Kendasampige: ಆಪರೇಷನ್​ಗೆ ಬೇಕು ಲಕ್ಷ ಲಕ್ಷ! ಸುಮಿ ಕೈಲಿ ಇದೆಲ್ಲಾ ಸಾಧ್ಯಾನಾ?

ಸುಮಿ ತಂದೆ ಆಸ್ಪತ್ರೆಯಲ್ಲಿ ಇರುವುದನ್ನು ಕೇಳಿ ಈಡೀ ಕಾಲೋನಿ ಜನ ಆಸ್ಪತ್ರೆಗೆ ಬಂದಿದ್ದಾರೆ. ಸುಮಿಗೆ ಧೈರ್ಯ ತುಂಬುತ್ತಿದ್ದಾರೆ. ಇದನ್ನು ನೋಡಿದ ಕಾರ್ಪೊರೇಟರ್ ತಿರ್ಥಂಕರ್, ಇವಳ ಕಡೆ ಏನಿಲ್ಲ ಅಂದ್ರು 1 ಸಾವಿರ ವೋಟು ಇವೆ. ಇವಳಿಗೆ ಸಹಾಯ ಮಾಡಿದ್ರೆ, ಇವರೆಲ್ಲಾ ಅನುಕಂಪ ಗಿಟ್ಟಿಸಿಕೊಳ್ಳಬಹುದು ಎಂದು ಹಣ ಕೊಡುತ್ತಾನೆ.

ಕೆಂಡಸಂಪಿಗೆ

ಕೆಂಡಸಂಪಿಗೆ

 • Share this:
  ಕೆಂಡಸಂಪಿಗೆ (Kendasampige) ಅನ್ನೋ ಹೊಸ ಧಾರಾವಾಹಿ (New Serial) ಕಲರ್ಸ್ ಕನ್ನಡದಲ್ಲಿ (Colors Kannada) ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6.30ಕ್ಕೆ ಪ್ರಸಾರವಾಗುತ್ತಿದೆ. ಶುರುವಾದ ಹೊಸದರಲ್ಲೇ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗುತ್ತಿದೆ. ಈ ಕಥೆಯ ನಾಯಕಿ ಸುಮನಾ. ಅಪ್ಪನಿಗೆ (Father) ಆರೋಗ್ಯ (Health) ಸರಿ ಇಲ್ಲದ ಕಾರಣ ಹೂವನ್ನು ಮಾರಿ ಸಂಸಾರ ಸಾಗಿಸುತ್ತಿದ್ದಾಳೆ. ಅಮ್ಮ ಬೇರೆ ಇಲ್ಲ. ತಮ್ಮ, ತಂಗಿಗೆ ಅಮ್ಮನ ಸ್ಥಾನದಲ್ಲಿ ನಿಂತಿದ್ದಾಳೆ. ತನ್ನ ತಮ್ಮ ಪರೀಕ್ಷೆಯಲ್ಲಿ ಪಾಸಾಗಲಿಲ್ಲ ಅಂತ ಅವನ ಜೊತೆ ಮಾತು ಬಿಟ್ಟಿದ್ದಾಳೆ. ತಮ್ಮನ ಪಾತ್ರದಲ್ಲಿ ಶನಿ ಖ್ಯಾತಿಯ ಸುನೀಲ್ (Sunil) ಅಭಿನಯಿಸುತ್ತಿದ್ದಾರೆ. ಇನ್ನು ಕಥೆಯ ನಾಯಕ ತೀರ್ಥಂಕರ್ ಪ್ರಸಾದ್. ಈ ಧಾರಾವಾಹಿಯಲ್ಲಿ ಕಾರ್ಪೊರೇಟರ್ ಪಾತ್ರ.

  ಇನ್ನು ಸುಮಿ ತಂದೆ ಯಾವುದೋ ಸಂಪ್ ಕ್ಲೀನ್ (Clean) ಹೋಗಿ ವಿಷ ಅನಿಲ ಸೇವಿಸಿ ಆಸ್ಪತ್ರೆ ಸೇರಿದ್ದಾರೆ. ಕಿಡ್ನಿ ಪ್ರಾಬ್ಲಮ್ ಆದ ಕಾರಣ ತಂದೆಯನ್ನು ಉಳಿಸಿಕೊಳ್ಳಲು ಪರದಾಡುತ್ತಿದ್ದಾಳೆ.

  ಸದ್ಯ ಪ್ರಾಣಾಪಾಯದಿಂದ ಪಾರಾದ ಸುಮಿ ತಂದೆ
  ಕೆಂಡಸಂಪಿಗೆ ಧಾರಾವಾಹಿಯಲ್ಲಿ ನಾಯಕಿ ತಂದೆ ಪಾತ್ರದಲ್ಲಿ ನಾಗರಾಜ್ ಕೋಟೆ ಅವರು ಅಭಿನಯಿಸುತ್ತಿದ್ದಾರೆ. ಅವರ ಹೆಸರು ರಾಮಯ್ಯ. ಮಗಳಿಗೆ ಸಾಲ ಕೊಟ್ಟ ಕಾಲೋನಿ ಮಹಿಳೆ ವಿಜಯ, ಸುಮಿಯನ್ನು ತನ್ನ ಮಗನಿಗೆ ಮದುವೆ ಮಾಡಿಕೊಡುವಂತೆ ಹೇಳುತ್ತಾಳೆ. ಅದಕ್ಕೆ ರಾಮಯ್ಯ ಒಪ್ಪಲ್ಲ. ಅದಕ್ಕೆ ವಿಜಯ ನಿನ್ನ ಮಗಳು ಹೂವು ಕಟ್ಟಿ ಹೇಗೆ ನನ್ನ ಸಾಲ ತೀರಿಸುತ್ತಾಳೆ ನೋಡ್ತೀನಿ. ನಿನ್ನ ಮಗಳಿಗೆ ಅದ್ಯಾವ ಗಂಡು ತರುತ್ತೀಯಾ ನೋಡ್ತಿನಿ ಎಂದು ಹೇಳಿ ಹೋಗುತ್ತಾಳೆ. ಅದಕ್ಕೆ ಸ್ನೇಹಿತರ ಜೊತೆ ಸಂಪ್ ಕ್ಲೀನ್ ಮಾಡಲು ಹೋಗಿ, ವಿಷ ಅನಿಲ ಸೇವಿಸಿ ಆಸ್ಪತ್ರೆಗೆ ಸೇರಿದ್ದ, ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

  ತಕ್ಷಣವೇ ಆಪರೇಷನ್ ಮಾಡಬೇಕು ಎಂದ ಡಾಕ್ಟರ್
  ಸುಮಿ ತಂದೆ, ಸದ್ಯ ಬದುಕುಳಿದಿದ್ದಾರೆ. ಆದ್ರೆ ಕುಡಿದು ಕುಡಿದು ಅವರ ಕಿಡ್ನಿ ಪ್ರಾಬ್ಲಮ್ ಆಗಿದೆ. ಅದಕ್ಕೆ ಡಾಕ್ಟರ್ ಬೇಗ ಆಪರೇಷನ್ ಮಾಡಿಸಿ, ನಿಮ್ಮ ತಂದೆಯನ್ನು ಉಳಿಸಿಕೊಳ್ಳಿ ಎನ್ನುತ್ತಾನೆ. ಅದಕ್ಕೆ ಸುಮನಾ ಸರಿ ಎಂದು ಸರ್ಕಾರಿ ಆಸ್ಪತ್ರೆಯಿಂದ, ಖಾಸಗಿ ಆಸ್ಪತ್ರೆಗೆ ಸೇರಿಸುತ್ತಾಳೆ. ಆದ್ರೆ ಅಲ್ಲಿ ಡಾಕ್ಟರ್ 4.5 ಲಕ್ಷ ಬೇಕು ಎನ್ನುತ್ತಾರೆ. ಸಾವಿರಕ್ಕೆ ಹೂ ಕಟ್ಟುವ ಸುಮನಾ, ಲಕ್ಷ ಲಕ್ಷ ದುಡ್ಡು ಬೇಕು ಎಂದು ಕೇಳಿ ಕಂಗಾಲಾಗಿದ್ದಾಳೆ.

  ಇದನ್ನೂ ಓದಿ: Mayamruga: ಮತ್ತೆ ಬರುತ್ತಿದೆ ಮಾಯಾಮೃಗ ಧಾರಾವಾಹಿ, ಕಾಲಕ್ಕೆ ತಕ್ಕಂತೆ ಕಥೆ ಬದಲಿಸಲಿದ್ದಾರಾ ಟಿ.ಎನ್ ಸೀತಾರಾಂ?

  ಕಾಲೋನಿ ಅವರ ಎಲ್ಲ ಸುಮಿ ಪರ
  ಸುಮಿ ತಂದೆ ಆಸ್ಪತ್ರೆಯಲ್ಲಿ ಇರುವುದನ್ನು ಕೇಳಿ ಈಡೀ ಕಾಲೋನಿ ಜನ ಆಸ್ಪತ್ರೆಗೆ ಬಂದಿದ್ದಾರೆ. ಸುಮಿಗೆ ಧೈರ್ಯ ತುಂಬುತ್ತಿದ್ದಾರೆ. ಇದನ್ನು ನೋಡಿದ ಕಾರ್ಪೊರೇಟರ್ ತೀರ್ಥಂಕರ್, ಇವಳ ಕಡೆ ಏನಿಲ್ಲ ಅಂದ್ರು 1 ಸಾವಿರ ವೋಟು ಇವೆ. ಇವಳಿಗೆ ಸಹಾಯ ಮಾಡಿದ್ರೆ, ಇವರೆಲ್ಲಾ ಅನುಕಂಪ ಗಿಟ್ಟಿಸಿಕೊಳ್ಳಬಹುದು ಎಂದು ಹಣ ಕೊಡುತ್ತಾನೆ.

  Colors Kannada serial, Kannada serial, Kendasampige Serial, Kendasampige serial cast, Suman in problem, Suman father admitted Hospital, ಕೆಂಡಸಂಪಿಗೆ ಧಾರಾವಾಹಿ, ಹೊಸ ಧಾರಾವಾಹಿ,ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
  ಕಾರ್ಪೊರೇಟರ್ ತೀರ್ಥಂಕರ್ ಕುಟುಂಬ


  ಕಾರ್ಪೊರೇಟರ್ ಸಹಾಯ ಬೇಡ ಎಂದ ಸುಮಿ
  ಇನ್ನು, ಆಸ್ಪತ್ರೆಯಲ್ಲಿ ಕಾಲೋನಿ ಜನರ ಮುಂದೆ ಕಾರ್ಪೊರೇಟರ್ ತಿರ್ಥಂಕರ್, ಸುಮನಾ ಕೈಗೆ ಹಣ ಕೊಟ್ಟು, ಸದ್ಯಕ್ಕೆ ಇಷ್ಟು ತಗೋಳಿ. ಉಳಿದಿದ್ದು ಮತ್ತೆ ಕೊಡುತ್ತೀನಿ ಎನ್ನುತ್ತಾರೆ. ಅದಕ್ಕೆ ಸುಮಿ ಒಪ್ಪುವುದಿಲ್ಲ. ಸರ್ ನನಗೆ ನಿಮ್ಮ ಸಹಾಯ ಬೇಡ ಎನ್ನುತ್ತಾಳೆ. ಅದನ್ನು ಕೇಳಿ ಕಾರ್ಪೊರೇಟರ್ ಶಾಕ್ ಆಗಿದ್ದಾನೆ.

  ಇದನ್ನೂ ಓದಿ: Ramachari: ಪೊಲೀಸ್ ಠಾಣೆಯಲ್ಲಿ ರಾಮಾಚಾರಿ ತಂದೆಗೆ ಅವಮಾನ!, ಸಂಕಷ್ಟದಲ್ಲಿ ಚಾರಿ ಕುಟುಂಬ

  ತಂದೆ ಪ್ರಾಣ ಹೇಗೆ ಉಳಿಸಿಕೊಳ್ತಾಳೆ?
  ಸುಮಿ ತಂದೆ ಆಪರೇಷನ್‍ಗೆ 4.5 ಲಕ್ಷ ಬೇಕು. ಕಾಲೋನಿ ವಿಜಯ ಮದುವೆ ಪ್ರಸ್ತಾಪ ಮುಂದಿಟ್ಟು ದುಡ್ಡು ಕೊಡಲು ಬಂದ್ರೆ ಸುಮಿ ಒಪ್ಪಿಲ್ಲ. ಈಗ ಕಾರ್ಪೊರೇಟರ್ ಸಹಾಯವೂ ಬೇಡ ಅಂತಿದ್ದಾಳೆ. ಹಾಗಾದ್ರೆ ತಂದೆ ಆಪರೇಷನ್‍ಗೆ ಹೇಗೆ ದುಡ್ಡು ರೆಡಿ ಮಾಡ್ತಾಳೆ? ತನ್ನ ತಂದೆ ಪ್ರಾಣ ಹೇಗೆ ಕಾಪಾಡ್ತಾಳೆ? ಎಲ್ಲವನ್ನೂ ನೋಡಲು ಕೆಂಡಸಂಪಿಗೆ ಧಾರಾವಾಹಿ ನೋಡಬೇಕು.
  Published by:Savitha Savitha
  First published: