ಕೆಂಡಸಂಪಿಗೆ (Kendasampige) ಧಾರಾವಾಹಿ (Serial) ಕಲರ್ಸ್ ಕನ್ನಡದಲ್ಲಿ (Colors Kannada) ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6.30ಕ್ಕೆ ಪ್ರಸಾರವಾಗುತ್ತಿದೆ. ಶುರುವಾದಾಗಿನಿಂದ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗುತ್ತಿದೆ. ಕೆಂಡಸಂಪಿಗೆ ಧಾರಾವಾಹಿ ಯನ್ನು ಈಗಾಗಲೇ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಬೇರೆಯವರ ಜೊತೆ ಮದುವೆ ಆಗ ಬೇಕಿದ್ದ ಸುಮನಾ (Sumana) ಕಾರ್ಪೊರೇಟರ್ ತೀರ್ಥಂಕರ್ ಜೊತೆ ಮದುವೆ ಆಗಿದ್ದಾರೆ. ಹೇಳದೇ, ಕೇಳದೇ ಸುಮಿಗೆ ತಾಳಿ ಕಟ್ಟಿದ್ದರಿಂದ ತೀರ್ಥಂಕರ್ ಮನೆಯಲ್ಲಿ ಜಗಳವಾಗುತ್ತಲೇ ಇದೆ. ಅತ್ತೆ ಪದ್ಮಾ ಮಾತ್ರ ಸುಮನಾಳನ್ನು ಸೊಸೆ ಎಂದು ಒಪ್ಪಿಕೊಂಡಿದ್ದಾಳೆ. ತೀರ್ಥ ಅತ್ತಿಗೆ ಸಾಧನಾ ಹೇಗಾದ್ರೂ ಮಾಡಿ ಸುಮಿಯನ್ನು ಮನೆಯಿಂದ ಆಚೆ ಓಡಿಸಬೇಕು ಎಂದು ಏನೇನೋ ಪ್ಲ್ಯಾನ್ ಮಾಡುತ್ತಿದ್ದಳು. ಈ ಬಾರಿ ಸಾಧನಾ ಪ್ಲ್ಯಾನ್ ಸಕ್ಸಸ್ ಆಗಿದೆ. ಮಾವ (Father In Law) ಸುಮನಾಳನ್ನು ಮನೆಯಿಂದ ಆಚೆ ಕಳಿಸಿದ್ದಾರೆ.
ಸುಮನಾ ಕಂಡ್ರೆ ಸಾಧನಾಗೆ ಕೋಪ
ಸುಮನಾ ಹೂವು ಮಾರುವ ಹುಡುಗಿ. ಈ ಮನೆಗೆ ತಕ್ಕವಳಲ್ಲ ಎನ್ನುವುದು ಸಾಧನಾ ವಾದ. ಅವಳನ್ನು ಕಂಡ್ರೆ ಸದಾ ಜಗಳ ಮಾಡುತ್ತಲೇ ಇರುತ್ತಳೆ. ಅವಳು ಮಾಡಿದ ಯಾವುದೇ ಅಡುಗೆಯನ್ನು ತಿನ್ನಲ್ಲ. ಅವಳು ನನ್ನ ಕಣ್ಣು ಮುಂದೆ ಬರಬಾರದು ಎಂದು ತೀರ್ಥನಿಗೂ ಹೇಳಿದ್ಲು. ಈಗ ಅತ್ತೆ ಪದ್ಮಾ ಸುಮನಾಳನ್ನು ಒಪ್ಪಿಕೊಂಡಿದ್ದಾರೆ. ಅದಕ್ಕೆ ಸಾಧನಾಗೆ ಕೋಪ.
ಮನೆಗೆ ಬಂದು ಜಗಳ ಆಡಿದ ಕಾಶಿ ಅಮ್ಮ
ತೀರ್ಥಂಕರ್ ನನ್ನು ಕೊಲ್ಲಲು ಬಂದ ಕಾರಣವಾಗಿ ಪೊಲೀಸರು ಕಾಶಿಯನ್ನು ಅರೆಸ್ಟ್ ಮಾಡಿದ್ದಾರೆ. ಅದಕ್ಕೆ ಕೋಪಗೊಂಡಿರುವ ಕಾಶಿ ಅಮ್ಮ ತಿರ್ಥಂಕರ್ ಮನೆಗೆ ಬಂದಿದ್ದಾಳೆ. ಅವರ ಮನೆಯವರ ಬಳಿ ಜಗಳ ಆಡಿದ್ದಾಳೆ. ಇದಕ್ಕೆಲ್ಲಾ ಸುಮಿಯೇ ಕಾರಣ. ನನ್ನ ಬಳಿ ದುಡ್ಡು ಪಡೆದು, ಕಾಶಿಯನ್ನು ಮದುವೆ ಆಗ್ತೀನಿ ಅಂದಿದ್ಲು. ಅದಕ್ಕೆ ನನ್ನ ಮಗ, ತೀರ್ಥ ಅವರನ್ನು ಕೊಲ್ಲಲು ಬಂದಿದ್ದು ಎಂದು ಹೇಳಿದ್ದಾಳೆ.
ಇದನ್ನೂ ಓದಿ: Kannadathi: ಭುವಿ ಕೊಲ್ಲಲು ಬಂದ ರೌಡಿಗಳು, ಹರ್ಷನಿಗೆ ಹೆಚ್ಚಿದ ಟೆನ್ಶನ್!
ಸುಮನಾ ಮಾವ ಕೋಪ
ನನ್ನ ಮಗನ ಸಾವಿಗೆ ಕಾರಣವಾದ ನೀನು ಈ ಮನೆಯಲ್ಲಿ ಇರಬೇಡ ಎಂದು ಆಚೆ ಕಳಿಸುತ್ತಿದ್ದಾನೆ. ಸುಮಿ ನನ್ನ ತಪ್ಪು ಇಲ್ಲ ಎಂದ್ರು ಕೇಳುತ್ತಿಲ್ಲ. ಉರಿಯುವ ಬೆಂಕಿಗೆ ಸಾಧನಾ ತುಪ್ಪ ಹಾಕಿದ್ದಾಳೆ.
ಹಾಗಾದ್ರೆ ಆ ಹೆಂಗಸು ಹೇಳಿದ್ದು ಸುಳ್ಳಾ? ನೀನು ಕಾಶಿ ಮದುವೆ ಆಗಲು ಒಪ್ಪಿರಲಿಲ್ವಾ ಎಂದು ಕೇಳುತ್ತಾಳೆ. ಹೌದ, ನಮ್ಮ ಅಪ್ಪನ ಪ್ರಾಣ ಅಪಾಯದಲ್ಲಿ ಇತ್ತು. ಆಗ ದುಡ್ಡು ಕೊಡುವುದಕ್ಕೆ ಬಲವಂತವಾಗಿ ನನ್ನನ್ನು ಮದುವೆ ಒಪ್ಪಿಸಿದ್ರು ಎಂದು ಸುಮಾ ಹೇಳ್ತಾಳೆ.
ಕೈ ಮುಗಿದ ಬೇಡಿಕೊಂಡ್ರು ಪ್ರಯೋಜನ ಇಲ್ಲ
ಸುಮನಾ ಇದರಲ್ಲಿ ನನ್ನ ತಪ್ಪಿಲ್ಲ ಮಾವ. ಇದೊಂದು ಕುತಂತ್ರ ಎಂದ್ರು ಮಾವ ನಂಬಲ್ಲ. ನೀನು ಈ ಮನೆಯುಲ್ಲಿ ಇದ್ರೆ ಕಾಶಿ ಮತ್ತೆ ನನ್ನ ಮಗನನ್ನು ಕೊಲ್ಲಲು ಬರಬಹುದು. ನೀನು ದೂರ ಹೋದೆ ಎಂದು ಗೊತ್ತಾದ್ರೆ, ಅವನು ಈ ಕಡೆ ತಲೆ ಹಾಕಲ್ಲ. ರಾಜಕೀಯ ದ್ವೇಷ ಆಗಿದ್ರೆ, ಅದನ್ನು ಬಿಟ್ಟು ಕಾರ್ಖಾನೆ ನೋಡಿಕೋ ಅಂತಿದ್ದೆ. ಇದು ವೈಯಕ್ತಿಕ ದ್ವೇಷ, ಅದಕ್ಕೆ ನೀನು ಮನೆಯಿಂದ ಆಚೆ ಹೋಗು ಎಂದು ಹೇಳಿದ್ದಾರೆ.
ಸುಮನಾ ಬೆಂಬಲಕ್ಕೆ ಯಾರು ಇಲ್ಲ
ಮನೆಯಲ್ಲಿ ಜಗಳ ಆದ್ರೆ ಸುಮನಾ ಪರ ಮಾತನಾಡಲು ಅತ್ತೆ ಪದ್ಮಾ ಇರುತ್ತಿದ್ದರು. ಆದ್ರೆ ಈಗ ಅವರು ಹರಕೆ ತೀರಿಸಲು ದೇವಸ್ಥಾನಕ್ಕೆ ಹೋಗಿದ್ದಾರೆ. ತೀರ್ಥ ಕೂಡ ಮನೆಯಲ್ಲಿ ಇಲ್ಲ. ಇದೇ ಸಮಯ ನೋಡಿ ಸಾಧನಾ ಪ್ಲ್ಯಾನ್ ಮಾಡಿ, ಮಾವನಿಂದಲೇ ಸುಮನಾಳನ್ನು ಆಚೆ ಹಾಕಿಸುತ್ತಿದ್ದಾಲೆ. ಕಣ್ಣೀರಿಟ್ಟರು ಮಾವನ ಮನಸ್ಸು ಕರಗಿಲ್ಲ.
ಇದನ್ನೂ ಓದಿ: New Serials: ಇಂದಿನಿಂದ 2 ಹೊಸ ಧಾರಾವಾಹಿಗಳು, ಪುಣ್ಯವತಿ ಜೊತೆ ತ್ರಿಪುರ ಸುಂದರಿ ಪಯಣ
ಕೊನೆಗೂ ಸುಮನಾಳನ್ನು ಮನೆಯಿಂದ ಓಡಿಸೋ ಸಾಧನಾ ಪ್ಲ್ಯಾನ್ ಸಕ್ಸಸ್ ಆಗಿದೆ. ಸುಮನಾ ಮನೆ ಬಿಟ್ಟು ಹೋಗ್ತಾಳಾ? ಯಾರಾದ್ರೂ ಆಕೆಯನ್ನು ತಡೆಯುತ್ತಾರಾ? ಮುಂದೇನಾಗುತ್ತೆ ಅಂತ ನೊಡೋಕೆ ಕೆಂಡಸಂಪಿಗೆ ಧಾರಾವಾಹಿ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ