ಕೆಂಡಸಂಪಿಗೆ (Kendasampige) ಧಾರಾವಾಹಿ (Serial) ಕಲರ್ಸ್ ಕನ್ನಡದಲ್ಲಿ (Colors Kannada) ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6.30ಕ್ಕೆ ಪ್ರಸಾರವಾಗುತ್ತಿದೆ. ಶುರುವಾದಾಗಿನಿಂದ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗುತ್ತಿದೆ. ಕೆಂಡಸಂಪಿಗೆ ಧಾರಾವಾಹಿಯನ್ನು ಈಗಾಗಲೇ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಬೇರೆಯವರ ಜೊತೆ ಮದುವೆ ಆಗಬೇಕಿದ್ದ ಸುಮನಾ, ಕಾರ್ಪೊರೇಟರ್ ತೀರ್ಥಂಕರ್ ಜೊತೆ ಮದುವೆ ಆಗಿದ್ದಾರೆ. ಹೇಳದೇ, ಕೇಳದೇ ಸುಮಿಗೆ ತಾಳಿ ಕಟ್ಟಿದ್ದರಿಂದ ತೀರ್ಥಂಕರ್ ಮನೆಯಲ್ಲಿ ಜಗಳವಾಗುತ್ತಲೇ ಇದೆ. ಅತ್ತೆ ಪದ್ಮಾ ಮಾತ್ರ ಸುಮನಾಳನ್ನು ಸೊಸೆ ಎಂದು ಒಪ್ಪಿಕೊಂಡಿದ್ದಾಳೆ. ತೀರ್ಥ ಅತ್ತಿಗೆ ಸಾಧನಾ ಹೇಗಾದ್ರೂ ಮಾಡಿ ಸುಮಿಯನ್ನು ಮನೆಯಿಂದ ಆಚೆ ಓಡಿಸಬೇಕು ಅಂತಾ ಏನೇನೋ ಪ್ಲ್ಯಾನ್ ಮಾಡುತ್ತಿದ್ದಾಳೆ. ಈಗ ಸುಮಿ ಮೇಲೆ ಕಳ್ಳತನದ ಆರೋಪ ಹೊರಿಸಿದ್ದಾಳೆ.
ಸುಮನಾ ಕಂಡ್ರೆ ಸಾಧನಾಗೆ ಕೋಪ
ಸುಮನಾ ಹೂವು ಮಾರುವ ಹುಡುಗಿ. ಈ ಮನೆಗೆ ತಕ್ಕವಳಲ್ಲ ಎನ್ನುವುದು ಸಾಧನಾ ವಾದ. ಅವಳನ್ನು ಕಂಡ್ರೆ ಸದಾ ಜಗಳ ಮಾಡುತ್ತಲೇ ಇರುತ್ತಳೆ. ಅವಳು ಮಾಡಿದ ಯಾವುದೇ ಅಡುಗೆಯನ್ನು ತಿನ್ನಲ್ಲ. ಅವಳು ನನ್ನ ಕಣ್ಣು ಮುಂದೆ ಬರಬಾರದು ಎಂದು ತೀರ್ಥನಿಗೂ ಹೇಳಿದ್ಲು. ಈಗ ಅತ್ತೆ ಪದ್ಮಾ ಸುಮನಾಳನ್ನು ಒಪ್ಪಿಕೊಂಡಿದ್ದಾರೆ. ಅದಕ್ಕೆ ಸಾಧನಾಗೆ ಕೋಪ. ಹೇಗಾದ್ರೂ ಮನೆಯಿಂದ ಕಳಿಸಲು ಸರ್ಕಸ್ ಮಾಡುತ್ತಿದ್ದಾಳೆ.
ಬಟ್ಟೆ ವಾಶ್ ಮಾಡಿಸಿ ಶಿಕ್ಷೆ
ಮನೆಯ ಕೆಲಸದಾಕೆಗೆ ಸಾಧನಾ ದುಡ್ಡು ಕೊಟ್ಟು ರಜೆ ಮೇಲೆ ಕಳಿಸಿರುತ್ತಾಳೆ. ಮನೆ ಕೆಲಸವನ್ನು ಸುಮನಾ ಮಾಡಲಿ, ಬೇಸರಗೊಂಡು ಈ ಮನೆ ಬಿಟ್ಟು ಹೋಗಬೇಕು ಎಂದು ಕೊಂಡಿದ್ದಾಳೆ. ಅವರ ಬಟ್ಟೆಯನ್ನು ಸುಮನಾ ವಾಶ್ ಮಾಡಿ ಕೊಟ್ಟಿದ್ದಾಳೆ.
ಇದನ್ನೂ ಓದಿ: Bhagya Lakshmi: ಗೃಹಪ್ರವೇಶದ ಮನೆಯಲ್ಲಿ ಭಾಗ್ಯಲಕ್ಷ್ಮಿ ನಳಪಾಕ, ನೆತ್ತಿಗೇರಿದ ತಾಂಡವ್ ಕೋಪ!
ಕಸ ಹರಡಿ ನಾಟಕ
ಸುಮನಾ ಮನೆಯಲ್ಲಾ ಕ್ಲೀನ್ ಮಾಡಿದ ಮೇಲೆ, ಸಾಧನಾ ಮತ್ತು ತೀರ್ಥ ತಂಗಿ ಮತ್ತೆ ಕಸ ಹರಡಿ ತೊಂದ್ರೆ ಕೊಟ್ಟಿದ್ದಾರೆ. ಈ ರೀತಿಯ ಮನೆ ಕೆಲಸ ಮಾಡುವುದು ಎಂದು ಬೈದಿದ್ದಾಳೆ. ಸುಮನಾ ಮಾತನಾಡಲು ಹೋದ್ರೆ, ವಾದ ಮಾಡಬೇಡ ಎಂದು ಹೇಳಿದ್ದಾಳೆ. ಊಟವನ್ನು ಕಸಕ್ಕೆ ಹಾಕಿ ಸುಮನಾ ಉಪವಾಸ ಇರುವಂತೆ ಮಾಡಿದ್ದರು. ಸುಮನಾ ಇದಕ್ಕೆಲ್ಲಾ ಬಗ್ಗಲಿಲ್ಲ.
ಕಳ್ಳತನದ ಆರೋಪ
ಸುಮನಾ ಯಾವಾಗ ಯಾವುದಕ್ಕೂ ಬಗ್ಗಲಿಲ್ವೋ, ಆಗ ಸಾಧನಾ ಕಳ್ಳತನದ ಆರೋಪ ಹೊರಿಸಲು ಸಿದ್ಧವಾಗಿದ್ದಾಳೆ. ಅದನ್ನು ಮನೆ ಕೆಲಸದಾಕೆಯ ಸಹಾಯ ಪಡೆದಿದ್ದಾಳೆ. ಸಾಧನಾ ಹೇಳಿದಂತೆ ಮನೆಯ ಕೆಲಸದವಳು, ಒಡವೆಯನ್ನು ಸುಮಿ ರೂಮ್ ನಲ್ಲಿ ಇಟ್ಟು ಬಂದಿದ್ದಾಳೆ. ಅದನ್ನು ಸುಮನಾ ಮೇಲೆ ಹಾಕೋಕೆ ತಯಾರಾಗಿದ್ದಾರೆ.
ಒಡವೆ ಕದ್ದ ಆರೋಪ
ಸಾಧನಾ ತನ್ನ ಒಡವೆ ಕಳ್ಳತನ ಆಗಿದೆ ಎಂದು ಮನೆಯಲ್ಲಿ ರಂಪ ಮಾಡಿದ್ದಾಳೆ. ನನಗೆ ಸುಮನಾ ಮೇಲೆ ಅನುಮಾನ. ಅವಳ ರೂಮ್ ಚೆಕ್ ಮಾಡಬೇಕು ಎಂದಿದ್ದಾಳೆ. ಅದಕ್ಕೆ ಎಲ್ಲರೂ ಆಕೆಯ ರೂಮ್ ನಲ್ಲಿ ಹೋಗಿ ಚೆಕ್ ಮಾಡುವಾಗ ಒಡವೆ ಸಿಕ್ಕಿದೆ. ಅದಕ್ಕೆ ಸಾಧನಾ ಕೋಪ ಮಾಡಿಕೊಂಡಿದ್ದಾಳೆ.
ಇದನ್ನೂ ಓದಿ: Super Queen: ಎಲ್ಲರನ್ನೂ ನಗಿಸೋ ರೆಮೋ ಬಾಳಲ್ಲಿ ಬಿರುಗಾಳಿ, ಮಗಳಿಗಾಗಿ ಎದ್ದು ನಿಂತ ಸ್ಟ್ರಾಂಗ್ ವುಮೆನ್!
ಸುಮನಾ ಮನೆಯಿಂದ ಆಚೆ ಹೋಗ್ತಾಳಾ?
ಸಾಧನಾ ತನ್ನ ಒಡವೆ ಕದ್ದ ಆರೋಪದ ಮೇಲೆ, ಈ ಕಳ್ಳಿಯನ್ನು ಮನೆಯಿಂದ ಆಚೆ ಕಳಿಸಿ. ಈಕೆ ಇದ್ರೆ ತೊಂದ್ರೆ, ಇನ್ನೂ ಏನೇನು ಕದಿಯುತ್ತಾಳೋ ಗೊತ್ತಿಲ್ಲ ಎಂದು ಹೇಳಿದ್ದಾಳೆ. ಸುಮನಾ ಮನೆಯಿಂದ ಆಚೆ ಹೋಗ್ತಾಳಾ? ಅತ್ತೆ ಪದ್ಮಾ ಇದನ್ನು ತಡೆಯುತ್ತಾಳಾ? ಸಾಧನಾ ಕುತಂತ್ರ ಬಯಲಾಗುತ್ತಾ? ಎಲ್ಲವನ್ನೂ ನೋಡಲು ಕೆಂಡಸಂಪಿಗೆ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ