• Home
 • »
 • News
 • »
 • entertainment
 • »
 • Kendasampige: ಅತ್ತೆ ಇಲ್ಲದಾಗ ಹೆಚ್ಚಾಗುತ್ತಾ ಸಾಧನಾ ಕಾಟ? ಎಲ್ಲವನ್ನೂ ಮೆಟ್ಟಿ ನಿಲ್ತಾಳಾ ಸುಮನಾ!

Kendasampige: ಅತ್ತೆ ಇಲ್ಲದಾಗ ಹೆಚ್ಚಾಗುತ್ತಾ ಸಾಧನಾ ಕಾಟ? ಎಲ್ಲವನ್ನೂ ಮೆಟ್ಟಿ ನಿಲ್ತಾಳಾ ಸುಮನಾ!

ಸುಮನಾಗೆ ಹೆಚ್ಚಾಗುತ್ತಾ ಸಾಧನಾ ಕಾಟ!

ಸುಮನಾಗೆ ಹೆಚ್ಚಾಗುತ್ತಾ ಸಾಧನಾ ಕಾಟ!

ಸಾಧನಾಗೆ ಸುಮನ ಕಂಡ್ರೆ ಆಗಲ್ಲ. ಆಕೆಯನ್ನು ಮನೆಯಿಂದ ಓಡಿಸಬೇಕು ಎಂದುಕೊಂಡಿದ್ದಾಳೆ. ಈಗ ಅತ್ತೆ ಪದ್ಮಾ ಇಲ್ಲ ಅಂದ್ರೆ ಸುಮಾಗೆ ಕಾಟ ಕೊಟ್ಟೇ ಕೊಡುತ್ತಾಳೆ.

 • News18 Kannada
 • Last Updated :
 • Karnataka, India
 • Share this:

  ಕೆಂಡಸಂಪಿಗೆ (Kendasampige) ಧಾರಾವಾಹಿ (Serial) ಕಲರ್ಸ್ ಕನ್ನಡದಲ್ಲಿ (Colors Kannada) ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6.30ಕ್ಕೆ ಪ್ರಸಾರವಾಗುತ್ತಿದೆ. ಶುರುವಾದಾಗಿನಿಂದ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗುತ್ತಿದೆ. ಕೆಂಡಸಂಪಿಗೆ ಧಾರಾವಾಹಿ ಈಗಾಗಲೇ ಅಭಿಮಾನಿಗಳು ಮೆಚ್ಚುಗೆ ಪಡೆದುಕೊಂಡಿದೆ. ಬೇರೆಯವರ ಜೊತೆ ಮದುವೆ ಆಗಬೇಕಿದ್ದ ಸುಮನಾ, ಕಾರ್ಪೊರೇಟರ್ ತೀರ್ಥಂಕರ್ ಜೊತೆ ಮದುವೆ ಆಗಿದ್ದಾರೆ. ಹೇಳದೇ, ಕೇಳದೇ ಸುಮಿಗೆ ತಾಳಿ ಕಟ್ಟಿದ್ದರಿಂದ ತೀರ್ಥಂಕರ್ ಮನೆಯಲ್ಲಿ ಜಗಳವಾಗುತ್ತಲೇ ಇದೆ. ಅತ್ತೆ ಪದ್ಮಾ ಮಾತ್ರ ಸುಮನಾಳನ್ನು ಸೊಸೆ ಎಂದು ಒಪ್ಪಿಕೊಂಡಿದ್ದಾಳೆ. ಸುಮನಾ ನಿಧಾನವಾಗಿ ಮನೆಯವರ ಮನಸ್ಸು ಗೆಲ್ಲುತ್ತಿದ್ದಾಳೆ. ಅತ್ತೆ ಪದ್ಮಾ ದೇವಸ್ಥಾನಕ್ಕೆ (Temple) ಬೇರೆ ಊರಿಗೆ ಹೊರಟಿದ್ದಾಳೆ. ಇದೇ ಸಮಯ ಬಳಿಸಿಕೊಂಡು ಸುಮಿಗೆ ಕಾಟ ಕೊಡ್ತಾಳಾ ಸಾಧನಾ.


  ತೀರ್ಥ ಬರಲಿಲ್ಲ ಎಂದು ಬೇಸರ
  ದೇವಸ್ಥಾನಕ್ಕೆ ಪದ್ಮಾ, ತೀರ್ಥ, ಸುಮನಾ ಎಲ್ಲರೂ ಹೊರಟಿರುತ್ತಾರೆ. ಅಷ್ಟರಲ್ಲಿ ತೀರ್ಥಗೆ ಕಾಲ್ ಬಂದು, ಅವನು ಬರಲ್ಲ ಎಂದು ಹೇಳಿ ಹೋಗಿ ಬಿಡ್ತಾನೆ. ಆದ ಪದ್ಮಾ ಅಳುತ್ತಾ ಕೂರುತ್ತಾಳೆ. ನಿನಗೆ ತಾಳಿ ಶಾಸ್ತ್ರ ಮಾಡಿಸಬೇಕಿತ್ತು. ಅದಕ್ಕೆ ದೇವಸ್ಥಾನಕ್ಕೆ ಹೋಗೋಣ ಎಂದುಕೊಂಡಿದ್ದು. ತೀರ್ಥ ಈಗ ಬರಲ್ಲ ಎಂದು ಹೇಳಿ ಹೋದ ಎಂದು ಪದ್ಮಾ ಕಣ್ಣೀರು ಹಾಕಿದ್ದಾರೆ.


  ಅತ್ತೆಗೆ ಸಮಾಧಾನ ಮಾಡಿದ ಸುಮನಾ
  ಸುಮನಾ ಅತ್ತೆ ಪದ್ಮಾಳನ್ನು ಸಮಾಧಾನ ಮಾಡ್ತಾಳೆ. ಇನ್ನೊಂದಿಲ್ಲ ಎಲ್ಲರೂ ಹೋಗೋಣ. ಸಾಹೇಬ್ರಿಗೆ ಹೆಚ್ಚು ಕೆಲಸ ಇದೆ. ಮಂತ್ರಿ ಅವರನ್ನು ಕೊಲ್ಲೋಕೆ ಬಂದವನು ಸಿಕ್ಕಿ ಬಿದ್ದಿದ್ದಾನೆ. ಅದಕ್ಕೆ ಹೋಗಿದ್ದಾರೆ. ನೀವೊಬ್ಬರೇ ಹೋಗಿ ಬನ್ನಿ ಅತ್ತೆ ಎಂದು ಸುಮನಾ ಹೇಳ್ತಾಳೆ.ಅದಕ್ಕೆ ಪದ್ಮಾ ನೀನು ನನ್ನ ಜೊತೆ ಬಾ. ಇಬ್ಬರು ಹೋಗಿ ಬರೋಣ ಎಂದು ಹೇಳ್ತಾಳೆ. ಆದ್ರೆ ಸುಮನಾ ಒಪ್ಪಲ್ಲ.


  ನಿನ್ನ ಬಿಟ್ಟು ಹೋಗಲ್ಲ
  ಸುಮನಾ ಅತ್ತೆ ನಾನು ಮನೆಯಲ್ಲಿ ಇರುತ್ತೇನೆ. ನೀವು ಹೋಗಿ ಬನ್ನಿ. ನಿನ್ನೊಬ್ಬಳನ್ನೇ ಇಲ್ಲಿ ಬಿಟ್ಟು ನಾನು ಹೋಗಲ್ಲ. ನಾನು ಇಲ್ಲ ಅಂದ್ರೆ ಇವರು ನಿನ್ನ ಸುಮ್ನೆ ಬಿಡಲ್ಲ. ಮೊದಲೇ ಇವರಿಗೆ ನಿನ್ನ ಕಂಡ್ರೆ ಆಗಲ್ಲ. ನಿನಗೆ ಕಾಟ ಕೊಡ್ತಾರೆ ಎಂದು ಪದ್ಮಾ ಹೇಳ್ತಾಳೆ. ಆ ರೀತಿ ಏನು ಆಗಲ್ಲ. ನೀವು ಧೈರ್ಯವಾಗಿ ಹೋಗಿ ಬನ್ನಿ. ಸುಭಾಷ್ ಗೆ ಹುಷಾರಿಲ್ಲ. ಅವರನ್ನು ನೋಡಿಕೊಳ್ಳೋಕೆ ಒಬ್ಬರು ಬೇಕು ಅಲ್ವಾ ಎಂದು ಸುಮನಾ ಹೇಳ್ತಾಳೆ.


  ಇದನ್ನೂ ಓದಿ: Bigg Boss Kannada: ಮತ್ತೆ ಬಿಗ್​ ಬಾಸ್ ಮನೆಗೆ ಬಂದ ಅನುಪಮಾ, ಅಮೂಲ್ಯ, ಕಾವ್ಯಶ್ರೀ ಗೌಡ! 


  ಅತ್ತೆಯನ್ನು ಒಪ್ಪಿಸಿದ ಸುಮಾ
  ನನಗೂ ನಿಮ್ಮ ಒಬ್ಬರನ್ನೇ ಅಷ್ಟು ದೂರ ಕಳಿಸಲು ಇಷ್ಟ ಇಲ್ಲ. ಆದ್ರೆ ಸುಭಾಷ್ ಗಾಗಿ ದೇವಸ್ಥಾನಕ್ಕೆ ಹೋಗೋದು ಎಂದುಕೊಂಡಿದ್ದೀರಿ, ಹೋಗಿ ಬನ್ನಿ ಎಂದು ಸುಮಾ ಹೇಳ್ತಾಳೆ. ಹೋಗಿಲ್ಲ ಅಂದ್ರೆ ಚೆನಾಗಿ ಇರಲ್ಲ ಅಲ್ವಾ? ಹೋಗಿ ಬನ್ನಿ ಎನ್ನುತ್ತಾಳೆ. ಅದಕ್ಕೆ ಅತ್ತೆ ಪದ್ಮಾ ಒಪ್ಪುತ್ತಾರೆ.


  colors kannada serial, kannada serial, sadhana plan to trouble to sumana, kendasampige serial cast, ಕೆಂಡಸಂಪಿಗೆ ಧಾರಾವಾಹಿ, ಅತ್ತೆ ಇಲ್ಲದೇ ಸುಮನಾಗೆ ಹೆಚ್ಚಾಗುತ್ತಾ ಸಾಧನಾ ಕಾಟ!, ಎಲ್ಲವನ್ನೂ ಮೆಟ್ಟಿ ನಿಲ್ತಾಳಾ?, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
  ಅತ್ತೆಯನ್ನು ಒಪ್ಪಿಸಿದ ಸುಮಾ


  ಸಾಧನಾ ಸೇಡು ತೀರಿಸಿಕೊಳ್ತಾಳಾ?
  ಸಾಧನಾಗೆ ಸುಮನ ಕಂಡ್ರೆ ಆಗಲ್ಲ. ಆಕೆಯನ್ನು ಮನೆಯಿಂದ ಓಡಿಸಬೇಕು ಎಂದುಕೊಂಡಿದ್ದಾಳೆ. ಈಗ ಅತ್ತೆ ಪದ್ಮಾ ಇಲ್ಲ ಅಂದ್ರೆ ಸುಮಾಗೆ ಕಾಟ ಕೊಟ್ಟೇ ಕೊಡುತ್ತಾಳೆ. ಸುಮನಾ ಈ ಮನೆಗೆ ತಕ್ಕ ಸೊಸೆಯಲ್ಲ ಎಂಬುವುದು ಸುಮನಾ ವಾದ. ಸುಮನಾಳಿಗೆ ತೊಂದ್ರೆ ಕೊಡಲು ಕಾಯ್ತಾ ಇದ್ದಾಳೆ.


  colors kannada serial, kannada serial, sadhana plan to trouble to sumana, kendasampige serial cast, ಕೆಂಡಸಂಪಿಗೆ ಧಾರಾವಾಹಿ, ಅತ್ತೆ ಇಲ್ಲದೇ ಸುಮನಾಗೆ ಹೆಚ್ಚಾಗುತ್ತಾ ಸಾಧನಾ ಕಾಟ!, ಎಲ್ಲವನ್ನೂ ಮೆಟ್ಟಿ ನಿಲ್ತಾಳಾ?, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
  ಸಾಧನಾ


  ಇದನ್ನೂ ಓದಿ: Lakshana: ನಕ್ಷತ್ರಾ ಏನೇ ಮಾಡಿದ್ರೂ ತಪ್ಪು, ಶಕುಂತಲಾ ದೇವಿ ಟಾರ್ಗೆಟ್ ಮಾಡಿ ಬೈಗುಳ! 


  ಅತ್ತೆ ಜೊತೆ ಹೋಗದೇ ಸುಮನಾ ತಪ್ಪು ಮಾಡಿದ್ಲಾ? ಸಾಧನಾ ಸುಮನಾಗೆ ಇನ್ನೇನು ತೊಂದ್ರೆ ಕೊಡ್ತಾಳೋ? ಮುಂದೇನಾಗುತ್ತೆ ಅಂತ ನೋಡೋಕೆ ಕೆಂಡಸಂಪಿಗೆ ಸೀರಿಯಲ್ ನೋಡಬೇಕು.

  Published by:Savitha Savitha
  First published: