Kendasampige: ಹೆಣ್ಣು ಕೇಳೋಕೆ ಮನೆಗೆ ಬಂದಿದ್ದಾಳೆ ವಿಜಯ, ಸುಮಿ ತಮ್ಮ-ವಿಜಿ ಮಗನ ನಡುವೆ ಜೋರು ಗಲಾಟೆ!

ದುಡ್ಡು ಕೊಟ್ಟಿದ್ದನ್ನೇ ಮುಂದಿಟ್ಟುಕೊಂಡು ವಿಜಯ, ತನ್ನ ಮಗ, ನೆಂಟರ ಜೊತೆ ಹೆಣ್ಣು ಕೇಳಲು ಸುಮಿ ಮನೆಗೆ ಬಂದಿದ್ದಾಳೆ. ಅದನ್ನು ನೋಡಿ ಮನೆಯವರೆಲ್ಲಾ ಶಾಕ್ ಆಗಿದ್ದಾರೆ. ನೀವ್ ಯಾಕೆ ಹೆಣ್ಣು ಕೇಳಲು ಬಂದ್ರಿ ಅಂದ್ರೆ, ಅಪ್ಪನ ಆಪರೇಷನ್‍ಗೆ ಸುಮಿ ದುಡ್ಡು ಪಡೆದಿದ್ದಾಳೆ. ಅದಕ್ಕೆ ತನ್ನನ್ನೇ ತಾನೇ ಧಾರೆ ಎರೆದುಕೊಂಡಿದ್ದಾಳೆ ಎಂದು ಹೇಳುತ್ತಾಳೆ. ವಿಜಯ ಮಾತು ಕೇಳಿ ಎಲ್ಲರೂ ಗಾಬರಿಯಾಗಿದ್ದಾರೆ.

ಕೆಂಡಸಂಪಿಗೆ

ಕೆಂಡಸಂಪಿಗೆ

  • Share this:
    ಕೆಂಡಸಂಪಿಗೆ (Kendasampige) ಅನ್ನೋ ಹೊಸ ಧಾರಾವಾಹಿ (New Serial) ಕಳೆದ ವಾರದಿಂದ, ಕಲರ್ಸ್ ಕನ್ನಡದಲ್ಲಿ (Colors Kannada) ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6.30ಕ್ಕೆ ಪ್ರಸಾರವಾಗುತ್ತಿದೆ. ಶುರುವಾದ ಹೊಸದರಲ್ಲೇ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗುತ್ತಿದೆ. ಈ ಕಥೆಯ ನಾಯಕಿ ಸುಮನಾ (Sumana). ಅಪ್ಪನಿಗೆ ಆರೋಗ್ಯ ಸರಿ ಇಲ್ಲದ ಕಾರಣ ಹೂವನ್ನು ಮಾರಿ ಸಂಸಾರ ಸಾಗಿಸುತ್ತಿದ್ದಾಳೆ. ಅಮ್ಮ ಬೇರೆ ಇಲ್ಲ. ತಮ್ಮ, ತಂಗಿಗೆ ಅಮ್ಮನ ಸ್ಥಾನದಲ್ಲಿ ನಿಂತಿದ್ದಾಳೆ. ತನ್ನ ತಮ್ಮ ಪರೀಕ್ಷೆಯಲ್ಲಿ ಪಾಸಾಗಲಿಲ್ಲ ಅಂತ ಅವನ ಜೊತೆ ಮಾತು ಬಿಟ್ಟಿದ್ದಾಳೆ. ತಮ್ಮನ ಪಾತ್ರದಲ್ಲಿ ಶನಿ ಖ್ಯಾತಿಯ ಸುನೀಲ್ (Sunil) ಅಭಿನಯಿಸುತ್ತಿದ್ದಾರೆ. ಇನ್ನು ಕಥೆಯ ನಾಯಕ ತೀರ್ಥಂಕರ್ ಪ್ರಸಾದ್. ಈ ಧಾರಾವಾಹಿಯಲ್ಲಿ  ಕಾರ್ಪೊರೇಟರ್ ಪಾತ್ರ. ಅಪ್ಪನ ಆಪರೇಷನ್ ದುಡ್ಡು ಪಡೆದ ಸುಮಿ ಮನೆ ಬಾಗಿಲಿಗೆ ಬಂದಿದೆ ಮದುವೆ ಎಂಬ ಸಂಕಷ್ಟ.

    ದುಡ್ಡು ಕೊಟ್ಟು ಮಗನನ್ನು ಮದುವೆ ಮಾಡಿಕೋ ಎಂದ ವಿಜಯ
    ಸುಮನಾ ತಂದೆ ಆಪರೇಷನ್‍ಗೆ 4.5 ಲಕ್ಷ ಬೇಕಾಗಿರುತ್ತೆ. ಸುಮಿ ಕಷ್ಟದ ಸಮಯವನ್ನೇ ಬಳಸಿಕೊಂಡ ಕಾಲೋನಿ ಮಹಿಳೆ ವಿಜಯ ಆಸ್ಪತ್ರೆಗೆ ಬಂದು ಸುಮಿ ಕೈಗೆ 4.5 ಲಕ್ಷ ತಂದು ಕೊಡುತ್ತಾಳೆ. ದುಡ್ಡು ತಗೋ ನಿಮ್ಮ ಅಪ್ಪನ ಪ್ರಾಣ ಉಳಿಸಿಕೋ ಅಂತಾಳೆ. ಅದಕ್ಕೆ ಬದಲಾಗಿ ತನ್ನ ಮಗನನ್ನು ಮದುವೆ ಮಾಡಿಕೋ ಎಂಬ ಪ್ರಸ್ತಾಪವನ್ನು ಮುಂದಿಡುತ್ತಾಳೆ. ಮಗನಿಗೆ ಕಂಡ ಕಂಡ ಹುಡುಗಿಯರ ಸಹವಾಸ. ಬೇರೆ ಯಾರು ಹೆಣ್ಣು ಕೊಡಲ್ಲ ಎಂದು, ಸುಮಿಯನ್ನು ಗಂಟು ಹಾಕಲು ಈ ರೀತಿ ಮಾಡಿರುತ್ತಾಳೆ.

    ಅಪ್ಪನ ಪ್ರಾಣಕ್ಕಾಗಿ ದುಡ್ಡು ಪಡೆದ ಸುಮನಾ
    ಸುಮನಾಗೆ ಆ ಕ್ಷಣಕ್ಕೆ ಏನು ಹೇಳಬೇಕೋ ಗೊತ್ತಾಗಿಲ್ಲ. ಅಪ್ಪನ ಪ್ರಾಣ ಉಳಿಸಿಕೊಳ್ಳಲು ದುಡ್ಡು ಬೇಕಾಗಿತ್ತು. ಬೇರೆ ಏನೂ ಯೋಚನೆ ಮಾಡದೇ ದುಡ್ಡು ಪಡೆದು ಆಸ್ಪತ್ರೆಗೆ ಕಟ್ಟಿರುತ್ತಾಳೆ. ಅದಕ್ಕೆ ವಿಜಯ ತನ್ನ ಮಗನನ್ನು ಮದುವೆ ಮಾಡಿಕೊಳ್ಳಲು ಸುಮಿಗೆ ಇಷ್ಟ ಇರಬಹುದು ಎಂದುಕೊಂಡಿದ್ದಾಳೆ.

    ಇದನ್ನೂ ಓದಿ: Kiccha Sudeep Birthday: ಇಂದು 49ನೇ ವಸಂತಕ್ಕೆ ಕಾಲಿಟ್ಟ ಕಿಚ್ಚ ಸುದೀಪ್​, ಐರನ್​ ಲೆಗ್​ ಟು ಗೋಲ್ಡನ್​ ಮ್ಯಾನ್​!

    ಹೆಣ್ಣು ಕೇಳಲು ಮನೆಗೆ ಬಂದ ವಿಜಯ
    ದುಡ್ಡು ಕೊಟ್ಟಿದ್ದನ್ನೇ ಮುಂದಿಟ್ಟುಕೊಂಡು ವಿಜಯ, ತನ್ನ ಮಗ, ನೆಂಟರ ಜೊತೆ ಹೆಣ್ಣು ಕೇಳಲು ಸುಮಿ ಮನೆಗೆ ಬಂದಿದ್ದಾಳೆ. ಅದನ್ನು ನೋಡಿ ಮನೆಯವರೆಲ್ಲಾ ಶಾಕ್ ಆಗಿದ್ದಾರೆ. ನೀವ್ ಯಾಕೆ ಹೆಣ್ಣು ಕೇಳಲು ಬಂದ್ರಿ ಅಂದ್ರೆ, ಅಪ್ಪನ ಆಪರೇಷನ್‍ಗೆ ಸುಮಿ ದುಡ್ಡು ಪಡೆದಿದ್ದಾಳೆ. ಅದಕ್ಕೆ ತನ್ನನ್ನೇ ತಾನೇ ಧಾರೆ ಎರೆದುಕೊಂಡಿದ್ದಾಳೆ ಎಂದು ಹೇಳುತ್ತಾಳೆ. ವಿಜಯ ಮಾತು ಕೇಳಿ ಎಲ್ಲರೂ ಗಾಬರಿಯಾಗಿದ್ದಾರೆ.

    ವಿಜಯ ಮಗನಿಗೆ ಹೊಡೆದ ಸುಮಿ ತಮ್ಮ ರಾಜೇಶ್
    ರಾಜೇಶನಿಗೆ ಮೊದಲೇ ಅಕ್ಕ ಎಂದ್ರೆ ತುಂಬಾ ಪ್ರೀತಿ. ತನ್ನ ಅಕ್ಕನಿಗೆ ಏನಾದ್ರೂ ತೊಂದ್ರೆ ಆದ್ರೆ ಸುಮ್ಮನೇ ಇರಲ್ಲ. ಅಂತದ್ರಲ್ಲಿ ಕೆಟ್ಟ ಮನಸ್ಥಿತಿ ಇರೋ ಹುಡುಗನನ್ನು ತನ್ನ ಅಕ್ಕ ಮದುವೆ ಆಗಲು ಬಿಟ್ಟು ಬಿಡುತ್ತಾನಾ? ಅದಕ್ಕೆ ಕೋಪಗೊಂಡ ರಾಜೇಶ್, ವಿಜಯ ಮಗನನ್ನು ಹೊಡೆದಿದ್ದಾನೆ. ಮನೆಯ ಬಳಿ ಜೋರು ಗಲಾಟೆ ನಡೆಯಲಿದೆ.

    Colors Kannada serial, Kannada serial, Kendasampige Serial, Kendasampige serial cast, ಕೆಂಡಸಂಪಿಗೆ ಧಾರಾವಾಹಿ, ಹೆಣ್ಣು ಕೇಳೋಕೆ ಮನೆಗೆ ಬಂದಿದ್ದಾಳೆ ವಿಜಯ, ಹೊಸ ಧಾರಾವಾಹಿ,ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
    ಕೆಂಡಸಂಪಿಗೆ


    ಇದನ್ನೂ ಓದಿ: Shwetha Srivastav: ಗಣೇಶ ಹಬ್ಬಕ್ಕೆ ಟ್ರೆಡಿಷನಲ್ ಡ್ರೆಸ್​​ನಲ್ಲಿ ಮಿಂಚಿದ ನಟಿ ಶ್ವೇತಾ ಶ್ರೀವಾತ್ಸವ್, ಮಗಳು

    ಹಾಗಾದ್ರೆ ವಿಜಯ ಸಾಲ ತೀರಿಸುತ್ತಾರಾ?
    ವಿಜಯ ಮೊದಲೇ ಬಡ್ಡಿಗೆ ದುಡ್ಡು ಕೊಡುವ ಹೆಂಗಸು. ಒಂದೊಂದು ರೂಪಾಯಿಗೂ ಲೆಕ್ಕ ಇಟ್ಟಿರುತ್ತಾಳೆ. ಸುಮಿ ತನ್ನ ಮನೆ ಸೊಸೆ ಆಗ್ತಾಳೆ ಅಂತ ಅವರ ಅಪ್ಪನ ಆಪರೇಷನ್‍ಗೆ ಲಕ್ಷ ಲಕ್ಷ ದುಡ್ಡು ಕೊಟ್ಟಿದ್ದಾಳೆ. ಈಗ ಅವಳ ದುಡ್ಡು ತಕ್ಷಣ ಕೊಡಬೇಕು. ಇಲ್ಲ ಸುಮಿ ಆಕೆಯ ಮಗನನ್ನು ಮದುವೆ ಆಗಬೇಕು. ಈಗ ಸುಮನಾ ಏನು ಮಾಡ್ತಾಳೆ ಅನ್ನೋದೇ ಯಕ್ಷ ಪ್ರಶ್ನೆ ಆಗಿದೆ. ವಿಜಯಳಾ ಲಕ್ಷ ಲಕ್ಷ ಸಾಲ ತೀರಿಸೋರು ಯಾರು? ಎಲ್ಲವನ್ನು ನೋಡಲು ಕೆಂಡಸಂಪಿಗೆ ಸೀರಿಯಲ್ ನೋಡಬೇಕು.
    Published by:Savitha Savitha
    First published: