ಕೆಂಡಸಂಪಿಗೆ (Kendasampige) ಧಾರಾವಾಹಿ (Serial) ಕಲರ್ಸ್ ಕನ್ನಡದಲ್ಲಿ (Colors Kannada) ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6.30ಕ್ಕೆ ಪ್ರಸಾರವಾಗುತ್ತಿದೆ. ಶುರುವಾದಾಗಿನಿಂದ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗುತ್ತಿದೆ. ಧಾರಾವಾಹಿಯನ್ನು ಈಗಾಗಲೇ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಬೇರೆಯವರ ಜೊತೆ ಮದುವೆ ಆಗ ಬೇಕಿದ್ದ ಸುಮನಾ ಕಾರ್ಪೊರೇಟರ್ ತೀರ್ಥಂಕರ್ ಜೊತೆ ಮದುವೆ ಆಗಿದ್ದಾರೆ. ಹೇಳದೇ, ಕೇಳದೇ ಸುಮಿಗೆ ತಾಳಿ ಕಟ್ಟಿದ್ದರಿಂದ ತೀರ್ಥಂಕರ್ ಮನೆಯಲ್ಲಿ ಜಗಳವಾಗುತ್ತಲೇ ಇದೆ. ಅತ್ತೆ ಪದ್ಮಾ ಮಾತ್ರ ಸುಮನಾಳನ್ನು ಸೊಸೆ ಎಂದು ಒಪ್ಪಿಕೊಂಡಿದ್ದಾಳೆ. ಇದರ ಮಧ್ಯೆ ನಿತ್ಯಾ, ತೀರ್ಥನನ್ನು ತನ್ನೆಡೆ ಒಲಿಸಿಕೊಳ್ಳುವ ಪ್ರಯತ್ನದಲ್ಲಿದ್ದಾಳೆ. ಅದಕ್ಕೆ ತೀಥರ್ಂಕರ್ ಪಕ್ಷ ಸೇರಿಕೊಂಡಿದ್ದಾಳೆ. ಇವರಿಬ್ಬರು ಜೊತೆ ಇರು ವಿಡಿಯೋ (Video) ವೈರಲ್ (Viral) ಆಗಿದೆ. ಅಲ್ಲದೇ ತೀರ್ಥನ ಪ್ರಾಣಯಕ್ಕೆ ಅಪಾಯ ಇದೆಯಂತೆ.
ತೀರ್ಥ-ನಿತ್ಯಾ ವಿಡಿಯೋ ವೈರಲ್
ನಿತ್ಯಾ ತಲೆ ಸುತ್ತಿ ಬಿದ್ದಿರುತ್ತಾಳೆ. ಆಗ ತೀರ್ಥಂಕರ್ ಆಕೆಗೆ ಸಹಾಯ ಮಾಡಿ ಕಾರಿನಲ್ಲಿ ಮಲಗಿಸುತ್ತಾ ಇರುತ್ತಾನೆ. ಆಗ ವಿರೋಧ ಪಕ್ಷದವರು ವಿಡಿಯೋ ಮಾಡಿಕೊಂಡಿರುತ್ತಾರೆ. ಅದನ್ನು ಎಲ್ಲೆಡೆ ಹರಿಬಿಟ್ಟಿದ್ದಾರೆ. ಇದರಿಂದ ಸಿಎಂ ಸರ್ ಕೋಪಮಾಡಿಕೊಂಡಿದ್ದು, ತೀರ್ಥನ ಜೊತೆ ಮಾತನಾಡಬೇಕು ಎಂದುಕೊಳ್ತಾ ಇದ್ದಾರೆ. ಅದಕ್ಕೆ ತೀರ್ಥಂಕರ್ ಹೊರಟಿದ್ದಾನೆ. ಅವನನ್ನು ಸುಮನಾ ತಡೆಯುತ್ತಿದ್ದಾಳೆ.
ತೀರ್ಥಂಕರ್ ಗೆ ಕೋಪ
ನನಗೆ ಏಕೆ ಈ ರೀತಿ ಆಗ್ತಾ ಇದೆ. ಒಂದಾಂದ ಮೇಲೆ ಒಂದು ಪ್ರಾಬ್ಲಂ ಬರ್ತಾ ಇದೆ ಎಂದು ತೀರ್ಥ ಬೇಸರ ಮಾಡಿಕೊಂಡು ಪಾರ್ಟಿ ಆಫೀಸ್‍ಗೆ ಹೊರಟಿದ್ದಾರೆ. ಸಾಹೇಬ್ರೇ ಹೊರಗಡೆ ಹೊರಟ್ರಾ, ಅತ್ತೆ ಹೇಳಿದಾರೆ ಅಲ್ವಾ ನೀವು ಹೊರಗೆ ಹೋಗಬಾರದು ಅಂತ. ಜ್ಯೋತಿಷಿಗಳು ಹೇಳಿದ್ದಾರೆ. ನಿಮಗೆ ತೊಂದ್ರೆ ಇದೆ ಎಂದು ಹೋಗಬೇಡಿ ಎಂದು ಸುಮನಾ ಹೇಳ್ತಾಳೆ. ಸುಮಾ ಕೋಪ ಬರಿಸಬೇಕಡಿ. ನನ್ನ ಜೀವನದ ಮುಖ್ಯ ದಿನಗಳು ಇವು ಎಂದು ತೀರ್ಥ ಹೇಳ್ತಾನೆ.
ಮನೆಯಿಂದ ಹೊರಟ ತೀರ್ಥಂಕರ್
ಇದೊಂದು ಕಂಟಕ ಕಳೆಯಲಿ, ಆಮೇಲೆ ಹೋಗಿ ಎಂದು ಸುಮನಾ ಹೇಳ್ತಾಳೆ. ಅದಕ್ಕೆ ತೀರ್ಥ ಹೋದ್ರೆ, ಸತ್ತು ಹೋಗಿ ಬಿಡ್ತೀನಾ? ಈ ಯುಗದಲ್ಲಿ ಭವಿಷ್ಯ, ಜಾತಕ ನಂಬ್ತೀರಲ್ಲ. ನನ್ನ ತಲೆ ಮೇಲೆ ದೊಡ್ಡ ಸಮಸ್ಯೆ ಬಂದು ನಿಂತಿದೆ. ನನ್ನ ಹೆಸರಿಗೆ ಕಳಂಕ ಬರ್ತಿದೆ. ನಾನು ಏನೂ ತಪ್ಪು ಮಾಡಿಲ್ಲ. ಒಳ್ಳೆಯವನು ಎಂದು ತೋರಿಸಿಕೊಳ್ಳಬೇಕು ಎಂದು ಒದ್ದಾಡ್ತಾ ಇದೀನಿ ಎಂದು ಸುಮನಾ ತಡೆದ್ರೂ ಮನೆಯಿಂದ ತೀರ್ಥಂಕರ್ ಹೋಗಿದ್ದಾನೆ.
ಜ್ಯೋತಿಷಿ ಹೇಳಿದ್ದೇನು?
ತೀರ್ಥಂಕರ್ ಗೆ ಪದೇ ಪದೇ ತೋಂದರೆಗಳು ಆಗ್ತಾ ಇದ್ದಾವೆ. ಅದಕ್ಕೆ ಸುಮನಾ ಅತ್ತೆ ಪದ್ಮಾ ಮನೆಗೆ ಜ್ಯೋತಿಷಿಗಳನ್ನು ಕರೆಸಿರುತ್ತಾಳೆ. ತೀರ್ಥ ಮತ್ತು ಸುಮನಾ ಜಾತಕ ತೋರಿಸಿರುತ್ತಾಳೆ. ಇಬ್ಬರ ಜಾತಕ ಮ್ಯಾಚೇ ಆಗುವುದಿಲ್ಲ. ಹೇಗೆ ಮದುವೆ ಮಾಡಿಸಿದ್ರಿ ಎಂದು ಕೇಳ್ತಾರೆ. ಅಲ್ಲದೇ ನಿಮ್ಮ ಮಗನ ಪ್ರಾಣಕ್ಕೆ ಅಪಾಯ ಇದೆ ಎಂದು ಹೇಳಿರುತ್ತಾರೆ. ಅದಕ್ಕೆ ಎಲ್ಲರೂ ಗಾಬರಿ ಮಾಡಿಕೊಂಡಿದ್ದಾರೆ.
ತೀರ್ಥಂಕರ್ ಪ್ರಾಣಕ್ಕೆ ಅಪಾಯಾನಾ?
ಸುಮನಾ ತಡೆದ್ರೂ ಮನೆಯಿಂದ ತೀರ್ಥಂಕರ್ ಆಚೆ ಹೋಗಿದ್ದಾನೆ. ಯಾವುದೋ ಕಟ್ಟದ ಮೇಲೆ ನಿಂತುಕೊಂಡು ಮಾತನಾಡ್ತಾ ಇದ್ದಾರೆ.ಹಾಗಾದ್ರೆ ಅಲ್ಲಿಂದ ತೀರ್ಥಂಕರ್ ಬೀಳ್ತಾರಾ? ಅವರ ಪ್ರಾಣಕ್ಕೆ ಅಪಾಯ ಆಗುತ್ತಾ? ಜ್ಯೋತಿಷಿ ಮಾತು ನಿಜವಾಗುತ್ತಾ ನೋಡಬೇಕು. ಎಲ್ಲ ನಿತ್ಯಾ ಕುತಂತ್ರದಿಂದ ಆಗ್ತಾ ಇದೆ.
ಇದನ್ನೂ ಓದಿ: Anupama Serial: ಗೃಹಿಣಿಯರಿಗೆ ಗುಡ್ ನ್ಯೂಸ್, ದೇಶದ ಮನೆ ಮನೆ ತಲುಪಿದ 'ಅನುಪಮಾ' ಇಂದು ಕರುನಾಡಿಗೆ ಎಂಟ್ರಿ
ತೀರ್ಥಂಕರ್‍ಗೆ ಜೀವಕ್ಕೆ ಕಂಟಕನಾ? ಸುಮನಾ ಇದನ್ನು ಹೇಗೆ ನಿಭಾಯಿಸುತ್ತಾಳೆ. ಮುಂದೇನಾಗುತ್ತೆ ಅಂತ ನೋಡೋಕೆ ಕೆಂಡಸಂಪಿಗೆ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ