ಕೆಂಡಸಂಪಿಗೆ (Kendasampige) ಧಾರಾವಾಹಿ ಕಲರ್ಸ್ ಕನ್ನಡದಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6.30ಕ್ಕೆ ಪ್ರಸಾರವಾಗುತ್ತಿದೆ. ಶುರುವಾದಾಗಿನಿಂದ ಜನರನ್ನು ಹಿಡಿದಿಡುವಲ್ಲಿ ಯಶಸ್ವಿ ಆಗುತ್ತಿದೆ. ಧಾರಾವಾಹಿಯನ್ನು ಈಗಾಗಲೇ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಬೇರೆಯವರ ಜೊತೆ ಮದುವೆ ಆಗ ಬೇಕಿದ್ದ ಸುಮನಾ ಕಾರ್ಪೊರೇಟರ್ ತೀರ್ಥಂಕರ್ ಜೊತೆ ಮದುವೆ ಆಗಿದ್ದಾರೆ. ತೀರ್ಥಂಕರ್ ಎಲ್ಲರ ಮುಂದೆ ನಾನು ಒಂದು ಸತ್ಯ ಹೇಳಬೇಕಿದೆ ಎಂದು, ಸುಮನಾ ಕಡೆ ತಿರುಗಿ, ನಾನು ನಿನ್ನ ಮದುವೆಯಾಗಿದ್ದೇ ಎಲೆಕ್ಷನ್‍ಗಾಗಿ. ನೀವು ಏನೂ ತಪ್ಪು ತಿಳಿದುಕೊಳ್ಳಬಾರದು. ಕ್ಷಮಿಸಿ ಎಂದು ಕೇಳಿದ್ದಾನೆ. ಮನೆ ಬಿಟ್ಟು ಹೋಗಿ ಎಂದಿದ್ದಾನೆ. ಆಗ ಸುಮನಾ ತಾನು ತಾಯಿ ಆಗ್ತಿರೋ ವಿಚಾರ ಹೇಳ್ತಾಳೆ.
ಸುಮನಾ ಗರ್ಭಿಣಿ
ಸುಮನಾ ತಲೆ ಸುತ್ತು ಬಂದು ಬಿದ್ದಿರುತ್ತಾಳೆ. ಆಗ ಅಲ್ಲೇ ಇದ್ದ ಒಂದು ಅಜ್ಜಿ ಆಕೆಗೆ ಚಿಕಿತ್ಸೆ ನೀಡಿ, ನಾಡಿ ಮಿಡಿತ ಚೆಕ್ ಮಾಡುತ್ತೆ. ಆಗ ಸುಮನಾ ಗರ್ಭಿಣಿ ಎನ್ನುವ ವಿಚಾರ ಗೊತ್ತಾಗುತ್ತೆ. ಅದನ್ನು ಸುಮನಾಗೆ ಹೇಳುತ್ತೆ. ಅದನ್ನು ಕೇಳಿ ಸುಮನಾ ತುಂಬಾ ಖುಷಿಯಾಗುತ್ತೆ. ಅದನ್ನು ಮನೆಯಲ್ಲಿ ಹೇಳಬೇಕು ಎಂದುಕೊಂಡಿರುತ್ತಾಳೆ, ಅಷ್ಟರಲ್ಲೇ ತೀರ್ಥ, ಎಲೆಕ್ಷನ್‍ಗಾಗಿ ತಾನು ಮದುವೆ ಆಗಿದ್ದು ಎಂದು ಹೇಳ್ತಾನೆ.
ಮನೆ ಬಿಟ್ಟು ಹೋಗದಂತೆ ತಡೆದ ಮಗು
ತೀರ್ಥಂಕರ್ ಮನೆ ಬಿಟ್ಟು ಹೋಗಿ ಎಂದಾಗ, ಸುಮನಾ ನಿಮ್ಮ ಬಳಿ ಮಾತನಾಡಬೇಕು ಎಂದು ಹೇಳ್ತಾಳೆ. ಏನದು ಎಂದು ಕೇಳಿದಾಗ, ನಾನು ಈಗ ಮನೆ ಬಿಟ್ಟು ಹೋಗಲು ಆಗಲ್ಲ. ಆ ರೀತಿ ಬಂಧ ನನ್ನನ್ನು ತಡೆಯುತ್ತಿದೆ ಎಂದು ಹೇಳ್ತಾಳೆ. ಏನದು ಎಂದು ತೀರ್ಥ ಕೇಳಿದಾಗ, ನಾನು ತಾಯಿ ಆಗ್ತಾ ಇದ್ದಾನೆ ಎಂದು ಸುಮನಾ ಹೇಳಿದ್ದಾಳೆ. ಅದನ್ನು ಕೇಳಿ ತೀರ್ಥ ಶಾಕ್ ಆಗಿದ್ದಾನೆ. ಮನೆ ಬಿಟ್ಟು ಹೋಗುವುದನ್ನು ತಡೆದಿದ್ದಾನೆ.
ತಾಯ್ತನದ ಬಗ್ಗೆ ಸುಮನಾ ಮಾತು
ಒಂದು ಹೆಣ್ಣು ಪರಿಪೂರ್ಣ ಆಗೋದೇ ತಾಯಿಯಾದಾಗ, ಅವಳ ಒಡಲಲ್ಲಿ ಒಂದು ಜೀವಕ್ಕೆ ಜನ್ಮ ಕೊಡ್ತಾಳೆ ಅನ್ನುವುದೇ ಒಂದು ಖುಷಿಯ ವಿಚಾರ. ಹೆಣ್ಣಿಗೆ ತನ್ನೊಳಗೆ ಒಂದು ಜೀವ ಬೆಳೆಯುತ್ತೆ ಎನ್ನುವುದು ದೊಡ್ಡ ಸಂತೋಷದ ಸಂಗತಿ. ಆ ಮಗುಗಾಗಿ ತಾಯಿ ಹೊಟ್ಟೆಯಲ್ಲಿದ್ದಾಗಲೇ ತನ್ನ ಯೋಚನೆ, ಖುಷಿ, ಸಂತೋಷ ಎಲ್ಲವನ್ನೂ ಧಾರೆ ಎರೆಯತ್ತಾಳೆ ಎಂದು ಸುಮನಾ ಸುಭಾಷ್ ಬಳಿ ಹೇಳಿದ್ದಾಳೆ.
ತಾಯಿ ಗರ್ಭ ಸ್ವರ್ಗಕ್ಕಿಂತ ಸುರಕ್ಷಿತ
ಮಗು ಅಮ್ಮನ ಹೊಟ್ಟೆಯಲ್ಲೇ ಪಾಠ ಕಲಿಯುತ್ತಾ ಹೋಗುತ್ತೆ. ತಾಯಿ ಮತ್ತು ಮಗುವಿನ ಸಂಬಂಧ ಎಷ್ಟು ಅದ್ಭುತ ಅಲ್ವಾ? ತನ್ನ ಹೊಟ್ಟೆಯಲ್ಲಿನ ಮಗು ಈಡೀ ಜಗತ್ತೆ ಮೆಚ್ಚುವ ರೀತಿ ಇರಬೇಕು ಎನ್ನುವುದು ಎಲ್ಲಾ ತಾಯಂದಿರ ಆಸೆ. ಅದೇ ರೀತಿ ಮಗುವನ್ನು ಬೆಳಸಲು ತಮ್ಮ ಜೀವನ ಮುಡಿಪಿಡುತ್ತಾರೆ. ಅಂಕಿಯಿಲ್ಲದ್ದು ಆಕಾಶ, ಸ್ವರ್ಗಕ್ಕಿಂತ ಸುರಕ್ಷಿತವಾದ ಜಾಗ ತಾಯಿ ಗರ್ಭ. ಅಮ್ಮನ ಮಡಿಲು ಕೈಲಾಸಕ್ಕಿಂತ ಆಪ್ತವಾದದ್ದು ಎಂದು ಸುಮನಾ ಹೇಳಿದ್ದಾಳೆ.
ಸುಮನಾ ಗರ್ಭಿಣಿ ಅಂತ ,ಮಾವನಿಗೆ ಅನುಮಾನ
ಸುಮನಾ ಮಾತನಾಡುವುದನ್ನು ಮಾವ ಕೇಶವ್ ಪ್ರಸಾದ್ ಕೇಳಿಸಿಕೊಂಡಿದ್ದಾರೆ. ಸುಮನಾ ತಾಯ್ತನದ ಬಗ್ಗೆ ಮಾತನಾಡುತ್ತಿದ್ದಾಳೆ. ಇದು ಯಾರೋ ಹೇಳಿ ಮಾತನಾಡುವ ವಿಷ್ಯ ಅಲ್ಲ. ಅನುಭವದಿಂದ ಮಾತನಾಡುವ ವಿಷ್ಯ. ಸುಮನಾ ಗರ್ಭಿಣಿ ಇರಬಹುದು ಎಂದುಕೊಳ್ತಾ ಇದ್ದಾನೆ. ಸುಮನಾ ತಾನು ಗರ್ಭಿಣಿ ಅನ್ನುವ ವಿಚಾರವನ್ನು ಇನ್ನೂ ಎಲ್ಲೋ ಹೇಳಿಕೊಂಡಿಲ್ಲ.
ಇದನ್ನೂ ಓದಿ: Ramachari: ಈ ದೇಶ ಬಿಟ್ಟು ವಿದೇಶಕ್ಕೆ ಹೋಗೋಣ ಎಂದ ಚಾರು, ರಾಮಾಚಾರಿ ಉತ್ತರವೇನು?
ಸುಮನಾ ಗರ್ಭಿಣಿ ಅನ್ನೋ ವಿಚಾರ ಮನೆಯಲ್ಲಿ ಎಲ್ಲರಿಗೂ ಗೊತ್ತಾಗುತ್ತಾ? ತೀರ್ಥ ಈ ಮಗು ಬೇಡ ಅಂತನಾ? ಮುಂದೇನಾಗುತ್ತೆ ಅಂತ ನೋಡೋಕೆ ಕೆಂಡಸಂಪಿಗೆ ಸೀರಿಯಲ್ ನೋಡಬೇಕು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ