Kendasampige: ಅಕ್ಕ-ತಮ್ಮ ಒಂದಾಗೋ ಟೈಮ್‍ಗೆ ಆಪತ್ತು? ಸಾವಿನ ಅಂಚಿನಲ್ಲಿ ರಾಜೇಶ!

ಅಕ್ಕನಿಗೆ ಸಹಾಯ ಮಾಡಬೇಕು ಎಂದು ರಾಜೇಶ ಪ್ರತಿಭಟನೆಯಲ್ಲಿ ಬೆಂಕಿ ಹಚ್ಚಿಕೊಳ್ಳೋಕೆ ರೆಡಿಯಾಗುತ್ತಾನೆ. ಪ್ರತಿಭಟನೆಯಲ್ಲಿ ಪೆಟ್ರೋಲ್ ಸುರಿದುಕೊಳ್ಳುತ್ತಿದ್ದಂತೆ, ಯಾರೋ ಬೆಂಕಿ ಕಿಡಿ ಹಾಕಿದ್ದಾರೆ. ರಾಜೇಶ ಹೊತ್ತಿ ಉರಿಯುತ್ತಿದ್ದಾನೆ.

ಸಾವಿನ ಅಂಚಿನಲ್ಲಿ ರಾಜೇಶ

ಸಾವಿನ ಅಂಚಿನಲ್ಲಿ ರಾಜೇಶ

 • Share this:
  ಕೆಂಡಸಂಪಿಗೆ (Kendasampige) ಅನ್ನೋ ಹೊಸ ಧಾರಾವಾಹಿ (Serial), ಕಲರ್ಸ್ ಕನ್ನಡದಲ್ಲಿ (Colors Kannada) ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6.30ಕ್ಕೆ ಪ್ರಸಾರವಾಗುತ್ತಿದೆ. ಶುರುವಾದ ಹೊಸದರಲ್ಲೇ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗುತ್ತಿದೆ. ಈ ಕಥೆಯ ನಾಯಕಿ ಸುಮನಾ (Suman). ಅಪ್ಪನಿಗೆ ಆರೋಗ್ಯ ಸರಿ ಇಲ್ಲದ ಕಾರಣ ಹೂವನ್ನು (Flowers) ಮಾರಿ ಸಂಸಾರ ಸಾಗಿಸುತ್ತಿದ್ದಾಳೆ. ಅಮ್ಮ ಬೇರೆ ಇಲ್ಲ. ತಮ್ಮ, ತಂಗಿಗೆ ಅಮ್ಮನ ಸ್ಥಾನದಲ್ಲಿ ನಿಂತಿದ್ದಾಳೆ. ತನ್ನ ತಮ್ಮ ಪರೀಕ್ಷೆಯಲ್ಲಿ ಪಾಸಾಗಲಿಲ್ಲ ಅಂತ ಅವನ ಜೊತೆ ಮಾತು ಬಿಟ್ಟಿದ್ದಾಳೆ. ಅಪ್ಪನ ಆಪರೇಷನ್‍ಗೆ ದುಡ್ಡು ಪಡೆದ ಸುಮಿಗೆ ಕಷ್ಟದ ಮೇಲೆ ಕಷ್ಟ ಬರುತ್ತಿವೆ. ಮನೆಯಲ್ಲಿ ಮಾಡಿರುವ ಸಾಲಕ್ಕೆ 1 ಲಕ್ಷ ಸಿಗುತ್ತೆ ಅಂತ ಪ್ರತಿಭಟನೆಯಲ್ಲಿ (Protest) ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳೋಕೆ ರಾಜೇಶ (Rajesh) ಮುಂದಾಗಿದ್ದಾನೆ. ಅಕ್ಕ-ತಮ್ಮ ಒಂದಾಗೋ ಟೈಮ್‍ಗೆ ಆಪತ್ತು ಎದುರಾಗಿದೆ.

  ತೀರ್ಥಂಕರ್ ಪಕ್ಷದಲ್ಲಿ ಪ್ರತಿಭಟನೆ ಇದೆ

  ತೀರ್ಥಂಕರ್ ಪ್ರಸಾದ್ ಅವರು ಪಕ್ಷದಿಂದ ಪ್ರತಿಭಟನೆ ಮಾಡುತ್ತಿದ್ದಾರೆ. ಅದು ವಿರೋಧ ಪಕ್ಷದವರಿಗೆ ಅವರ ಬಲ ತೋರಿಸಬೇಕಿದೆ. ಅದಕ್ಕೆ ದೊಡ್ಡದಾಗಿ ಪ್ರತಿಭಟನೆ ಮಾಡಲಿದ್ದಾರೆ. ಪ್ರತಿಭಟನೆಯಲ್ಲಿ ಯಾರಾದ್ರೂ ಬೆಂಕಿ ಹಚ್ಚಿಕೊಳ್ಳಬೇಕು. ಆದ್ರೆ ಯಾರು ಒಪ್ಪುತ್ತಾರೆ ಎನ್ನುತ್ತಾರೆ. ಬೆಂಕಿ ಹಚ್ಚಿಕೊಂಡೋರಿಗೆ 1 ಲಕ್ಷ ಕೊಡುತ್ತೇವೆ ಎನ್ನುತ್ತಾರೆ. ಆದರೆ ಯಾರು ಬೆಂಕಿ ಹಚ್ಚಿಕೊಳ್ತಾರೆ ಅಂತಾರೆ. ಅಷ್ಟರಲ್ಲೇ ರಾಜೇಶ್, ತಾನು ಬೆಂಕಿ ಹಚ್ಚಿಕೊಳ್ಳುವುದಾಗಿ ಹೇಳುತ್ತಾನೆ.

  ಪ್ರತಿಭಟನೆಯಲ್ಲಿ ಬೆಂಕಿ ಹಚ್ಚಿಕೊಂಡ ರಾಜೇಶ

  1 ಲಕ್ಷದ ಬಗ್ಗೆ ಮಾತನಾಡುತ್ತಿರುವಾಗ, ರಾಜೇಶನಿಗೆ ತನ್ನ ಅಕ್ಕ ಹೇಳಿದ್ದು ನೆನಪಾಗುತ್ತೆ, ಮನೆ ಸಾಲ ತೀರಿಸಬೇಕು. ಅಕ್ಕನಿಗೆ ಸಹಾಯ ಮಾಡಬೇಕು ಎಂದು ರಾಜೇಶ ಪ್ರತಿಭಟನೆಯಲ್ಲಿ ಬೆಂಕಿ ಹಚ್ಚಿಕೊಳ್ಳೋಕೆ ರೆಡಿ ಎಂದು, ಪ್ರತಿಭಟನೆಯಲ್ಲಿ ಪೆಟ್ರೋಲ್ ಸುರಿದುಕೊಳ್ಳುತ್ತಿದ್ದಂತೆ, ಯಾರೂ ಬೆಂಕಿ ಕಿಡಿ ಹಾಕಿದ್ದಾರೆ. ರಾಜೇಶ ಹೊತ್ತಿ ಉರಿಯುತ್ತಿದ್ದಾನೆ.

  ಇದನ್ನೂ ಓದಿ: Meghana Raj: ಗೋಲ್ಡ್ ಕಲರ್ ಸೀರೆಯಲ್ಲಿ ನಟಿ ಮೇಘನಾ ರಾಜ್ ಮಿಂಚಿಂಗ್! ಏನ್ ಸ್ಪೆಷಲ್ ಎಂದ ಫ್ಯಾನ್ಸ್?

  ಬೆಂಕಿ ಕಿಡಿ ಹಿಂದೆ ಕಾಳಿ ಕೈವಾಡ
  ಪ್ರತಿಭಟನೆಯಲ್ಲಿ ನಾಟಕಕ್ಕೆ ರಾಜೇಶ ಬೆಂಕಿ ಹಚ್ಚಿಕೊಳ್ಳೋ ವಿಷಯ ಕಾಳಿಗೆ ಗೊತ್ತಾಗುತ್ತೆ. ಕಾಳಿಗೆ ರಾಜೇಶನಿಂದ ತುಂಬಾ ಅವಮಾನ ಆಗಿರುತ್ತೆ. ರಾಜೇಶ, ತನ್ನ ಅಕ್ಕ ಸುಮಿ ಜೊತೆ ಕಾಳಿ ಅಸಭ್ಯವಾಗಿ ವರ್ತಿಸಿದ್ದ ಎಂದು, ಅವನ ಮನೆಗೆ ಹೋಗಿ ಹೊಡೆದು, ಪೊಲೀಸರಿಗೆ ಒಪ್ಪಿಸಿರುತ್ತಾನೆ. ಅದಕ್ಕೆ ಕಾಳಿ ಹೇಗಾದ್ರೂ ಸೇಡು ತೀರಿಸಿಕೊಳ್ಳಬೇಕು ಎನ್ನುತ್ತಿರುತ್ತಾನೆ.

  Colors Kannada serial, Kannada serial, Kendasampige Serial, Kendasampige serial cast, ಕೆಂಡಸಂಪಿಗೆ ಧಾರಾವಾಹಿ, ಸಾವಿನ ಅಂಚಿನಲ್ಲಿ ರಾಜೇಶ, ಹೊಸ ಧಾರಾವಾಹಿ,ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
  ರಾಜೇಶ


  ಅದಕ್ಕೆ ಪ್ರತಿಭಟನೆ ಅವನಿಗೆ ಸಿಕ್ಕಿದೆ ತನ್ನ ಕಡೆಯ ಹುಡುಗನಿಗೆ ದುಡ್ಡು ಕೊಟ್ಟು, ರಾಜೇಶನಿಗೆ ಬೆಂಕಿ ಹಚ್ಚಲು ಹೇಳುತ್ತಾನೆ. ಅದರಂತೆ ರಾಜೇಶನಿಗೆ ಬೆಂಕಿ ಹಚ್ಚಿದ್ದಾನೆ.

  ತಮ್ಮನನ್ನು ಒಪ್ಪಿಕೊಳ್ಳಲು ಸುಮಿ ರೆಡಿ

  ರಾಜೇಶ ಪರೀಕ್ಷೆಯಲ್ಲಿ ಪಾಸಗಲಿಲ್ಲ ಎಂದು ಅವನನ್ನು ಸುಮನಾ ಮಾತನಾಡಿಸುವುದು ಬಿಟ್ಟಿರುತ್ತಾಳೆ. ಆದ್ರೆ ಈಗ ದೇವರ ಮೇಲೆ ಭಾರ ಹಾಕಿ ನನ್ನ ತಮ್ಮನನ್ನು ಮಾತನಾಡಿಸುತ್ತೇನೆ ಎಂದು, ಅಪ್ಪ, ತಂಗಿ ಬಳಿ ಹೇಳುತ್ತಿದ್ದಾಳೆ. ಈ ವಿಷಯ ಕೇಳಿದ್ರೆ ರಾಜೇಶನಿಗೂ ಖುಷಿ ಆಗುತ್ತೆ. ಆದ್ರೆ ಅದನ್ನು ಅವನು ಕೇಳ್ತಾನೋ, ಇಲ್ವೋ ಗೊತ್ತಿಲ್ಲ. ಯಾಕಂದ್ರೆ ರಾಜೇಶನ ಪ್ರಾಣ ಅಪಾಯದಲ್ಲಿದೆ.

  ಇದನ್ನೂ ಓದಿ: Shrirasthu Shubhamasthu: 'ಶ್ರೀರಸ್ತು ಶುಭಮಸ್ತು' ಅಂತ ಕಿರುತೆರೆಗೆ ಬರ್ತಿದ್ದಾರೆ ಸುಧಾರಾಣಿ, ಜೀ ಕನ್ನಡದಲ್ಲಿ ಹೊಸ ಧಾರಾವಾಹಿ

  ರಾಜೇಶನನ್ನು ಕಾಪಾಡ್ತಾರಾ ಕಾರ್ಪೊರೇಟರ್
  ಪ್ರತಿಭಟನೆಯಲ್ಲಿ ಸುಮ್ಮನೇ ಬೆಂಕಿ ಹಚ್ಚಿಕೊಳ್ಳಿ, ಅಲ್ಲೇ ಹತ್ತಿರ ಇದ್ದೋರು ಪ್ರಾಣ ಕಾಪಾಡ್ತಾರೆ ಎಂದು ಹೇಳಲಾಗಿತ್ತು. ಆದ್ರೆ ರಾಜೇಶನಿಗೆ ಬೆಂಕಿ ಹೆಚ್ಚು ಬಿದ್ದಿದ್ದು, ಕಾಪಾಡಲು ಯಾರು ಮುಂದಾಗ್ತಿಲ್ಲ. ಹಾಗಾದ್ರೆ ಕಾರ್ಪೊರೇಟರ್ ತೀರ್ಥಂಕರ್ ರಾಜೇಶನ ಪ್ರಾಣ ಕಾಪಾಡ್ತಾರಾ ನೋಡಬೇಕು.

  Colors Kannada serial, Kannada serial, Kendasampige Serial, Kendasampige serial cast, ಕೆಂಡಸಂಪಿಗೆ ಧಾರಾವಾಹಿ, ಸಾವಿನ ಅಂಚಿನಲ್ಲಿ ರಾಜೇಶ, ಹೊಸ ಧಾರಾವಾಹಿ,ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
  ಕೆಂಡಸಂಪಿಗೆ


  ಸುಮಿ ತನ್ನ ತಮ್ಮನ ಪ್ರಾಣ ಕಾಪಾಡಿಕೊಳ್ತಾಳಾ? ಇಲ್ಲ ಅಕ್ಕ-ತಮ್ಮ ವಾತ್ಸಲ್ಯ ಇಲ್ಲಿಗೆ ಕೊನೆಯಾಗುತ್ತಾ? ಎಲ್ಲವನ್ನೂ ನೋಡಲು ಕೆಂಡಸಂಪಿಗೆ ಧಾರಾವಾಹಿ ನೋಡಬೇಕು.
  Published by:Savitha Savitha
  First published: