• Home
  • »
  • News
  • »
  • entertainment
  • »
  • Kendasampige: ವೋಟ್​​ಗಾಗಿ ಸುಮನಾ ಮದುವೆ! ಎಲೆಕ್ಷನ್ ಆದ ಮೇಲೆ ಸುಮನಾಳನ್ನು ಬಿಡ್ತಾನಂತೆ!

Kendasampige: ವೋಟ್​​ಗಾಗಿ ಸುಮನಾ ಮದುವೆ! ಎಲೆಕ್ಷನ್ ಆದ ಮೇಲೆ ಸುಮನಾಳನ್ನು ಬಿಡ್ತಾನಂತೆ!

ವೋಟ್ ಗಾಗಿ ಸುಮನಾನ ಮದುವೆ

ವೋಟ್ ಗಾಗಿ ಸುಮನಾನ ಮದುವೆ

ಕಾರ್ಪೊರೇಟರ್ ಎಲೆಕ್ಷನ್ ಗಾಗಿ ಸುಮನಾಳಿಗೆ ತಾಳಿ ಕಟ್ಟಿದ್ದಾನಂತೆ. ಎಲೆಕ್ಷನ್ ಮುಗಿದ ಮೇಲೆ ಆಕೆಯನ್ನು ಬಿಟ್ಟು, ಮನೆಯವರು ನಿಶ್ಚಯ ಮಾಡಿರೋ ನಿತ್ಯಾಳನ್ನು ಮದುವೆ ಆಗ್ತಾನಂತೆ. ಅದಕ್ಕೆ ನಿತ್ಯ ಸಹ ಒಪ್ಪಿಕೊಂಡಿದ್ದಾಳೆ.

  • Share this:

    ಕೆಂಡಸಂಪಿಗೆ (Kendasampige) ಧಾರಾವಾಹಿ (Serial) ಕಲರ್ಸ್ ಕನ್ನಡದಲ್ಲಿ (Colors Kannada) ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6.30ಕ್ಕೆ ಪ್ರಸಾರವಾಗುತ್ತಿದೆ. ಶುರುವಾದಾಗಿನಿಂದ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗುತ್ತಿದೆ. ಈ ಕಥೆಯ ನಾಯಕಿ ಸುಮನಾ . ಅಪ್ಪನಿಗೆ ಆರೋಗ್ಯ ಸರಿ ಇಲ್ಲದ ಕಾರಣ ಹೂವನ್ನು ಮಾರಿ ಸಂಸಾರ ಸಾಗಿಸುತ್ತಿದ್ದಾಳೆ. ಅಮ್ಮ ಬೇರೆ ಇಲ್ಲ. ತಮ್ಮನ ಸಾವಿನ ನೋವನ್ನೇ ಸುಮಿಗೆ ಮರೆಯಲು ಆಗುತ್ತಿಲ್ಲ. ಈ ನಡುವೆ ತನ್ನ ಏರಿಯಾ ಜನರಿಗೆ ಕಷ್ಟದ ಮೇಲೆ ಕಷ್ಟ ಬರುತ್ತಿದೆ. ಅದಲ್ಲದೇ ವಿಜಯಮ್ಮನ ಮಗ ಕಾಳಿ ಸುಮಿ, ಕಾರ್ಪೊರೇಟರ್ ಗೆ ಸಂಬಂಧ ಇದೆ ಎಂದು ಎಲ್ಲೆಡೆ ಸುದ್ದಿ ಹರಡಿಸುತ್ತಿದ್ದಾನೆ. ಆಕೆಯನ್ನು ಯಾರೂ ಮದುವೆ ಮಾಡಿಕೊಳ್ಳದಂತೆ ಮಾಡ್ತೀನಿ ಅಂತಿದ್ದ. ಅದಕ್ಕೆ ಅದಕ್ಕೆ ಕಾರ್ಪೊರೇಟರ್ ನಾನು ಮದುವೆ  (Marriage) ಮಾಡಿಸ್ತೀನಿ ಅಂದಿದ್ರು. ಆದ್ರೆ ಗಂಡೇ ಪರಾರಿ ಆಗಿದ್ದಾನೆ. ಈಗ ತೀಥರ್ಂಕರ್ ಸುಮಿಗೆ ತಾಳಿ ಕಟ್ಟಿದ್ದಾರೆ. ಅದು ಎಲೆಕ್ಷನ್ (Election) ಗಿಮಿಕ್ ಗಾಗಿ ಮಾತ್ರ.


    ವೋಟಿಗಾಗಿ ನಡೆದ ನಾಟಕ
    ಸುಮನಾ ಮದುವೆ ಆಗಬೇಕಿದ್ದ ಗಂಡು ಬಂದಿರುವುದಿಲ್ಲ. ಕಾಳಿ ಸಾಮೂಹಿಕ ವಿವಾಹ ನಡೆಯುವ ಜಾಗಕ್ಕೆ ಬಂದು, ನೆರೆದಿರುವ ಜನರ ಮುಂದೆ ಕಾರ್ಪೊರೇಟರ್ ತೀಥರ್ಂಕರ್ ಮತ್ತು ಸುಮನಾ ಮಧ್ಯೆ ಸಂಬಂಧ ಕಲ್ಪಿಸುತ್ತಾನೆ. ನಮ್ಮ ಏರಿಯಾ ಹುಡುಗಿ ಜೊತೆ ಸಂಬಂಧ ಇಟ್ಟುಕೊಂಡಿದ್ದಾನೆ. ಅವಳನ್ನು ಬೇರೆಯವರಿಗೆ ಆಕೆಯನ್ನು ಮದುವೆ ಮಾಡಿಕೊಡಲು ಮುಂದಾಗಿದ್ದಾನೆ. ಆದ್ರೆ ಈಗ ಆ ಹುಡುಗ ಪರಾರಿ ಆಗಿದ್ದಾನೆ. ಈಗ ಸುಮನಾ ಬದುಕಿನ ಕಥೆ ಏನು ಅಂತ ಎಲ್ಲರ ಮುಂದೆ ಪ್ರಶ್ನೆ ಮಾಡ್ತಾನೆ.


    ಸುಮನಾಗೆ ತಾಳಿ ಕಟ್ಟಿದ ತೀರ್ಥಂಕರ್
    ತಾಕತ್ತಿದ್ರೆ ನೀನು ತಾಳಿ ಕಟ್ಟು ಎಂದು ಕಾರ್ಪೊರೇಟರ್ ಗೆ  ಸವಾಲ್ ಹಾಕ್ತಾನೆ. ಕಾಳಿ ಹಾಕಿದ ಸವಾಲ್‍ಗೆ ಕಾಪೆರ್Çರೇಟರ್ ತೀಥರ್ಂಕರ್, ಕಷ್ಟ ಎಂದವರ ಸಹಾಯಕ್ಕೆ ನಾನು ಇರ್ತೀನಿ. ಅದನ್ನು ನಿರೂಪಿಸುವುದಕ್ಕೆ ಸುಮನಾ ಅವರಿಗೆ ತಾಳಿ ಕಟ್ತೀನಿ ಎಂದು ಹೇಳ್ತಾನೆ. ಅದನ್ನು ಕೇಳಿ ಅಲ್ಲಿದ್ದವರೆಲ್ಲಾ ಶಾಕ್ ಆಗ್ತಾರೆ. ಮಾತಿನಂತೆಯೇ ಸುಮನಾಗೆ ತಾಳಿ ಕಟ್ಟುತ್ತಾನೆ.


    ಇದನ್ನೂ ಓದಿ: Bollywood Gym Fashion: ಬಾಲಿವುಡ್ ತಾರೆಯರ ಜಿಮ್ ಫ್ಯಾಷನ್, ಬಿ-ಟೌನ್ ಟಾಪ್ ನಟಿ ಮಣಿಯರ ವರ್ಕೌಟ್ ಲುಕ್


    ಸುಮಿಯನ್ನು ತವರು ಮನೆಗೆ ಬಿಟ್ಟು ತೀರ್ಥಂಕರ್
    ಮದುವೆಯಾದ ಸುಮನಾಳನ್ನು ತೀರ್ಥಂಕರ್ ತನ್ನ ಮನೆಗೆ ಕರೆದುಕೊಂಡು ಹೋಗುವುದನ್ನು ಬಿಟ್ಟು, ತವರು ಮನೆಯಲ್ಲಿ ಬಿಟ್ಟಿದ್ದಾನೆ. ಅಲ್ಲದೇ ಸುಮನಾ ಬಳಿ ತನ್ನ ಜೀವನದ ರಾಜಕೀಯದ ಜೀವನದ ಬಗ್ಗೆ ವಿವರಿಸಿ ಹೇಳಿದ್ದಾನೆ. ಅದಕ್ಕೆ ಸುಮನಾ ಕೂಡ ಒಪ್ಪಿಕೊಂಡು ನೀವು ಹೇಳಿದಂತೆ ಮಾಡುವೆ ಎಂದು ತವರು ಮನೆಯಲ್ಲಿ ಇದ್ದಾಳೆ.


    Colors Kannada serial, Kannada serial, Kendasampige Serial, Kendasampige serial cast, Sumana marriage, ಕೆಂಡಸಂಪಿಗೆ ಧಾರಾವಾಹಿ, ವೋಟ್ ಗಾಗಿ ಸುಮನಾನ ಮದುವೆ ಆದ್ನಾ ಕಾರ್ಪೊರೇಟರ್, ಎಲೆಕ್ಷನ್ ಆದ ಮೇಲೆ ದೂರ ಮಾಡ್ತಾರಂತೆ!, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
    ತೀರ್ಥಂಕರ್


    ತೀರ್ಥ ಮನೆಯಲ್ಲಿ ಜಗಳ
    ಮದುವೆ ಮುಗಿಸಿಕೊಂಡು ಮನೆಗೆ ಬಂದ ತೀರ್ಥಂಕರ್ ನನ್ನಯ ತಂದೆ ಕಪಾಳಕ್ಕೆ ಹೊಡೆದಿದ್ದಾರೆ. ಮನೆಯವರೆಲ್ಲಾ ಅವನನ್ನು ಬೈದಿದ್ದಾರೆ. ಆದ್ರೆ ಆ ಮದುವೆಯನ್ನು ತೀರ್ಥಂಕರ್ ಸಮರ್ಥನೆ ಮಾಡಿಕೊಳ್ತಿದ್ದಾರೆ. ನನ್ನ ಇಷ್ಟು ದಿನದ ಕನಸು ಹಾಳಾಗುತ್ತಿತ್ತು ಎಂದು ಹೇಳ್ತಾನೆ. ಆದ್ರೆ ಮನೆಯವರು ಒಪ್ಪಲು ತಯಾರಿಲ್ಲ.


    Colors Kannada serial, Kannada serial, Kendasampige Serial, Kendasampige serial cast, Sumana marriage, ಕೆಂಡಸಂಪಿಗೆ ಧಾರಾವಾಹಿ, ವೋಟ್ ಗಾಗಿ ಸುಮನಾನ ಮದುವೆ ಆದ್ನಾ ಕಾರ್ಪೊರೇಟರ್, ಎಲೆಕ್ಷನ್ ಆದ ಮೇಲೆ ದೂರ ಮಾಡ್ತಾರಂತೆ!, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
    ಸುಮನಾ


    ಎಲೆಕ್ಷನ್ ಆದ ಮೇಲೆ ಸುಮನಾಳನ್ನು ಬಿಡ್ತಾನಂತೆ!
    ಕಾರ್ಪೊರೇಟರ್ ಎಲೆಕ್ಷನ್ ಗಾಗಿ ಸುಮನಾಳಿಗೆ ತಾಳಿ ಕಟ್ಟಿದ್ದಾನಂತೆ. ಎಲೆಕ್ಷನ್ ಮುಗಿದ ಮೇಲೆ ಆಕೆಯನ್ನು ಬಿಟ್ಟು, ಮನೆಯವರು ನಿಶ್ಚಯ ಮಾಡಿರೋ ನಿತ್ಯಾಳನ್ನು ಮದುವೆ ಆಗ್ತಾನಂತೆ. ಅದಕ್ಕೆ ನಿತ್ಯ ಸಹ ಒಪ್ಪಿಕೊಂಡಿದ್ದಾಳೆ.


    ಇದನ್ನೂ ಓದಿ: Karunya Ram: ಕಾರುಣ್ಯ ರಾಮ್ ಹೊಸ ಫೋಟೋ ಶೂಟ್! ದಸರಾ ಹಬ್ಬಕ್ಕೆ ರಾಣಿ ಲುಕ್


    ಸುಮನಾ ಬದುಕು ಮೂರಬಟ್ಟೆ ಆಯ್ತಾ? ಯಾರದೋ ರಾಜಕೀಯ ಲಾಭಕ್ಕೆ ಸುಮನ ಜೀವನ ಹಾಳಾಯ್ತಾ? ಮುಂದೇನಾಗುತ್ತೆ ಅಂತ ನೋಡೋಕೆ ಕೆಂಡಸಂಪಿಗೆ ಸೀರಿಯಲ್ ನೋಡಬೇಕು.

    Published by:Savitha Savitha
    First published: