ಕೆಂಡಸಂಪಿಗೆ (Kendasampige) ಧಾರಾವಾಹಿ (Serial) ಕಲರ್ಸ್ ಕನ್ನಡದಲ್ಲಿ (Colors Kannada) ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6.30ಕ್ಕೆ ಪ್ರಸಾರವಾಗುತ್ತಿದೆ. ಶುರುವಾದಾಗಿನಿಂದ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗುತ್ತಿದೆ. ಕೆಂಡಸಂಪಿಗೆ ಧಾರಾವಾಹಿ ಈಗಾಗಲೇ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಬೇರೆಯವರ ಜೊತೆ ಮದುವೆ ಆಗ ಬೇಕಿದ್ದ ಸುಮನಾ ಕಾರ್ಪೊರೇಟರ್ ತೀರ್ಥಂಕರ್ ಜೊತೆ ಮದುವೆ ಆಗಿದ್ದಾರೆ. ಹೇಳದೇ, ಕೇಳದೇ ಸುಮಿಗೆ ತಾಳಿ ಕಟ್ಟಿದ್ದರಿಂದ ತೀರ್ಥಂಕರ್ ಮನೆಯಲ್ಲಿ ಜಗಳವಾಗುತ್ತಲೇ ಇದೆ. ಅತ್ತೆ ಪದ್ಮಾ ಮಾತ್ರ ಸುಮನಾಳನ್ನು ಸೊಸೆ ಎಂದು ಒಪ್ಪಿಕೊಂಡಿದ್ದಾಳೆ. ತೀರ್ಥಂಕರ್ ಗೆ ನಿಧಾನವಾಗಿ ಸುಮಿ ಮೇಲೆ ಪ್ರೀತಿ ಹುಟ್ಟುತ್ತಿದೆ. ಈಗ ಕಾಲೋನಿಯಲ್ಲಿ ಸುಮನಾ ಮನೆಯಲ್ಲಿ ಇರಲು ಹೋಗ್ತಾ ಇದ್ದಾನೆ. ಇದನ್ನು ಕೇಳಿ ಸುಮನಾಗೆ ತುಂಬಾ ಖುಷಿಯಾಗಿದೆ.
ಎಂಎಲ್‍ಎ ಆಗೋ ಕನಸು
ಕಾರ್ಪೊರೇಟರ್ ಆಗಿರುವ ತೀರ್ಥಂಕರ್ ಗೆ ಎಂಎಲ್‍ಎ ಆಗಬೇಕು ಎಂಬ ಕನಸು ಇದೆ. ಅದಕ್ಕೆ ಸುಮನಾ ಕಾಲೋನಿ ಜನರ ವೋಟು ತುಂಬಾ ಮುಖ್ಯ. ಅದಕ್ಕೆ ಸುಮನಾಳನ್ನು ಮದುವೆ ಆಗಿರುವುದು. ಆದ್ರೆ ಇದ್ಯಾವುದು ಗೊತ್ತಿಲ್ಲದೇ ಸುಮನಾ ತೀರ್ಥಂಕರ್ ನನ್ನು ನಂಬುತ್ತಿದ್ದಾಳೆ. ವೋಟಿಗಾಗಿಯೇ ತೀರ್ಥ ಮದುವೆ ಆಗಿದ್ದರೂ, ಈಗ ಸುಮನಾ ಮೇಲೆ ಪ್ರೀತಿ ಬರುತ್ತಿದೆ.
ಕಾಲೋನಿ ವಾಸ್ತವ್ಯಕ್ಕೆ ರೆಡಿ
ಮನೆಯಲ್ಲಿ ತೀರ್ಥಂಕರ್ ತಮ್ಮ ಬಟ್ಟೆಗಳನ್ನು ಪ್ಯಾಕ್ ಮಾಡಿಕೊಳ್ತಾ ಇದ್ರು. ಆಗ ಸುಮಾ ಬಂದು ಎಲ್ಲಿಗೆ ಹೊರಟಿದ್ದೀರಿ ಎಂದು ಕೇಳ್ತಾಳೆ. ಅದಕ್ಕೆ ತೀರ್ಥ ನಾನು 4 ದಿನ ಬೇರೆ ಕಡೆ ಹೋಗ್ತಾ ಇದ್ದೀನಿ ಎಂದು ಹೇಳ್ತಾನೆ. ಅಲ್ಲ ಸಾಹೇಬ್ರೆ ಮನೆಯಿಂದಾನೇ ಕೆಲಸ ಮಾಡ್ತೀರಾ ಅಂತ ಅತ್ತೆ ಹತ್ತಿರ ಹೇಳಿದ್ದೆ. ನೀವು ಈಗ ಹೋಗ್ತೀನಿ ಅಂದ್ರೆ ಅತ್ತೆ ಬೇಜಾರು ಮಾಡ್ಕೋತಾರೆ ಎಂದು ಹೇಳ್ತಾಳೆ.
ಇದನ್ನೂ ಓದಿ: Bhagya Lakshmi: ತಾಂಡವ್-ಶ್ರೇಷ್ಠಾ ಸಂಬಂಧ ಲಕ್ಷ್ಮಿಗೆ ಗೊತ್ತಾಗೇ ಹೋಯ್ತು! ಅಕ್ಕ ಭಾಗ್ಯ ಸಂಸಾರ ಸರಿ ಮಾಡ್ತಾಳಾ?
ನಿಮ್ಮ ಮನೆಗೆ ಹೋಗ್ತೀರೋದು
ನಾನು ಒಬ್ಬನೇ ಹೋಗ್ತಾ ಇಲ್ಲ. ನನ್ನ ಜೊತೆ ನೀವು ಬರ್ತಿದ್ದೀರಿ ಎಂದು ತೀರ್ಥಂಕರ್ ಹೇಳ್ತಾರೆ. ಅವರ ಮಾತು ಕೇಳಿ ಸುಮನಾ ಶಾಕ್ ಆಗಿದ್ದಾಳೆ. ನಾನು ಅತ್ತೆಯನ್ನು ಬಿಟ್ಟು ಎಲ್ಲಿಯೂ ಬರಲ್ಲ ಎನ್ನುತ್ತಾಳೆ. ಆಗ ತೀರ್ಥಂಕರ್ ನಿಮ್ಮ ಮನೆಗೆ ಹೋಗ್ತಾ ಇರುವುದು ಎಂದು ಹೇಳ್ತಾನೆ. ಅದಕ್ಕೆ ಸುಮನಾ ಖುಷಿಯಿಂದ ಕಣ್ಣೀರು ಹಾಕಿದ್ದಾಳೆ.
ಅಳಿಯನ ಸೇವೆ ಮಾಡಸಿಕೊಳ್ಳೋಕೆ ಕಾಲೋನಿ ಕಡೆಗೆ
ನೀವು ಸುಳ್ಳು ಹೇಳ್ತಿಲ್ಲ ತಾನೇ, ಸತ್ಯ ಹೇಳ್ತಾ ಇದೀರಾ ಎಂದು ಮತ್ತೊಮ್ಮೆ ಸುಮನಾ ಖಚಿತ ಪಡಿಸಿಕೊಳ್ತಾಳೆ. ಅದಕ್ಕೆ ನಿಜವಾಗ್ಲೂ ನಿಮ್ಮ ಕಾಲೋನಿಗೆ ಹೋಗ್ತಾ ಇರೋದು ಎಂದು ಹೇಳ್ತಾರೆ. ನಿಮ್ಮ ತಂದೆಗೆ ಅಳಿಯನನ್ನು ಮನೆಗೆ ಕರೆಸಬೇಕು. ಔತಣ ಹಾಕಿಸಬೇಕು ಅಂತ ಇತ್ತಲ್ಲ. ಅವರ ಆಸೆ ಈಡೇರಿಸೋಣ ಅಂತ. 4 ದಿನ ನಿಮ್ಮ ಮನೆಯಲ್ಲಿ ಇದ್ದು ಬರೋಣ ಎಂದು ತೀರ್ಥ ಹೇಳ್ತಾನೆ.
ಅಪ್ಪನಿಗೆ ವಿಷ್ಯ ತಿಳಿಸಿದ ಸುಮನಾ
ತೀರ್ಥಂಕರ್ ನಿಮ್ಮ ಮನೆಗೆ ಹೋಗೋಣ ಎಂದಿದ್ದೇ ತಡ, ಸುಮನಾ ಖುಷಿಗೆ ಪಾರವೇ ಇಲ್ಲದಂತಾಗಿದೆ. ತನ್ನ ತಂದೆಗೆ ಕಾಲ್ ಮಾಡಿ, ತಾವು ಬೀಗರ ಊಟಕ್ಕೆ ಬರುವುದಾಗಿ ಹೇಳಿದ್ದಾಳೆ. ಅದನ್ನು ಕೇಳಿದ ರಾಮಯ್ಯ ತುಂಬಾ ಸಂತೋಷವಾಗಿದ್ದಾರೆ. ನಮ್ಮ ಅಳಿಯ ಮಗಳು ಬರ್ತಾರೆ ಎನ್ನುವ ಸಂಭ್ರಮದಲ್ಲಿದ್ದಾರೆ.
ಇದನ್ನೂ ಓದಿ: Kannadathi: ಸೇರಿಗೆ ಸವಾ ಸೇರು, ಭುವಿ ಮುಂದೆ ಸಾನಿಯಾ ಆಟ ನಡೆಯಲ್ಲ!
ಕಾಲೋನಿ ವಾಸ್ತವ್ಯದ ಹಿಂದೆ ವೋಟಿನ ಉದ್ದೇಶ ಇದೆಯಾ? ಸುಮನಾ ಮೇಲೆ ತೀರ್ಥನಿಗೆ ಲವ್ ಆಗ್ತಿದೆಯಾ? ಮುಂದೇನಾಗುತ್ತೆ ಅಂತ ನೋಡೋಕೆ ಕೆಂಡಸಂಪಿಗೆ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ