ಕೆಂಡಸಂಪಿಗೆ ಧಾರಾವಾಹಿ ಕಲರ್ಸ್ ಕನ್ನಡದಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6.30ಕ್ಕೆ ಪ್ರಸಾರವಾಗುತ್ತಿದೆ. ಶುರುವಾದಾಗಿನಿಂದ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗುತ್ತಿದೆ. ಧಾರಾವಾಹಿಯನ್ನು ಈಗಾಗಲೇ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಬೇರೆಯವರ ಜೊತೆ ಮದುವೆ ಆಗ ಬೇಕಿದ್ದ ಸುಮನಾ ಕಾರ್ಪೊರೇಟರ್ ತೀರ್ಥಂಕರ್ ಜೊತೆ ಮದುವೆ ಆಗಿದ್ದಾರೆ. ಹೇಳದೇ, ಕೇಳದೇ ಸುಮಿಗೆ ತಾಳಿ ಕಟ್ಟಿದ್ದರಿಂದ ತೀರ್ಥಂಕರ್ ಮನೆಯಲ್ಲಿ ಜಗಳವಾಗುತ್ತಲೇ ಇದೆ. ಅತ್ತೆ ಪದ್ಮಾ ಮಾತ್ರ ಸುಮನಾಳನ್ನು ಸೊಸೆ ಎಂದು ಒಪ್ಪಿಕೊಂಡಿದ್ದಾಳೆ. ಇದರ ಮಧ್ಯೆ ನಿತ್ಯಾ, ತೀರ್ಥನನ್ನು ತನ್ನೆಡೆ ಒಲಿಸಿಕೊಳ್ಳುವ ಪ್ರಯತ್ನದಲ್ಲಿದ್ದಾಳೆ. ಅದಕ್ಕೆ ತೀರ್ಥಂಕರ್ ಪಕ್ಷ ಸೇರಿಕೊಂಡಿದ್ದಾಳೆ. ಈ ಮೂಲಕ ಅವನ ಜೊತೆ ಇರಲು ಪ್ಲ್ಯಾನ್ ಮಾಡಿದ್ದಾಳೆ.
ನಿತ್ಯಾ ಜೊತೆ ತೀರ್ಥ ಮದುವೆ ಆಗಬೇಕಿತ್ತು
ನಿತ್ಯಾ, ಕಾರ್ಪೊರೇಟರ್ ತೀರ್ಥಂಕರ್ ನನ್ನು ಮದುವೆ ಆಗಬೇಕಿದ್ದ ಹುಡುಗಿ. ಇಬ್ಬರಿಗೂ ಮದುವೆ ನಿಶ್ಚಯವಾಗಿತ್ತು. ಆದ್ರೆ ಸುಮನಾ ಜೊತೆ ತೀರ್ಥಂಕರ್ ಮದುವೆ ನಡೆದು ಬಿಡುತ್ತೆ. ಅದಕ್ಕೆ ತೀರ್ಥ ತಾನು ಮದುವೆ ಆಗ ಬೇಕಿದ್ದ ನಿತ್ಯಾಳಿಗೆ ಮಾತು ಕೊಟ್ಟಿದ್ದ. ನಿತ್ಯಾ ನಿನ್ನ ಕಂಡ್ರೆ ನನಗೆ ತುಂಬಾ ಪ್ರೀತಿ. ಎಲೆಕ್ಷನ್ ಆಗೋವರೆಗೆ ಕಾಯಬೇಕು ನೀನು. ನಾನು ನಿನ್ನನ್ನು ಖಂಡಿತವಾಗಿಯೂ ಮದುವೆ ಆಗ್ತೀನಿ ಎಂದು ಹೇಳಿದ್ದ.
ಈಗ ಬದಲಾಗಿರುವ ತೀರ್ಥ
ಮೊದಲು ತೀರ್ಥನಿಗೆ ನಿತ್ಯಾ ಮೇಲೆ ಗೌರವ, ಪ್ರೀತಿ, ವಿಶ್ವಾಸ ಇತ್ತು. ಆದ್ರೆ ಈ ಹಿಂದೆ ನಿತ್ಯಾ ತೀರ್ಥನನ್ನು ಒಲಿಸಿಕೊಳ್ಳಲು ನಾಟಕ ಮಾಡಿರುತ್ತಾಳೆ. ಆತ್ಮಹತ್ಯೆಗೆ ಪ್ರಯತ್ನಿಸಿದ್ದೆ ಕಾಲು ಮುರಿಯಿತು ಎಂದು ಹೇಳಿರುತ್ತಾಳೆ. ತೀರ್ಥ ಆಕೆಯ ಸೇವೆ ಮಾಡಿರುತ್ತಾನೆ. ಅದು ಸುಳ್ಳು ಎಂದು ಗೊತ್ತಾಗಿ, ಆಕೆ ಮೇಲೆ ನಂಬಿಕೆ ಹೊರಟು ಹೋಗಿದೆ.
ಈಗ ತೀರ್ಥ ಪಕ್ಷ ಸೇರಿದ ನಿತ್ಯಾ
ತೀರ್ಥಂಕರ್ ಕಾಲೊನಿ ಮಕ್ಕಳಿಗೆ ಓದಲು ಸಹಾಯ ಆಗಲು ಕಟ್ಟಡ ಕಟ್ಟಿಸುತ್ತಿದ್ದಾನೆ. ಆ ಸ್ಥಳಕ್ಕೆ ನಿತ್ಯಾ ಬಂದಿದ್ದಾಳೆ. ಅದಕ್ಕೆ ಸುಮನಾ ನೀವು ಏನ್ ಇಲ್ಲ ಎಂದು ಕೇಳಿದ್ದಾಳೆ. ಅದಕ್ಕೆ ನಿತ್ಯಾ, ನಮ್ಮ ಪಕ್ಷದ ಕಾರ್ಯಕ್ರಮ ಇಲ್ಲಿ ನಡೆಯುತ್ತಿರಬೇಕಾದ್ರೆ, ನಾನು ಇಲ್ಲ ಅಂದ್ರೆ ಹೇಗೆ? ನಾನು ಈಗ ತೀರ್ಥ ಅವರ ಪಕ್ಷ ಸೇರಿಕೊಂಡಿದ್ದೇನೆ. ಲೇಡಿಸ್ ವಿಭಾಗಕ್ಕೆ ನಾನೇ ಮುಖ್ಯಸ್ಥೆ ಎಂದು ಹೇಳ್ತಾಳೆ. ಅದನ್ನು ಕೇಳಿ ಸುಮನಾ ಶಾಕ್ ಆಗಿದ್ದಾಳೆ.
ರಾಜಕೀಯದಲ್ಲಿ ಜೊತೆಗಿರುತ್ತೇನೆ
ತೀರ್ಥ ಅವರನ್ನು ಮದುವೆ ಆಗಿ ಅವರ ಜೊತೆಗಿರೋಣ ಎಂದುಕೊಂಡೆ. ಅದು ಆಗಲಿಲ್ಲ. ಅದಕ್ಕೆ ರಾಜಕೀಯದಲ್ಲಾದ್ರೂ ಅವರ ಜೊತೆಗಿರೋಣ ಎಂದು ಎಂದುಕೊಂಡಿದ್ದೇನೆ ಎಂದು ನಿತ್ಯಾ ಹೇಳ್ತಾಳೆ. ಅದಕ್ಕೆ ಸುಮನಾ ತಂಗಿ, ಇವಳು ಹೇಳಿದ್ದ ರೀತಿ, ನಡೆದುಕೊಳ್ಳುತ್ತಿರುವುದು ಸರಿ ಇಲ್ಲ. ಇವಳನ್ನು ಪಕ್ಷದಿಂದ ಕಿತ್ತು ಹಾಕಿಸು ಎಂದು ಸಲಹೆ ನೀಡ್ತಾಳೆ.
ನನ್ನದೇ ಮೊದಲ ವಿರೋಧ
ಈ ಹಿಂದೆ ತೀರ್ಥ ಅಮ್ಮ ಪದ್ಮಾ ಒಮ್ಮೆ ನಿತ್ಯಾನಿಗೆ ವಾರ್ನಿಂಗ್ ಮಾಡಿರುತ್ತಾಳೆ. ನೀನು ನಮ್ಮ ಮನೆಗೆ ಮಗಳ ರೀತಿ ಬರುವುದಾದರೆ ಬಾ. ಯಾವಾಗಲೂ ಆತ್ಮೀಯ ಸ್ವಾಗತ ಮಾಡುತ್ತೇವೆ. ಆದ್ರೆ ಸೊಸೆಯಾಗೇ ಬರ್ತಿನಿ ಅಂದ್ರೆ, ಅದಕ್ಕೆ ವಿರೋಧ ಮಾಡುವುದರಲ್ಲಿ ನಾನೇ ಮೊದಲು ಇರುತ್ತೇನೆ ಹೇಳಿರುತ್ತಾಳೆ.
ಇದನ್ನೂ ಓದಿ: Love Mocktail: ಲವ್ ಮಾಕ್ಟೇಲ್‍ಗೆ 3 ವರ್ಷದ ಸಂಭ್ರಮ, ವಿಶೇಷವಾಗಿ ಧನ್ಯವಾದ ಹೇಳಿದ ಡಾರ್ಲಿಂಗ್ ಕೃಷ್ಣ!
ನಿತ್ಯಾ ಮಾತಿಗೆ ತೀರ್ಥ ಮತ್ತೆ ಮರುಳಾಗ್ತಾನಾ? ಸುಮನಾ ತನ್ನ ಗಂಡನನ್ನು ಹೇಗೆ ಉಳಿಸಿಕೊಳ್ತಾಳೆ? ಮುಂದೇನಾಗುತ್ತೆ ಅಂತ ನೋಡೋಕೆ ಕೆಂಡಸಂಪಿಗೆ ಧಾರಾವಾಹಿ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ