Bigg Boss OTT: ಬಿಗ್ ಬಾಸ್ ವೇದಿಕೆಯಲ್ಲಿ ಕೆಂಡಸಂಪಿಗೆ ತಂಡ, ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ ಕಿಚ್ಚ ಸುದೀಪ್‍!?

ಇವತ್ತಿನಿಂದ ಸಂಜೆ 6.30ಕ್ಕೆ ಕೆಂಡಸಂಪಿಗೆ ಅನ್ನೋ ಹೊಸ ಧಾರಾವಾಹಿ ಪ್ರಸಾರವಾಗಲಿದೆ. ಬಿಗ್ ಬಾಸ್ ವೇದಿಯಲ್ಲಿ, ಸೂಪರ್ ಸಂಡೇ ವಿತ್ ಸುದೀಪ್ ಜೊತೆ ಕೆಂಡಸಂಪಿಗೆ ತಂಡ ಮಾತು ಕತೆ ನಡೆಸಿದೆ. ಧಾರಾವಾಹಿ ನಾಯಕ ಮತ್ತು ನಾಯಕಿ ಕಿಚ್ಚ ಸುದೀಪ್‍ಗೆ ಏನ್ ಪ್ರಶ್ನೆ ಕೇಳಿದ್ದಾರೆ ಗೊತ್ತಾ?

ಬಿಗ್​ ಬಾಸ್​ ಓಟಿಟಿ

ಬಿಗ್​ ಬಾಸ್​ ಓಟಿಟಿ

  • Share this:
    ಕಲರ್ಸ್ ಕನ್ನಡ (Colors Kannada)  ವಾಹಿನಿಯೂ ಹೀಗಾಗಲೇ ಜನಪ್ರಿಯ ಧಾರಾವಾಹಿಗಳನ್ನು(Serials) ನೀಡುತ್ತಲೇ ಬಂದಿದೆ. ಸಂಜೆ 6 ಗಂಟೆಯಿಂದ ಕನ್ನಡ ಅಭಿಮಾನಿಗಳನ್ನು(Fans) ರಂಜಿಸುತ್ತಲೇ ಬಂದಿದೆ. ವೀಕೆಂಡ್‍ನಲ್ಲಿ ವಿಭಿನ್ನ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದೆ. ಈ ಮೂಲಕ ಕಲರ್ಸ್ ಕನ್ನಡ ವಾಹಿನಿಯೂ ಅಭಿಮಾನಿಗಳನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ಅಲ್ಲದೇ ಪ್ರಥಮ ಬಾರಿಗೆ ಓಟಿಟಿಯಲ್ಲಿ  ಬಿಗ್ ಬಾಸ್ (Bigg Boss OTT) ಪ್ರಸಾರ ಆಗುತ್ತಿದೆ. ಅಲ್ಲದೇ ಇವತ್ತಿನಿಂದ ಸಂಜೆ 6.30ಕ್ಕೆ ಕೆಂಡಸಂಪಿಗೆ ಅನ್ನೋ ಹೊಸ ಧಾರಾವಾಹಿ (New SERIAL) ಪ್ರಸಾರವಾಗಲಿದೆ. ಬಿಗ್ ಬಾಸ್ ವೇದಿಕೆಯಲ್ಲಿ, ಸೂಪರ್ ಸಂಡೇ ವಿತ್ ಸುದೀಪ್ ಜೊತೆ ಕೆಂಡಸಂಪಿಗೆ (Kendasampige) ತಂಡ ಮಾತು-ಕಥೆ ನಡೆಸಿದೆ. ಧಾರಾವಾಹಿ ನಾಯಕ ಮತ್ತು ನಾಯಕಿ ಕಿಚ್ಚ ಸುದೀಪ್‍ಗೆ (Sudeep) ಏನ್ ಪ್ರಶ್ನೆ ಕೇಳಿದ್ದಾರೆ ಗೊತ್ತಾ?

    ರಾಜಕೀಯಕ್ಕೆ ಎಂಟ್ರಿ ಕೊಡ್ತೀರಾ ಸುದೀಪ್ ಸರ್?
    ಧಾರಾವಾಹಿ ಪ್ರಮೋಶನ್‍ಗೆ ಬಂದ ಕೆಂಡಸಂಪಿಗೆ ನಾಯಕ, ಸುದೀಪ್ ಅವರಿಗೆ ಪ್ರಶ್ನೆ ಕೇಳಿದ್ದಾರೆ. ನಾನು ಸೀರಿಯಲ್‍ನಲ್ಲಿ ಕಾರ್ಪೊರೇಟರ್ ಆಗಿರೋದ್ರಿಂದ, ನಿಮಗೆ ಈ ಪ್ರಶ್ನೆ ಕೇಳುತ್ತಿದ್ದೇನೆ ಎನ್ನುತ್ತಾ, ನೀವು ನಿಮ್ಮ ಭವಿಷ್ಯದಲ್ಲಿ ಪೊಲಿಟಿಕ್ಸ್ ಗೆ ಬರಬಹುದು. ಇನ್ ಕೇಸ್ ನೀವು ರಾಜಕೀಯಕ್ಕೆ ಇಳಿದ್ರೆ, ನೀವು ಸ್ವಂತ ಪಕ್ಷ ಕಟ್ಟುತ್ತೀರಾ ಅಥವಾ ಯಾವ ಪಕ್ಷಕ್ಕೆ ಸೇರುತ್ತೀರಿ ಎಂದು ಪ್ರಶ್ನಿಸುತ್ತಾರೆ. ಅದಕ್ಕೆ ಸುದೀಪ್ ನಗುತ್ತಾ, ಇಳಿಯೋದು ಏಕೆ, ಮೇಲೆ ಏರೋಣ, ಅಂತ ಆಸೆ ಇಲ್ಲ ಅಂದಿದ್ದಾರೆ.

    ನಿಮ್ಮ ಅಕ್ಕಂದಿರ ಜೊತೆ ನೀವು ಮಾತು ಬಿಟ್ಟಿದ್ರಾ?
    ಇನ್ನು ಕೆಂಡಸಂಪಿಗೆ ನಾಯಕಿ ಸುಮನಾ, ಸುದೀಪ್ ಅವರಿಗೆ ಧಾರಾವಾಹಿಯಲ್ಲಿ ನಾನು ನನ್ನ ತಮ್ಮನ ಜೊತೆ ಮಾತು ಬಿಟ್ಟಿದ್ದೇನೆ. ಅದೇ ರೀತಿ ನೀವು ನಿಮ್ಮ ಅಕ್ಕಂದಿರ ಜೊತೆ ಮಾತು ಬಿಟ್ಟಿದ್ರಾ ಅಂತ ಕೇಳ್ತಾರೆ. ಅದಕ್ಕೆ ಸುದೀಪ್, ನಮ್ಮ ಅಕ್ಕಂದಿರ ಜೊತೆ ನನ್ನ ಜೊತೆ ಮಾತು ಬಿಟ್ಟಿಲ್ಲ. ನಾನು ಅಂತ ತಮ್ಮನೂ ಅಲ್ಲ ಎಂದು ಹೇಳುತ್ತಾರೆ.

    ಇದನ್ನೂ ಓದಿ: Drama junior Winner: ಡ್ರಾಮಾ ಜೂನಿಯರ್ಸ್​​ನ 15 ಸ್ಪರ್ಧಿಗಳಲ್ಲಿ ಸಮೃದ್ಧಿಗೆ ವಿಜಯದ ಕಿರೀಟ

    ಇಂದಿನಿಂದ ಕೆಂಡಸಂಪಿಗೆ ಘಮ
    ಇಂದಿನಿಂದ ಕೆಂಡಸಂಪಿಗೆ ತನ್ನ ಘಮ ಹರಡಲು ಸಿದ್ಧವಾಗಿದೆ. ಇಷ್ಟು ದಿನ ಯಾವಾಗ ಬರುತ್ತೋ ಅಂತ ಕಾಯ್ತಾ ಇದ್ದ ದಿನ ಮುಗಿಯಿತು. ಇಂದಿನಿಂದ ಕಲರ್ಸ್ ಕನ್ನಡದಲ್ಲಿ ಕೆಂಡಸಂಪಿಗೆ ಅನ್ನೋ ಹೊಸ ಧಾರಾವಾಹಿ ಬರುತ್ತಿದೆ.

    colors Kannada Serials, Kendasampige new serial, Bigg boss OTT, hero Sudeep, ಕೆಂಡಸಂಪಿಗೆ ಹೊಸ ಧಾರಾವಾಹಿ, ಬಿಗ್ ಬಾಸ್ OTT, ಸೂಪರ್ ಸಂಡೇ ವಿತ್ ಸುದೀಪ್, Kannada News, Karnataka news,
    ಕೆಂಡಸಂಪಿಗೆ


    ಕೆಂಡಸಂಪಿಗೆಯಲ್ಲಿ ಕೆಂಡದಂತಹ ಅಕ್ಕ
    ಈ ಹೊಸ ಕಥೆಯೂ ಕೆಂಡಸಂಪಿಗೆ ಎಂದು ಹೆಸರಿದ್ದರೂ, ಅಕ್ಕ ಸುಮನಾ ಕೆಂಡದಂತಹ ಕೋಪದವಳು. ತಮ್ಮನ ಮೇಲೆ ಬೆಟ್ಟದಷ್ಟು ಪ್ರೀತಿ ಇದ್ದರೂ, ಅದನ್ನು ತೋರಿಸದೇ ಅವನ ಜೊತೆ ಮಾತನಾಡಲ್ಲ. ಅವನು ಒಂದು ಒಳ್ಳೆ ಭವಿಷ್ಯ ರೂಪಿಸಿಕೊಳ್ಳಲಿ ಎನ್ನುವುದೇ ಅಕ್ಕನ ಆಸೆ ಅದಕ್ಕೆ ಅವಳು ಅವನ ಜೊತೆ ಮಾತು ಬಿಟ್ಟಿದ್ದಾಳೆ.

    ಕಾರ್ಪೊರೇಟರ್ ತೀರ್ಥಂಕರ್ ಪ್ರಸಾದ್
    ಈ ಧಾರಾವಾಹಿಯಲ್ಲಿ ನಾಯಕ ಕಾರ್ಪೊರೇಟರ್ ತೀರ್ಥಂಕರ್ ಪ್ರಸಾದ್, ನಾಯಕನ ಅಪ್ಪನಾಗಿ ದೊಡ್ಡಣ್ಣನವರು ಪಾತ್ರ ಮಾಡುತ್ತಿದ್ದಾರೆ. ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು ಅಂತಾನೇ ನನ್ನ ಮಗ. ಆದ್ರೆ ಮಗನಿಗೆ ಹಾಸಿಗೆ ಕಿಂಗ್ ಸೈಜ್ ಇರಬೇಕೆಂತೆ. 6 ಅಡಿಗಿಂತ ಸ್ವಲ್ಪ ಕಡಿಮೆ ಅಂತೆ. ಆದ್ರೆ ಎತ್ತರ ಎಲ್ಲರಿಗಿಂತ ಜಾಸ್ತಿಯಂತೆ. ಹೀರೋಗೆ ಇಷ್ಟ ಆಗೋ ಮೂರು ವಿಷಯ ಅಂದ್ರೆ. ಒಂದನೆಯದ್ದು ಅವನೇ, ಎರಡನೆಯದ್ದು ಅವನೇ, ಮೂರನೆಯದು ಅವನೇ. ಅವನಿಗೆ ಅವನೇ ಮುಖ್ಯ. ಮನೆಗಿಂತ ಜನರ ಜೊತೆ ಜಾಸ್ತಿ ಬೆರೆಯುತ್ತಾನಂತೆ.

    ಇದನ್ನೂ ಓದಿ: Chiranjeevi Birthday: ಮೆಗಾ ಸ್ಟಾರ್ ಚಿರಂಜೀವಿಗೆ ಹುಟ್ಟು ಹಬ್ಬದ ಸಡಗರ; ಬೋಲಾ ಶಂಕರ್ ರಿಲೀಸ್ ಡೇಟ್ ಅನೌನ್ಸ್

    ತಮ್ಮನಾಗಿರುವ ಶನಿ ಖ್ಯಾತಿಯ ಸುನೀಲ್
    ಇನ್ನು ಈ ಧಾರಾವಾಹಿಯಲ್ಲಿ ತಮ್ಮನಾಗಿ ನಟಿಸುತ್ತಿರುವವನು ಸುನೀಲ್. ಶನಿ ಧಾರಾವಾಹಿಯಲ್ಲಿ ಶನಿ ಪಾತ್ರದಲ್ಲಿ ಅಭಿನಯಿಸಿದ್ದವ. ತನ್ನ ಅಮೋಘ ನಟನೆ ಮೂಲಕ ಜನರ ಮನಸ್ಸಿನಲ್ಲಿ ಶನಿ ಪಾತ್ರಧಾರಿಯಾಗಿ ಉಳಿದುಕೊಂಡಿದ್ದಾನೆ. ಈಗ ತಮ್ಮನ ಪಾತ್ರದಲ್ಲಿ ರಪ್ ಅಂಡ್ ಟಪ್ ಮೂಲಕ ಬಂದಿದ್ದು, ಎಷ್ಟರ ಮಟ್ಟಿಗೆ ಕನ್ನಡಿಗರ ಮನದಲ್ಲಿ ಮನೆ ಮಾಡ್ತಾರೆ ನೋಡಬೇಕು.
    Published by:Savitha Savitha
    First published: