ಕೆಂಡಸಂಪಿಗೆ (Kendasampige) ಧಾರಾವಾಹಿ (Serial) ಕಲರ್ಸ್ ಕನ್ನಡದಲ್ಲಿ (Colors Kannada) ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6.30ಕ್ಕೆ ಪ್ರಸಾರವಾಗುತ್ತಿದೆ. ಶುರುವಾದಾಗಿನಿಂದ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗುತ್ತಿದೆ. ಕೆಂಡಸಂಪಿಗೆ ಧಾರಾವಾಹಿ ಈಗಾಗಲೇ ಅಭಿಮಾನಿಗಳು ಮೆಚ್ಚುಗೆ ಪಡೆದುಕೊಂಡಿದೆ. ಬೇರೆಯವರ ಜೊತೆ ಮದುವೆ ಆಗಬೇಕಿದ್ದ ಸುಮನಾ, ಕಾರ್ಪೊರೇಟರ್ ತೀರ್ಥಂಕರ್ ಜೊತೆ ಮದುವೆ ಆಗಿದ್ದಾರೆ. ಹೇಳದೇ, ಕೇಳದೇ ಸುಮಿಗೆ ತಾಳಿ ಕಟ್ಟಿದ್ದರಿಂದ ತೀರ್ಥಂಕರ್ ಮನೆಯಲ್ಲಿ ಜಗಳವಾಗುತ್ತಲೇ ಇದೆ. ಅತ್ತೆ ಪದ್ಮಾ ಮಾತ್ರ ಸುಮನಾಳನ್ನು ಸೊಸೆ ಎಂದು ಒಪ್ಪಿಕೊಂಡಿದ್ದಾಳೆ. ಸುಮನಾ ನಿಧಾನವಾಗಿ ಮನೆಯವರ ಮನಸ್ಸು ಗೆಲ್ಲುತ್ತಿದ್ದಾಳೆ. ತೀರ್ಥ ತಮ್ಮ ಸುಭಾಷ್ ಕುಡಿದು (Drinks) ಕುಡಿದು ಹಾಳಾಗುತ್ತಿದ್ದ, ಅದನ್ನು ತಪ್ಪಿಸಲು ಕುಡಿತ ಬಿಡಿಸುವ ಪುನರ್ವಸತಿ ಕೇಂದ್ರಕ್ಕೆ (Rehabilitation Center) ಸೇರಿಸಿದ್ದಾರೆ.
ಕುಡಿದು ಕುಡಿದ ಹಾಳಾಗುತ್ತಿದ್ದ ಸುಭಾಷ್
ತೀರ್ಥಂಕರ್ ತಮ್ಮ ಕಾಲೇಜಿಗೆ ಹೋಗುತ್ತಿದ್ದು, ಪ್ರೀತಿಸಿದ ಹುಡುಗಿ ಸಿಗಲಿಲ್ಲ ಎಂದು ದಿನವೂ ಕುಡಿಯುತ್ತಿದ್ದ. ಕುಡಿದು ಕುಡಿದು ಹಾಳಾಗುತ್ತಿದ್ದ. ಅತ್ತಿಗೆ ಸಾಧನಾ ದುಡ್ಡು ಕೊಟ್ಟು ಅವನನ್ನು ಹಾಳು ಮಾಡುತ್ತಿದ್ದಳು. ಅದಕ್ಕೆ ಸುಮನಾ ಕಡಿವಾಣ ಹಾಕುತ್ತಾಳೆ. ಅದಕ್ಕೆ ಸುಭಾಷ್ಗೆ ಸುಮನಾ ಕಂಡ್ರೆ ಆಗಲ್ಲ.
ಅಮ್ಮನ ವಿರುದ್ಧ ತಿರುಗಿ ಬಿದ್ದ ಸುಭಾಷ್
ಸುಭಾಷ್ ಗೆ ಅಮ್ಮ ಪದ್ಮಾ ಬುದ್ಧಿ ಹೇಳುತ್ತಿದ್ದಳು. ಪದ್ಮಾ ಮಗನಿಗೆ ಹೊಡೆಯಲು ಹೋಗ್ತಾಳೆ. ಆಗ ಅಮ್ಮನ ಕೈ ತಡೆಯುತ್ತಾನೆ. ಅಮ್ಮನ ವಿರುದ್ಧವೇ ತಿರುಗಿ ಬೀಳ್ತಾನೆ. ಪದ್ಮಾಗೆ ಮಗ, ವಿರುದ್ಧ ಆದ ಎಂದು ಆಘಾತಕ್ಕೆ ಒಳಗಾಗಿದ್ದಾಳೆ. ತಲೆ ಸುತ್ತಿ ಬಿದ್ದಿದ್ದಾಳೆ. ಬಿಪಿ ಹೆಚ್ಚಾಗಿರುತ್ತೆ.
ಇದನ್ನೂ ಓದಿ: Bigg Boss Kannada: ಬಿಗ್ ಬಾಸ್ ಮನೆಯಲ್ಲಿ ವಾಸುಕಿ ವೈಭವ್, ಈಡೇರಿತು ದೀಪಿಕಾ ದಾಸ್ ಆಸೆ!
ಕುಡಿತ ಬಿಡಿಸುವ ಪುನರ್ವಸತಿ ಕೇಂದ್ರ
ಸುಮನಾ ಸುಭಾಷ್ ನನ್ನು ಸರಿ ಮಾಡಬೇಕೆಂದು ಕುಡಿತ ಬಿಡಿಸುವ ಪುನರ್ವಸತಿ ಕೇಂದ್ರಕ್ಕೆ ಸೇರಿಸಿದ್ದಾಳೆ. ಇದು ಅತ್ತೆ ಪದ್ಮಾ ಮತ್ತು ಗಂಡ ತೀರ್ಥಂಕರ್ಗೆ ಗೊತ್ತು. ಮನೆಯಲ್ಲಿ ಬೇರೆಯವರಿಗೆ ಮಾತ್ರ ಹೇಳಿರುವುದಿಲ್ಲ. ಸಾಧನಾಗೆ ಈ ವಿಷ್ಯ ಗೊತ್ತಾದ ಮೇಲೆ ಸುಮಿಗೆ ಬೈಯಿಸಬೇಕು ಎಂದು ಪ್ಲ್ಯಾನ್ ಮಾಡ್ತಾಳೆ. ಸುಭಾಷ್ ನನ್ನು ಪುನರ್ವಸತಿ ಕೇಂದ್ರಕ್ಕೆ ಸೇರಿಸಿದ್ದಾರೆ ಎಂದು ತೀರ್ಥನ ಬಳಿ ಹೇಳ್ತಾಳೆ.
ಸುಮನಾ ಪರ ಮಾತನಾಡಿದ ತೀರ್ಥ
ಈ ವಿಷ್ಯ ನನಗೆ ಗೊತ್ತು ಅತ್ತಿಗೆ. ಸುಭಾಷ್ ನನ್ನು ಸೇರಿಸುವಾಗ ನನಗೆ ಹೇಳಿ ಸೇರಿಸಿದ್ದಾರೆ. ನನಗೂ ಅದು ಸರಿ ಎನ್ನಿಸಿತು. ಸುಮ್ನೆ ಸುಭಾಷ್ ಕುಡಿದು ಕುಡಿದು ಹಾಳಾಗ್ತಾನೆ. ಅದರ ಬದಲು ಆ ಚಟ ದೂರ ಆದ್ರೆ ಸಾಕು ಎಂದು ತೀರ್ಥಂಕರ್ ಹೇಳ್ತಾನೆ. ಆ ಮಾತು ಕೇಳಿಸಿಕೊಂಡು ಸಾಧನಾಗೆ ಕೋಪ ಬಂದಿದೆ.
ಸುಮನಾಗೆ ಮೆಚ್ಚುಗೆಯ ಮಾತು
ಸುಮನಾ ನೀನು ಈ ಮನೆಗೆ ಬಂದ ಮೇಲೆ ಒಳ್ಳೆಯದಾಗ್ತಾ ಇದೆ. ನಮ್ಮಲ್ಲೆರನ್ನೂ ನೀವು ತುಂಬಾ ಚೆನ್ನಾಗಿ ಕೇರ್ ಮಾಡ್ತೀರಿ. ನಿಮಗೆ ನನ್ನ ಬೆಂಬಲ ಸದಾ ಇರುತ್ತೆ ಎಂದು ತೀರ್ಥ ಹೇಳಿ ಹೋಗುತ್ತಾರೆ. ಸುಮನಾ, ಅತ್ತೆ, ಮಾವ ಎಲ್ಲ ಖುಷಿ ಆಗ್ತಾರೆ. ಸಾಧನಾ ಮಾತ್ರ ಕೋಪ ಮಾಡಿಕೊಂಡು ಹೋಗ್ತಾಳೆ.
ಇದನ್ನೂ ಓದಿ: Olavina Nildana: ತಾರಿಣಿ ಪ್ರೀತಿ ಪಡೆಯಲು ಹೋಗಿ, ಅಮ್ಮನ ನಂಬಿಕೆಯನ್ನೂ ಕಳೆದುಕೊಂಡ ಸಿದ್ಧಾಂತ್!
ಸಾಧನಾ ಏನೇ ಪ್ಲ್ಯಾನ್ ಮಾಡಿದ್ರೂ ಉಲ್ಟಾ ಹೊಡೆಯುತ್ತಿದೆ. ಸುಮನಾಗೆ ಪ್ರೀತಿ ಹೆಚ್ಚಾಗುತ್ತಲೇ ಹೋಗುತ್ತಿದೆ. ಮುಂದೇನಾಗುತ್ತೆ ಅಂತ ನೋಡೋಕೆ ಕೆಂಡಸಂಪಿಗೆ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ