Kendasampige: ಸುಮನಾ-ತೀರ್ಥ ಮಧ್ಯೆ ಬರುತ್ತಿರುವ ನಿತ್ಯಾ! ಕಾರ್ಪೊರೇಟರ್​ಗೆ ಹೊಸ ಭಯ

ಸುಮನಾ-ತೀರ್ಥ ಮಧ್ಯೆ ಬರುತ್ತಿರುವ ನಿತ್ಯಾ

ಸುಮನಾ-ತೀರ್ಥ ಮಧ್ಯೆ ಬರುತ್ತಿರುವ ನಿತ್ಯಾ

ನನಗೆ ನನ್ನ ರೂಮ್ ನಲ್ಲಿ ಭಯ ಆಗುತ್ತೆ. ನಾನು ನಿಮ್ಮ ಜೊತೆ ಇರುತ್ತೇನೆ ಎಂದು ಹೇಳ್ತಾ ಇದ್ದಾಳೆ. ಇದನ್ನು ಕೇಳಿಸಿಕೊಂಡ ಸುಮನಾ ಆತಂಕಗೊಂಡಿದ್ದಾಳೆ.

  • News18 Kannada
  • 3-MIN READ
  • Last Updated :
  • Karnataka, India
  • Share this:

    ಕೆಂಡಸಂಪಿಗೆ (Kendasampige) ಧಾರಾವಾಹಿ (Serial) ಕಲರ್ಸ್ ಕನ್ನಡದಲ್ಲಿ (Colors Kannada) ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6.30ಕ್ಕೆ ಪ್ರಸಾರವಾಗುತ್ತಿದೆ. ಶುರುವಾದಾಗಿನಿಂದ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗುತ್ತಿದೆ. ಧಾರಾವಾಹಿಯನ್ನು ಈಗಾಗಲೇ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಬೇರೆಯವರ ಜೊತೆ ಮದುವೆ ಆಗ ಬೇಕಿದ್ದ ಸುಮನಾ ಕಾರ್ಪೊರೇಟರ್ ತೀರ್ಥಂಕರ್ ಜೊತೆ ಮದುವೆ (Marriage) ಆಗಿದ್ದಾರೆ. ಹೇಳದೇ, ಕೇಳದೇ ಸುಮಿಗೆ ತಾಳಿ ಕಟ್ಟಿದ್ದರಿಂದ ತೀರ್ಥಂಕರ್ ಮನೆಯಲ್ಲಿ ಜಗಳವಾಗುತ್ತಲೇ ಇದೆ. ಅತ್ತೆ ಪದ್ಮಾ ಮಾತ್ರ ಸುಮನಾಳನ್ನು ಸೊಸೆ ಎಂದು ಒಪ್ಪಿಕೊಂಡಿದ್ದಾಳೆ. ಇದರ ಮಧ್ಯೆ ನಿತ್ಯಾ, ತೀರ್ಥನನ್ನು ತನ್ನೆಡೆ ಒಲಿಸಿಕೊಳ್ಳುವ ಪ್ರಯತ್ನದಲ್ಲಿದ್ದಾಳೆ. ಅದಕ್ಕೆ ತೀರ್ಥಂಕರ್ ಪಕ್ಷ ಸೇರಿಕೊಂಡಿದ್ದಾಳೆ. ಈ ಮೂಲಕ ಅವನ ಜೊತೆ ಇರಲು ಪ್ಲ್ಯಾನ್ (Plan) ಮಾಡಿದ್ದಾಳೆ. ಈಗ ಅವನ ರೂಮ್‍ಗೆ ಬಂದಿದ್ದಾಳೆ


    ನಿತ್ಯಾ ಜೊತೆ ತೀರ್ಥ ಮದುವೆ ಆಗಬೇಕಿತ್ತು


    ನಿತ್ಯಾ, ಕಾರ್ಪೊರೇಟರ್ ತೀರ್ಥಂಕರ್ ನನ್ನು ಮದುವೆ ಆಗಬೇಕಿದ್ದ ಹುಡುಗಿ. ಇಬ್ಬರಿಗೂ ಮದುವೆ ನಿಶ್ಚಯವಾಗಿತ್ತು. ಆದ್ರೆ ಸುಮನಾ ಜೊತೆ ತೀರ್ಥಂಕರ್ ಮದುವೆ ನಡೆದು ಬಿಡುತ್ತೆ. ಆದ್ರೆ ಇನ್ನೂ ತೀರ್ಥನ ಮೇಲೆ ಆಸೆ ಇಟ್ಟುಕೊಂಡಿರುವ ನಿತ್ಯ ಅವರ ಪಕ್ಷ ಸೇರಿದ್ದಾಳೆ. ಅವರ ಜೊತೆಯ ಇರಬಹುದು ಎಂದುಕೊಂಡಿದ್ದಾಳೆ.


    ಹೋಟೆಲ್‍ನಲ್ಲಿರುವ ಪಕ್ಷದವರು


    ಎಲೆಕ್ಷನ್ ಇರುವ ಕಾರಣ ಪಕ್ಷದವರೆಲ್ಲಾ ಹೋಟೆಲ್‍ನಲ್ಲಿ ರೂಮ್ ಮಾಡಿಕೊಂಡು ಇದ್ದಾರೆ. ತೀರ್ಥಂಕರ್ ಸಹ ಅದೇ ಹೋಟೆಲ್‍ನಲ್ಲಿ ರೂಮ್‍ನಲ್ಲಿ ಇದ್ದಾರೆ. ಹೇಗೆ ಗೆಲ್ಲಬೇಕು, ಯಾವ ತಂತ್ರ ಮಾಡಬೇಕು. ಎಂಎಲ್‍ಎ ಆಗಬೇಕು ಎಂದು ಕನಸು ಕಂಡಿದ್ದಾನೆ. ಆದ್ರೆ ಅದಕ್ಕೆಲ್ಲಾ ನಿತ್ಯ ಅಡ್ಡಿಯಾಗುವ ರೀತಿ ಕಾಣ್ತಾ ಇದೆ.




    ಸುಮನಾ-ತೀರ್ಥ ಮಧ್ಯೆ ಬರುತ್ತಿರುವ ನಿತ್ಯಾ
    ಸುಮನಾ ಮಚ್ಚದ ಮೇಲಿನಿಂದ ಬಿದ್ದು ಕಾಲು ಮುರಿದುಕೊಂಡಿದ್ದಾಳೆ. ಅದಕ್ಕೆ ತನ್ನ ತಂಗಿ ರಾಜಿಯನ್ನು ಮನೆಗೆ ಕರೆಸಿಕೊಂಡಿದ್ದಾಳೆ. ಆ ವಿಷ್ಯ ಹೇಳಲು ತೀರ್ಥಂಕರ್ ಗೆ ಕಾಲ್ ಮಾಡಿದ್ದಾಳೆ. ಇಬ್ಬರು ಮಾತನಾಡುವಾಗ ನಿತ್ಯಾ ಬರುತ್ತಾಳೆ. ನನಗೆ ನನ್ನ ರೂಮ್ ನಲ್ಲಿ ಭಯ ಆಗುತ್ತೆ ನಾನು ನಿಮ್ಮ ಜೊತೆ ಇರುತ್ತೇನೆ ಎಂದು ಹೇಳ್ತಾ ಇದ್ದಾಳೆ. ಇದನ್ನು ಕೇಳಿಸಿಕೊಂಡ ಸುಮನಾ ಆತಂಕಗೊಂಡಿದ್ದಾಳೆ.


    colors kannada serial, kannada serial, nithya enter to sumana life, kendasampige serial cast, theertha angry, ಕೆಂಡಸಂಪಿಗೆ ಧಾರಾವಾಹಿ, ಸುಮನಾ-ತೀರ್ಥ ಮಧ್ಯೆ ಬರುತ್ತಿರುವ ನಿತ್ಯಾ, ಹೆಸರು ಹಾಳುಗುತ್ತೆ ಎಂದು ಕಾರ್ಪೊರೇಟರ್ ಗೆ ಭಯ!, ಅಪ್ಪನ ಮೇಲಿನ ಕೋಪಕ್ಕೆ ಮನೆ ಬಿಟ್ಟು ಹೋದ ತೀರ್ಥಂಕರ್, ಸುಮನಾಗೆ ಟೆನ್ಶನ್, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
    ಸುಮನಾ


    ನಿತ್ಯಾ ಹೊರಗೆ ಹೋಗಿ
    ಏಕೆ ನಿತ್ಯಾ ಅವರೇ ನನ್ನ ರೂಮಿಗೆ ಬಂದ್ರಿ ಎಂದು ತೀರ್ಥಂಕರ್ ಕೇಳ್ತಾನೆ. ನಿಮ್ಮ ರೂಮ್‍ನಲ್ಲಿ ಸಮಸ್ಯೆ ಇದ್ರೆ ಸರಿ ಮಾಡೋಣ ಎಂದು ಹೇಳ್ತಾನೆ. ಅದಕ್ಕೆ ನಿತ್ಯಾ, ಸಮಸ್ಯೆ ಏನೂ ಇಲ್ಲ. ನನಗೆ ಈ ರೀತಿ ಹೋಟೆಲ್‍ನಲ್ಲಿ ಉಳಿದುಕೊಂಡು ಅಭ್ಯಾಸ ಇಲ್ಲ. ಭಯವಾಗುತ್ತೆ. ಅದಕ್ಕೆ ನಾನು ಇಲ್ಲೇ ಇರುತ್ತೇನೆ ಎಂದು ಹೇಳ್ತಾ ಇದ್ದಾಳೆ. ಅದನ್ನು ಕೇಳಿ ತೀರ್ಥನಿಗೆ ಭಯ ಆಗಿದೆ.


    colors kannada serial, kannada serial, nithya enter to sumana life, kendasampige serial cast, theertha angry, ಕೆಂಡಸಂಪಿಗೆ ಧಾರಾವಾಹಿ, ಸುಮನಾ-ತೀರ್ಥ ಮಧ್ಯೆ ಬರುತ್ತಿರುವ ನಿತ್ಯಾ, ಹೆಸರು ಹಾಳುಗುತ್ತೆ ಎಂದು ಕಾರ್ಪೊರೇಟರ್ ಗೆ ಭಯ!, ಅಪ್ಪನ ಮೇಲಿನ ಕೋಪಕ್ಕೆ ಮನೆ ಬಿಟ್ಟು ಹೋದ ತೀರ್ಥಂಕರ್, ಸುಮನಾಗೆ ಟೆನ್ಶನ್, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
    ನಿತ್ಯಾ


    ಹೆಸರು ಹಾಳುಗುತ್ತೆ ಎಂದು ಭಯ!
    ಪಕ್ಷದ ಕಾರ್ಯಕರ್ತರೆಲ್ಲಾ ಇದೇ ಹೋಟೆಲ್‍ನಲ್ಲಿ ಇದ್ದಾರೆ. ನಾನು ನಿಮ್ಮ ಜೊತೆ ಇರುವುದನ್ನು ನೋಡಿದ್ರೆ, ಅವರು ತಪ್ಪು ತಿಳಿದುಕೊಳ್ತಾರೆ. ಈ ಟೈಮ್‍ನಲ್ಲಿ ನನ್ನ ಹೆಸರು ಹಾಳಾದ್ರೆ ಯಾರು ವೋಟ್ ಹಾಕಲ್ಲ ದಯವಿಟ್ಟು ಹೋಗಿ ಎನ್ನುತ್ತಿದ್ದಾರೆ ತೀರ್ಥಂಕರ್. ಇನ್ನು ಪಕ್ಷದ ಕಾರ್ಯಕರ್ತರೆಲ್ಲಾ, ಈ ರೀತಿ ಆದ್ರೆ ಪಕ್ಷ ಉದ್ಧಾರ್ ಆಗುತ್ತೆ ಬಿಡಿ ಎಂದು ವ್ಯಂಗ್ಯವಾಗಿ ಹೇಳಿಕೊಂಡು ಹೋಗಿದ್ದಾರೆ.


    colors kannada serial, kannada serial, nithya enter to sumana life, kendasampige serial cast, theertha angry, ಕೆಂಡಸಂಪಿಗೆ ಧಾರಾವಾಹಿ, ಸುಮನಾ-ತೀರ್ಥ ಮಧ್ಯೆ ಬರುತ್ತಿರುವ ನಿತ್ಯಾ, ಹೆಸರು ಹಾಳುಗುತ್ತೆ ಎಂದು ಕಾರ್ಪೊರೇಟರ್ ಗೆ ಭಯ!, ಅಪ್ಪನ ಮೇಲಿನ ಕೋಪಕ್ಕೆ ಮನೆ ಬಿಟ್ಟು ಹೋದ ತೀರ್ಥಂಕರ್, ಸುಮನಾಗೆ ಟೆನ್ಶನ್, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
    ತೀರ್ಥಂಕರ್


    ಇದನ್ನೂ ಓದಿ: Lakshana: ಅತ್ತಿಗೆ ಬಗ್ಗೆ ಸತ್ಯ ಹೇಳೋಕೆ ಸಿಗ್ತಿಲ್ಲ ಅವಕಾಶ, ಮತ್ತೆ ಕೆಟ್ಟವನಾಗ್ತಾನಾ ಮೌರ್ಯ? 


    ನಿತ್ಯಾ ಉದ್ದೇಶವೇನು? ತೀರ್ಥನಿಗೆ ಕಾಟ ಕೊಡಲು ಬಂದಿದ್ದಾಳಾ? ಸುಮನಾ ಈ ಎಲ್ಲಾ ಸಮಸ್ಯೆ ಹೇಗೆ ಬಗೆಹರಿಸುತ್ತಾಳೆ? ಮುಂದೇನಾಗುತ್ತೆ ಅಂತ ನೋಡೋಕೆ ಕೆಂಡಸಂಪಿಗೆ ಸೀರಿಯಲ್ ನೋಡಬೇಕು.

    Published by:Savitha Savitha
    First published: