Kendasampige: ತಾಳಿ ಹಿಡಿದು ಸುಮಿ ಮನೆ ಮುಂದೆ ಕೂತಿದ್ದಾನೆ ಕಾಳಿ! ಸಾಲ ತೀರಿಸದ್ದಕ್ಕೆ ಇದೆಂಥಾ ಶಿಕ್ಷೆ?

ಸುಮನಾಗೆ ವಾಪಸ್ ಕೊಡಲು ದುಡ್ಡು ಸಿಕ್ಕಿಲ್ಲ. ಅದಕ್ಕೆ ಕಾಳಿ, ನಾನು ತಾಳಿ ಕಟ್ಟುವುದನ್ನು ತಡೆಯೋಕೆ ಆ ಕಾಶಿ ವಿಶ್ವನಾಥ್ ನಿಂದಲೂ ಸಾಧ್ಯವಿಲ್ಲ. ನಾನು ತಾಳಿ ಕಟ್ಟೇ ಕಟ್ತೀನಿ ಅಂತ ಮುಂದಾಗಿದ್ದಾನೆ.

ಕೆಂಡಸಂಪಿಗೆ ಧಾರವಾಹಿ

ಕೆಂಡಸಂಪಿಗೆ ಧಾರವಾಹಿ

  • Share this:
    ಕೆಂಡಸಂಪಿಗೆ (Kendasampige) ಅನ್ನೋ ಹೊಸ ಧಾರಾವಾಹಿ (Serial) 2 ವಾರದಿಂದ, ಕಲರ್ಸ್ ಕನ್ನಡದಲ್ಲಿ (Colors Kannada) ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6.30ಕ್ಕೆ ಪ್ರಸಾರವಾಗುತ್ತಿದೆ. ಶುರುವಾದ ಹೊಸದರಲ್ಲೇ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗುತ್ತಿದೆ. ಈ ಕಥೆಯ ನಾಯಕಿ ಸುಮನಾ. ಅಪ್ಪನಿಗೆ ಆರೋಗ್ಯ (Health) ಸರಿ ಇಲ್ಲದ ಕಾರಣ ಹೂವನ್ನು ಮಾರಿ ಸಂಸಾರ ಸಾಗಿಸುತ್ತಿದ್ದಾಳೆ. ಅಮ್ಮ ಬೇರೆ ಇಲ್ಲ. ತಮ್ಮ, ತಂಗಿಗೆ ಅಮ್ಮನ ಸ್ಥಾನದಲ್ಲಿ ನಿಂತಿದ್ದಾಳೆ. ತನ್ನ ತಮ್ಮ ಪರೀಕ್ಷೆಯಲ್ಲಿ ಪಾಸಾಗಲಿಲ್ಲ ಅಂತ ಅವನ ಜೊತೆ ಮಾತು ಬಿಟ್ಟಿದ್ದಾಳೆ. ತಮ್ಮನ ಪಾತ್ರದಲ್ಲಿ ಶನಿ ಖ್ಯಾತಿಯ ಸುನೀಲ್ ಅಭಿನಯಿಸುತ್ತಿದ್ದಾರೆ. ಅಪ್ಪನ ಆಪರೇಷನ್ (Operation) ಗೆ ದುಡ್ಡು ಪಡೆದ ಸುಮಿ ಮನೆ ಬಾಗಿಲಿಗೆ ಬಂದಿದೆ ಮದುವೆ (Marriage) ಎಂಬ ಅಪಾಯ.

    ದುಡ್ಡು ಕೊಟ್ಟು ಮಗನನ್ನು ಮದುವೆ ಮಾಡಿಕೋ ಎಂದ ವಿಜಯ

    ಸುಮನಾ ತಂದೆ ಆಪರೇಷನ್  ಗೆ 4.5 ಲಕ್ಷ ಬೇಕಾಗಿರುತ್ತೆ. ಸುಮಿ ಕಷ್ಟದ ಸಮಯವನ್ನೇ ಬಳಸಿಕೊಂಡ ಕಾಲೋನಿ ಮಹಿಳೆ ವಿಜಯ ಆಸ್ಪತ್ರೆಗೆ ಬಂದು ಸುಮಿ ಕೈಗೆ 4.5 ಲಕ್ಷ ತಂದು ಕೊಡುತ್ತಾಳೆ. ದುಡ್ಡು ತಗೋ ನಿಮ್ಮ ಅಪ್ಪನ ಪ್ರಾಣ ಉಳಿಸಿಕೋ ಅಂತಾಳೆ. ಅದಕ್ಕೆ ಬದಲಾಗಿ ತನ್ನ ಮಗನನ್ನು ಮದುವೆ ಮಾಡಿಕೋ ಎಂಬ ಪ್ರಸ್ತಾಪವನ್ನು ಮುಂದಿಡುತ್ತಾಳೆ. ಮಗನಿಗೆ ಕಂಡ ಕಂಡ ಹುಡುಗಿಯರ ಸಹವಾಸ. ಬೇರೆ ಯಾರು ಹೆಣ್ಣು ಕೊಡಲ್ಲ ಎಂದು, ಸುಮಿಯನ್ನು ಗಂಟು ಹಾಕಲು ಈ ರೀತಿ ಮಾಡಿರುತ್ತಾಳೆ. ಸುಮಿಯೂ ತನ್ನ ತಂದೆ ಪ್ರಾಣ ಉಳಿಸಿಕೊಳ್ಳಲು ಆ ಸಮಯಕ್ಕೆ ಒಪ್ಪಿಕೊಂಡಿರುತ್ತಾಳೆ.

    ಕಾಲೋನಿ ಅವರ ಪರ ನಿಂತಿದ್ದಕ್ಕೆ ಸುಮಿ ಮೇಲೆ ಕೋಪ

    ಸುಮಿ ಮನೆಗೆ ಬಂದು ವಿಜಯ ಗಲಾಟೆ ಮಾಡಿ ಹೋದ ಮೇಲೆ. ಕಾಲೋನಿ ಅವರು ಸುಮನಾ ಬಗ್ಗೆ ಮಾತಾಡೋಕೆ ವಿಜಯ ಮನೆಗೆ ಬಂದಿದ್ದಾರೆ. ಅವತ್ತು ನೀವು ನಮ್ಮ ಅಪ್ಪನ ಆಪರೇಷನ್ ಗೆ ದುಡ್ಡು ಕೊಟ್ಟಿದ್ದು ಸಹಾಯ ಮಾಡಲು ಅಲ್ಲ, ವ್ಯವಹಾರಕ್ಕೆ ಎನ್ನುತ್ತಾಳೆ ಸುಮನಾ.

    ಆಗ ಕಾಲೋನಿಯವರ ಮೇಲೆ ಕಾಳಿ ಕೈ ಮಾಡಲು ಹೋಗುತ್ತಾನೆ. ಆಗ ಸುಮಿ ತಡೆಯುತ್ತಾಳೆ. ನೀವು ದುಡ್ಡು ಕೊಟ್ಟಿದ್ದೀರಿ ಅಂತ ನಾನು ಸುಮ್ಮನೇ ಇರುತ್ತೇನೆ. ಆದ್ರೆ ನಮ್ಮ ಕಾಲೋನಿ ಜನದ ಸುದ್ದಿಗೆ ಬಂದ್ರೆ, ನನ್ನ ಇನ್ನೊಂದು ಮುಖ ತೋರಿಸಬೇಕಾಗುತ್ತೆ ಎನ್ನುತ್ತಾಳೆ.

    ಇದನ್ನೂ ಓದಿ: Ramachari: ರಾಮಾಚಾರಿಯ ನ್ಯಾಯ ಗೆದ್ದಿತು, ಅನ್ಯಾಯ ಮಾಡಿದ್ದ ಮಾನ್ಯತಾ ಜೈಲು ಪಾಲು

    ತಾಳಿ ಹಿಡಿದು ಸುಮಿ ಮನೆ ಮುಂದೆ ಕೂತ ಕಾಳಿ

    ಯಾವಾಗ ಸುಮಿ ಕಾಲೋನಿ ಜನರ ಪರ ನಿಂತಳೋ, ಆಗಲೇ ದುಡ್ಡು ಕೊಟ್ಟ ವಿಜಯ ಮತ್ತು ಆಕೆಯ ಮಗ ಕಾಳಿಗೆ ಕೋಪ ಬಂತು. ಅದಕ್ಕೆ ಸುಮಿಯನ್ನು ಮದುವೆ ಆಗ್ತೀನಿ ಎಂದು ತಾಳಿ ಹಿಡಿದು ಅವಳ ಮನೆ ಬಾಗಿಲಿಗೆ ಬಂದಿದ್ದಾನೆ. ಈಗಲೇ ಮದುವೆ ಆಗಬೇಕು. ಇಲ್ಲ ಅಂದ್ರೆ ನಮ್ಮ ಸಾಲ ವಾಪಸ್ ಕೊಡು ಎಂದು ಕೂತಿದ್ದಾರೆ.

    ಸುಮಿ, ರಾಜೇಶ್


    ದುಡ್ಡು ಸಿಗದೇ ಸುಮ ಕಂಗಾಲು

    ಇದ್ದಕ್ಕಿದ್ದ ಹಾಗೇ ಲಕ್ಷ ಲಕ್ಷ ದುಡ್ಡು ಅಂದ್ರೆ ಯಾರ್ ಕೊಡ್ತಾರೆ. ಸುಮಿ ಎಲ್ಲ ಕಡೆ ಸಾಲ ಕೊಡಿ ಎಂದು ಕೇಳಿದ್ದಾಳೆ. ಆದ್ರೆ ಎಲ್ಲೂ ಸಾಲ ಹುಟ್ಟಿಲ್ಲ. ಇದು ಕಾಳಿಗೆ ಇನ್ನಷ್ಟು ಬಲ ಕೊಟ್ಟಿದೆ. ಸಾಲ ತೀರಿಸಲು ಆಗಲಿಲ್ಲ ಅಂದ್ರೆ ಮದುವೆ ಆಗೋ ಪರಿಸ್ಥಿತಿ ಬಂದಿದೆ.

    ಕಾಳಿ ತಾಳಿ ಕಟ್ಟೋದ ತಪ್ಪಿಸೋಕೆ ಆಗಲ್ವಾ?

    ಸುಮನಾಗೆ ಅವರಿಗೆ ವಾಪಸ್ ಕೊಡಲು ದುಡ್ಡು ಸಿಕ್ಕಿಲ್ಲ. ಅದಕ್ಕೆ ಕಾಳಿ, ನಾನು ತಾಳಿ ಕಟ್ಟುವುದನ್ನು ತಡೆಯೋಕೆ ಆ ಕಾಶಿ ವಿಶ್ವನಾಥ್ ನಿಂದಲೂ ಸಾಧ್ಯವಿಲ್ಲ. ನಾನು ತಾಳಿ ಕಟ್ಟೇ ಕಟ್ತೀನಿ ಅಂತ ಮುಂದಾಗಿದ್ದಾನೆ.

    ಇದನ್ನೂ ಓದಿ: Lakshana Serial: ನಕ್ಷತ್ರಾಗೆ ತನಗೆ ಕಾಟ ಕೊಡ್ತಿರೋನು ಭೂಪತಿ ತಮ್ಮ ಮೌರ್ಯ ಎಂದು ಗೊತ್ತಾಯ್ತಾ?

    ಸುಮನಾ ತಪ್ಪ ರಾಜೇಶ್ ಜೈಲಲ್ಲಿ ಇದ್ದಾನೆ. ಅವರ ಅಪ್ಪ, ತಂಗಿಗೆ ಏನೂ ಮಾಡಲು ಆಗುತ್ತಿಲ್ಲ. ಹಾಗಾದ್ರೆ ಸುಮಿಯನ್ನು ಈ ಸಂಕಷ್ಟದಿಂದ ಯಾರು ಪಾರು ಮಾಡ್ತಾರೆ? ಎಲ್ಲವನ್ನೂ ನೋಡಲು ಕೆಂಡಸಂಪಿಗೆ ಧಾರಾವಾಹಿ ನೋಡಬೇಕು.
    Published by:Savitha Savitha
    First published: