Kendasampige: ಪ್ರತಿಭಟನೆಯಲ್ಲಿ ಬೆಂಕಿ ಹಚ್ಚಿಕೊಂಡವ ಚಿಕಿತ್ಸೆ ಫಲಿಸದೇ ಸಾವು! ಸುಮನಾ ತಮ್ಮ ರಾಜೇಶ್ ಇನ್ನಿಲ್ಲ!

ಸುಮಿ ತಮ್ಮ ರಾಜೇಶನಿಗಾಗಿ ಎಷ್ಟೇ ದೇವರನ್ನು ಕೇಳಿಕೊಂಡ್ರೂ ಪ್ರಯೋಜನವಾಗಿಲ್ಲ. ತಮ್ಮ ರಾಜೇಶ ಬದುಕಲಿಲ್ಲ. ವೈದ್ಯರು ಸಹ ಸುಮಿ ಬಳಿ ಬಂದು ಇದೇ ವಿಷಯವನ್ನು ಹೇಳಿದ್ದಾರೆ. ಹಾಗಿದ್ರೆ ಕೆಂಡಸಂಪಿಗೆ ಧಾರಾವಾಹಿಯಲ್ಲಿ ಮುಂದೇನಾಗುತ್ತೆ?

ಸುಮನಾ ತಮ್ಮ ರಾಜೇಶ ಇನ್ನಿಲ್ಲ

ಸುಮನಾ ತಮ್ಮ ರಾಜೇಶ ಇನ್ನಿಲ್ಲ

  • Share this:
    ಕೆಂಡಸಂಪಿಗೆ (Kendasampige) ಅನ್ನೋ ಧಾರಾವಾಹಿ (Serial), ಕಲರ್ಸ್ ಕನ್ನಡದಲ್ಲಿ (Colors Kannada) ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6.30ಕ್ಕೆ ಪ್ರಸಾರವಾಗುತ್ತಿದೆ. ಶುರುವಾದ ಹೊಸದರಲ್ಲೇ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗುತ್ತಿದೆ. ಈ ಕಥೆಯ ನಾಯಕಿ ಸುಮನಾ (Sumana). ಅಪ್ಪನಿಗೆ ಆರೋಗ್ಯ ಸರಿ ಇಲ್ಲದ ಕಾರಣ ಹೂವನ್ನು ಮಾರಿ ಸಂಸಾರ ಸಾಗಿಸುತ್ತಿದ್ದಾಳೆ. ಅಮ್ಮ ಬೇರೆ ಇಲ್ಲ. ತಮ್ಮ, ತಂಗಿಗೆ ಅಮ್ಮನ ಸ್ಥಾನದಲ್ಲಿ ನಿಂತಿದ್ದಾಳೆ. ತನ್ನ ತಮ್ಮ ಪರೀಕ್ಷೆಯಲ್ಲಿ ಪಾಸಾಗಲಿಲ್ಲ ಅಂತ ಅವನ ಜೊತೆ ಮಾತು ಬಿಟ್ಟಿದ್ದಾಳೆ. ಅಪ್ಪನ ಆಪರೇಷನ್‍ಗೆ ದುಡ್ಡು ಪಡೆದ ಸುಮಿಗೆ ಕಷ್ಟದ ಮೇಲೆ ಕಷ್ಟ ಬರುತ್ತಿವೆ. ಮನೆಯಲ್ಲಿ ಮಾಡಿರುವ ಸಾಲಕ್ಕೆ 1 ಲಕ್ಷ ಸಿಗುತ್ತೆ ಅಂತ ಪ್ರತಿಭಟನೆಯಲ್ಲಿ ಪೆಟ್ರೋಲ್ ಸುರಿದುಕೊಂಡು ರಾಜೇಶ (Rajesh) ಬೆಂಕಿ ಹಚ್ಚಿಕೊಂಡಿದ್ದು, ಪ್ರಾಣ  ಕಳೆದುಕೊಂಡಿದ್ದಾನೆ. ಸುಮಿಯ ಪ್ರೀತಿಯ ತಮ್ಮ ಇನ್ನಿಲ್ಲವಾಗಿದ್ದಾನೆ.

    ಪ್ರತಿಭಟನೆಯಲ್ಲಿ ರಾಜೇಶನಿಗೆ ಬೆಂಕಿ
    ಕಾರ್ಪೊರೇಟರ್ ತೀರ್ಥಂಕರ್ ಪಕ್ಷದಲ್ಲಿ ನಡೆದ ಪ್ರತಿಭಟನೆಯಲ್ಲಿ, ಪಕ್ಷ ಬಿಟ್ಟು ಹೋದವರನ್ನು ವಾಪಸ್ ಬರುವಂತೆ ಹೇಳಲು ಪ್ರತಿಭಟನೆ ಮಾಡುತ್ತಿದ್ದರು. ಪ್ರತಿಭಟನೆಯಲ್ಲಿ ರಾಜೇಶ್ ಬೆಂಕಿ ಹಚ್ಚಿಕೊಳ್ಳುವ ನಾಟಕ ಮಾಡಬೇಕು. ಅದಕ್ಕೆ ಅವನಿಗೆ 1 ಲಕ್ಷ ಸಿಗುತ್ತೆ. ಅದರಿಂದ ಮನೆಗೆ ಉಪಯೋಗ ಆಗುತ್ತೆ. ತನ್ನ ಅಕ್ಕನಿಗೆ ಈ ದುಡ್ಡಿನಿಂದ ಸಹಾಯ ಆಗುತ್ತೆ ಅಂತ ದುಡ್ಡಿಗಾಗಿ ಬೆಂಕಿ ಹಚ್ಚಿಕೊಳ್ಳುತ್ತೇನೆ ಎಂದು ನಾಟಕ ಮಾಡುತ್ತಿದ್ದ. ಆಗ ಯಾರು ಕಡ್ಡಿ ಗಿರಿ ಹಾಕಿದ ಕಾರಣ ರಾಜೇಶನಿಗೆ ಬೆಂಕಿ ಹತ್ತುತ್ತದೆ.

    ಬೆಂಕಿ ಹಚ್ಚಿಸಿದ್ದ ಕಾಳಿ
    ಪ್ರತಿಭಟನೆಯಲ್ಲಿ ನಾಟಕಕ್ಕೆ ರಾಜೇಶ ಬೆಂಕಿ ಹಚ್ಚಿಕೊಳ್ಳೋ ವಿಷಯ ಕಾಳಿಗೆ ಗೊತ್ತಾಗುತ್ತೆ. ಕಾಳಿಗೆ ರಾಜೇಶನಿಂದ ತುಂಬಾ ಅವಮಾನ ಆಗಿರುತ್ತೆ. ರಾಜೇಶ, ತನ್ನ ಅಕ್ಕ ಸುಮಿ ಜೊತೆ ಕಾಳಿ ಅಸಭ್ಯವಾಗಿ ವರ್ತಿಸಿದ್ದ ಎಂದು, ಅವನ ಮನೆಗೆ ಹೋಗಿ ಹೊಡೆದು, ಪೆೋಲೀಸರಿಗೆ ಒಪ್ಪಿಸಿರುತ್ತಾನೆ.

    Colors Kannada serial, Kannada serial, Kendasampige Serial, Kendasampige serial cast, Sumana brother Rajesh Death, ಕೆಂಡಸಂಪಿಗೆ ಧಾರಾವಾಹಿ, ಸುಮನಾ ತಮ್ಮ ರಾಜೇಶ ಇನ್ನಿಲ್ಲ, ಹೊಸ ಧಾರಾವಾಹಿ,ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
    ರಾಜೇಶ


    ಅದಕ್ಕೆ ಕಾಳಿ ಹೇಗಾದ್ರೂ ಸೇಡು ತೀರಿಸಿಕೊಳ್ಳಬೇಕು ಎನ್ನುತ್ತಿರುತ್ತಾನೆ. ಅದಕ್ಕೆ ತನ್ನ ಕಡೆಯ ಹುಡುಗನಿಗೆ ದುಡ್ಡು ಕೊಟ್ಟು, ರಾಜೇಶನಿಗೆ ಬೆಂಕಿ ಹಚ್ಚಲು ಹೇಳುತ್ತಾನೆ. ಅದರಂತೆ ರಾಜೇಶನಿಗೆ ಬೆಂಕಿ ಹಚ್ಚಿದ್ದಾನೆ.

    ಇದನ್ನೂ ಓದಿ: Gattimela: ವೇದಾಂತ್, ವಿಕ್ರಾಂತ್​​ಗೆ ಅಮ್ಮ ಸಿಕ್ಕಿದ ಖುಷಿ! ನಿಜವಾದ ಅಮ್ಮ ಯಾರು ಗೊತ್ತಾಯ್ತಾ?

    ವೈದ್ಯರ ಚಿಕಿತ್ಸೆ ಫಲಿಸಲಿಲ್ಲ
    ಹೊತ್ತಿಕೊಂಡು ಉರಿಯುತ್ತಿದ್ದ ರಾಜೇಶನನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆದ್ರೆ, ವೈದ್ಯರು ಎಷ್ಟೇ ಚಿಕಿತ್ಸೆ ನೀಡಿದ್ರೂ ಪ್ರಯೋಜವಾಗ್ತಿಲ್ಲ. ರಾಜೇಶನ ಪ್ರಾಣ ಉಳಿಸಿಕೊಳ್ಳಲು ಆಗ್ತಾ ಇಲ್ಲ. ಸುಮಿ ದೇವರ ಬಳಿ ಬೇಡಿ ಕೊಳ್ತಿದ್ದಾಳೆ. ನಮ್ಮದು ಪುಟ್ಟ ಸಂಸಾರ. ಅಪ್ಪ, ನಾನು, ರಾಜೇಶ, ರಾಜಿ ಇಷ್ಟು ಜನರಲ್ಲಿ ಯಾರಿಗೆ ಏನೇ ಆದ್ರೂ ಸಹಿಸಲು ಆಗಲ್ಲ. ನನ್ನ ತಮ್ಮನನ್ನು ಉಳಿಸಿಕೊಡು ದೇವರೇ ಎಂದು ಕೇಳುತ್ತಿದ್ದಾಳೆ.

    ಇದನ್ನೂ ಓದಿ: New Serial: ಕಲರ್ಸ್​ನಲ್ಲಿ ಹೊಸ ಧಾರಾವಾಹಿ, ಶೀಘ್ರದಲ್ಲೇ ಬರ್ತಿದ್ದಾಳೆ ಭಾಗ್ಯಲಕ್ಷ್ಮಿ

    ದೇವರಿಗೆ ಸುಮಿಯ ಪ್ರಾರ್ಥನೆ ಕೇಳಿಸಿಲ್ಲ
    ಸುಮಿ ತಮ್ಮ ರಾಜೇಶನಿಗಾಗಿ ಎಷ್ಟೇ ದೇವರನ್ನು ಕೇಳಿಕೊಂಡ್ರೂ ಪ್ರಯೋಜನವಾಗಿಲ್ಲ. ಸುಮಿಯ ತಮ್ಮ ರಾಜೇಶ ಬದುಕಲಿಲ್ಲ. ವೈದ್ಯರು ಸಹ ಸುಮಿ ಬಳಿ ಬಂದು ಇದೇ ವಿಷಯವನ್ನು ಹೇಳಿದ್ದಾರೆ. ನಿಮ್ಮ ತಮ್ಮನನ್ನು ಬದುಕಿಸಲು ಆಗಲಿಲ್ಲ. ಕ್ಷಮಿಸಿ ಎಂದು ಹೇಳುತ್ತಾರೆ.

    Colors Kannada serial, Kannada serial, Kendasampige Serial, Kendasampige serial cast, Sumana brother Rajesh Death, ಕೆಂಡಸಂಪಿಗೆ ಧಾರಾವಾಹಿ, ಸುಮನಾ ತಮ್ಮ ರಾಜೇಶ ಇನ್ನಿಲ್ಲ, ಹೊಸ ಧಾರಾವಾಹಿ,ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
    ಸುಮಿ ಅಪ್ಪ, ತಂಗಿ ಕೂಡ ಕುಸಿದು ಬಿದ್ದಿದ್ದಾರೆ


    ರಾಜೇಶ ಇನ್ನಿಲ್ಲ
    ತಮ್ಮ ರಾಜೇಶನ ಸಾವಿನ ಸುದ್ದಿ ಕೇಳಿ ಸುಮಿಗೆ ಆಘಾತವಾಗಿದೆ. ಆಕೆ ಆ ಕಹಿ ಸತ್ಯವನ್ನು ಒಪ್ಪುತ್ತಿಲ್ಲ. ತನ್ನ ತಮ್ಮನಿಗೆ ಏನೂ ಆಗಿಲ್ಲ ಎಂದು ಅಳುತ್ತಿದ್ದಾಳೆ. ಸುಮಿ ಅಪ್ಪ, ತಂಗಿ ಕೂಡ ಕುಸಿದು ಬಿದ್ದಿದ್ದಾರೆ. ಪ್ರೀತಿಯ ತಮ್ಮನನ್ನು ಕಳೆದುಕೊಂಡು ಕಣ್ಣೀರು ಹಾಕುತ್ತಿದ್ದಾರೆ. ಹಾಗಾದ್ರೆ ರಾಜೇಶ್ ಅನ್ನೋ ಪಾತ್ರ ಇಷ್ಟಕ್ಕೆ ಮುಕ್ತಾಯ ಆಯ್ತಾ? ಸುಮನಾ ಮುಂದೇನು ಮಾಡ್ತಾಳೆ? ಎಲ್ಲವನ್ನೂ ತಿಳಿದುಕೊಳ್ಬೇಕು ಅಂದ್ರೆ ನೀವು ಕೆಂಡಸಂಪಿಗೆ ಸೀರಿಯಲ್ ನೋಡಲೇಬೇಕು.
    Published by:Savitha Savitha
    First published: