ಕೆಂಡಸಂಪಿಗೆ (Kendasampige) ಧಾರಾವಾಹಿ (Serial) ಕಲರ್ಸ್ ಕನ್ನಡದಲ್ಲಿ (Colors Kannada) ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6.30ಕ್ಕೆ ಪ್ರಸಾರವಾಗುತ್ತಿದೆ. ಶುರುವಾದಾಗಿನಿಂದ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗುತ್ತಿದೆ. ಕೆಂಡಸಂಪಿಗೆ ಧಾರಾವಾಹಿ ಈಗಾಗಲೇ ಅಭಿಮಾನಿಗಳು ಮೆಚ್ಚುಗೆ ಪಡೆದುಕೊಂಡಿದೆ. ಬೇರೆಯವರ ಜೊತೆ ಮದುವೆ ಆಗಬೇಕಿದ್ದ ಸುಮನಾ, ಕಾರ್ಪೊರೇಟರ್ ತೀರ್ಥಂಕರ್ ಜೊತೆ ಮದುವೆ ಆಗಿದ್ದಾರೆ. ಅಲ್ಲದೇ ಈ ಧಾರಾವಾಹಿ ಶುರುವಾದಾಗ ಅಕ್ಕ-ತಮ್ಮ ಪ್ರೀತಿಯ (Love) ಕಥೆ ಎಂದು ಹೇಳಲಾಗ್ತಿತ್ತು. ಆದ್ರೆ ತಮ್ಮ (Brother) ರಾಜೇಶ ಬೇಗ ಸತ್ತು ಹೋಗಿ ಬಿಡುತ್ತಾನೆ. ಅವನು ಪ್ರತಿಭಟನೆ ವೇಳೆ ಆಕಸ್ಮಿಕವಾಗಿ ಸತ್ತಿದ್ದಾನೆ ಎಂದು ಸುಮನಾ ಎಂದುಕೊಂಡಿದ್ದಳು. ಆದ್ರೆ ಈಗ ಅದು ಕೊಲೆ (Murder) ಎಂದು ಗೊತ್ತಾಗಿದೆ.
ಪ್ರತಿಭಟನೆಯಲ್ಲಿ ರಾಜೇಶ ಸಾವು
ಸುಮನಾ ತಮ್ಮ ರಾಜೇಶ. ಅವನಿಗೆ ಓದೋಕೆ ಇಷ್ಟ ಇಲ್ಲದೇ ಕಾರ್ಪೊರೇಟರ್ ತೀರ್ಥಂಕರ್ ಹಿಂದೆ ಓಡಾಡ್ತಾ ಇರುತ್ತಾನೆ. ತಾನು ರಾಜಕೀಯದಲ್ಲಿ ಏನಾದ್ರೂ ಮಾಡಬೇಕು ಎಂದು ಆಸೆ ಇಟ್ಟುಕೊಂಡಿರುತ್ತಾನೆ. ತೀರ್ಥ ಅವರಿಗಾಗಿ ತನ್ನ ಪ್ರಾಣ ಬೇಕಾದ್ರೂ ಕೊಡುತ್ತೇನೆ ಎಂದು ಹೇಳಿರುತ್ತಾನೆ. ಅದೇ ರೀತಿ ಪ್ರತಿಭಟನೆಯಲ್ಲಿ ಸಾವನ್ನಪ್ಪುತ್ತಾನೆ.
ಬೆಂಕಿ ಹಚ್ಚಕೊಳ್ಳುವ ನಾಟಕ
ತೀರ್ಥ ಅವರ ಪಕ್ಷ ಎಲೆಕ್ಷನ್ ಗಾಗಿ ಪ್ರತಿಭಟನೆ ಮಾಡ್ತಾ ಇರ್ತಾರೆ. ಆಗ ಯಾರಾದ್ರೂ ಬೆಂಕಿ ಹಚ್ಚಿಕೊಳ್ಳುವ ನಾಟಕ ಮಾಡಬೇಕು. ಸುಮ್ಮನೇ ಅದು ಪ್ರಚಾರಕ್ಕಾಗಿ ಎಂದು ಹೇಳಿರುತ್ತಾರೆ. ಇದೇ ಸಮಯವನ್ನು ಬಳಸಿಕೊಂಡ ಕಾಲೊನಿ ಕಾಶಿ, ನಿಜವಾಗ್ಲೂ ರಾಜೇಶನನ್ನು ಕೊಲ್ಲಲು ಪ್ಲ್ಯಾನ್ ಮಾಡ್ತಾನೆ. ಅಂತೆಯೇ ಕೊಲೆ ನಡೆದು ಬಿಡುತ್ತೆ.
ಸುಮನಾಗೆ ಗೊತ್ತಾದ ಸತ್ಯ
ಸುಮನಾ ಇಷ್ಟ ದಿನ ತನ್ನ ತಮ್ಮ ಪ್ರತಿಭಟನೆಯಲ್ಲಿ ಆಕಸ್ಮಿಕವಾಗಿ ಸತ್ತಿದ್ದಾನೆ ಎಂದುಕೊಂಡಿದ್ದಳು. ಆದ್ರೆ ಈಗ ಸತ್ಯ ಗೊತ್ತಾಗಿದೆ. ಅದು ತೀರ್ಥನ ಬಾಯಿಂದಲೇ. ತೀರ್ಥ ಬೇರೆಯವರ ಬಳಿ ಮಾತನಾಡುವುದನ್ನು ಸುಮನಾ ಕೇಳಿಸಿಕೊಂಡಿದ್ದಾಳೆ. ರಾಜೇಶ ಸಾಯ್ತೀನಿ ಅನ್ನುವ ನಾಟಕ ಮಾಡಲು ಹೋಗಿ ನಿಜವಾಗ್ಲೂ ಸತ್ತ ಎಂದು ಹೇಳ್ತಾನೆ. ಅದನ್ನು ಸುಮನಾ ಕೇಳಿಸಿಕೊಂಡು ಶಾಕ್ ಆಗಿದ್ದಾಳೆ.
ಮನೆ ಬಿಟ್ಟು ಬಂದ ಸುಮನಾ
ಸುಮನಾಗೆ ಸತ್ಯ ಗೊತ್ತಾಗಿದೆ. ಗಂಡನ ಮನೆ ಬಿಟ್ಟು ಬಂದಿದ್ದಾಳೆ. ಎಲೆಕ್ಷನ್ ಗಾಗಿ ತೀರ್ಥ ಸತ್ಯವನ್ನು ಮುಚ್ಚಿಟ್ಟಿದ್ದಾರೆ ಎಂದು ತಿಳಿದು ಬೇಸರ ಮಾಡಿಕೊಂಡಿದ್ದಾಳೆ. ತೀರ್ಥ ಮತ್ತು ಅತ್ತೆ ಪದ್ಮಾ ಎಷ್ಟೇ ಕೇಳಿಕೊಂಡ್ರೂ ಸುಮನಾ ಯಾರ ಮಾತನ್ನು ಕೇಳಿಲ್ಲ.
ಬ್ಯಾಗ್ ಸಮೇತ ತವರು ಮನೆ ಸೇರಿದ್ದಾಳೆ. ತಮ್ಮನ ಸಾವಿಗೆ ನ್ಯಾಯ ಕೊಡಿಸುತ್ತೇನೆ ಎನ್ನುತ್ತಿದ್ದಾಳೆ. ಇದರಿಂದ ತೀರ್ಥಂಕರ್ ಮತ್ತು ಪದ್ಮಾಗೆ ಚಿಂತೆ ಹೆಚ್ಚಾಗಿದೆ. ತೀರ್ಥನಿಗೆ ಎಲ್ಲಿ ಕಾಲೊನಿ ವೋಟು ಕೈ ತಪ್ಪುತ್ತೋ ಅನ್ನೋ ಭಯದಲ್ಲಿದ್ದಾನೆ.
ಕೊಲೆಗಾರರನ್ನು ಹುಡುಕುತ್ತೇನೆ
ಹುಟ್ಟುಹಬ್ಬದ ದಿನವೇ ನನ್ನ ತಮ್ಮನನ್ನು ಕೊಂದಿದ್ದಾರೆ. ನಾನು ಅವನ ಜೊತೆ ಮಾತನಾಡಬೇಕು ಎಂದುಕೊಂಡಿದ್ದೆ. ಅವನು ಬೆಂಕಿ ಉರಿಯುತ್ತಿದ್ದ. ಕಾಪಾಡು ಅಕ್ಕ ಎಂದು ಕೇಳಿಕೊಂಡ. ಆದ್ರೂ ಕಾಪಾಡಲು ಆಗಲಿಲ್ಲ. ಅವನನ್ನು ಕೊಂದವರು ಪಾತಳದಲ್ಲಿ ಅಡಗಿದ್ರೂ ಸರಿ, ಅವರನ್ನು ಬಿಡುವ ಪ್ರಶ್ನೆಯೇ ಇಲ್ಲ. ಹುಡುಕುತ್ತೇನೆ ಎಂದು ಸುಮನಾ ಶಪಥ ಮಾಡಿದ್ದಾಳೆ.
ಇದನ್ನೂ ಓದಿ: Milana Nagaraj: ಯಶಸ್ಸಿನ ಹಾದಿಯಲ್ಲಿ ಲವ್ ಬರ್ಡ್ಸ್ ಸಿನಿಮಾ, ಚಿತ್ರದ ಪ್ರಮೋಶನ್‍ನಲ್ಲಿ ಮಿಲನಾ ಬ್ಯುಸಿ!
ಸುಮನಾ ನಡೆಯಿಂದ ತೀರ್ಥಂಕರ್ ಹೆಚ್ಚಿದ ಚಿಂತೆ, ಸುಮನಾ ಕೊಲೆಗಾರರನ್ನು ಕಂಡು ಹಿಡಿಯುತ್ತಾಳಾ? ತಮ್ಮನ ಸಾವಿಗೆ ಸೇಡು ತೀರಿಸಿಕೊಳ್ತಾಳಾ? ಮುಂದೇನಾಗುತ್ತೆ ಅಂತ ನೋಡೋಕೆ ಕೆಂಡಸಂಪಿಗೆ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ