• Home
 • »
 • News
 • »
 • entertainment
 • »
 • Kendasampige: ತೀರ್ಥಂಕರ್ ಕತೆ ಮುಗಿಸೇಬಿಟ್ನಾ ಕಾಶಿ? ಸಾವಿತ್ರಿಯಂತೆ ಗಂಡನ ಪ್ರಾಣ ಉಳಿಸ್ತಾಳಾ ಸುಮನಾ?

Kendasampige: ತೀರ್ಥಂಕರ್ ಕತೆ ಮುಗಿಸೇಬಿಟ್ನಾ ಕಾಶಿ? ಸಾವಿತ್ರಿಯಂತೆ ಗಂಡನ ಪ್ರಾಣ ಉಳಿಸ್ತಾಳಾ ಸುಮನಾ?

ಕೆಂಡಸಂಪಿಗೆ ಧಾರಾವಾಹಿ

ಕೆಂಡಸಂಪಿಗೆ ಧಾರಾವಾಹಿ

ತೀರ್ಥನನ್ನು ಕೊಲ್ಲಲು ಬಂದಿರುವ ರೌಡಿ, ತೀರ್ಥಂಕರ್ ಪಾರ್ಟಿ ಸೇರುವುದಾಗಿ ನಾಟಕ ಮಾಡಿದ್ದಾನೆ. ನಾನು ನಿಮ್ಮ ಸೇವೆ ಮಾಡ್ತೀನಿ. ನಿಮ್ಮ ಜೊತೆಯೇ ಇರುತ್ತೇನೆ. ಇಲ್ಲ ಅಂದ್ರೆ ಸಾಯ್ತಿನಿ ಎಂದು ಬೆದರಿಸಿ ಪಕ್ಷ ಸೇರಿದ್ದಾನೆ. ಮುಂದೇನಾಗುತ್ತೆ?

 • News18 Kannada
 • Last Updated :
 • Karnataka, India
 • Share this:

  ಕೆಂಡಸಂಪಿಗೆ  (Kendasampige) ಧಾರಾವಾಹಿ (Serial) ಕಲರ್ಸ್ ಕನ್ನಡದಲ್ಲಿ (Colors Kannada) ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6.30ಕ್ಕೆ ಪ್ರಸಾರವಾಗುತ್ತಿದೆ. ಶುರುವಾದಾಗಿನಿಂದ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗುತ್ತಿದೆ. ಕೆಂಡಸಂಪಿಗೆ ಧಾರಾವಾಹಿಯನ್ನು ಈಗಾಗಲೇ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಬೇರೆಯವರ ಜೊತೆ ಮದುವೆ ಆಗ ಬೇಕಿದ್ದ ಸುಮನಾ ಕಾರ್ಪೊರೇಟರ್ ತೀರ್ಥಂಕರ್ ಜೊತೆ ಮದುವೆ ಆಗಿದ್ದಾರೆ. ಅತ್ತೆ ಪದ್ಮಾ ಮಾತ್ರ ಸುಮನಾಳನ್ನು ಸೊಸೆ ಎಂದು ಒಪ್ಪಿಕೊಂಡಿದ್ದಾಳೆ. ಸುಮನಾ ಮದುವೆಗೂ ಮುಂಚೆ, ಪ್ರತಿಭಟನೆಯೊಂದರಲ್ಲಿ ತಮ್ಮ ರಾಜೇಶ್ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿರುತ್ತಾನೆ. ಬೆಂಕಿ ಹೆಚ್ಚಿದ್ದ ಕಾರಣ ಅವನು ಸತ್ತು ಹೋಗುತ್ತಾನೆ. ರಾಜೇಶನ ಸ್ಮರಣೆ ದಿನ ಗಲಾಟೆ ಮಾಡಿ, ಕಾಶಿ ತೀರ್ಥಂಕರ್‌ಗೆ ಚಾಕು ಹಾಕಿಸಿದ್ದಾನೆ.


  ತೀರ್ಥಂಕರ್ ಕೊಲ್ಲಲು ಕಾಶಿ ಸ್ಕೆಚ್
  ತಾನು ಮದುವೆ ಆಗಬೇಕಿದ್ದ ಸುಮಿಯನ್ನು ತೀರ್ಥಂಕರ್ ಮದುವೆ ಆಗಿದ್ದಾನೆ ಎಂದು ಕಾಳಿಗೆ ಕೋಪ. ಅದಕ್ಕೆ ಹೇಗಾದ್ರೂ ಕಾರ್ಪೊರೇಟರ್ ತೀರ್ಥಂಕರ್ ನನ್ನು ಕೊಲ್ಲಬೇಕು ಎಂದು ಪ್ಲ್ಯಾನ್ ಮಾಡಿದ್ದಾನೆ. ಅದಕ್ಕೆ ಈಗಾಗಲೇ ರೌಡಿಯನ್ನು ಕರೆಸಿದ್ದಾನೆ. ಕಾಶಿ ಎಂದುಕೊಂಡಂತೆ ಎಲ್ಲಾ ಸಿದ್ಧತೆಯೂ ನಡೆದಿತ್ತು.


  ತೀರ್ಥನ ಪಾರ್ಟಿ ಸೇರಿದ ಕಾಶಿ ಕಳಿಸಿದ ರೌಡಿ
  ತೀರ್ಥನನ್ನು ಕೊಲ್ಲಲು ಬಂದಿರುವ ರೌಡಿ, ತೀರ್ಥಂಕರ್ ಪಾರ್ಟಿ ಸೇರುವುದಾಗಿ ನಾಟಕ ಮಾಡಿದ್ದಾನೆ. ನಾನು ನಿಮ್ಮ ಸೇವೆ ಮಾಡ್ತೀನಿ. ನಿಮ್ಮ ಜೊತೆಯೇ ಇರುತ್ತೇನೆ. ಇಲ್ಲ ಅಂದ್ರೆ ಸಾಯ್ತಿನಿ ಎಂದು ಬೆದರಿಸಿ ಪಕ್ಷ ಸೇರಿದ್ದಾನೆ.


  ಇದನ್ನೂ ಓದಿ: Shah Rukh Khan: ನಟ ಶಾರುಖ್ ಖಾನ್ ಮನೆ ಗೇಟ್ ವಜ್ರದ್ದಂತೆ! 'ಕಿಂಗ್' ಮನೆ ನಾಮಫಲಕ ನೋಡಲು ಫ್ಯಾನ್ಸ್ ನೂಕುನುಗ್ಗಲು! 


  ರಾಜೇಶನ ಸ್ಮರಣೆ ವೇಳೆ ಗಲಾಟೆ
  ಕಾಲೋನಿ ಜನ, ಕಾರ್ಪೊರೇಟರ್ ತೀರ್ಥಂಕರ್, ಎಂಎಲ್‍ಎ ಎಲ್ಲರೂ ಸೇರಿ ಪಾರ್ಟಿಗಾಗಿ ಸತ್ತ ರಾಜೇಶನ ಸ್ಮರಣೆ ಕಾರ್ಯಕ್ರಮ ಇಟ್ಟುಕೊಂಡಿರುತ್ತಾರೆ. ಕಾರ್ಯಕ್ರಮ ದೊಡ್ಡದಾಗಿರುತ್ತೆ. ಚೆನ್ನಾಗಿ ನಡೆಯುತ್ತಿರುತ್ತೆ. ಆಗ ಅಲ್ಲಿಗೆ ಕಾಶಿ ಬರುತ್ತಾನೆ. ನಮ್ಮ ಕಾಲೋನಿ ಹುಡುಗ ಸಾಯಲು ಇವರೇ ಕಾರಣ. ಈಗ ಬಂದು ಅಳುವ ನಾಟಕ ಮಾಡ್ತಿದ್ದಾರೆ ಎಂದು ಗಲಾಟೆ ಶುರು ಮಾಡ್ತಾನೆ.


  colors kannada serial, kannada serial, hero murder today episode, kendasampige serial, kendasampige serial cast, ಕೆಂಡಸಂಪಿಗೆ ಧಾರಾವಾಹಿ, ತೀರ್ಥಂಕರ್ ಕತೆ ಮುಗಿಸೇಬಿಟ್ನಾ ಕಾಶಿ? ಗಂಡನ ಪ್ರಾಣ ಉಳಿಸಿಕೊಳ್ತಾಳಾ ಸುಮಿ?, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
  ರಾಜೇಶನ ಸ್ಮರಣೆ


  ತೀರ್ಥಂಕರ್ ಗೆ ಚಾಕು ಹಾಕಿದ ಕಾಶಿ ಹುಡುಗ
  ಕಾರ್ಯಕ್ರಮ ನಡೆಯುತ್ತಿದ್ದ ಜಾಗದಲ್ಲಿ ನೋಡು ನೋಡುತ್ತಿದ್ದಂತೆ ಗಲಾಟೆ ಹೆಚ್ಚಾಗುತ್ತೆ. ಕಾಶಿ ಕಡೆಯವರ ಗುಂಪೇ ಬರುತ್ತೆ. ಆಗ ತೀರ್ಥಂಕರ್ ಎಲ್ಲರನ್ನೂ ಮನೆಗೆ ಹೋಗಿ ಎನ್ನುತ್ತಾನೆ. ಹಿಂದೆಯಿಂದ ಬಂದು ಯಾರೂ ತೀರ್ಥನನ್ನು ಗಟ್ಟಿಯಾಗಿ ಹಿಡಿಯುತ್ತಾನೆ. ಆಗ ಕಾಳಿ ಕಡೆ ಹುಡುಗ ಬಂದು ಚಾಕು ಹಾಕುತ್ತಾನೆ. ಎಲ್ಲರೂ ಜೋರಾಗಿ ಕಿರುಚುತ್ತಾರೆ.


  ಗಂಡನನ್ನು ಕಾಪಾಡಿಕೊಳ್ತಾಳಾ ಸುಮಿ?
  ಜನ ಕಿರುಚಿದ್ದನ್ನು ನೋಡಿ ಸುಮನಾ ಓಡಿ ಬರುತ್ತಾಳೆ. ನೋಡಿದ್ರೆ ತೀರ್ಥಂಕರ್ ಗೆ ಚಾಕು ಬಿದ್ದಿರುತ್ತೆ. ಸುಮಿ ಈತ ತನ್ನ ಗಂಡನನ್ನು ಬದುಕಿಸಿಕೊಳ್ಳುವ ಸವಾಲು ಎದುರಾಗಿದೆ. ಸುಮಿ ತನ್ನ ಗಂಡನನ್ನು ಬದುಕಿಸಿಕೊಳ್ತಾಳಾ ನೋಡಬೇಕು.


  colors kannada serial, kannada serial, hero murder today episode, kendasampige serial, kendasampige serial cast, ಕೆಂಡಸಂಪಿಗೆ ಧಾರಾವಾಹಿ, ತೀರ್ಥಂಕರ್ ಕತೆ ಮುಗಿಸೇಬಿಟ್ನಾ ಕಾಶಿ? ಗಂಡನ ಪ್ರಾಣ ಉಳಿಸಿಕೊಳ್ತಾಳಾ ಸುಮಿ?, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
  ಸುಮಿ


  ಮದುವೆ ಚುನಾವಣೆ ಗಿಮಿಕ್
  ತೀರ್ಥಂಕರ್‌ಗೆ ಸುಮನಾ ಕಂಡ್ರೆ ಇಷ್ಟ ಇಲ್ಲ. ಅನಿವಾರ್ಯವಾಗಿ ಎಲ್ಲರ ಮುಂದೆ ಒಳ್ಳೆಯವನಾಗಲು ತಾಳಿ ಕಟ್ಟಿದ್ದಾನೆ. ಅದಕ್ಕೆ ಸುಮ್ಮನೇ ಸುಮನಾ ಮುಂದೆ ಮತ್ತೆ ಗೌರವ ಇದೆ ಎನ್ನೋ ತರ ನಾಟಕ ಆಡ್ತಾ ಇದ್ದಾನೆ. ಸುಮನಾ ತೀರ್ಥಂಕರ್ ನಾಟಕವನ್ನು ನಿಜ ಎಂದುಕೊಂಡಿದ್ದಾಳೆ. ಆತ ಹೇಳಿದಂತೆ ಕೇಳುತ್ತಿದ್ದಾಳೆ. ಆದ್ರೆ ಇದೆಲ್ಲಾ ಚುನಾವಣೆ ಗಿಮಿಕ್ ಮಾತ್ರ.


  ಇದನ್ನೂ ಓದಿ: Bigg Boss Kannada: ಕಾಡಾದ ಬಿಗ್ ಬಾಸ್ ಮನೆ, ಭರ್ಜರಿಯಾಗಿ ವೈಲ್ಡ್ ಕಾರ್ಡ್ ಎಂಟ್ರಿ!


  ಕಾಶಿ ಕುತಂತ್ರ ಬಯಲಾಗುತ್ತಾ?
  ಕಾಶಿಯೇ  ತೀರ್ಥನನ್ನು ಕೊಲ್ಲಲು ಪ್ಲ್ಯಾನ್ ಮಾಡಿದ್ದು ಎಂದು ಗೊತ್ತಾಗುತ್ತಾ? ಅಲ್ಲದೇ ರಾಜೇಶ ಸಾಯಲು ಸಹ ಕಾಳಿಯೇ ಕಾರಣ. 2 ವಿಚಾರ ಬಯಲಿಗೆ ಬಂದ್ರೆ ಸುಮಿ ಇವನನ್ನು ಸುಮ್ಮನೇ ಬಿಡುವುದಿಲ್ಲ.


  colors kannada serial, kannada serial, hero murder today episode, kendasampige serial, kendasampige serial cast, ಕೆಂಡಸಂಪಿಗೆ ಧಾರಾವಾಹಿ, ತೀರ್ಥಂಕರ್ ಕತೆ ಮುಗಿಸೇಬಿಟ್ನಾ ಕಾಶಿ? ಗಂಡನ ಪ್ರಾಣ ಉಳಿಸಿಕೊಳ್ತಾಳಾ ಸುಮಿ?, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
  ಕಾಶಿ


  ತೀರ್ಥಂಕರ್ ಪ್ರಾಣ ಉಳಿಯುತ್ತಾ? ಕಾಶಿ ಜೈಲು ಸೇರ್ತಾನಾ? ಮುಂದೇನಾಗುತ್ತೆ ಅಂತ ನೋಡೋಕೆ ಕೆಂಡಸಂಪಿಗೆ ಸೀರಿಯಲ್ ನೋಡಬೇಕು.

  Published by:Savitha Savitha
  First published: