ಕೆಂಡಸಂಪಿಗೆ (Kendasampige) ಧಾರಾವಾಹಿ (Serial) ಕಲರ್ಸ್ ಕನ್ನಡದಲ್ಲಿ (Colors Kannada) ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6.30ಕ್ಕೆ ಪ್ರಸಾರವಾಗುತ್ತಿದೆ. ಶುರುವಾದಾಗಿನಿಂದ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗುತ್ತಿದೆ. ಧಾರಾವಾಹಿಯನ್ನು ಈಗಾಗಲೇ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಬೇರೆಯವರ ಜೊತೆ ಮದುವೆ ಆಗ ಬೇಕಿದ್ದ ಸುಮನಾ ಕಾರ್ಪೊರೇಟರ್ ತೀರ್ಥಂಕರ್ ಜೊತೆ ಮದುವೆ ಆಗಿದ್ದಾರೆ. ಹೇಳದೇ, ಕೇಳದೇ ಸುಮಿಗೆ ತಾಳಿ ಕಟ್ಟಿದ್ದರಿಂದ ತೀರ್ಥಂಕರ್ ಮನೆಯಲ್ಲಿ ಜಗಳವಾಗುತ್ತಲೇ ಇದೆ. ಅತ್ತೆ ಪದ್ಮಾ ಮಾತ್ರ ಸುಮನಾಳನ್ನು ಸೊಸೆ ಎಂದು ಒಪ್ಪಿಕೊಂಡಿದ್ದಾಳೆ. ಇದರ ಮಧ್ಯೆ ನಿತ್ಯಾ, ತೀರ್ಥನನ್ನು ತನ್ನೆಡೆ ಒಲಿಸಿಕೊಳ್ಳುವ ಪ್ರಯತ್ನದಲ್ಲಿದ್ದಾಳೆ. ಅದಕ್ಕೆ ತೀಥರ್‍ಂಕರ್ ಪಕ್ಷ ಸೇರಿಕೊಂಡಿದ್ದಾಳೆ. ಇವರಿಬ್ಬರು ಜೊತೆ ಇರು ವಿಡಿಯೋ ವೈರಲ್ (Viral) ಆಗಿದೆ. ತೀರ್ಥನ ಪ್ರಾಣ ಅಪಾಯದಲ್ಲಿದೆ. ಅದಕ್ಕೆ ಮಾವ (Father In Law) ಸುಮನಾಗೆ ಬೈದಿದ್ದಾನೆ.
ತೀರ್ಥಂಕರ್ ಪ್ರಾಣಕ್ಕೆ ಅಪಾಯ
ನಿತ್ಯಾ ಮತ್ತು ತೀರ್ಥ ಅವರ ವಿಡಿಯೋ ವೈರಲ್ ಆಗಿದೆ. ಅದರಿಂದ ತೀರ್ಥಂಕರ್ ಬೇಸರವಾಗಿ ಕಟ್ಟಡದ ಮೇಲೆ ನಿಂತು ಮಾತನಾಡುತ್ತಾ ಇರುತ್ತಾನೆ. ಆಗ ಅಲ್ಲಿಂದ ಕಾಲು ಜಾರಿ ಬಿದ್ದಿದ್ದಾನೆ. ಅವನನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಅವನು ಪ್ರಾಣ ಉಳಿಯುವುದು ಕಷ್ಟ ಎಂದು ಡಾಕ್ಟರ್ ಹೇಳಿದ್ದಾರೆ. ಅದಕ್ಕೆ ಎಲ್ಲ ಸುಮನಾ ಕೆಟ್ಟ ಕಾಲ್ಗುಣದಿಂದ ಆಗುತ್ತಿದೆ ಎಂದು ಮನೆಯವರು ಬೇಸರ ಮಾಡಿಕೊಂಡಿದ್ದಾರೆ.
ಸುಮನಾಗೆ ಚುಚ್ಚು ಮಾತುಗಳನ್ನಾಡಿದ ಮಾವ
ನಿನ್ನ ಕಾಲ್ಗುಣ ಎಷ್ಟು ಕೆಟ್ಟದ್ದು ಎಂದು ಮನವರಿಕೆ ಮಾಡಲು ನಿನ್ನ ಕರೆಸಿದ್ದೇನೆ. 10 ವರ್ಷದಿಂದ ನನ್ನ ದೊಡ್ಡ ಮಗ ಒಂದು ಕಂಪನಿಯಲ್ಲಿ ಕೆಲಸ ಮಾಡ್ತಾ ಇದ್ದ. ಒಂದು ಸಣ್ಣ ಆಪಾದನೆ ಇರಲಿಲ್ಲ.
ಈಗ ಏನಾಯ್ತು? ನಿನ್ನಿಂದ ಅವನು ಕೆಲಸ ಕಳೆದುಕೊಳ್ಳಬೇಕಾಯ್ತು. ನನ್ನ ಹೆಂಡ್ತಿ ದೇವರ ಮುಂದೆ ಬೇಡಿಕೊಳ್ತಾ ಇದ್ರೆ, ಅವಳೆ ಸೀರೆ ಸೆರಗಿಗೆ ಬೆಂಕಿ ಬಿತ್ತು. ಇದು ಏನ್ ತೋರಿಸುತ್ತೆ, ನೀನು ಈ ಮನೆಯಲ್ಲಿ ಇರೋವರೆಗೂ ಸುಖ, ಶಾಂತಿ, ನೆಮ್ಮದಿ ಇಲ್ಲ ಎಂದು ಸುಮನಾಗೆ ಮಾವ ಕೇಶವ್ ಪ್ರಸಾದ್ ಹೇಳಿದ್ದಾರೆ.
ಕೆಟ್ಟ ಕಾಲ್ಗುಣದವಳು ನೀನು
ಕೆಟ್ಟು ಕಾಲ್ಗುಣ ಇರೋ ನೀನು, ಇನ್ನೂ ನಮ್ಮ ಮನೆಯಲ್ಲಿ ಇರಬೇಕು ಎಂದು ಬಯಸುತ್ತಾ ಇದ್ದೀಯಾ? ನಿನ್ನ ಕಣ್ಣಿಗೆ ಇದೆಲ್ಲಾ ಕಾಣ್ತಾ ಇಲ್ವಾ? ಯಾವತ್ತು ನಿನ್ನ ನೆರಳು ನನ್ನ ಮಗನ ಮೇಲೆ ಬಿತ್ತೋ, ಅವತ್ತಿಂದ ಕಷ್ಟಗಳ ಸರಮಾಲೆಯೇ ಅವನನ್ನು ಬೆನ್ನು ಹತ್ತಿ ಬಂತು. ನಿನಗೆ ತಾಳಿ ಕಟ್ಟಿದ ಕ್ಷಣದಿಂದ ನಿತ್ಯದ ಬಾಳು ನರಕ ಆಗಿದೆ ಎಂದು ಕೇಶವ್ ಸುಮನಾಗೆ ಚುಚ್ಚು ಮಾತನಾಡಿದ್ದಾನೆ.
ಜ್ಯೋತಿಷಿಗಳು ಅದನ್ನೇ ಹೇಳಿದ್ದರು
ತೀರ್ಥಂಕರ್ ಗೆ ಪದೇ ಪದೇ ತೋಂದರೆಗಳು ಆಗ್ತಾ ಇದ್ದಾವೆ. ಅದಕ್ಕೆ ಸುಮನಾ ಅತ್ತೆ ಪದ್ಮಾ ಮನೆಗೆ ಜ್ಯೋತಿಷಿಗಳನ್ನು ಕರೆಸಿರುತ್ತಾಳೆ. ತೀರ್ಥ ಮತ್ತು ಸುಮನಾ ಜಾತಕ ತೋರಿಸಿರುತ್ತಾಳೆ. ಇಬ್ಬರ ಜಾತಕ ಮ್ಯಾಚೇ ಆಗುವುದಿಲ್ಲ. ಹೇಗೆ ಮದುವೆ ಮಾಡಿಸಿದ್ರಿ ಎಂದು ಕೇಳ್ತಾರೆ. ಸುಮನಾ ಜಾತಕ ಸರಿ ಇಲ್ಲ. ಅವಳಿಂದ ನಿಮಗೆ ತೊಂದ್ರೆ. ಅಲ್ಲದೇ ನಿಮ್ಮ ಮಗನ ಪ್ರಾಣಕ್ಕೆ ಅಪಾಯ ಇದೆ ಎಂದು ಹೇಳಿರುತ್ತಾರೆ.
ಎಲ್ಲಾ ಸಾಧನಾ ನಾಟಕ
ಸುಮನಾ ಕಾಲ್ಗುಣ ಸರಿ ಇಲ್ಲ ಎಂದು ಹಬ್ಬುತ್ತುರುವುದೇ ತೀರ್ಥನ ಅತ್ತಿಗೆ ಸಾಧನಾ. ಆಕೆಗೆ ಸುಮನಾಳನ್ನು ಕಂಡ್ರೆ ಆಗಲ್ಲ. ಅದಕ್ಕೆ ಅವಳನ್ನು ಮನೆಯಿಂದ ಓಡಿಸಲು ಈ ಪ್ಲ್ಯಾನ್ ಮಾಡಿದ್ದಾಳೆ. ಈಕೆ ಮತ್ತು ನಿತ್ಯಾ ಸೇರಿ ಇದನ್ನು ಮಾಡ್ತಾ ಇದ್ದಾರೆ. ಆದ್ರೆ ಕಷ್ಟ ಅನುಭವಿಸುತ್ತಿರುವುದ ಮಾತ್ರ ಸುಮನಾ.
ಇದನ್ನೂ ಓದಿ: Divya Uruduga: ಪಿಂಕ್ ಸೀರೆಯುಟ್ಟು, ಮಲ್ಲಿಗೆ ಮುಡಿದ ದಿವ್ಯಾ ಉರುಡುಗ; ತುಂಬಾ ನೋಡ್ಬೇಡಿ ಲವ್ವು ಆಯ್ತದೆ!
ಸುಮನಾಗೆ ಇನ್ನೂ ಎಷ್ಟು ದಿನ ಈ ಕಷ್ಟ. ಗಂಡನ ಮುಖವನ್ನಾದ್ರೂ ನೋಡಲು ಬಿಡ್ತಾರಾ? ಮುಂದೇನಾಗುತ್ತೆ ಅಂತ ನೋಡೋಕೆ ಕೆಂಡಸಂಪಿಗೆ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ