Kendasampige: ತಂದೆ ಪ್ರಾಣ ಉಳಿಸಿಕೊಳ್ಳಲು ಸುಮಿ ಪರದಾಟ, ದುಡ್ಡು ಕೊಟ್ಟು ತನ್ನ ಮಗನನ್ನು ಮದುವೆ ಮಾಡಿಕೋ ಎಂದ ವಿಜಯ!

ಕೆಂಡಸಂಪಿಗೆ ಧಾರಾವಾಹಿಯಲ್ಲಿ ನಾಯಕಿ ತಂದೆ ಪಾತ್ರದಲ್ಲಿ ನಾಗರಾಜ್ ಕೋಟೆ ಅವರು ಅಭಿನಯಿಸುತ್ತಿದ್ದಾರೆ. ಅವರ ಹೆಸರು ರಾಮಯ್ಯ. ಮಗಳಿಗೆ ಸಾಲ ಕೊಟ್ಟ ಕಾಲೋನಿ ಮಹಿಳೆ ವಿಜಯ, ಸುಮಿಯನ್ನು ತನ್ನ ಮಗನಿಗೆ ಮದುವೆ ಮಾಡಿಕೊಡುವಂತೆ ಹೇಳುತ್ತಾಳೆ. ಅದಕ್ಕೆ ರಾಮಯ್ಯ ಒಪ್ಪಲ್ಲ.

ಕೆಂಡಸಂಪಿಗೆ

ಕೆಂಡಸಂಪಿಗೆ

  • Share this:
    ಕೆಂಡಸಂಪಿಗೆ (Kendasampige) ಅನ್ನೋ ಹೊಸ ಧಾರಾವಾಹಿ (Serial) ಕಲರ್ಸ್ ಕನ್ನಡದಲ್ಲಿ (Colors Kannada) ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6.30ಕ್ಕೆ ಪ್ರಸಾರವಾಗುತ್ತಿದೆ. ಶುರುವಾದ ಹೊಸದರಲ್ಲೇ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗುತ್ತಿದೆ. ಈ ಕಥೆಯ ನಾಯಕಿ ಸುಮನಾ. ಅಪ್ಪನಿಗೆ ಆರೋಗ್ಯ ಸರಿ ಇಲ್ಲದ ಕಾರಣ ಹೂವನ್ನು (Flowers) ಮಾರಿ ಸಂಸಾರ ಸಾಗಿಸುತ್ತಿದ್ದಾಳೆ. ಅಮ್ಮ ಬೇರೆ ಇಲ್ಲ. ತಮ್ಮ, ತಂಗಿಗೆ ಅಮ್ಮನ ಸ್ಥಾನದಲ್ಲಿ ನಿಂತಿದ್ದಾಳೆ. ತನ್ನ ತಮ್ಮ ಪರೀಕ್ಷೆಯಲ್ಲಿ ಪಾಸಾಗಲಿಲ್ಲ ಅಂತ ಅವನ ಜೊತೆ ಮಾತು ಬಿಟ್ಟಿದ್ದಾಳೆ. ತಮ್ಮನ ಪಾತ್ರದಲ್ಲಿ ಶನಿ ಖ್ಯಾತಿಯ ಸುನೀಲ್ ಅಭಿನಯಿಸುತ್ತಿದ್ದಾರೆ. ಇನ್ನು ಕಥೆಯ ನಾಯಕ ತೀರ್ಥಂಕರ್ ಪ್ರಸಾದ್. ಈ ಧಾರಾವಾಹಿಯಲ್ಲಿ ಕಾರ್ಪೊರೇಟರ್  ಪಾತ್ರ. ಇನ್ನು ಸುಮಿ ತಂದೆ (Father), ಯಾವುದೋ ಸಂಪ್ ಕ್ಲೀನ್ ಹೋಗಿ ವಿಷ ಅನಿಲ ಸೇವಿಸಿ ಆಸ್ಪತ್ರೆ ಸೇರಿದ್ದಾರೆ. ಕಿಡ್ನಿ ಪ್ರಾಬ್ಲಮ್ ಆದ ಕಾರಣ ತಂದೆಯನ್ನು ಉಳಿಸಿಕೊಳ್ಳಲು ಪರದಾಡುತ್ತಿದ್ದಾಳೆ.

    ಸದ್ಯ ಪ್ರಾಣಪಾಯದಿಂದ ಪಾರಾದ ಸುಮಿ ತಂದೆ
    ಕೆಂಡಸಂಪಿಗೆ ಧಾರಾವಾಹಿಯಲ್ಲಿ ನಾಯಕಿ ತಂದೆ ಪಾತ್ರದಲ್ಲಿ ನಾಗರಾಜ್ ಕೋಟೆ ಅವರು ಅಭಿನಯಿಸುತ್ತಿದ್ದಾರೆ. ಅವರ ಹೆಸರು ರಾಮಯ್ಯ. ಮಗಳಿಗೆ ಸಾಲ ಕೊಟ್ಟ ಕಾಲೋನಿ ಮಹಿಳೆ ವಿಜಯ, ಸುಮಿಯನ್ನು ತನ್ನ ಮಗನಿಗೆ ಮದುವೆ ಮಾಡಿಕೊಡುವಂತೆ ಹೇಳುತ್ತಾಳೆ. ಅದಕ್ಕೆ ರಾಮಯ್ಯ ಒಪ್ಪಲ್ಲ.

    ಅದಕ್ಕೆ ವಿಜಯ ನಿನ್ನ ಮಗಳು ಹೂವು ಕಟ್ಟಿ ಹೇಗೆ ನನ್ನ ಸಾಲ ತೀರಿಸುತ್ತಾಳೆ ನೋಡ್ತೀನಿ. ನಿನ್ನ ಮಗಳಿಗೆ ಅದ್ಯಾವ ಗಂಡು ತರುತ್ತೀಯಾ ನೋಡ್ತಿನಿ ಎಂದು ಹೇಳಿ ಹೋಗುತ್ತಾಳೆ. ಅದಕ್ಕೆ ಸ್ನೇಹಿತರ ಜೊತೆ ಸಂಪ್ ಕ್ಲೀನ್ ಮಾಡಲು ಹೋಗಿ, ವಿಷ ಅನಿಲ ಸೇವಿಸಿ ಆಸ್ಪತ್ರೆಗೆ ಸೇರಿದ್ದ, ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

    ತಕ್ಷಣವೇ ಆಪರೇಷನ್ ಮಾಡಬೇಕು ಎಂದ ಡಾಕ್ಟರ್
    ಸುಮಿ ತಂದೆ, ಸದ್ಯ ಬದುಕುಳಿದಿದ್ದಾರೆ. ಆದ್ರೆ ಕುಡಿದು ಕುಡಿದು ಅವರ ಕಿಡ್ನಿ ಪ್ರಾಬ್ಲಮ್ ಆಗಿದೆ. ಅದಕ್ಕೆ ಡಾಕ್ಟರ್ ಬೇಗ ಆಪರೇಷನ್ ಮಾಡಿಸಿ, ನಿಮ್ಮ ತಂದೆಯನ್ನು ಉಳಿಸಿಕೊಳ್ಳಿ ಎನ್ನುತ್ತಾನೆ. ಅದಕ್ಕೆ ಸುಮನಾ ಸರಿ ಎಂದು ಸರ್ಕಾರಿ ಆಸ್ಪತ್ರೆಯಿಂದ, ಖಾಸಗಿ ಆಸ್ಪತ್ರೆಗೆ ಸೇರಿಸುತ್ತಾಳೆ. ಆದ್ರೆ ಅಲ್ಲಿ ಡಾಕ್ಟರ್ 4.5 ಲಕ್ಷ ಬೇಕು ಎನ್ನುತ್ತಾರೆ. ಸಾವಿರಕ್ಕೆ ಹೂ ಕಟ್ಟುವ ಸುಮನಾ, ಲಕ್ಷ ಲಕ್ಷ ದುಡ್ಡು ಬೇಕು ಎಂದು ಕೇಳಿ ಕಂಗಾಲಾಗಿದ್ದಾಳೆ.

    ಇದನ್ನೂ ಓದಿ: Jodi No 1: ಜೋಡಿ ನಂಬರ್ ಒನ್ ಜೊತೆ ಸೀರಿಯಲ್ ತಾರೆಗಳ ಗಣೇಶೋತ್ಸವ ಸಂಭ್ರಮ, ವಾತ್ಸಲ್ಯ ತುಂಬಿದ ಮೆರುಗು! 

    ಕಾರ್ಪೊರೇಟರ್ ಮನೆಗೆ ಹೋದ ಸುಮಿ
    ಲಕ್ಷ ಲಕ್ಷ ದುಡ್ಡು ಇನ್ಯಾರು ನಮಗೆ ಕೊಡ್ತಾರೆ. ಕಾರ್ಪೊರೇಟರ್ ಬಳಿ ಹೋದ್ರೆ ತನ್ನ ಕೆಲಸ ಆಗಬಹುದು ಎಂದು ತಿರ್ಥಂಕರ್ ಮನೆಗೆ ಹೋಗಿದ್ದಾಳೆ. ಆದ್ರೆ ಅಲ್ಲಿ ಕಾರ್ಪೊರೇಟರ್ ಇರಲ್ಲ. ಕಾರ್ಪೊರೇಟರ್ ಅತ್ತಿಗೆ ಸುಮಿಗೆ ಅವಮಾನ ಮಾಡುತ್ತಾಳೆ. ದುಡ್ಡಿಗಾಗಿ ನಾಟಕ ಆಡುತ್ತಿದ್ದಾಳೆ. ಈ ರೀತಿಯ ಜನ ದುಡ್ಡು ಬೇಕಾದ್ರೆ ಅಪ್ಪ-ಅಮ್ಮ ಆಸ್ಪತ್ರೆಯಲ್ಲಿದ್ದಾರೆ ಎಂದು ನಾಟಕ ಮಾಡಿ ದುಡ್ಡು ಹೊಡೆಯುತ್ತಾರೆ ಎಂದು ನಿಂದಿಸಿದದ್ದಾಳೆ.

    Colors Kannada serial, Kannada serial, Kendasampige Serial, Kendasampige serial cast, Suman in problem, ಕೆಂಡಸಂಪಿಗೆ ಧಾರಾವಾಹಿ, ಹೊಸ ಧಾರಾವಾಹಿ,ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
    ಕೆಂಡಸಂಪಿಗೆ


    ದುಡ್ಡು ಇಟ್ಟು, ಮಗನನ್ನು ಮದುವೆ ಆಗು ಎಂದ ವಿಜಯ
    ವಿಜಯ, ಕಾಲೋನಿಯಲ್ಲಿ ಬಡ್ಡಿಗೆ ದುಡ್ಡು ಕೊಡುವ ಹೆಂಗಸು. ಈಕೆಯೇನೋ ಒಳ್ಳೆಯವಳು. ಆದ್ರೆ ಈಕೆ ಮಗನಿಗೆ ಹುಡುಗಿಯರ ಹುಚ್ಚು. ಎಲ್ಲಾ ಹೆಣ್ಣು ಮಕ್ಕಳನ್ನು ಕೆಟ್ಟ ದೃಷ್ಟಿಯಿಂದ ನೋಡ್ತಾನೆ. ಅದಕ್ಕೆ ಅವನಿಗೆ ಯಾರೂ ಹೆಣ್ಣು ಕೊಡಲ್ಲ ಎಂದು ಗೊತ್ತಾದ ವಿಜಯ, ದುಡ್ಡಿನ ಮೂಲಕ ಸುಮಿಯನ್ನು ಬಲೆಯಲ್ಲಿ ಬೀಳಿಸಿ, ಮಗನಿಗೆ ಮದುವೆ ಮಾಡಿಕೊಳ್ಳಬೇಕು ಎಂಬ ಪ್ಲ್ಯಾನ್ ನಲ್ಲಿ ಇದ್ದಾಳೆ.

    ಇದನ್ನೂ ಓದಿ: Jothe Jotheyali: ಜೊತೆ ಜೊತೆಯಲಿ ಆರ್ಯವರ್ಧನ್ ಪಾತ್ರಕ್ಕೆ ಇವರು ಜೀವ ತುಂಬ್ತಾರಾ? ಕಾಲ್ ಬಂದಿದ್ದು ಸತ್ಯ ಎಂದ ಹರೀಶ್ ರಾಜ್ 

    ಅಪ್ಪನ ಪ್ರಾಣಕ್ಕಾಗಿ ಮದುವೆಗೆ ಒಪ್ತಾಳಾ?
    ಸುಮಿಯ ಮುಂದೆ ಬೇರೆ ದಾರಿಯಲ್ಲಿ ಅಪ್ಪನ ಪ್ರಾಣ ಉಳಿಯಬೇಕು ಅಂದ್ರೆ ದುಡ್ಡು ಬೇಕು. ಈಗ ವಿಜಯ ಬಿಟ್ಟರೆ ಸಹಾಯ ಮಾಡಲು ಯಾರೂ ಇಲ್ಲ. ಅದಕ್ಕೆ ಸುಮಿ ದುಡ್ಡು ಪಡೆದು ಮದುವೆಗೆ ಒಪ್ತಾಳಾ ಅಂತ ಕಾದು ನೋಡಬೇಕಿದೆ. ಅಪ್ಪನಾ, ಭವಿಷ್ಯನಾ? ಏನಾಗಿಲಿದೆ ಅಂತ ನೋಡೋಕೆ ಕೆಂಡಸಂಪಿಗೆ ಧಾರಾವಾಹಿ ನೋಡಬೇಕು.
    Published by:Savitha Savitha
    First published: