Kendasampige: ಕಾಲೋನಿ ನೀರಿಗಾಗಿ ಕಾರ್ಪೊರೇಟರ್ ಮನೆ ಬಾಗಿಲಿಗೆ ಕೊಡ ಹಿಡಿದು ಬಂದ ಸುಮನಾ?

ಕಾಲೋನಿಯಲ್ಲಿ 2 ದಿನದಿಂದ ನೀರು ಬಾರದೇ ಜನ ಪರದಾಡುತ್ತಿದ್ದಾರೆ. ಅದಕ್ಕೆ ಸುಮಿ ಮತ್ತು ಕಾಲೋನಿಯವರು ಕಾರ್ಪೊರೇಟರ್ ತೀರ್ಥಂಕರ್ ಪ್ರಸಾದ್ ಮನೆ ಮುಂದೆ ಹೋಗಿದ್ದಾರೆ. ಕೊಡ ಹಿಡಿದು ಧರಣಿ ಕೂತಿದ್ದಾರೆ ನೀರು ಬರೋವರೆಗೂ ಎದ್ದು ಹೋಗಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ಕೆಂಡಸಂಪಿಗೆ

ಕೆಂಡಸಂಪಿಗೆ

 • Share this:
  ಕೆಂಡಸಂಪಿಗೆ (Kendasampige) ಅನ್ನೋ ಹೊಸ ಧಾರಾವಾಹಿ (New Serial) ಕಲರ್ಸ್ ಕನ್ನಡದಲ್ಲಿ (Colors Kannada) ಸೋಮವಾರದಿಂದ ಪ್ರಸಾರವಾಗುತ್ತಿದೆ. ಸಂಜೆ 6.30ಕ್ಕೆ ಪ್ರಸರವಾಗುತ್ತಿದೆ. ಶುರುವಾಗಿ ಮೂರೇ ದಿನ ಅದ್ರೂ, ಚೆನ್ನಾಗಿ ಮೂಡಿಬರುತ್ತಿದೆ. ಈ ಕಥೆಯ ನಾಯಕಿ ಸುಮನಾ. ಅಪ್ಪನಿಗೆ ಆರೋಗ್ಯ ಸರಿ ಇಲ್ಲದ ಕಾರಣ ಹೂವನ್ನು (Flowers) ಮಾರಿ ಸಂಸಾರ ಸಾಗಿಸುತ್ತಿದ್ದಾಳೆ. ಅಮ್ಮ ಬೇರೆ ಇಲ್ಲ. ತಮ್ಮ, ತಂಗಿಗೆ ಅಮ್ಮನ ಸ್ಥಾನದಲ್ಲಿ ನಿಂತಿದ್ದಾಳೆ. ತನ್ನ ತಮ್ಮ ಪರೀಕ್ಷೆಯಲ್ಲಿ ಪಾಸಾಗಲಿಲ್ಲ ಅಂತ ಅವನ ಜೊತೆ ಮಾತು ಬಿಟ್ಟಿದ್ದಾಳೆ. ತಮ್ಮನ ಪಾತ್ರದಲ್ಲಿ ಶನಿ ಖ್ಯಾತಿಯ ಸುನೀಲ್ (Sunil) ಅಭಿನಯಿಸುತ್ತಿದ್ದಾರೆ. ಇನ್ನು ಕಥೆಯ ನಾಯಕ ತಿರ್ಥಂಕರ್ ಪ್ರಸಾದ್. ಈ ಧಾರಾವಾಹಿಯಲ್ಲಿ ಕಾರ್ಪೊರೇಟರ್ (Corporator) ಪಾತ್ರ. ಹೇಗಾದ್ರೂ ಮುಂದಿನ ಸಲ ದೊಡ್ಡದಾಗಿ ರಾಜಕೀಯವಾಗಿ ಬೆಳೆಯಬೇಕು ಎಂದು ಊರವರ ಕಣ್ಣಲ್ಲಿ ಒಳ್ಳೆವನಂತೆ ನಟಿಸುತ್ತಿದ್ದಾನೆ.

  ಕಾಲೋನಿ ಜನರ ಕಷ್ಟಕ್ಕೆ ನಿಲ್ಲುವ ಸುಮಿ

  ಸುಮಿ ಅಂದ್ರೆ ಕಾಲೋನಿಯಲ್ಲಿ ಎಲ್ಲರಿಗೂ ತುಂಬಾ ಇಷ್ಟ. ಯಾರಿಗೆ ಏನೇ ಕಷ್ಟ ಬಂದ್ರು ಸುಮಿ ಅಂದ್ರೆ ಸುಮನಾ ಮುಂದೆ ನಿಂತು ಸಮಸ್ಯೆಗೆ ಪರಿಹಾರ ಕೊಡಿಸುತ್ತಾಳೆ. ಅವಳ ಬಳಿ ಸಹಾಯ ಕೇಳಿ ಬಂದ್ರೆ ಇಲ್ಲ ಎನ್ನದೇ ಸಹಾಯ ಮಾಡುತ್ತಾಳೆ. ಅದಕ್ಕೆ ಆ ಏರಿಯಾಗೆ ಲೀಡರ್ ಅಂತ ಯಾರೂ ಇಲ್ಲ. ಸುಮಿ ಹೇಳಿದ ಹಾಗೆ ಎಲ್ಲರೂ ಕೇಳುತ್ತಾರೆ.

  Colors Kannada Kendasampige new serial watch today episode colony people protest in front of corporator house for water
  ಕೆಂಡಸಂಪಿಗೆ


  ನೀರಿಗಾಗಿ ಕಾರ್ಪೊರೇಟರ್ ಮನೆ ಮುಂದೆ ಧರಣಿ

  ಕಾಲೋನಿಯಲ್ಲಿ 2 ದಿನದಿಂದ ನೀರು ಬಾರದೇ ಜನ ಪರದಾಡುತ್ತಿದ್ದಾರೆ. ಅದಕ್ಕೆ ಸುಮಿ ಮತ್ತು ಕಾಲೋನಿಯವರು ಕಾರ್ಪೊರೇಟರ್ ತೀರ್ಥಂಕರ್ ಪ್ರಸಾದ್ ಮನೆ ಮುಂದೆ ಹೋಗಿದ್ದಾರೆ. ಕೊಡ ಹಿಡಿದು ಧರಣಿ ಕೂತಿದ್ದಾರೆ ನೀರು ಬರೋವರೆಗೂ ಎದ್ದು ಹೋಗಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಜನರ ಪ್ರತಿಭಟನೆ ಕಂಡು ಕಾರ್ಪೊರೇಟರ್ ಸುಮ್ಮನೆ ನಿಂತಿದ್ದಾರೆ.

  Colors Kannada Kendasampige new serial watch today episode colony people protest in front of corporator house for water
  ಕೆಂಡಸಂಪಿಗೆ


  ಇದನ್ನೂ ಓದಿ: Gattimela: ವೇದಾಂತ್‍ಗೆ ಅಮ್ಮ ಸುಹಾಸಿನಿ ಮೇಲೆ ಅನುಮಾನ ಬಂದಿದ್ಯಾ?

  ಪೊಲೀಸರನ್ನು ಕರೆಸಿದ ಕಾರ್ಪೊರೇಟರ್ ಅತ್ತಿಗೆ

  ಇನ್ನು ತೀರ್ಥಂಕರ್ ಅತ್ತಿಗೆ ಮನೆಗೆ ಪೊಲೀಸರನ್ನು ಕರೆಸಿದ್ದಾಳೆ. ಮನೆ ಮುಂದೆ ಬಂದು ಸುಮ್ಮನೆ ಗಲಾಟೆ ಮಾಡುತ್ತಿದ್ದಾರೆ. ಇವರನ್ನೆಲ್ಲಾ ಅರೆಸ್ಟ್ ಮಡಿ ಎನ್ನುತ್ತಿದ್ದಾಳೆ. ಸುಮಿ ಮತ್ತು ಕಾಲೋನಿಯವರಿಗೆ ಶಾಕ್ ಆಗಿದೆ. ಇದೇನಿದು ನ್ಯಾಯ ಕೇಳೋಕೆ ಬಂದ್ರೆ ಪೊಲೀಸರನ್ನು ಕರೆಸಿದ್ದಾರೆ ಎಂದು ಆತಂಕಗೊಂಡಿದ್ದಾರೆ.

  Colors Kannada Kendasampige new serial watch today episode colony people protest in front of corporator house for water
  ಕೆಂಡಸಂಪಿಗೆ ಚಿತ್ರೀಕರಣ


  ನ್ಯಾಯ ಕೊಡಿಸುತ್ತಾನಾ ಕಾರ್ಪೊರೇಟರ್

  ಅತ್ತಿಗೆ ಮನೆಗೆ ಪೊಲೀಸರನ್ನು ಕರೆಸಿದ್ದಾರೆ. ಆದ್ರೆ ಕಾರ್ಪೊರೇಟರ್ ತಿರ್ಥಂಕರ್ ಏನ್ ಮಾಡ್ತಾರೆ ಅನ್ನೋ ಕುತೂಹಲ ಹೆಚ್ಚಾಗಿದೆ. ಮನೆ ಮುಂದೆ ಬಂದಿರುವ ಕಾಲೋನಿ ಮಂದಿಗೆ ನೀರು ಕೊಡಿಸಿ ನ್ಯಾಯ ಒದಗಿಸುತ್ತಾನಾ? ಇಲ್ಲವೋ ಅತ್ತಿಗೆ ಮಾತು ಕೇಳಿ ಸುಮ್ಮನಗುತ್ತಾನೋ ಗೊತ್ತಿಲ್ಲ. ಆದ್ರೆ ತೀರ್ಥಂಕರ್‍ಗೆ ಈಗಾಗಲೇ ಕಾಲೋನಿಯಲ್ಲಿ ಒಳ್ಳೆ ಹೆಸರಿದೆ. ಅವರು ಜನರಿಗೋಸ್ಕರ ಕೆಲಸ ಮಾಡ್ತಾರೆ ಅನ್ನೋ ನಂಬಿಕೆ ಇದೆ. ಅದನ್ನು ಉಳಿಸಿಕೊಳ್ತಾರಾ ನೋಡಬೇಕು.

  Colors Kannada Kendasampige new serial watch today episode colony people protest in front of corporator house for water
  ಕೆಂಡಸಂಪಿಗೆ


  ಇದನ್ನೂ ಓದಿ: Olavina Nildana: ಸಿದ್ಧಾಂತ್ ಮನಸ್ಸಿನಲ್ಲಿ ತಾರಿಣಿ ಮೇಲೆ ಪ್ರೀತಿ ಇದ್ಯಾ? ಸತ್ಯ ಬಾಯ್ಬಿಡಿಸಲು ಅತ್ತಿಗೆಯ ಐಡಿಯಾ!

  ಇನ್ನೊಂದೆಡೆ ತಂಗಿ ಫೀಸ್ ಕಟ್ಟಲು ಪರದಾಟ

  ಸುಮನಾ ತಂಗಿ ರಾಜಿ. ಚೆನ್ನಾಗಿ ಓದುತ್ತಿದ್ದಾಳೆ. ಆದ್ರೆ ಪರೀಕ್ಷೆಗೆ ಫೀಸ್ ಕಟ್ಟಲಾಗದೇ ಒದ್ದಾಡುತ್ತಿದ್ದಾಳೆ. ಸುಮಿ ನಾನು ಹೇಗಾದ್ರೂ ದುಡ್ಡು ಕೊಡ್ತೀನಿ ಅಂತ ಹೇಳಿದ್ದಾಳೆ. ಅದಕ್ಕೆ ರಾಜಿ ನಾನು ಮುಂದಕ್ಕೆ ಓದಲ್ಲ. ನಿನ್ನ ಜೊತೆ ಹೂವು ಮಾರಲು ಬರುತ್ತೇನೆ ಎಂದು ಹೇಳುತ್ತಾಳೆ. ಅದಕ್ಕೆ ಕೋಪಗೊಂಡ ಸುಮಿ, ತಂಗಿ ಕೆನ್ನೆಗೆ ಒಂದು ಬಾರಿಸಿ, ನೀನು ಓದಲೇ ಬೇಕು. ದುಡ್ಡಿನಿ ಚಿಂತೆ ನನಗೆ ಬಿಡು. ಹೇಗಾದ್ರೂ ದುಡ್ಡು ಕೊಟ್ಟೇ ಕೊಡ್ತೀನಿ ಎಂದು ಭರವಸೆ ನೀಡಿದ್ದಾಳೆ.
  Published by:Savitha Savitha
  First published: