• Home
  • »
  • News
  • »
  • entertainment
  • »
  • Kendasampige: ಸುಮನಾ ಮದುವೆ ಆಗೋ ಗಂಡು ಪರಾರಿ, ಕಾರ್ಪೊರೇಟರ್​​ಗೆ ಹೆಚ್ಚಿದ ಟೆನ್ಶನ್!

Kendasampige: ಸುಮನಾ ಮದುವೆ ಆಗೋ ಗಂಡು ಪರಾರಿ, ಕಾರ್ಪೊರೇಟರ್​​ಗೆ ಹೆಚ್ಚಿದ ಟೆನ್ಶನ್!

ಸುಮನಾ ಮದುವೆ ಆಗೋ ಗಂಡು ಪರಾರಿ

ಸುಮನಾ ಮದುವೆ ಆಗೋ ಗಂಡು ಪರಾರಿ

ಸುಮನಾ ಮದುವೆ ಆಗಬೇಕಿದ್ದ ಗಂಡು ಬಂದಿಲ್ಲ. ಪರಾರಿ ಆಗಿದ್ದಾನೆ. ಕಾಳಿ, ಮದುವೆ ಆಗೋ ಹುಡುಗನನ್ನೂ ಸಹ ತಲೆ ಕೆಡಿಸಿದ್ದಾನೆ. ಕಾರ್ಪೊರೇಟರ್ ಜೊತೆ ಸುಮಿ ಸಂಬಂಧ ಇಟ್ಟುಕೊಂಡಿದ್ದಾಳೆ. ಅದಕ್ಕೆ ನಿನಗೆ ಗಂಟು ಹಾಕ್ತಿದ್ದಾನೆ ಎಂದು ಹೇಳಿದ್ದಾನೆ. ಅದನ್ನು ಕೇಳಿದ ಗಂಡು ಪರಾರಿ ಆಗಿದ್ದಾನೆ.

  • Share this:

    ಕೆಂಡಸಂಪಿಗೆ (Kendasampige) ಅನ್ನೋ ಧಾರಾವಾಹಿ (Serial), ಕಲರ್ಸ್ ಕನ್ನಡದಲ್ಲಿ (Colors Kannada) ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6.30ಕ್ಕೆ ಪ್ರಸಾರವಾಗುತ್ತಿದೆ. ಶುರುವಾದಾಗಿನಿಂದ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗುತ್ತಿದೆ. ಈ ಕಥೆಯ ನಾಯಕಿ ಸುಮನಾ. ಅಪ್ಪನಿಗೆ ಆರೋಗ್ಯ ಸರಿ ಇಲ್ಲದ ಕಾರಣ ಹೂವನ್ನು ಮಾರಿ ಸಂಸಾರ ಸಾಗಿಸುತ್ತಿದ್ದಾಳೆ. ಅಮ್ಮ ಬೇರೆ ಇಲ್ಲ. ತಮ್ಮನ ಸಾವಿನ ನೋವನ್ನೇ ಸುಮಿಗೆ ಮರೆಯಲು ಆಗುತ್ತಿಲ್ಲ. ಈ ನಡುವೆ ತನ್ನ ಏರಿಯಾ ಜನರಿಗೆ ಕಷ್ಟದ ಮೇಲೆ ಕಷ್ಟ ಬರುತ್ತಿದೆ. ಅದಲ್ಲದೇ ವಿಜಯಮ್ಮನ ಮಗ ಕಾಳಿ ಸುಮಿ, ಕಾರ್ಪೊರೇಟರ್  ಗೆ ಸಂಬಂಧ (Relationship) ಇದೆ ಎಂದು ಎಲ್ಲೆಡೆ ಸುದ್ದಿ ಹರಡಿಸುತ್ತಿದ್ದಾನೆ. ಆಕೆಯನ್ನು ಯಾರೂ ಮದುವೆ (Marriage) ಮಾಡಿಕೊಳ್ಳದಂತೆ ಮಾಡ್ತೀನಿ ಅಂತಿದ್ದ. ಅದಕ್ಕೆ ಅದಕ್ಕೆ ಕಾರ್ಪೊರೇಟರ್ ನಾನು ಮದುವೆ ಮಾಡಿಸ್ತೀನಿ ಅಂದಿದ್ರು. ಆದ್ರೆ ಗಂಡೇ  ಪರಾರಿ ಆಗಿದ್ದಾನೆ.


    ಸುಮಿಗೆ ಕಾರ್ಪೊರೇಟರ್ ಜೊತೆ ಸಂಬಂಧ ಕಟ್ಟಿದ್ದ ಕಾಳಿ


    ಸುಮಿ ತನಗೆ ಸಿಗಲಿಲ್ಲ ಎಂದು ಕಾಳಿ, ಏರಿಯಾದಲ್ಲಿ ಸುಮಿಗೆ ಕಾರ್ಪೊರೇಟರ್ ಜೊತೆ ಸಂಬಂಧ ಇದೆ ಎಂದು ಕೆಟ್ಟದಾಗಿ ಮಾತನಾಡಿರುತ್ತಾನೆ. ತನ್ನ ಬಗ್ಗೆ ಮಾತನಾಡಿದ ಕಾಳಿಗೆ ಕ್ಲಾಸ್ ತೆಗೆದುಕೊಳ್ಳಲು ಸುಮನಾ ಅವನು ಇರುವ ಜಾಗಕ್ಕೆ ಹೋಗಿರುತ್ತಾಳೆ. ಆಗ ಸುಮಿ ಯಾಕ್ ಈ ರೀತಿ ಮಾಡ್ತಿಯಾ ಎಂದಾಗ. ನಮ್ಮ ಅಮ್ಮ ಲಕ್ಷ ಲಕ್ಷ ಕೊಟ್ಟಾಗ ನಾನ್ ಬೇಕಿತ್ತು. ಈಗ ಕೋಟಿ ಕೋಟಿ ಕೊಡೋ ಕಾರ್ಪೊರೇಟರ್ ಬೇಕಾ ನಿನಗೆ ಎಂದು ಎಲ್ಲರ ಎದುರು ಕೆಟ್ಟದಾಗಿ ಮಾತಾನಾಡುತ್ತಾನೆ. ಅದಕ್ಕೆ ಸುಮಿ ಅವನಿಗೆ ಬೈಯ್ತಾಳೆ.


    ಸಾಮೂಹಿಕ ವಿವಾಹದಲ್ಲೇ ಸುಮನಾ ಮದುವೆ
    ಕಾಳಿ ಮಾತು ಕೇಳಿಸಿಕೊಂಡ ತೀರ್ಥಂಕರ್ ಸುಮನಾ ಮದುವೆಯನ್ನು ನಾನು ಮಾಡಿಸುತ್ತೇನೆ. ನಾನು ಅವರಿಗೆ ಒಳ್ಳೆ ಗಂಡನ್ನು ಹುಡುಕುತ್ತೇನೆ. ನಾನು ಮಾಡೋ ಸಾಮೂಹಿಕ ವಿವಾಹದಲ್ಲೇ ಆಕೆಗೂ ಮದುವೆ ಮಾಡಿಸುತ್ತೇನೆ ಎಂದು ಎಲ್ಲರ ಮುಂದೆ ಪ್ರಮಾಣ ಮಾಡಿತ್ತಾರೆ. ಅಂತೆಯೇ ಗಂಡನ್ನು ಹುಡುಕಿ ಮದುವೆಗೆ ಎಲ್ಲಾ ತಯಾರಿ ನಡೆಸುತ್ತಾರೆ.


    ಇದನ್ನೂ ಓದಿ: Jothe Jotheyali: ಅನಿರುದ್ಧ್ ಇಲ್ಲದ ಜೊತೆ ಜೊತೆಯಲಿ ಹೇಗಿದೆ? ಹರೀಶ್ ರಾಜ್‌ ಪಾತ್ರ ಒಪ್ಪಿಕೊಂಡರಾ ಫ್ಯಾನ್ಸ್?


    ತಾಳಿ ಕಟ್ಟಲು ಹೋಗಿದ್ದ ಕಾಳಿ


    ಈ ಎಲ್ಲದರ ಮಧ್ಯೆ ಕಾಳಿ ಸುಮಿ ತನಗೆ ಸಿಗಲಿಲ್ಲ. ಆಕೆಯನ್ನು ಹೇಗಾದ್ರೂ ಮದುವೆ ಮಾಡಿಕೊಳ್ಳಬೇಕು ಎಂದು. ಸುಮನಾಳನ್ನು ಅಡ್ಡ ಹಾಕಿ, ಆಕೆಯನ್ನು ಹೊಡೆದು ತಾಳಿ ಕಟ್ಟಲು ಹೋಗಿರುತ್ತಾನೆ. ಅಷ್ಟರಲ್ಲೇ ಕಾರ್ಪೊರೇಟರ್ ಬಂದು ತಡೆದು, ಕಾಳಿಯನ್ನು ಹೊಡೆದು ಸುಮನಾಳನ್ನು ಕಾಪಾಡುತ್ತಾನೆ.


    Colors Kannada serial, Kannada serial, Kendasampige Serial, Kendasampige serial cast, ಕೆಂಡಸಂಪಿಗೆ ಧಾರಾವಾಹಿ, ಸುಮನಾ ಮದುವೆ ಆಗೋ ಗಂಡು ಪರಾರಿ, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
    ಕೆಂಡಸಂಪಿಗೆ


    ಮದುವೆ ಅಲಂಕಾರದಲ್ಲಿ ಸುಮಿ


    ತೀರ್ಥಂಕರ್ ಮಾಡಿಸುತ್ತಿರುವ ಸಾಮೂಹಿಕ ವಿವಾಹದಲ್ಲೇ ಸುಮನಾ ಮದುವೆ ಸಹ ನಡೆಯಲಿದೆ. ಅದಕ್ಕೆ ಸುಮನ ಮದುವೆ ಅಲಂಕಾರ ಮಾಡಿಕೊಂಡು ಮದುವೆ ನಡೆಯೋ ಜಾಗಕ್ಕೆ ಬಂದಿದ್ದಾಳೆ. ಸುಮಿಯನ್ನು ಮದುವೆ ಅಲಂಕಾರದಲ್ಲಿ ನೋಡಿ ಮನೆಯರೆಲ್ಲಾ ಖುಷಿ ಆಗಿದ್ದಾರೆ. ಅಂತು ಆಕೆಯ ಕಷ್ಟ ಮುಗಿಯಿತು ಎಂದು ಖುಷಿಯಾಗಿದ್ದಾರೆ.


    ಇದನ್ನೂ ಓದಿ: Deepika-Ranveer Relationship: ದೀಪಿಕಾ ಪಡುಕೋಣೆ-ರಣವೀರ್ ಸಿಂಗ್ ದೂರ ಆಗ್ತಾರಾ? ಅಯ್ಯಯೋ ಇಬ್ಬರ ಮಧ್ಯೆ ಏನಾಯ್ತು? 


    ಮದುವೆ ಗಂಡು ಪರಾರಿ
    ಸುಮನಾ ಮದುವೆ ಆಗಬೇಕಿದ್ದ ಗಂಡು ಬಂದಿಲ್ಲ. ಪರಾರಿ ಆಗಿದ್ದಾನೆ. ಕಾಳಿ, ಮದುವೆ ಆಗೋ ಹುಡುಗನನ್ನೂ ಸಹ ತಲೆ ಕೆಡಿಸಿದ್ದಾನೆ. ಕಾರ್ಪೊರೇಟರ್ ಜೊತೆ ಸುಮಿ ಸಂಬಂಧ ಇಟ್ಟುಕೊಂಡಿದ್ದಾಳೆ. ಅದಕ್ಕೆ ನಿನಗೆ ಗಂಟು ಹಾಕ್ತಿದ್ದಾನೆ ಎಂದು ಹೇಳಿದ್ದಾನೆ. ಅದನ್ನು ಕೇಳಿದ ಗಂಡು ಪರಾರಿ ಆಗಿದ್ದಾನೆ.


    Colors Kannada serial, Kannada serial, Kendasampige Serial, Kendasampige serial cast, ಕೆಂಡಸಂಪಿಗೆ ಧಾರಾವಾಹಿ, ಸುಮನಾ ಮದುವೆ ಆಗೋ ಗಂಡು ಪರಾರಿ, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
    ತೀರ್ಥಂಕರ್


    ಕಾರ್ಪೊರೇಟರ್ ಗೆ ಟೆನ್ಶನ್ ಹೆಚ್ಚಾಗಿದೆ. ಹಸೆಮಣೆ ಏರಿದ ಸುಮಿಗೆ ಮದುವೆ ಗಂಡೇ ಇಲ್ಲ. ಮುಂದೇನಾಗುತ್ತೆ? ಸುಮಿಯನ್ನು ಯಾರು ಮದುವೆ ಆಗ್ತಾರೆ? ಎಲ್ಲವನ್ನೂ ನೋಡಲು ಕೆಂಡಸಂಪಿಗೆ ಸೀರಿಯಲ್ ನೋಡಬೇಕು.

    Published by:Savitha Savitha
    First published: