Kendasampige: ಮನೆ ಸಾಲಕ್ಕಾಗಿ ಪ್ರತಿಭಟನೆಯಲ್ಲಿ ಬೆಂಕಿ ಹಚ್ಚಿಕೊಳ್ಳೋಕೆ ರಾಜೇಶ್​ ರೆಡಿ

1 ಲಕ್ಷದ ಬಗ್ಗೆ ಮಾತನಾಡುತ್ತಿರುವಾಗ, ರಾಜೇಶ್​ಗೆ ತನ್ನ ಅಕ್ಕ ಹೇಳಿದ್ದು ನೆನಪಾಗುತ್ತೆ, ಮನೆ ಸಾಲ ತೀರಿಸಬೇಕು. ಅಕ್ಕನಿಗೆ ಸಹಾಯ ಮಾಡಬೇಕು ಎಂದು ರಾಜೇಶ ಪ್ರತಿಭಟನೆಯಲ್ಲಿ ಬೆಂಕಿ ಹಚ್ಚಿಕೊಳ್ಳೋಕೆ ರೆಡಿಯಾಗಿದ್ದಾನೆ. ಹಾಗಾದ್ರೆ ರಾಜೇಶನ ಪ್ರಾಣ ಅಪಾಯದಲ್ಲಿ ಇದೆಯಾ?

ಕೆಂಡಸಂಪಿಗೆ

ಕೆಂಡಸಂಪಿಗೆ

  • Share this:
    ಕೆಂಡಸಂಪಿಗೆ (Kendasampige) ಅನ್ನೋ ಹೊಸ ಧಾರಾವಾಹಿ ಕಳೆದ 15 ದಿನದಿಂದ, ಕಲರ್ಸ್ ಕನ್ನಡದಲ್ಲಿ (Colors Kannada) ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6.30ಕ್ಕೆ ಪ್ರಸಾರವಾಗುತ್ತಿದೆ. ಶುರುವಾದ ಹೊಸದರಲ್ಲೇ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗುತ್ತಿದೆ. ಈ ಕಥೆಯ ನಾಯಕಿ ಸುಮನಾ (Sumana). ಅಪ್ಪನಿಗೆ ಆರೋಗ್ಯ ಸರಿ ಇಲ್ಲದ ಕಾರಣ ಹೂವನ್ನು ಮಾರಿ ಸಂಸಾರ ಸಾಗಿಸುತ್ತಿದ್ದಾಳೆ. ಅಮ್ಮ ಬೇರೆ ಇಲ್ಲ. ತಮ್ಮ, ತಂಗಿಗೆ ಅಮ್ಮನ ಸ್ಥಾನದಲ್ಲಿ ನಿಂತಿದ್ದಾಳೆ. ತನ್ನ ತಮ್ಮ ಪರೀಕ್ಷೆಯಲ್ಲಿ (Exam) ಪಾಸಾಗಲಿಲ್ಲ ಅಂತ ಅವನ ಜೊತೆ ಮಾತು ಬಿಟ್ಟಿದ್ದಾಳೆ. ಅಪ್ಪನ ಆಪರೇಷನ್‍ಗೆ ದುಡ್ಡು ಪಡೆದ ಸುಮಿಗೆ ಕಷ್ಟದ ಮೇಲೆ ಕಷ್ಟ ಬರುತ್ತಿವೆ. ಮನೆಯಲ್ಲಿ ಮಾಡಿರುವ ಸಾಲಕ್ಕೆ 1 ಲಕ್ಷ (1 lack) ಸಿಗುತ್ತೆ ಅಂತ ಪ್ರತಿಭಟನೆಯಲ್ಲಿ ಪೆಟ್ರೋಲ್ (Petrol) ಸುರಿದುಕೊಂಡು ಬೆಂಕಿ (Fire) ಹಚ್ಚಿಕೊಳ್ಳೋಕೆ ಮುಂದಾಗಿದ್ದಾನೆ.

    ಸುಮಿ ಮನೆಗೆ ಬಂದ ಕಾಳಿ

    ಸುಮನಾ ಮನೆಯಲ್ಲಿ ಒಬ್ಬಳೇ ಇರುವುದನ್ನು ಖಚಿತಪಡಿಸಿಕೊಂಡ ಕಾಳಿ. ಮನೆಗೆ ಬರುತ್ತಾನೆ. ಮನೆಯ ಬಾಗಿಲುಗಳನ್ನು ಹಾಕುತ್ತಾನೆ. ಸುಮಿ ಯಾಕೆ ಬಂದಿದ್ದಿ ಹೋಗು ಎನ್ನುತ್ತಾಳೆ. ಅಷ್ಟರಲ್ಲೇ ಕಾಲೋನಿ ಜನ ಎಲ್ಲ ಸುಮಿ ಮನೆ ಬಾಗಿಲ ಮುಂದೆ ಬರುತ್ತಾರೆ. ಆಗ ಕಾಳಿ ಮನೆಯಿಂದ ಆಚೆ ಬಂದು. ನಂದು, ಸುಮಿದು ಎಲ್ಲ ಮುಗಿಯಿತು ಎಂದು ನಗುತ್ತಾ ಹೋಗುತ್ತಾನೆ.

    ಕಾಳಿಗೆ ರಾಜೇಶ್ ಕ್ಲಾಸ್

    ತನ್ನ ಅಕ್ಕ ಸುಮಿ ಮನೆಯಲ್ಲಿ ಒಬ್ಬಳೇ ಇದ್ದಾಗ ಕಾಳಿ ಬಂದು ಅಸಭ್ಯವಾಗಿ ವರ್ತಿಸಿರುತ್ತಾನೆ. ಈ ವಿಷಯ ತಿಳಿದ ರಾಜೇಶ್ ಅವರ ಮನೆಗೆ ಹೋಗಿ, ಕಾಳಿಗೆ ಹೊಡೆದು, ನಿನ್ನ ಕೊಲೆ ಮಾಡ್ತೀನಿ ಅಂತ ಚಾಕು ಹಿಡಿದಿರುತ್ತಾನೆ. ಅಷ್ಟರಲ್ಲಿ ಕಾರ್ಪೊರೇಟರ್ ಬಂದು ಅವನನ್ನು ಬಿಡಿಸಿ, ಕಾಳಿಯನ್ನು ಪೊಲೀಸರಿಗೆ ಒಪ್ಪಿಸುತ್ತಾರೆ. ಅದಕ್ಕೆ ಈಗ ವಿಜಯ ಸುಮ್ಮನೇ ಯಾರನ್ನು ಬಿಡಲ್ಲ ಎಂದು ಸುಮಿಗೆ ಗೊತ್ತಾಗಿದೆ.

    ವಿಜಯಕ್ಕನ ಸಾಲ ತೀರಿಸಲೇ ಬೇಕು

    ಸುಮಿ ತನ್ನ ಅಪ್ಪನ ಆಪರೇಷನ್‍ಗೆ ಮಾಡಿದ್ದ ಲಕ್ಷ ಲಕ್ಷ ಸಾಲವನ್ನು ಕಾರ್ಪೊರೇಟರ್ ತೀರ್ಥಂಕರ್ ತೀರಿಸಿದ್ದಾರೆ. ಈಗ ಉಳಿದಿರೋದು ಚೀಟಿ ದುಡ್ಡು ಮತ್ತು ತನ್ನ ತಂಗಿ ಕಾಲೇಜಿಗೆ ಪಡೆದ ಸಾಲ. ಎರಡನ್ನೂ ವಿಜಯಕ್ಕನಿಗೆ ತೀರಿಸಬೇಕು. ವಿಜಯ ಮಗ ಕಾಳಿ ಜೈಲಿಗೆ ಹೋದ ಕಾರಣ, ಆಕೆ ಸಾಲ ತೀರಿಸಲು ಪಟ್ಟು ಹಿಡಿದೇ ಹಿಡಿಯುತ್ತಾಳೆ.

    ಇದನ್ನೂ ಓದಿ: Praveen Tej: ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿಯ ಪ್ರವೀಣ ತೇಜ್ ಈಗೇನ್ಮಾಡ್ತಿದ್ದಾರೆ?

    ತೀರ್ಥಂಕರ್ ಪಕ್ಷದಲ್ಲಿ ಪ್ರತಿಭಟನೆ ಇದೆ

    ತೀರ್ಥಂಕರ್ ಪ್ರಸಾದ್ ಅವರು ಪಕ್ಷದಿಂದ ಪ್ರತಿಭಟನೆ ಮಾಡುತ್ತಿದ್ದಾರೆ. ಅದು ವಿರೋಧ ಪಕ್ಷದವರಿಗೆ ಅವರ ಬಲ ತೋರಿಸಬೇಕಿದೆ. ಅದಕ್ಕೆ ದೊಡ್ಡದಾಗಿ ಪ್ರತಿಭಟನೆ ಮಾಡಲಿದ್ದಾರೆ. ಪ್ರತಿಭಟನೆಯಲ್ಲಿ ಯಾರಾದ್ರೂ ಬೆಂಕಿ ಹಚ್ಚಿಕೊಳ್ಳಬೇಕು. ಆದ್ರೆ ಯಾರು ಒಪ್ಪುತ್ತಾರೆ ಎನ್ನುತ್ತಾರೆ. ಬೆಂಕಿ ಹಚ್ಚಿಕೊಂಡೋರಿಗೆ 1 ಲಕ್ಷ ಕೊಡುತ್ತೇವೆ ಎನ್ನಿ ಹಚ್ಚಿಕೊಳ್ತಾರೆ ಅಂತಾರೆ. ಅಷ್ಟರಲ್ಲೇ ರಾಜೇಶ್, ತಾನು ಬೆಂಕಿ ಹಚ್ಚಿಕೊಳ್ಳುವುದಾಗಿ ಹೇಳುತ್ತಾನೆ.

    Colors Kannada serial, Kannada serial, Kendasampige Serial, Kendasampige serial cast, Protest episode in serial, ಕೆಂಡಸಂಪಿಗೆ ಧಾರಾವಾಹಿ, ಹೊಸ ಧಾರಾವಾಹಿ, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
    ತೀರ್ಥಂಕರ್ ಕುಟುಂಬ


    ಮನೆ ಸಾಲಕ್ಕಾಗಿ ಬೆಂಕಿ ಹಚ್ಚಿಕೊಳ್ಳೋಕೆ ರೆಡಿ
    1 ಲಕ್ಷದ ಬಗ್ಗೆ ಮಾತನಾಡುತ್ತಿರುವಾಗ, ರಾಜೇಶನಿಗೆ ತನ್ನ ಅಕ್ಕ ಹೇಳಿದ್ದು ನೆನಪಾಗುತ್ತೆ, ಮನೆ ಸಾಲ ತೀರಿಸಬೇಕು. ಅಕ್ಕನಿಗೆ ಸಹಾಯ ಮಾಡಬೇಕು ಎಂದು ರಾಜೇಶ ಪ್ರತಿಭಟನೆಯಲ್ಲಿ ಬೆಂಕಿ ಹಚ್ಚಿಕೊಳ್ಳೋಕೆ ರೆಡಿಯಾಗಿದ್ದಾನೆ. ಹಾಗಾದ್ರೆ ರಾಜೇಶನ ಪ್ರಾಣ ಅಪಾಯದಲ್ಲಿ ಇದೆಯಾ? ದುಡ್ಡಿಗಾಗಿ ಬೆಂಕಿ ಹಚ್ಚಿಕೊಂಡು ಬಿಡುತ್ತಾನಾ?

    ಇದನ್ನೂ ಓದಿ: Rachana Inder: ಕೊಡಗಿನ ಬೆಡಗಿ ಲವ್ ಮಾಕ್ಟೆಲ್ ಹುಡುಗಿ ರಚನಾ ಏನ್ ಮಾಡ್ತಿದ್ದಾಳೆ? ಹೆಂಗೆ ನಾವು ಎಂದವಳು ಈಗ ಹೇಗಿದ್ದಾಳೆ?

    ಅಕ್ಕನಿಗೆ ತಮ್ಮನನ್ನು ಕಂಡ್ರೆ ಪ್ರಾಣ. ತಮ್ಮನಿಗೆ ಅಕ್ಕನನ್ನು ಕಂಡ್ರೆ ಅಪಾರ ಪ್ರೀತಿ. ಇಬ್ಬರಲ್ಲಿ ಯಾರಿಗೆ ನೋವಾದ್ರೂ ಸಹಿಸಲ್ಲ. ಈಗ ಅವನು ಬೆಂಕಿ ಹಚ್ಚಿಕೊಳ್ಳೋ ಸುದ್ದಿ ಗೊತ್ತಾದ್ರೆ ಸುಮ್ಮನೇ ಇರ್ತಾಳಾ? ಮುಂದೇನಾಗುತ್ತೆ ಅಂತ ನೋಡೋಕೆ ಕೆಂಡ ಸಂಪಿಗೆ ಧಾರಾವಾಹಿ ನೋಡಬೇಕು.
    Published by:Savitha Savitha
    First published: