Kendasampige Serial: ಆಗಸ್ಟ್ 22ರಿಂದ ಕಲರ್ಸ್ ಕನ್ನಡದಲ್ಲಿ ಹರಡಲಿದೆ ಕೆಂಡಸಂಪಿಗೆ ಘಮ! ಹೊಸ ಧಾರಾವಾಹಿ ನೋಡಲು ರೆಡಿಯಾಗಿ

ಆಗಸ್ಟ್ 22ರಿಂದ ಕೆಂಡಸಂಪಿಗೆ ಅನ್ನೋ ಹೊಸ ಧಾರಾವಾಹಿ ಮೂಡಿ ಬರಲಿದೆ. ಸಂಜೆ 6.30ಕ್ಕೆ ಕೆಂಡಸಂಪಿಗೆ ತನ್ನ ಘಮ ಹರಡಲು ಸಿದ್ಧವಾಗಿದೆ. ಅಕ್ಕ-ತಮ್ಮನ ವಾತ್ಸಲ್ಯದ ಕಥೆಯಾಗಿದ್ದು, ತಮ್ಮನಾಗೆ ಶನಿ ಧಾರಾವಾಹಿ ಖ್ಯಾತಿಯ ಸುನೀಲ್ ಅಭಿನಯಿಸುತ್ತಿದ್ದಾರೆ.

ಕೆಂಡಸಂಪಿಗೆ

ಕೆಂಡಸಂಪಿಗೆ

 • Share this:
  ಕಲರ್ಸ್ ಕನ್ನಡ  (Colors Kannada) ವಾಹಿನಿಯೂ (Channel) ಹೀಗಾಗಲೇ ಜನಪ್ರಿಯ ಧಾರಾವಾಹಿಗಳನ್ನು (Serials) ನೀಡುತ್ತಲೇ ಬಂದಿದೆ. ಸಂಜೆ 6 ಗಂಟೆಯಿಂದ ಕನ್ನಡ ಅಭಿಮಾನಿಗಳನ್ನು ರಂಜಿಸುತ್ತಲೇ ಬಂದಿದೆ. ವೀಕೆಂಡ್‍ನಲ್ಲಿ ವಿಭಿನ್ನ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದೆ. ಈ ಮೂಲಕ ಕಲರ್ಸ್ ಕನ್ನಡ ವಾಹಿನಿಯೂ ಅಭಿಮಾನಿಗಳನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ಒಲವಿನ ನಿಲ್ದಾಣ, ದೊರೆಸಾನಿ, ಮಂಗಳಗೌರಿ ಮದುವೆ, ಕನ್ನಡತಿ, ಗೀತಾ, ಗಿಣಿರಾಮ, ರಾಮಾಚಾರಿ, ನಕ್ಷತ್ರ, ನನ್ನರಸಿ ರಾಧೆ ಯಂತಹ ಜನಪ್ರಿಯ ಧಾರಾವಾಹಿಗಳು ಈಗಾಗಲೇ ಪ್ರಸಾರವಾಗುತ್ತಿವೆ. ಆಗಸ್ಟ್ 22ರಿಂದ ಕೆಂಡಸಂಪಿಗೆ (Kenda Sampige) ಅನ್ನೋ ಹೊಸ (New)ಧಾರಾವಾಹಿ ಮೂಡಿ ಬರಲಿದೆ. ಸಂಜೆ 6.30ಕ್ಕೆ ಕೆಂಡಸಂಪಿಗೆ ತನ್ನ ಘಮ ಹರಡಲು ಸಿದ್ಧವಾಗಿದೆ. ಅಕ್ಕ-ತಮ್ಮನ (Sister-Brother) ವಾತ್ಸಲ್ಯದ ಕಥೆಯಾಗಿದ್ದು, ತಮ್ಮನಿಗೆ ಶನಿ ಧಾರಾವಾಹಿಯಲ್ಲಿ ಶನಿ ಪಾತ್ರ ಮಾಡಿದ್ದ ಸುನೀಲ್ ಅಭಿನಯಿಸುತ್ತಿದ್ದಾರೆ.

  ಕೆಂಡಸಂಪಿಗೆಯಲ್ಲಿ ಕೆಂಡದಂತಹ ಅಕ್ಕ
  ಈ ಹೊಸ ಕಥೆಯೂ ಕೆಂಡಸಂಪಿಗೆ ಎಂದು ಹೆಸರಿದ್ದರೂ, ಅಕ್ಕ ಸುಮನಾ ಕೆಂಡದಂತಹ ಕೋಪದವಳು. ತಮ್ಮನ ಮೇಲೆ ಬೆಟ್ಟದಷ್ಟು ಪ್ರೀತಿ ಇದ್ದರೂ, ಅದನ್ನು ತೋರಿಸದೇ ಅವನ ಜೊತೆ ಮಾತನಾಡಲ್ಲ. ಅವನು ಒಂದು ಒಳ್ಳೆ ಭವಿಷ್ಯ ರೂಪಿಸಿಕೊಳ್ಳಲಿ ಎನ್ನುವುದೇ ಅಕ್ಕನ ಆಸೆ ಅದಕ್ಕೆ ಅವಳು ಅವನ ಜೊತೆ ಮಾತು ಬಿಟ್ಟಿದ್ದಾಳೆ.

  ಅಕ್ಕ-ತಮ್ಮನ ಪ್ರೀತಿಗೆ ಕಣ್ಣು ಕುಕ್ಕದಿರಲಿ
  ಅಕ್ಕ ಮಾತನಾಡಿಸದೇ ಇದ್ದರೆ ಏನಂತೆ. ಅಕ್ಕನನ್ನು ಕಂಡ್ರೆ ತಮ್ಮನಿಗೆ ತುಂಬಾ ಪ್ರೀತಿ. ಅವಳಿಗೆ ಯಾರಾದ್ರೂ ಏನಾದ್ರೂ ಅಂದ್ರೆ ತಮ್ಮ ಸುಮ್ಮನಿರಲ್ಲ. ಅವಳು ರಾಖಿ ಕಟ್ಟಿದ್ರೂ, ಕಟ್ಟದಿದ್ದರೂ ಅವಳು ನಮ್ಮ ಅಕ್ಕನೇ ಅಂತಾನೇ ಪ್ರೀತಿಯ ತಮ್ಮ.

  ಇದನ್ನೂ ಓದಿ: Jothe Jotheyali: ರಾಜನಂದಿನಿ ಸಾವನ್ನಪ್ಪಿದ ಜಾಗಕ್ಕೆ ಆರ್ಯವರ್ಧನನ್ನು ಕರೆಸುತ್ತಿದ್ದಾಳೆ ಅನು! ಬಯಲಾಗುತ್ತಾ ಆರ್ಯನ ನಿಜ ಬಣ್ಣ?

  ತಮ್ಮನಾಗಿರುವ ಶನಿ ಖ್ಯಾತಿಯ ಸುನೀಲ್
  ಇನ್ನು ಈ ಧಾರಾವಾಹಿಯಲ್ಲಿ ತಮ್ಮನಾಗಿ ನಟಿಸುತ್ತಿರುವವನು ಸುನೀಲ್. ಶನಿ ಧಾರಾವಾಹಿಯಲ್ಲಿ ಶನಿ ಪಾತ್ರದಲ್ಲಿ ಅಭಿನಯಿಸಿದ್ದವ. ತನ್ನ ಅಮೋಘ ನಟನೆ ಮೂಲಕ ಜನರ ಮನಸ್ಸಿನಲ್ಲಿ ಶನಿ ಪಾತ್ರಧಾರಿಯಾಗಿ ಉಳಿದುಕೊಂಡಿದ್ದಾನೆ. ಈಗ ತಮ್ಮನ ಪಾತ್ರದಲ್ಲಿ ರಪ್ ಅಂಡ್ ಟಪ್ ಮೂಲಕ ಬಂದಿದ್ದು, ಎಷ್ಟರ ಮಟ್ಟಿಗೆ ಕನ್ನಡಿಗರ ಮನದಲ್ಲಿ ಮನೆ ಮಾಡ್ತಾರೆ ನೋಡಬೇಕು.

  Colors Kannada serial, Kannada serial, Kendasampige Serial, Kendasampige serial cast, ಕೆಂಡಸಂಪಿಗೆ ಧಾರಾವಾಹಿ, ಹೊಸ ಧಾರಾವಾಹಿ,ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
  ನಟ ಸುನೀಲ್


  ಆಶ್ರಮದಲ್ಲಿ ಬೆಳೆದ ನಟ ಸುನೀಲ್
  ಚಾಮರಾಜನಗರದಲ್ಲಿರುವ ದೀನಬಂಧು ಎಂಬ ಆಶ್ಮದಲ್ಲಿ ಸುನೀಲ್ ಚಿಕ್ಕಂದಿನಿಂದಲೂ ಬೆಳೆದಿದ್ದು. ಅಲ್ಲೇ ವಿದ್ಯಾಭ್ಯಾಸ ಸಹ ಪಡೆದುಕೊಂಡಿದ್ದಾರೆ. ಈ ಆಶ್ರಮವನ್ನು ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಅವರ ಪುತ್ರ ಜಯದೇವ್ ಅವರು ನಡೆಸುತ್ತಾರೆ.

  ಚಿಕ್ಕಿಂದಿನಿಂದಲೇ ನಟನೆ ಮಾಡೋ ಆಸೆ
  ಸುನೀಲ್‍ಗೆ ಚಿಕ್ಕ ಹುಡುಗನಿಂದಲೇ ನಟನೆ ಮಾಡೋ ಆಸಕ್ತಿಯಿತ್ತಂತೆ. ಶನಿ ಧಾರಾವಾಹಿಗೆ, ಶನಿ ಪಾತ್ರಕ್ಕೆ ನಿರ್ದೇಶಕರು 500 ಮಂದಿಯನ್ನು ಆಡಿಷನ್ ಮಾಡಿದ್ರಂತೆ. ಅದರಲ್ಲಿ ಸುನೀಲ್ ಆಯ್ಕೆಯಾಗಿದ್ದರಂತೆ. ಅದರಂತೆಯೇ ಧಾರಾವಾಹಿ ಮಾಡಿ ಕನ್ನಡಿಗರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

  ಇದನ್ನೂ ಓದಿ: Sathya: ಕಾರ್ತಿಕ್‍ಗೆ ಡಿವೋರ್ಸ್ ಕೊಡಲು ಒಂದೇ ಒಂದು ದಿನ ಮಾತ್ರ ಸತ್ಯಾಗೆ ಟೈಂ! ಏನ್ ಮಾಡ್ತಾಳೆ ಲೇಡಿ ರಾಮಾಚಾರಿ?

  ದೊರೆಸಾನಿ ಧಾರಾವಾಹಿ ಬಗ್ಗೆ ಜನರ ಕುತೂಹಲ
  ಕಲರ್ಸ್ ಕನ್ನಡದಲ್ಲಿ ಸದ್ಯ 6.30ಕ್ಕೆ ದೊರೆಸಾನಿ ಧಾರಾವಾಹಿ ಪ್ರಸಾರವಾಗುತ್ತಿದೆ. ಅದು ಜನ ಜನರಿಗೆ ಇಷ್ಟವಾಗಿದೆ. ದೀಪಿಕಾ, ಆನಂದ್ ಜೊತೆಯಾಗುತ್ತಿಲ್ಲ. ಅವರು ಮದುವೆ ಆಗಿದ್ದರೆ ಚೆನ್ನಾಗಿ ಇರುತ್ತಿತ್ತು ಎಂದು ಅಭಿಮಾನಿಗಳು ಅಂದುಕೊಳ್ಳುತ್ತಿದ್ದಾರೆ. ಆದ್ರೆ ದೀಪಿಕಾ ಬೇರೆ ಹುಡುಗನ ಜೊತೆ ಮದುವೆಯಾಗುತ್ತಿದ್ದಾಳೆ. ಆನಂದ್ ಸಹ ಬೇರೆ ಹುಡುಗಿಯೊಂದಿಗೆ ಮದುವೆ ಆಗಲು ಒಪ್ಪಿದ್ದಾನೆ. ಧಾರಾವಾಹಿ ತುಂಬಾ ಚೆನ್ನಾಗಿದೆ. ಈಗ ಆ ಜಾಗಕ್ಕೆ ಕೆಂಡಸಂಪಿಗೆ ಬರುತ್ತಿದೆ. ದೊರೆಸಾನಿ ಯಾವಾಗ ಬರುತ್ತೆ ಅಂತ ಗೊಂದಲದಲ್ಲಿ ಇದ್ದಾರೆ.

  ಆಗಸ್ಟ್ 22ರಿಂದ ಸಂಜೆ 6.30ಕ್ಕೆ ಧಾರಾವಾಹಿ ಶುರುವಾಗಲಿದೆ. ಹೊಸ ಧಾರಾವಾಹಿ ನೋಡಿ ಪ್ರೋತ್ಸಾಹಿಸಿ. ಕೆಂಡಸಂಪಿಗೆ ನೋಡಲು ರೆಡಿಯಾಗಿ
  Published by:Savitha Savitha
  First published: