Kendasampige: ನಾಳೆಯಿಂದ ಕೆಂಡಸಂಪಿಗೆ ಹವಾ, ಹೊಸ ಧಾರವಾಹಿ ಕುರಿತು ಇಲ್ಲಿದೆ ಫುಲ್ ಡೀಟೇಲ್ಸ್

ನಾಳೆಯಿಂದ ಕೆಂಡಸಂಪಿಗೆ ಅನ್ನೋ ಹೊಸ ಧಾರಾವಾಹಿ ಮೂಡಿ ಬರಲಿದೆ. ಸಂಜೆ 6.30ಕ್ಕೆ ಕೆಂಡಸಂಪಿಗೆ ತನ್ನ ಘಮ ಹರಡಲು ಸಿದ್ಧವಾಗಿದೆ. ಅಕ್ಕ-ತಮ್ಮನ ವಾತ್ಸಲ್ಯದ ಕಥೆಯಾಗಿದ್ದು, ತಮ್ಮನ ಪಾತ್ರದಲ್ಲಿ ಶನಿ ಧಾರಾವಾಹಿಯಲ್ಲಿ ಶನಿ ಪಾತ್ರ ಮಾಡಿದ್ದ ಸುನೀಲ್ ಅಭಿನಯಿಸುತ್ತಿದ್ದಾರೆ.

ಕೆಂಡಸಂಪಿಗೆ

ಕೆಂಡಸಂಪಿಗೆ

  • Share this:
    ಕಲರ್ಸ್ ಕನ್ನಡ (Colors Kannada) ವಾಹಿನಿ ಹೀಗಾಗಲೇ ಜನಪ್ರಿಯ ಧಾರಾವಾಹಿಗಳನ್ನು (Serials) ನೀಡುತ್ತಲೇ ಬಂದಿದೆ. ಸಂಜೆ 6 ಗಂಟೆಯಿಂದ ಕನ್ನಡ ಅಭಿಮಾನಿಗಳನ್ನು ರಂಜಿಸುತ್ತಲೇ ಬಂದಿದೆ. ವೀಕೆಂಡ್‍ನಲ್ಲಿ ವಿಭಿನ್ನ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದೆ. ಈ ಮೂಲಕ ಕಲರ್ಸ್ ಕನ್ನಡ ವಾಹಿನಿ ಅಭಿಮಾನಿಗಳನ್ನು(Fans) ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ಒಲವಿನ ನಿಲ್ದಾಣ, ದೊರೆಸಾನಿ, ಮಂಗಳಗೌರಿ ಮದುವೆ, ಕನ್ನಡತಿ, ಗೀತಾ, ಗಿಣಿರಾಮ, ರಾಮಾಚಾರಿ, ನಕ್ಷತ್ರ, ನನ್ನರಸಿ ರಾಧೆಯಂತಹ ಜನಪ್ರಿಯ ಧಾರಾವಾಹಿಗಳು ಈಗಾಗಲೇ ಪ್ರಸಾರವಾಗುತ್ತಿವೆ. ನಾಳೆಯಿಂದ ಕೆಂಡಸಂಪಿಗೆ (Kendasampige) ಅನ್ನೋ ಹೊಸ (New) ಧಾರಾವಾಹಿ ಮೂಡಿ ಬರಲಿದೆ. ಸಂಜೆ 6.30ಕ್ಕೆ ಕೆಂಡಸಂಪಿಗೆ  ತನ್ನ ಘಮ ಹರಡಲು ಸಿದ್ಧವಾಗಿದೆ. ಅಕ್ಕ-ತಮ್ಮನ ವಾತ್ಸಲ್ಯದ ಕಥೆಯಾಗಿದ್ದು, ತಮ್ಮನ ಪಾತ್ರದಲ್ಲಿ ಶನಿ ಧಾರಾವಾಹಿಯಲ್ಲಿ ಶನಿ ಪಾತ್ರ ಮಾಡಿದ್ದ ಸುನೀಲ್ ಅಭಿನಯಿಸುತ್ತಿದ್ದಾರೆ.

    ನಾಳೆಯಿಂದ ಕೆಂಡಸಂಪಿಗೆ ಘಮ
    ನಾಳೆಯಿಂದ ಕೆಂಡಸಂಪಿಗೆ ತನ್ನ ಘಮ ಹರಡಲು ಸಿದ್ಧವಾಗಿದೆ. ಇಷ್ಟು ದಿನ ಯಾವಾಗ ಬರುತ್ತೋ ಅಂತ ಕಾಯ್ತಾ ಇದ್ದ ದಿನ ಮುಗಿಯಿತು. ನಾಳೆಯಿಂದಲೇ ಕೆಂಡಸಂಪಿಗೆ ಹೊಸ ಧಾರಾವಾಹಿ ಬರುತ್ತಿದೆ.

    ಕೆಂಡಸಂಪಿಗೆಯಲ್ಲಿ ಕೆಂಡದಂತಹ ಅಕ್ಕ
    ಈ ಹೊಸ ಕಥೆಯೂ ಕೆಂಡಸಂಪಿಗೆ ಎಂದು ಹೆಸರಿದ್ದರೂ, ಅಕ್ಕ ಸುಮನಾ ಕೆಂಡದಂತಹ ಕೋಪದವಳು. ತಮ್ಮನ ಮೇಲೆ ಬೆಟ್ಟದಷ್ಟು ಪ್ರೀತಿ ಇದ್ದರೂ, ಅದನ್ನು ತೋರಿಸದೇ ಅವನ ಜೊತೆ ಮಾತನಾಡಲ್ಲ. ಅವನು ಒಂದು ಒಳ್ಳೆ ಭವಿಷ್ಯ ರೂಪಿಸಿಕೊಳ್ಳಲಿ ಎನ್ನುವುದೇ ಅಕ್ಕನ ಆಸೆ ಅದಕ್ಕೆ ಅವಳು ಅವನ ಜೊತೆ ಮಾತು ಬಿಟ್ಟಿದ್ದಾಳೆ.

    ಕಾರ್ಪೊರೇಟರ್ ತೀಥರ್ಂಕರ್ ಪ್ರಸಾದ್
    ಈ ಧಾರಾವಾಹಿಯಲ್ಲಿ ನಾಯಕ ಕಾರ್ಪೊರೇಟರ್ ತೀಥರ್ಂಕರ್ ಪ್ರಸಾದ್, ನಾಯಕನ ಅಪ್ಪನಾಗಿ ದೊಡ್ಡಣ್ಣನವರು ಪಾತ್ರ ಮಾಡುತ್ತಿದ್ದಾರೆ. ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು ಅಂತಾನೇ ನನ್ನ ಮಗ. ಆದ್ರೆ ಮಗನಿಗೆ ಹಾಸಿಗೆ ಕಿಂಗ್ ಸೈಜ್ ಇರಬೇಕೆಂತೆ. 6 ಅಡಿಗಿಂತ ಸ್ವಲ್ಪ ಕಡಿಮೆ ಅಂತೆ. ಆದ್ರೆ ಎತ್ತರ ಎಲ್ಲರಿಗಿಂತ ಜಾಸ್ತಿಯಂತೆ. ಹೀರೋಗೆ ಇಷ್ಟ ಆಗೋ ಮೂರು ವಿಷಯ ಅಂದ್ರೆ. ಒಂದನೆಯದ್ದು ಅವನೇ, ಎರಡನೆಯದ್ದು ಅವನೇ, ಮೂರನೆಯದು ಅವನೇ. ಅವನಿಗೆ ಅವನೇ ಮುಖ್ಯ. ಮನೆಗಿಂತ ಜನರ ಜೊತೆ ಜಾಸ್ತಿ ಬೆರೆಯುತ್ತಾನಂತೆ.

    ತಮ್ಮನಾಗಿರುವ ಶನಿ ಖ್ಯಾತಿಯ ಸುನೀಲ್
    ಇನ್ನು ಈ ಧಾರಾವಾಹಿಯಲ್ಲಿ ತಮ್ಮನಾಗಿ ನಟಿಸುತ್ತಿರುವವನು ಸುನೀಲ್. ಶನಿ ಧಾರಾವಾಹಿಯಲ್ಲಿ ಶನಿ ಪಾತ್ರದಲ್ಲಿ ಅಭಿನಯಿಸಿದ್ದವ. ತನ್ನ ಅಮೋಘ ನಟನೆ ಮೂಲಕ ಜನರ ಮನಸ್ಸಿನಲ್ಲಿ ಶನಿ ಪಾತ್ರಧಾರಿಯಾಗಿ ಉಳಿದುಕೊಂಡಿದ್ದಾನೆ. ಈಗ ತಮ್ಮನ ಪಾತ್ರದಲ್ಲಿ ರಪ್ ಅಂಡ್ ಟಪ್ ಮೂಲಕ ಬಂದಿದ್ದು, ಎಷ್ಟರ ಮಟ್ಟಿಗೆ ಕನ್ನಡಿಗರ ಮನದಲ್ಲಿ ಮನೆ ಮಾಡ್ತಾರೆ ನೋಡಬೇಕು.

    Colors Kannada serial, Kannada serial, Kendasampige Serial, Kendasampige serial cast, Tomorrow new serial start, ಕೆಂಡಸಂಪಿಗೆ ಧಾರಾವಾಹಿ, ಹೊಸ ಧಾರಾವಾಹಿ,ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
    ಸುನೀಲ್


    ಚಿಕ್ಕಿಂದಿನಿಂದಲೇ ನಟನೆ ಮಾಡೋ ಆಸೆ
    ಸುನೀಲ್‍ಗೆ ಚಿಕ್ಕ ಹುಡುಗನಿಂದಲೇ ನಟನೆ ಮಾಡೋ ಆಸಕ್ತಿಯಿತ್ತಂತೆ. ಶನಿ ಧಾರಾವಾಹಿಗೆ, ಶನಿ ಪಾತ್ರಕ್ಕೆ ನಿರ್ದೇಶಕರು 500 ಮಂದಿಯನ್ನು ಆಡಿಷನ್ ಮಾಡಿದ್ರಂತೆ. ಅದರಲ್ಲಿ ಸುನೀಲ್ ಆಯ್ಕೆಯಾಗಿದ್ದರಂತೆ. ಅದರಂತೆಯೇ ಧಾರಾವಾಹಿ ಮಾಡಿ ಕನ್ನಡಿಗರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

    ದೊರೆಸಾನಿ ಧಾರಾವಾಹಿ ಬಗ್ಗೆ ಜನರ ಕುತೂಹಲ
    ಕಲರ್ಸ್ ಕನ್ನಡದಲ್ಲಿ ಸದ್ಯ 6.30ಕ್ಕೆ ದೊರೆಸಾನಿ ಧಾರಾವಾಹಿ ಪ್ರಸಾರವಾಗುತ್ತಿದೆ. ಅದು ಜನ ಜನರಿಗೆ ಇಷ್ಟವಾಗಿದೆ. ದೀಪಿಕಾ, ಆನಂದ್ ಜೊತೆಯಾಗುತ್ತಿಲ್ಲ. ಅವರು ಮದುವೆ ಆಗಿದ್ದರೆ ಚೆನ್ನಾಗಿ ಇರುತ್ತಿತ್ತು ಎಂದು ಅಭಿಮಾನಿಗಳು ಅಂದುಕೊಳ್ಳುತ್ತಿದ್ದಾರೆ. ಧಾರಾವಾಹಿ ತುಂಬಾ ಚೆನ್ನಾಗಿದೆ. ಈಗ ಆ ಜಾಗಕ್ಕೆ ಕೆಂಡಸಂಪಿಗೆ ಬರುತ್ತಿದೆ. ದೊರೆಸಾನಿ ಯಾವಾಗ ಬರುತ್ತೆ ಅಂತ ಗೊಂದಲದಲ್ಲಿ ಇದ್ದಾರೆ.

    ಈಗ ಕೆಂಡಸಂಪಿಗೆ ಹೇಗೆ ಇದೆ ಅನ್ನೋದನ್ನ ನೋಡೋಕೆ ನಾಳೆಯಿಂದ 6.30ಕ್ಕೆ ಟಿವಿ ಮುಂದೆ ಕೂರಬೇಕು.
    Published by:Savitha Savitha
    First published: