ಕೆಂಡಸಂಪಿಗೆ (Kendasampige) ಧಾರಾವಾಹಿ (Serial) ಕಲರ್ಸ್ ಕನ್ನಡದಲ್ಲಿ (Colors Kannada) ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6.30ಕ್ಕೆ ಪ್ರಸಾರವಾಗುತ್ತಿದೆ. ಶುರುವಾದಾಗಿನಿಂದ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗುತ್ತಿದೆ. ಕೆಂಡಸಂಪಿಗೆ ಧಾರಾವಾಹಿ ಈಗಾಗಲೇ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಬೇರೆಯವರ ಜೊತೆ ಮದುವೆ ಆಗಬೇಕಿದ್ದ ಸುಮನಾ (Sumana), ಕಾರ್ಪೊರೇಟರ್ ತೀರ್ಥಂಕರ್ ಜೊತೆ ಮದುವೆ ಆಗಿದ್ದಾರೆ. ಹೇಳದೇ, ಕೇಳದೇ ಸುಮಿಗೆ ತಾಳಿ ಕಟ್ಟಿದ್ದರಿಂದ ತೀರ್ಥಂಕರ್ ಮನೆಯಲ್ಲಿ ಜಗಳವಾಗುತ್ತಲೇ ಇದೆ. ಅತ್ತೆ (Mother In Law) ಪದ್ಮಾ ಮಾತ್ರ ಸುಮನಾಳನ್ನು ಸೊಸೆ ಎಂದು ಒಪ್ಪಿಕೊಂಡಿದ್ದಾಳೆ. ತೀರ್ಥ ಅತ್ತಿಗೆ ಸಾಧನಾ ಹೇಗಾದ್ರೂ ಮಾಡಿ ಸುಮಿಯನ್ನು ಮನೆಯಿಂದ ಆಚೆ ಓಡಿಸಬೇಕು ಅಂತಾ ಏನೇನೋ ಪ್ಲ್ಯಾನ್ ಮಾಡುತ್ತಿದ್ದಾಳೆ. ಸುಮಾ ಮನೆಯವರ ಮನಸ್ಸು ಗೆಲ್ಲುತ್ತಿದ್ದಾಳೆ.
ಮೊದಲು ಅತ್ತೆ ಪದ್ಮಾಗೂ ಇಷ್ಟ ಇರಲಿಲ್ಲ
ಸುಮನಾ ಮೊದಲು ಅತ್ತೆ ಪದ್ಮಾಗೂ ಇಷ್ಟ ಇರಲಿಲ್ಲ. ಆದ್ರೆ ಸುಮನಾ ಗುಣ ಅತ್ತೆಗೆ ಇಷ್ಟವಾಗಿದೆ. ಮನೆ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡ್ತಾಳೆ. ಅಡುಗೆಯನ್ನೂ ಮಾಡ್ತಾಳೆ. ಗಂಡನನ್ನು ಕೇರ್ ಮಾಡ್ತಾಳೆ.
ತನ್ನ ಚಿಕ್ಕ ಮಗನಿಗೂ ಅಕ್ಕನ ಸ್ಥಾನ ತುಂಬಿದ್ದಾಳೆ. ದೊಡ್ಡವರಿಗೆ ಗೌರವ ನೀಡ್ತಾಳೆ. ಅಲ್ಲದೇ ಒಬ್ಬ ಸೊಸೆಗೆ ಇರಬೇಕಾದ ಎಲ್ಲಾ ಜವಾಬ್ದಾರಿಗಳು ಇವೆಯಂತೆ. ದೊಡ್ಡ ಆಸೆ ಆಯ್ಕೆಯನ್ನು ತಪ್ಪು ಮಾಡಿದೆ ಇವಳಾದ್ರೂ ಒಳ್ಳೆ ಸೊಸೆ ಆಗ್ತಾಳೆ ಎಂದು ಸುಮನಾ ಗುಣಗಳನ್ನು ಅತ್ತೆ ಮೆಚ್ಚಿಕೊಂಡಿದ್ದಾಳೆ.
ಇದನ್ನೂ ಓದಿ: Amitha Kulal: ಕುಡ್ಲದ ಕುವರಿ ಮಲೆನಾಡ ಬೆಡಗಿಯಾದ ಕಥೆ, ಒಲವಿನ ನಿಲ್ದಾಣದ ತಾರಿಣಿ ಯಾರು?
ಮಾವನಿಗೂ ಇಷ್ಟ ಆಗ್ತೀರೋ ಸುಮನಾ
ಸುಮನಾ ಗುಣ ಮಾವನಿಗೂ ಇಷ್ಟ ಆಗ್ತಿದೆ. ಅಲ್ಲದೇ ಪದ್ಮಾ ಎಲ್ಲವನ್ನೂ ವಿವರಿಸಿ ಹೇಳಿದ್ದಾಳೆ. ನಮ್ಮ ಚಿಕ್ಕ ಮಗ ಕುಡಿದು ಹಾಳಾಗುತ್ತಾನೆ ಎಂದು ತಾನೇ ದುಡ್ಡು ಕೊಡಬೇಡಿ ಎಂದಿದ್ದು. ನಮ್ಮ ಮಗಳು ಚಿಕ್ಕ ಚಿಕ್ಕ ಬಟ್ಟೆ ಹಾಕಿಕೊಳ್ಳೋದು ಬೇಡ ಅಂತ ತಾನೇ ಸುಮನಾ ಹೇಳಿದ್ದು.
ನಮ್ಮ ಮಗಳ ಬಗ್ಗೆ ಆಕೆ ಚಿಂತೆ ಮಾಡಿದ್ದು. ನಮ್ಮ ಮನೆ ದುಡ್ಡು ಹಾಳಾಗುತ್ತೆ ಅಂತ ತಾನೇ ಆಕೆ ಹೇಳಿದ್ದು. ಅದರಲ್ಲಿ ತಪ್ಪೇನಿದೆ ಎಂದು ಅರ್ಥ ಮಾಡಿಸಿದ್ದಾಳೆ. ಮಾವನಿಗೂ ಸುಮನಾ ಗುಣ ಇಷ್ಟ ಆಗಿದೆ.
ಸುಮನಾಗೆ ತಾಳಿ ಹಾಕ್ತಾನಾ ತೀರ್ಥ?
ಸುಮನಾಗೆ ಅತ್ತೆ ಪದ್ಮಾ ಬಂಗಾರದ ಸರ ಕೊಡಿಸಿದ್ದಾರೆ. ಇಷ್ಟು ದಿನ ದಾರದ ತಾಳಿ ಹಾಕಿಕೊಂಡಿದ್ದಳು. ಅದಕ್ಕೆ ಬಂಗಾರದ ತಾಳಿಯನ್ನು ಕೊಡಿಸಿದ್ದಾಳೆ. ಅದನ್ನು ಸುಮ ತೀರ್ಥ ಅವರ ಮುಂದೆ ತಂದು, ನಾನು ನಿಮಗೆ ಇಷ್ಟ ಆಗಿದ್ದರೆ, ಈ ತಾಳಿಯನ್ನು ನನ್ನ ಕುತ್ತಿಗೆಗೆ ಹಾಕಿ ಎಂದು ಹೇಳಿದ್ದಾಳೆ. ತೀರ್ಥ ಹಾಕ್ತಾನಾ ನೋಡಬೇಕು.
ವೋಟಿಗಾಗಿ ಮದುವೆ ಆಗಿರುವ ಕಾರ್ಪೊರೇಟರ್
ತೀರ್ಥಂಕರ್ ಸುಮನಾಳನ್ನು ಇಷ್ಟ ಪಟ್ಟು ಮದುವೆ ಆಗಿಲ್ಲ. ಸಾಮೂಹಿಕ ವಿವಾದ ಸಮಯದಲ್ಲಿ ಸುಮಿ ಮದುವೆ ಆಗಬೇಕಿದ್ದ ಗಂಡು ಪರಾರಿಯಾದ ಕಾರಣ, ತೀರ್ಥ ತಾಳಿ ಕಟ್ಟುತ್ತಾನೆ. ಅದು ಅಲ್ಲಿನ ಕಾಲೋನಿ ಜನರ ಮನಸ್ಸು ಗೆಲ್ಲಲು. ತಾಳಿ ಕಟ್ಟಿದ್ರೆ ಅವರ ವೋಟು ಗಿಟ್ಟಿಸಿಕೊಳ್ಳಬಹುದು ಎಂದು.
ಸುಮನಾ ಮನೆಯಿಂದ ಓಡಿಸಲು ಸಾಧನಾ ಕುತಂತ್ರ
ಸುಮನಾ ನಿಧಾನವಾಗಿ ಮನೆಯವರೆಲ್ಲರಿಗೂ ಇಷ್ಟ ಆಗ್ತಾ ಇದ್ದಾಳೆ. ಅದಕ್ಕೆ ತೀರ್ಥನ ಅತ್ತಿಗೆಗೆ ಕೋಪ. ಹೇಗಾದ್ರೂ ಇವಳನ್ನು ಮನೆಯಿಂದ ಓಡಿಸಬೇಕು ಎಂದು ತೀರ್ಮಾನ ಮಾಡಿದ್ದಾಳೆ. ಅದಕ್ಕೆ ಒಡವೆ ಕದ್ದ ಆರೋಪ ಮಾಡಿದ್ದಳು, ಅದು ಸಕ್ಸಸ್ ಆಗಲಿಲ್ಲ. ಆದ್ರೂ ಬಿಡದೇ ಏನೇನೋ ಪ್ಲ್ಯಾನ್ ಮಾಡ್ತಾ ಇದ್ದಾಳೆ.
ಇದನ್ನೂ ಓದಿ: Bigg Boss Kannada: 10 ಮಂದಿಯಲ್ಲಿ ರಾಜಣ್ಣ ಮಾತ್ರ ಸೇಫ್, 9 ಸ್ಪರ್ಧಿಗಳು ನಾಮಿನೇಟ್!
ಸಾಧನಾ ಪ್ಲ್ಯಾನ್ ವರ್ಕ್ ಆಗುತ್ತಾ? ಸುಮನಾಳನ್ನು ಹೆಂಡ್ತಿ ಎಂದು ತೀರ್ಥ ಒಪ್ಪಿಕೊಳ್ತಾನಾ? ಮುಂದೇನಾಗುತ್ತೆ ಅಂತ ನೋಡೋಕೆ ಕೆಂಡಸಂಪಿಗೆ ಧಾರಾವಾಹಿ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ