ಕೆಂಡಸಂಪಿಗೆ (Kendasampige) ಧಾರಾವಾಹಿ (Serial) ಕಲರ್ಸ್ ಕನ್ನಡದಲ್ಲಿ (Colors Kannada) ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6.30ಕ್ಕೆ ಪ್ರಸಾರವಾಗುತ್ತಿದೆ. ಶುರುವಾದಾಗಿನಿಂದ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗುತ್ತಿದೆ. ಕೆಂಡಸಂಪಿಗೆ ಧಾರಾವಾಹಿ ಈಗಾಗಲೇ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಬೇರೆಯವರ ಜೊತೆ ಮದುವೆ ಆಗಬೇಕಿದ್ದ ಸುಮನಾ, ಕಾರ್ಪೊರೇಟರ್ ತೀರ್ಥಂಕರ್ ಜೊತೆ ಮದುವೆ ಆಗಿದ್ದಾರೆ. ಹೇಳದೇ, ಕೇಳದೇ ಸುಮಿಗೆ ತಾಳಿ ಕಟ್ಟಿದ್ದರಿಂದ ತೀಥರ್ಂಕರ್ ಮನೆಯಲ್ಲಿ ಜಗಳವಾಗುತ್ತಲೇ ಇದೆ. ಅತ್ತೆ ಪದ್ಮಾ ಮಾತ್ರ ಸುಮನಾಳನ್ನು ಸೊಸೆ ಎಂದು ಒಪ್ಪಿಕೊಂಡಿದ್ದಾಳೆ. ಸುಮನಾ ನಿಧಾನವಾಗಿ ಮನೆಯವರ ಮನಸ್ಸು ಗೆಲ್ಲುತ್ತಿದ್ದಾಳೆ. ಈ ತೀರ್ಥ ತಮ್ಮ ಕುಡಿದು ಕುಡಿದು (Drinks) ಹಾಳಾಗುತ್ತಿದ್ದಾನೆ. ಅಲ್ಲದೇ ತಾಯಿ (Mother) ವಿರುದ್ಧವೇ ತಿರುಗಿ ಬಿದ್ದಿದ್ದಾನೆ.
ಕುಡಿದು ಕುಡಿದ ಹಾಳಾಗುತ್ತಿರುವ ಸುಭಾಷ್
ತೀರ್ಥಂಕರ್ ತಮ್ಮ ಕಾಲೇಜಿಗೆ ಹೋಗುತ್ತಿದ್ದು, ಪ್ರೀತಿಸಿದ ಹುಡುಗಿ ಸಿಗಲಿಲ್ಲ ಎಂದು ದಿನವೂ ಕುಡಿಯುತ್ತಿದ್ದಾನೆ. ಕುಡಿದು ಕುಡಿದು ಹಾಳಾಗುತ್ತಿದ್ದಾನೆ. ಅತ್ತಿಗೆ ಸಾಧನಾ ದುಡ್ಡು ಕೊಟ್ಟು ಅವನನ್ನು ಹಾಳು ಮಾಡುತ್ತಿದ್ದಾನೆ. ಈಗ ಅದಕ್ಕೆ ಸುಮನಾ ಕಡಿವಾಣ ಹಾಕುತ್ತಿದ್ದಾಳೆ. ಅದಕ್ಕೆ ಸುಭಾಷ್ಗೆ ಸುಮನಾ ಕಂಡ್ರೆ ಆಗಲ್ಲ.
ಸುಮನಾ ತಂಗಿ ರಾಜಿಗೆ ಅಪಘಾತ
ಸುಭಾಷ್ ಕುಡಿದು ಗಾಡಿ ಓಡಿಸುವಾಗ ರಾಜಿ ಅಡ್ಡ ಬಂದಿದ್ದಾಳೆ. ಆಕೆಗೆ ಅವನು ಗುದ್ದಿದ್ದಾನೆ. ಇದರಿಂದ ರಾಜಿ ಕೈ ಮುರಿದು ಆಸ್ಪತ್ರೆ ಸೇರಿದ್ದಾಳೆ. ಸುಮನಾ ಮತ್ತು ಪದ್ಮಾ ಆಸ್ಪತ್ರೆಗೆ ಬರುತ್ತಾರೆ. ಅಪಘಾತ ಮಾಡಿದ್ದು ತನ್ನ ಮಗನೇ ಎಂದು ಗೊತ್ತಿಲ್ಲದೇ ಬೈಯುತ್ತಿದ್ದಾಳೆ. ನಂತರ ತನ್ನ ಮಗ ಎಂದು ಗೊತ್ತಾಗಿ ಬೇಸರ ಮಾಡಿಕೊಂಡಿದ್ದಾಳೆ.
ಇದನ್ನೂ ಓದಿ: Kannadathi: ನೀರಿಗೆ ಬಿದ್ದಿದ್ಯಾಕೆ ಭುವಿ? ಹೀರೋ ಪತ್ನಿಗೆ ಏನಾಯ್ತು?
ಮಗನ ತಪ್ಪು ನೋಡಿ ಪದ್ಮಾ ಕಣ್ಣೀರು
ನೀನಾ ಕುಡಿದು ಗಾಡಿ ಓಡಿಸಿದ್ದು. ಎಷ್ಟು ಸಾರಿ ಹೇಳಿದ್ದೇನೆ ಕುಡಿದು ಗಾಡಿ ಓಡಿಸಬೇಡಿ ಅಂತ. ಕುಡಿ ಬೇಡ, ಕುಡಿ ಬೇಡ ಅಂದ್ರೂ ಕೇಳಲ್ಲ. ಅನ್ಯಾಯವಾಗಿ ರಾಜಿ ಕೈ ಮುರಿದು ಹಾಕಿದೆ. ಅವಳ ಜೀವಕ್ಕೆ ಏನಾದ್ರೂ ಅಪಾಯ ಆಗಿದ್ರೆ ಕೊಲೆಗಾರ ಆಗ್ತಿದ್ದೆ. ಇವನು ಈ ಜನ್ಮದಲ್ಲಿ ಬುದ್ಧಿ ಕಲಿಯಲ್ಲ. ಯಾಕೋ ನನ್ನ ಹೊಟ್ಟೆಯಲ್ಲಿ ಹುಟ್ಟಿದೆ ಎಂದು ಸುಭಾಷ್ ನನ್ನು ಪದ್ಮಾ ಕೇಳುತ್ತಿದ್ದಾಳೆ.
ಅಮ್ಮನ ವಿರುದ್ಧ ತಿರುಗಿ ಬಿದ್ದ ಸುಭಾಷ್
ಸುಭಾಷ್ಗೆ ಪದ್ಮಾ ಬುದ್ಧಿ ಹೇಳುತ್ತಿದ್ದಳು. ಆಗ ಸುಭಾಷ್ ರಾಜಿ ಪ್ರಾಣ ಹೋಗಿ ಬಿಡಬೇಕಿತ್ತು ಎನ್ನುತ್ತಾನೆ. ಅದಕ್ಕೆ ಪದ್ಮಾ ಮಗನಿಗೆ ಹೊಡೆಯಲು ಹೋಗ್ತಾಳೆ. ಆಗ ಅಮ್ಮನ ಕೈ ತಡೆಯುತ್ತಾನೆ. ಅಮ್ಮನ ವಿರುದ್ಧವೇ ತಿರುಗಿ ಬೀಳ್ತಾನೆ. ಪದ್ಮಾಗೆ ಮಗ, ವಿರುದ್ಧ ಆದ ಎಂದು ಆಘಾತಕ್ಕೆ ಒಳಗಾಗಿದ್ದಾಳೆ. ತಲೆ ಸುತ್ತಿ ಬಿದ್ದಿದ್ದಾಳೆ.
ಸುಮನಾ ಮೇಲೆ ಆರೋಪ
ಸುಮನಾ ಈ ಮನೆಗೆ ಸೊಸೆಯಾಗಿ ಬಂದ ಮೇಲೆ ಎಲ್ಲವೂ ಬದಲಾಗಿದೆ. ದಿನವೂ ಜಗಳ ನಡೆಯುತ್ತೆ. ಮನೆಯವರಿಗೆ ನೆಮ್ಮದಿ ಇಲ್ಲ. ಈಕೆಯನ್ನು ಮೊದಲು ಮನೆಯಿಂದ ಆಚೆ ಕಳಿಸಿ ಎಂದು ಸಾಧನಾ ಹೇಳುತ್ತಿದ್ದಾಳೆ. ಅದನ್ನು ಕೇಳಿ ಸುಮನಾ ಶಾಕ್ ಆಗಿದ್ದಾಳೆ. ಮನೆಯಲ್ಲಿ ಏನೇ ಆದ್ರೂ ನನ್ನ ಮೇಲೆ ಬರುತ್ತಾರೆ ಎಂದು ಸುಮಿ ಬೇಸರವಾಗಿದ್ದಾಳೆ.
ಇದನ್ನೂ ಓದಿ: Bigg Boss Kannada: ಹೆಂಡ್ತಿ ಕಾಲಿಗೆ ಬಿದ್ದ ರೂಪೇಶ್ ರಾಜಣ್ಣ! ನಿಮ್ಮ ಮೇಲೆ ಗೌರವ ಹೆಚ್ಚಾಯ್ತು ಎಂದ ಅಭಿಮಾನಿಗಳು
ಸುಮನಾ ಎಲ್ಲಾ ಸಮಸ್ಯೆ ಪರಿಹಾರ ಮಾಡ್ತಾಳಾ? ಸುಭಾಷ್ ಸರಿ ಹೋಗ್ತಾನಾ? ಮುಂದೇನಾಗುತ್ತೆ ಅಂತ ನೋಡೋಕೆ ಕೆಂಡಸಂಪಿಗೆ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ