• Home
  • »
  • News
  • »
  • entertainment
  • »
  • Kendasampige: ಸುಮನಾಗೆ ತೊಂದ್ರೆ ಕೊಡಲು ಸಾಧನಾ ಕುತಂತ್ರ, ಮನೆಗೆ ಕರೆಸಿದ್ದು ಯಾರನ್ನು?

Kendasampige: ಸುಮನಾಗೆ ತೊಂದ್ರೆ ಕೊಡಲು ಸಾಧನಾ ಕುತಂತ್ರ, ಮನೆಗೆ ಕರೆಸಿದ್ದು ಯಾರನ್ನು?

ಸುಮನಾಗೆ ತೊಂದ್ರೆ ಕೊಡಲು ಸಾಧನಾ ಕತುಂತ್ರ

ಸುಮನಾಗೆ ತೊಂದ್ರೆ ಕೊಡಲು ಸಾಧನಾ ಕತುಂತ್ರ

ಸಾಧನಾ, ಸುಮನಾಳೇ ಮನೆಯಿಂದ ಆಚೆ ಹೋಗಬೇಕು ಎಂದು ಪ್ಲ್ಯಾನ್ ಮಾಡಿದ್ದಾಳೆ. ಮನೆಯ ಕೆಲಸದಾಕೆಗೆ ದುಡ್ಡು ಕೊಟ್ಟು ರಜೆ ಮೇಲೆ ಕಳಿಸಿದ್ದಾಳೆ. ಮನೆ ಕೆಲಸವನ್ನು ಸುಮನಾ ಮಾಡಲಿ, ಬೇಸರಗೊಂಡು ಈ ಮನೆ ಬಿಟ್ಟು ಹೋಗಬೇಕು ಎಂದು ಕೊಂಡಿದ್ದಾಳೆ.

  • News18 Kannada
  • Last Updated :
  • Karnataka, India
  • Share this:

    ಕೆಂಡಸಂಪಿಗೆ (Kendasampige) ಧಾರಾವಾಹಿ (Serial) ಕಲರ್ಸ್ ಕನ್ನಡದಲ್ಲಿ (Colors Kannada) ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6.30ಕ್ಕೆ ಪ್ರಸಾರವಾಗುತ್ತಿದೆ. ಶುರುವಾದಾಗಿನಿಂದ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗುತ್ತಿದೆ. ಧಾರಾವಾಹಿಯನ್ನು ಈಗಾಗಲೇ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಬೇರೆಯವರ ಜೊತೆ ಮದುವೆ ಆಗ ಬೇಕಿದ್ದ ಸುಮನಾ ಕಾರ್ಪೊರೇಟರ್  ತೀರ್ಥಂಕರ್ ಜೊತೆ ಮದುವೆ ಆಗಿದ್ದಾರೆ. ಹೇಳದೇ, ಕೇಳದೇ ಸುಮಿಗೆ ತಾಳಿ ಕಟ್ಟಿದ್ದರಿಂದ ತೀರ್ಥಂಕರ್ ಮನೆಯಲ್ಲಿ ಜಗಳವಾಗುತ್ತಲೇ ಇದೆ. ಅತ್ತೆ ಪದ್ಮಾ ಮಾತ್ರ ಸುಮನಾಳನ್ನು ಸೊಸೆ ಎಂದು ಒಪ್ಪಿಕೊಂಡಿದ್ದಾಳೆ. ತೀರ್ಥ ಅತ್ತಿಗೆ ಸಾಧನಾ (Sadhana) ಹೇಗಾದ್ರೂ ಮಾಡಿ ಸುಮಿಯನ್ನು ಮನೆಯಿಂದ ಆಚೆ ಓಡಿಸಬೇಕು ಎಂದು ಏನೇನೋ ಪ್ಲ್ಯಾನ್ (Plan) ಮಾಡುತ್ತಿದ್ದಾಳೆ. ಸುಮನಿಗೆ ಕಷ್ಟ ಕೊಡಲು ಮನೆಗೆ ಭಾಗ್ಯಲಕ್ಷ್ಮಿಯ ವೈಷ್ಣವ್ ಅತ್ತೆಯನ್ನು ಕರೆಸಿದ್ದಾಳೆ.


    ಸುಮನಾ ಕಂಡ್ರೆ ಸಾಧನಾಗೆ ಕೋಪ


    ಸುಮನಾ ಹೂವು ಮಾರುವ ಹುಡುಗಿ. ಈ ಮನೆಗೆ ತಕ್ಕವಳಲ್ಲ ಎನ್ನುವುದು ಸಾಧನಾ ವಾದ. ಅವಳನ್ನು ಕಂಡ್ರೆ ಸದಾ ಜಗಳ ಮಾಡುತ್ತಲೇ ಇರುತ್ತಳೆ. ಅವಳು ಮಾಡಿದ ಯಾವುದೇ ಅಡುಗೆಯನ್ನು ತಿನ್ನಲ್ಲ. ಅವಳು ನನ್ನ ಕಣ್ಣು ಮುಂದೆ ಬರಬಾರದು ಎಂದು ತೀರ್ಥನಿಗೂ ಹೇಳಿದ್ಲು. ಈಗ ಅತ್ತೆ ಪದ್ಮಾ ಸುಮನಾಳನ್ನು ಒಪ್ಪಿಕೊಂಡಿದ್ದಾರೆ. ಅದಕ್ಕೆ ಸಾಧನಾಗೆ ಕೋಪ.


    ಮನೆ ಕೆಲಸದಾಕೆಗೆ ರಜೆ


    ಸಾಧನಾ, ಸುಮನಾಳೇ ಮನೆಯಿಂದ ಆಚೆ ಹೋಗಬೇಕು ಎಂದು ಪ್ಲ್ಯಾನ್ ಮಾಡಿದ್ದಾಳೆ. ಮನೆಯ ಕೆಲಸದಾಕೆಗೆ ದುಡ್ಡು ಕೊಟ್ಟು ರಜೆ ಮೇಲೆ ಕಳಿಸಿದ್ದಾಳೆ. ಮನೆ ಕೆಲಸವನ್ನು ಸುಮನಾ ಮಾಡಲಿ, ಬೇಸರಗೊಂಡು ಈ ಮನೆ ಬಿಟ್ಟು ಹೋಗಬೇಕು ಎಂದು ಕೊಂಡಿದ್ದಾಳೆ. ಅವರ ಬಟ್ಟೆಯನ್ನು ಸುಮನಾ ವಾಶ್ ಮಾಡಿ ಕೊಟ್ಟಿದ್ದಾಳೆ.


    ಇದನ್ನೂ ಓದಿ: Chandan Shetty-Nivedita Gowda: ಪುಟ್ಟು ಲಕ್ಷ್ಮೀಯಾದ ನಿವೇದಿತಾ, ಬಾರೇ ಬಾರೇ ಎಂದು ಹಳ್ಳಿ ಸ್ಟೈಲಲ್ಲಿ ಕರೆದ ಚಂದನ್ ಶೆಟ್ಟಿ! 


    ಕಸ ಹರಡಿ, ಸುಮನಾಗೆ ಶಿಕ್ಷೆ


    ಸುಮನಾ ಮನೆಯಲ್ಲಾ ಕ್ಲೀನ್ ಮಾಡಿದ ಮೇಲೆ, ಸಾಧನಾ ಮತ್ತು ತೀರ್ಥ ತಂಗಿ ಮತ್ತೆ ಕಸ ಹರಡಿ ತೊಂದ್ರೆ ಕೊಟ್ಟಿದ್ದಾರೆ. ಈ ರೀತಿಯ ಮನೆ ಕೆಲಸ ಮಾಡುವುದು ಎಂದು ಬೈದಿದ್ದಾಳೆ. ಸುಮನಾ ಮಾತನಾಡಲು ಹೋದ್ರೆ, ವಾದ ಮಾಡಬೇಡ ಎಂದು ಹೇಳಿದ್ದಾಳೆ. ಊಟವನ್ನು ಕಸಕ್ಕೆ ಹಾಕಿ ಸುಮನಾ ಉಪವಾಸ ಇರುವಂತೆ ಮಾಡಿದ್ದಾರೆ.


    colors kannada serial, kannada serial, kendasampige serial, sadhana opposite to sumana, ಸುಮನಾಗೆ ತೊಂದ್ರೆ ಕೊಡಲು ಸಾಧನಾ ಕತುಂತ್ರ, ಕೆಂಡಸಂಪಿಗೆ ಧಾರಾವಾಹಿ, ಕಲರ್ಸ್ ಕನ್ನಡ ಧಾರಾವಾಹಿ, kannada news, karnataka news,
    ಕಸ ಹರಡಿ, ಸುಮನಾಗೆ ಶಿಕ್ಷೆ


    ನನಗೆ ಇದು ಲೆಕ್ಕ ಅಲ್ಲ ಎಂದು ಸುಮಿ
    ಸಾಧನಾ ಊಟ ಚೆಲ್ಲಿದ್ದಕ್ಕೆ ಬೇಸರಗೊಂಡ ಸುಮಿ, ನೀವು ನನಗೆ ಎಷ್ಟೇ ಕೆಲಸ ಕೊಡಿ, ನನಗೆ ಅದು ಕಷ್ಟ ಆಗಲ್ಲ. ಅದು ನನಗೆ ಇಷ್ಟ. ನಾನು ಒಂದು ದಿನ ಉಪವಾಸ ಮಾಡಿದ್ರೆ ನನಗೆ ಏನೂ ಆಗಲ್ಲ ಎಂದಿದ್ದಾಳೆ. ಅದಕ್ಕೆ ಸಾಧನಾ ಇವಳಿಗೆ ಇನ್ನೂ ಕಷ್ಟ ಕೊಡಬೇಕು. ಇವಳೇ ಮನೆಯಿಂದ ಓಡಿ ಹೋಗಬೇಕು ಆ ರೀತಿ ಮಾಡ್ತೀನಿ ಎಂದಿದ್ದಾಳೆ.


    colors kannada serial, kannada serial, kendasampige serial, sadhana opposite to sumana, ಸುಮನಾಗೆ ತೊಂದ್ರೆ ಕೊಡಲು ಸಾಧನಾ ಕತುಂತ್ರ, ಕೆಂಡಸಂಪಿಗೆ ಧಾರಾವಾಹಿ, ಕಲರ್ಸ್ ಕನ್ನಡ ಧಾರಾವಾಹಿ, kannada news, karnataka news,
    ಸುಮನಾಗೆ ಶಿಕ್ಷೆ


    ಮನೆಗೆ ಬಂದ ವರೂಧಿನಿ
    ಸಾಧನಾ ಸುಮನಾಳಿಗೆ ಅವಮಾನ ಮಾಡಿಸಿಬೇಕು ಎಂದು ತನ್ನ ಗೆಳತಿಯರನ್ನು ಕರೆಸಿದ್ದಾಳೆ. ಕನ್ನಡತಿ ಧಾರಾವಾಹಿಯಿಂದ ವರೂಧಿನಿ, ಭಾಗ್ಯಲಕ್ಷ್ಮಿ ಧಾರಾವಾಹಿಯಿಂದ ವೈಷ್ಣವ್ ಅತ್ತೆ ಬಂದಿದ್ದಾರೆ. ಇಬ್ಬರ ಮುಂದೆ ಸುಮನಾಗೆ ಅವಮಾನ ಮಾಡಬೇಕು ಎಂದುಕೊಂಡಿದ್ದಾಳೆ. ತನ್ನ ಗೆಳತಿಯರಿಗೂ ಅವಳಿಗೆ ಹೇಗಾದ್ರೂ ಅವಮಾನ ಮಾಡಿ, ಈ ಮನೆಯಿಂದ ಕಳಿಸಬೇಕು ಎನ್ನುತ್ತಿದ್ದಾಳೆ.


    ಇದನ್ನೂ ಓದಿ: Ramachari: ರಾಮಾಚಾರಿಗೆ ಪ್ರಪೋಸ್ ಮಾಡಲು ಚಾರು ರೆಡಿ, ಅತ್ತಿಗೆಗೆ ಕಿಡ್ನಿ ಕೊಡಲು ರಾಮಾಚಾರಿ ತಯಾರಿ! 


    ಸಾಧನಾ ಅವಮಾನಕ್ಕೆ ಸುಮನಾ ಭಯಪಡುತ್ತಾಳಾ? ತೀರ್ಥನ ಮನೆ ಬಿಟ್ಟು ಹೋಗ್ತಾಳಾ? ಮುಂದೇನಾಗುತ್ತೆ ಅಂತ ನೋಡೋಕೆ ಕೆಂಡಸಂಪಿಗೆ ಸೀರಿಯಲ್ ನೋಡಬೇಕು.

    Published by:Savitha Savitha
    First published: