನ್ನೂ ಓದಿ: Bigg Boss Kannada: ಬಣ್ಣದ ಬೆಳಕಿನ ಟಾಸ್ಕ್ನಲ್ಲಿ ಮನೆಯವರ ಮನಸ್ತಾಪ ಬಯಲು!
ಅತ್ತೆ ಪದ್ಮಾ ಸುಮಿಯನ್ನು ಮನೆಗೆ ವಾಪಸ್ ಕರೆಸುತ್ತಾಳಾ? ತೀರ್ಥನ ಮುಂದಿನ ನಡೆ ಏನು, ಸಾಧನಾ ಕುತಂತ್ರದಿಂದ ಸುಮನಾ ಜೀವನ ಅತಂತ್ರ ಆಯ್ತಾ? ಮುಂದೇನಾಗುತ್ತೆ ಅಂತ ನೋಡೋಕೆ ಕೆಂಡಸಂಪಿಗೆ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ