• Home
 • »
 • News
 • »
 • entertainment
 • »
 • Kendasampige: ಕಾಳಿಯ ಕುತಂತ್ರ ಬುದ್ಧಿ! ಸುಮ್ನೆ ಬಿಡಲ್ಲ ಸುಮನಾ

Kendasampige: ಕಾಳಿಯ ಕುತಂತ್ರ ಬುದ್ಧಿ! ಸುಮ್ನೆ ಬಿಡಲ್ಲ ಸುಮನಾ

ಸುಮನಾ

ಸುಮನಾ

ಕಾಳಿ ಸುಮಿ ಬಗ್ಗೆ ಇಲ್ಲ ಸಲ್ಲದ ಅಪಪ್ರಚಾರ ಮಾಡ್ತಾ ಇದ್ದಾನೆ. ತೀರ್ಥಂಕರ್ ಸೇವೆಯಿಂದ ನಮ್ಮ ಜನ ಮತ ಹಾಕುತ್ತಿಲ್ಲ. ಸುಮಿ ಮಾತು ಕೇಳಿ ಮತ ಹಾಕುತ್ತಿದ್ದಾರೆ. ಸುಮಿಗೂ, ತೀರ್ಥಂಕರ್ ಗೆ  ಸಂಬಂಧ ಇದೆ ಎಂದು ಪ್ರಚಾರ ಮಾಡುತ್ತಿದ್ದಾನೆ.

 • Share this:

  ಕೆಂಡಸಂಪಿಗೆ (Kendasampige) ಅನ್ನೋ ಧಾರಾವಾಹಿ (Serial), ಕಲರ್ಸ್ ಕನ್ನಡದಲ್ಲಿ (Colors Kannada) ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6.30ಕ್ಕೆ ಪ್ರಸಾರವಾಗುತ್ತಿದೆ. ಶುರುವಾದಾಗಿನಿಂದ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗುತ್ತಿದೆ. ಈ ಕಥೆಯ ನಾಯಕಿ ಸುಮನಾ (Sumana). ಅಪ್ಪನಿಗೆ ಆರೋಗ್ಯ ಸರಿ ಇಲ್ಲದ ಕಾರಣ ಹೂವನ್ನು ಮಾರಿ ಸಂಸಾರ ಸಾಗಿಸುತ್ತಿದ್ದಾಳೆ. ಅಮ್ಮ ಬೇರೆ ಇಲ್ಲ. ತಮ್ಮ, ತಂಗಿಗೆ ಅಮ್ಮನ (Mother) ಸ್ಥಾನದಲ್ಲಿ ನಿಂತಿದ್ದಳು. ಮನೆಯ ಕಷ್ಟಕ್ಕೆ ಹಣ ಬೇಕು ಎಂದು ತಮ್ಮ ರಾಜೇಶ ಪ್ರತಿಭಟನೆಯಲ್ಲಿ ಬೆಂಕಿ ಹಚ್ಚಿಕೊಂಡು ಸಾವನ್ನಪ್ಪಿದ್ದಾನೆ. ಆ ನೋವನ್ನೇ ಸುಮಿಗೆ ಮರೆಯಲು ಆಗುತ್ತಿಲ್ಲ. ಈ ನಡುವೆ ಕಾಲೋನಿ ಜನರಿಗೆ ಕಷ್ಟದ ಮೇಲೆ ಕಷ್ಟ ಬರುತ್ತಿದೆ. ಅದಲ್ಲದೇ ವಿಜಯಮ್ಮನ ಮಗ ಕಾಳಿ ಸುಮಿ, ಕಾರ್ಪೊರೇಟರ್  ಗೆ   ಸಂಬಂಧ ಇದೆ ಎಂದು ಎಲ್ಲೆಡೆ ಸುದ್ದಿ ಹರಡಿಸುತ್ತಿದ್ದಾನೆ.


  ಮತ್ತೆ ಎಲೆಕ್ಷನ್‍ಗೆ ಓಕೆ ಎಂದ ಜನ
  ಎಲೆಕ್ಷನ್ ಹತ್ತಿರ ಸಮೀಪಿಸುತ್ತಿದ್ದಂತೆ, ಕಾಲೋನಿಯಲ್ಲಿ ಜಗಳಗಳು ಹೆಚ್ಚಾಗುತ್ತಿವೆ. ಚುನಾವಣಿಯಿಂದ ಕಾಲೋನಿ ಒಗ್ಗಟ್ಟು ಒಡೆಯುತ್ತಿದೆ. ಅದಕ್ಕೆ ಜನ ಎಲ್ಲಾ ಸೇರಿ, ಈ ಚುನಾವಣೆಯಿಂದ ನಮ್ಮ ಒಗ್ಗಟ್ಟು ಒಡೆಯಬಾರದು ಎಂದು ಎಲೆಕ್ಷನ್ ಬಹಿಷ್ಕಾರ ಮಾಡಿದ್ದರು.


  ಕಾಲೋನಿ ಜನ ಚರಂಡಿ ನೀರು ಕುಡಿದು ಕಷ್ಟದಲ್ಲಿದ್ದಾಗ, ತೀರ್ಥಂಕರ್ ಅಲ್ಲಿಗೆ ಬರುತ್ತಾರೆ. ಮತ ಹಾಕಿಲ್ಲ ಅಂದ್ರೂ ಪರವಾಗಿಲ್ಲ. ನಾನು ಸದಾ ನಿಮ್ಮ ಸೇವೆಗೆ ಸಿದ್ಧ ಇರುತ್ತೇನೆ ಎನ್ನುತ್ತಾರೆ. ಅದಕ್ಕೆ ಕಾಲೋನಿ ಜನ ಖುಷಿ ಆಗ್ತಾರೆ. ತೀರ್ಥಂಕರ್ ಬಂದ ಮೇಲೆ ಕಾಲೋನಿ ಜನರ ಕಷ್ಟ ತೀರಿದಂತೆ ಎನ್ನುತ್ತಾರೆ.


  ತೀರ್ಥಂಕರ್ ಎಂಎಲ್‍ಎ
  ಕಾಲೋನಿ ಜನರ ಕಷ್ಟಕ್ಕೆ ನಿಂತ ಕಾರ್ಪೊರೇಟರ್ ತೀರ್ಥಂಕರ್  ಗೆ ಜನರ ಸಂಪೂರ್ಣ ಬೆಂಬಲ ಸಿಕ್ಕಿದೆ. ತಾವು ಮತ್ತೆ ಮತ ಹಾಕುವುದಾಗಿ ಹೇಳಿದ್ದಾರೆ. ಅದಲ್ಲದೇ ನಿಮ್ಮನ್ನೇ ಎಂಎಲ್‍ಎ ಮಾಡ್ತೀವಿ ಸರ್ ಎಂದು ಮಾತು ಕೊಟ್ಟಿದ್ದಾರೆ. ಇದರಿಂದ ತೀರ್ಥಂಕರ್ ತುಂಬಾ ಖುಷಿಯಾಗಿದ್ದಾರೆ. ಜನಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.


  ಇದನ್ನೂ ಓದಿ: Sathya: ಸತ್ಯಾಗೆ ಕಾರ್ತಿಕ್ ಕೊಟ್ಟ ಸಪ್ರ್ರೈಸ್ ಏನು? ಲೇಡಿ ರಾಮಾಚಾರಿಗೆ ಖುಷಿ ಆಗುತ್ತಾ?


  ಸುಮಿ ಬಗ್ಗೆ ಕಾಳಿ ಅಪಪ್ರಚಾರ
  ಬಡ್ಡಿ ಕೊಡೋ ವಿಜಯಮ್ಮನ ಮಗ ಕಾಳಿ, ತೀರ್ಥಂಕರ್ ವಿರುದ್ಧ ಪಕ್ಷದವರ ಜೊತೆ ಸೇರಿದ್ದಾರೆ. ಸುಮಿ ಬಗ್ಗೆ ಇಲ್ಲ ಸಲ್ಲದ ಅಪಪ್ರಚಾರ ಮಾಡ್ತಾ ಇದ್ದಾನೆ. ತೀರ್ಥಂಕರ್ ಸೇವೆಯಿಂದ ನಮ್ಮ ಜನ ಮತ ಹಾಕುತ್ತಿಲ್ಲ. ಸುಮಿ ಮಾತು ಕೇಳಿ ಮತ ಹಾಕುತ್ತಿದ್ದಾರೆ. ಸುಮಿಗೂ, ತೀರ್ಥಂಕರ್ ಗೆ  ಸಂಬಂಧ ಇದೆ ಎಂದು ಪ್ರಚಾರ ಮಾಡುತ್ತಿದ್ದಾನೆ.


  Colors Kannada serial, Kannada serial, Kendasampige Serial, Kendasampige serial cast, ಕೆಂಡಸಂಪಿಗೆ ಧಾರಾವಾಹಿ, ಕಾಳಿಗೆ ಬುದ್ಧಿ ಕಲಿಸಲು ಮಹಾಕಾಳಿ ಅವತಾರ ಎತ್ತಿದ್ದಾಳೆ ಸುಮನಾ, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
  ತೀರ್ಥಂಕರ್


  ಸುಮಿ ತಂದೆಗೆ ಗಾಬರಿ
  ಕಾಳಿ ಪ್ರಚಾರ ಮಾಡುತ್ತಿರುವುದನ್ನು ಕೇಳಿಸಿಕೊಂಡ ಸುಮಿ ತಂದೆ ಗಾಬರಿ ಆಗಿದ್ದಾರೆ. ತೀರ್ಥಂಕರ್ ಜೊತೆ ಪ್ರಚಾರಕ್ಕೆ ಹೋಗುತ್ತಿದ್ದವಳನ್ನು ಕರೆದು,  ಅವರ ಜೊತೆ ಹೋಗಬೇಡ. ಕಾಳಿ ನಿಮ್ಮಿಬ್ಬರ ಬಗ್ಗೆ ಸಂಬಂಧ ಕಟ್ಟಿ ಮಾತನಾಡುತ್ತಿದ್ದಾನೆ ಎಂದು ಹೇಳುತ್ತಾರೆ. ಅದನ್ನು ಕೇಳಿ ಅಲ್ಲಿರುವವರೆಲ್ಲಾ ಶಾಕ್ ಆಗುತ್ತಾರೆ. ಜೊತೆಗೆ ಕೋಪಗೊಳ್ಳುತ್ತಾರೆ.


  Colors Kannada serial, Kannada serial, Kendasampige Serial, Kendasampige serial cast, ಕೆಂಡಸಂಪಿಗೆ ಧಾರಾವಾಹಿ, ಕಾಳಿಗೆ ಬುದ್ಧಿ ಕಲಿಸಲು ಮಹಾಕಾಳಿ ಅವತಾರ ಎತ್ತಿದ್ದಾಳೆ ಸುಮನಾ, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
  ಸುಮಿ ತಂದೆ


  ಮಹಾಕಾಳಿ ಅವತಾರ ಎತ್ತಿದೆ ಸುಮಿ
  ಸುಮಿಗೆ ಈ ವಿಷ್ಯ ಕೇಳಿ ಕೋಪ ಹೆಚ್ಚಾಗುತ್ತೆ. ಅದಕ್ಕೆ ಕಾಳಿ ಪ್ರಚಾರ ಮಾಡುತ್ತಿದ್ದ ಜಾಗಕ್ಕೆ ಹೋಗಿದ್ದಾಳೆ. ತನ್ನ ಬಗ್ಗೆ ಕೆಟ್ಟದಾಗಿ ಮಾತನಾಡಿದವರ ಬಗ್ಗೆ ಬಿಡೋ ಪ್ರಶ್ನೆಯೇ ಇಲ್ಲ ಎಂದಿದ್ದಾಳೆ. ಸುಮಿ ಬಂದ ರಭಸ ನೋಡಿ ಕಾಳಿ ಭಯಗೊಂಡಿದ್ದಾನೆ. ಇನ್ನೇನಾಗುತ್ತೋ ಅಂತ ಹೆದರಿಕೊಂಡಿದ್ದಾನೆ. ಸುಮಿ ಜೊತೆ ಕಾಲೋನಿ ಜನ, ಕಾರ್ಪೊರೇಟರ್ ತೀರ್ಥಂಕರ್ ಸಹ ಬಂದಿದ್ದಾರೆ. ಕಾಳಿಗೆ ಸರಿಯಾದ ಬುದ್ಧಿ ಕಲಿಸ್ತಾರೆ ಇವತ್ತು.


  ಇದನ್ನೂ ಓದಿ: BBK Season 9: ಬಿಗ್ ಬಾಸ್ 9ರ ಮೊದಲ ಕ್ಯಾಪ್ಟನ್ ಪಟ್ಟಕ್ಕೆ ರೇಸ್ ಶುರು! 


  ಎಲೆಕ್ಷನ್ ಹತ್ತಿರ ಬರುತ್ತಿದ್ದಂತೆ ಜನರಲ್ಲಿ ವೈ ಮನಸ್ಸು ಶುರುವಾಗಿದೆ. ಹೋಗಿ ಬಂದು ಕಷ್ಟ ಸುಮ ಮನೆ ಬಾಗಿಲಿಗೆ ಬರುತ್ತಿದೆ. ಇದನ್ನ ಸುಮಿ ಹೇಗೆ ನಿಭಾಯಿಸ್ತಾಳೆ ಅಂತ ನೋಡೋಕೆ ಕೆಂಡಸಂಪಿಗೆ ಸೀರಿಯಲ್ ನೋಡಬೇಕು.

  Published by:Savitha Savitha
  First published: